Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಹುಬ್ಬಳ್ಳಿ ಮತ್ತು ಮೇ ಸಾಹಿತ್ಯ ಮೇಳ

ಹುಬ್ಬಳ್ಳಿ ಮತ್ತು ಮೇ ಸಾಹಿತ್ಯ ಮೇಳ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ11 May 2026 11:32 AM IST
share
ಹುಬ್ಬಳ್ಳಿ ಮತ್ತು ಮೇ ಸಾಹಿತ್ಯ ಮೇಳ

ಕರ್ನಾಟಕದಲ್ಲಿ ಮೇ ಸಾಹಿತ್ಯ ಮೇಳ ಇದೆಯಲ್ಲ, ಅದು ಎಲ್ಲ ಜೀವಪರ ವ್ಯಕ್ತಿ, ಶಕ್ತಿಗಳನ್ನು ಒಂದುಗೂಡಿಸಿದ ಅಪರೂಪದ ವೇದಿಕೆೆ. ನನಗೆ ತಿಳಿದಂತೆ ಇಡೀ ಭಾರತದಲ್ಲಿ ಇಂಥ ವೇದಿಕೆ ಇಲ್ಲ. ಯಾಕೆಂದರೆ ಇದರಲ್ಲಿ ಅಂಬೇಡ್ಕರ್ ವಾದಿಗಳು,ಗಾಂಧಿವಾದಿಗಳು, ಮಾರ್ಕ್ಸ್

ವಾದಿಗಳು,ಲೋಹಿಯವಾದಿಗಳು,ಬಸವಾನುಯಾಯಿಗಳು ಹಾಗೂ ಯಾವುದೇ ಗುಂಪಿಗೆ ಸೇರದ ಲೇಖಕರು, ಕಲಾವಿದರು, ಕವಿಗಳು, ಸಮಾನ ಮನಸ್ಕ ಸಂಘಟನೆಗಳ ಸಂಗಾತಿಗಳು ಹೀಗೆ ಎಲ್ಲರೂ ಸಿಗುತ್ತಾರೆ.

ಪುರೋಗಾಮಿಗಳೆಲ್ಲರೂ ಭರವಸೆ ಕಳೆದುಕೊಂಡ ದಟ್ಟ ನಿರಾಶೆಯ ದಿನಗಳಿವು. ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳಕಿನ ಕಿರಣಗಳು ಒಂದೊಂದಾಗಿ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಮತ್ತೆ ಮೇ ಸಾಹಿತ್ಯ ಸಮ್ಮೇಳನ ಬಂದಿದೆ. ಉತ್ತರ ಕರ್ನಾಟಕದ ಕೇಂದ್ರವಾದ ಹುಬ್ಬಳ್ಳಿಯಲ್ಲಿ ಮೇ 16 ಮತ್ತು 17ರಂದು ನಾಡಿನ ಆರೋಗ್ಯವಂತ ಮನಸ್ಸುಗಳು ಕನಸು ಕಟ್ಟಲು ಸೇರಲಿವೆ.

ಕೋಮುವಾದಿ, ಮನುವಾದಿ ಶಕ್ತಿಗಳು ಪ್ರಬಲವಾ ಗಿರುವ ಈ ದಿನಗಳಲ್ಲಿ ಈ ಕರಾಳ ಶಕ್ತಿಗಳನ್ನು ಯಾವುದೇ ಒಂದು ಪಕ್ಷ ಇಲ್ಲವೇ ಸಂಘಟನೆ ಏಕಾಕಿಯಾಗಿ ಎದುರಿಸಲು ಸಾಧ್ಯವಿಲ್ಲ.ಇಂಡಿಯಾ ಕೂಟ ಸೇರಿದಂತೆ ಸಮಾನ ಮನಸ್ಕರನ್ನು ಒಂದು ಗೂಡಿಸಲು ಯಾವುದೇ ಸೆಕ್ಯುಲರ್ ಪಕ್ಷಗಳಿಂದಲೂ ಸಾಧ್ಯವಾಗಿಲ್ಲ.ಆದರೆ ಕರ್ನಾಟಕದಲ್ಲಿ ಮೇ ಸಾಹಿತ್ಯ ಮೇಳ ಇದೆಯಲ್ಲ,ಅದು ಎಲ್ಲ ಜೀವಪರ ವ್ಯಕ್ತಿ, ಶಕ್ತಿಗಳನ್ನು ಒಂದು ಗೂಡಿಸಿದ ಅಪರೂಪದ ವೇದಿಕೆ. ನನಗೆ ತಿಳಿದಂತೆ ಇಡೀ ಭಾರತದಲ್ಲಿ ಇಂಥ ವೇದಿಕೆ ಇಲ್ಲ. ಯಾಕೆಂದರೆ ಇದರಲ್ಲಿ ಅಂಬೇಡ್ಕರ್ ವಾದಿಗಳು,ಗಾಂಧಿವಾದಿಗಳು, ಮಾರ್ಕ್ಸ್ ವಾದಿಗಳು,ಲೋಹಿಯವಾದಿಗಳು,ಬಸವಾನುಯಾಯಿಗಳು ಹಾಗೂ ಯಾವುದೇ ಗುಂಪಿಗೆ ಸೇರದ ಲೇಖಕರು, ಕಲಾವಿದರು, ಕವಿಗಳು, ಸಮಾನ ಮನಸ್ಕ ಸಂಘಟನೆಗಳ ಸಂಗಾತಿಗಳು ಹೀಗೆ ಎಲ್ಲರೂ ಸಿಗುತ್ತಾರೆ. ಇದಿನ್ನೂ ಸಂಘಟನಾ ಸ್ವರೂಪ ಪಡೆದಿರದಿದ್ದರೂ ಒಂದು ಫ್ಯಾಶಿಸ್ಟ್ ವಿರೋಧಿ ವೇದಿಕೆ ಹೇಗಿರಬೇಕೆಂಬುದಕ್ಕೆ ಒಂದು ಉದಾಹರಣೆಯಾಗಿದೆ.

ಮೇ ಸಾಹಿತ್ಯ ಮೇಳದ ಬಗ್ಗೆ ಸಾಕಷ್ಟು ಎಲ್ಲರಿಗೂ ಗೊತ್ತಿದೆ.ಅದರ ಬಗ್ಗೆ ವಿವರವಾಗಿ ಬರೆಯಬೇಕಾಗಿಲ್ಲ. ನಾನು ಬರೆಯಲು ಹೊರಟಿರುವದು 12ನೇ ಮೇ ಸಾಹಿತ್ಯ ಮೇಳಕ್ಕೆ ಆತಿಥ್ಯ ನೀಡುತ್ತಿರುವ ಹುಬ್ಬಳ್ಳಿ ಮಹಾನಗರದ ಕುರಿತು. ಇತ್ತಿಚೀನ ದಿನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಆರೆಸ್ಸೆಸ್ ಕೇಂದ್ರವಾಗಿರುವ ಹುಬ್ಬಳ್ಳಿಯಲ್ಲಿ ತುಂಬಾ ವರ್ಷಗಳ ನಂತರ ಸಮಾನ ಮನಸ್ಕರ ಸಮಾವೇಶವೊಂದು ನಡೆಯುತ್ತಿರುವುದು ಇದೇ ಮೊದಲು.ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳು. ಎರಡರ ನಡುವೆ ಕೇವಲ 18 ಕಿ.ಮೀ. ಅಂತರವಿದೆ. ಛೋಟಾ ಮುಂಬೈ ಎಂದೂ ವಾಣಿಜ್ಯ ನಗರವೆಂದೂ ಹುಬ್ಬಳ್ಳಿ ಹೆಸರಾಗಿದೆ. ಧಾರವಾಡ ಶಿಕ್ಷಣ ನಗರ ಎಂದು ಕರೆಯಲ್ಪಡುತ್ತಿದ್ದರೆ, ಹುಬ್ಬಳ್ಳಿ ವ್ಯಾಪಾರ ಕೇಂದ್ರವಾಗಿದೆ. ನಾನು ನನ್ನ ಬದುಕಿನ ಅಮೂಲ್ಯ 25 ವರ್ಷಗಳನ್ನು ಹುಬ್ಬಳ್ಳಿಯಲ್ಲಿ ಕಳೆದಿರುವೆ.1975ರಲ್ಲಿ ‘ಸಂಯುಕ್ತ ಕರ್ನಾಟಕ’ ಸೇರಿ ಹುಬ್ಬಳ್ಳಿಗೆ ಬಂದೆ. ಅಂದಿನ ಮತ್ತು ಇಂದಿನ ಹುಬ್ಬಳ್ಳಿಯ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ.

ಸ್ವಾತಂತ್ರ್ಯದ ಮೊದಲು ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬರುವ ಮುಂಚೆ ಹುಬ್ಬಳ್ಳಿ ಕನ್ನಡ ಭಾಷಿಕ ಪ್ರದೇಶಗಳ ಕೇಂದ್ರವಾಗಿತ್ತು.ಅಂದಿನ ಪ್ರಮುಖ ಪಕ್ಷಗಳ ನಾಯಕರು ತಮ್ಮ ಚಟುವಟಿಕೆಯ ತಾಣವನ್ನಾಗಿ ಹುಬ್ಬಳ್ಳಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಆವಾಗ ವಿಭಿನ್ನ ಪಕ್ಷಗಳು ಮತ್ತು ಸಂಘಟನೆಗಳ ರಾಜ್ಯ ಮಟ್ಟದ ಕಚೇರಿಗಳು ಹುಬ್ಬಳ್ಳಿಯಲ್ಲಿ ಇದ್ದವು. ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಚೇರಿ ಹುಬ್ಬಳ್ಳಿ ಮರಾಠಾ ಗಲ್ಲಿಯಲ್ಲಿ ಇತ್ತು.ಆಗಿನ್ನೂ ಮದುವೆಯಾಗಿರದಿದ್ದ ನಿರಂಜನ (ಕುಳಕುಂದ ಶಿವರಾವ್) ಇದೇ ಕಚೇರಿಯಲ್ಲಿ ಇರುತ್ತಿದ್ದರು. ನಿರಂಜನ ರಾಜ್ಯ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಕಮ್ಯೂನಿಸ್ಟ್ ಪಕ್ಷದ ಮುಖಪತ್ರ ಜನಶಕ್ತಿಗೂ ನಿರಂಜನ ಸಂಪಾದಕರಾಗಿದ್ದರು.

ಅದೇ ರೀತಿ ಕಾಂಗ್ರೆಸ್ ಮತ್ತು ಸೋಷಲಿಸ್ಟ್

ಪಕ್ಷಗಳಿಗೆ ಕೂಡ ಹುಬ್ಬಳ್ಳಿ ಕೇಂದ್ರವಾಗಿತ್ತು. ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳು ಉತ್ತರ ಕರ್ನಾಟಕದಲ್ಲಿ ನಡೆದವು. ಇಂಚಗೇರಿ ಮಠದ ಮುರಗೋಡ ಮಹಾದೇವರು ಕಳೆದ ಶತಮಾನದ ನಲವತ್ತರ ದಶಕದಲ್ಲೇ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಗಿರೀಶ ಆಶ್ರಮವನ್ನು ಕಟ್ಟಿಸಿದ್ದರು. ಕರ್ನಾಟಕ ಏಕೀಕರಣ ಸಂಘಟನೆಯ ಬಹುತೇಕ ಎಲ್ಲ ಸಭೆಗಳು ಗಿರೀಶ ಆಶ್ರಮದಲ್ಲಿ ನಡೆಯುತ್ತಿದ್ದವು.ಕರ್ನಾಟಕ ರಾಜ್ಯ ನಿರ್ಮಾಣದ ಬಗ್ಗೆ ಅಂದಿನ ಕಾಂಗ್ರೆಸ್ ನಾಯಕರ ನಿಷ್ಕ್ರಿಯತೆ ಬಗ್ಗೆ ಹುಬ್ಬಳ್ಳಿಯ ಟೌನ್ ಹಾಲ್ ಬಳಿ ಭಾರೀ ಪ್ರತಿಭಟನೆ ನಡೆಯಿತು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಹಳ್ಳಿಕೇರಿ ಗುದ್ಲೆಪ್ಪನವರ ವಾಹನಕ್ಕೆ ಉದ್ರಿಕ್ತ ಜನ ಜಂಗುಳಿ ಬೆಂಕಿ ಹಚ್ಚಿತು.

ಕಳೆದ ಶತಮಾನದ ನಲವತ್ತರ ದಶಕದಲ್ಲಿ ಅದೇ ತಾನೆ ಕಣ್ಣು ಬಿಡುತ್ತಿದ್ದ ಹಿಂದಿ ಸಿನೆಮಾ ರಂಗದಲ್ಲಿ ಬಹುದೊಡ್ಡ ಹೆಸರು ಮಾಡಿದವರು ವಿ.ಶಾಂತಾರಾಮ (ವಣಕುದ್ರೆ ಶಾಂತಾರಾಮ), ಅಮೀರಬಾಯಿ ಕರ್ನಾಟಕಿ,

ಮತ್ತು ಶಾಂತಾ ಹುಬ್ಳೀಕರ್. ಇವರ ಬಗ್ಗೆ ಕನ್ನಡಿಗರಿಗೆ, ಇಂದಿನ ಪೀಳಿಗೆಯವರಿಗೆ ಅಷ್ಟೊಂದು ಗೊತ್ತಿಲ್ಲ. ಹಿಂದಿ ಚಿತ್ರ ರಂಗದಲ್ಲಿ (ಬಾಲಿವುಡ್) ನಿರ್ದೇಶಕರಾಗಿ, ನಿರ್ಮಾಪಕರಾಗಿ ಬಹುದೊಡ್ಡ ಹೆಸರು ಮಾಡಿದ ಶಾಂತಾರಾಮ ಮೂಲತಃ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನವರು.ಮುಂದೆ ಹುಬ್ಬಳ್ಳಿಯ ಮೋಹನ ಟಾಕೀಸ್‌ನಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡಿದ ಶಾಂತಾರಾಮ ಅವರ ತಾಯಿ ಹುಬ್ಬಳ್ಳಿಯಲ್ಲಿ ಖಾನಾವಳಿ ನಡೆಸುತ್ತಿದ್ದರು.ಹುಬ್ಬಳ್ಳಿಯಿಂದ ಕೊಲ್ಲಾಪುರ, ಅಲ್ಲಿಂದ ಮುಂಬೈಗೆ ಹೋಗಿ ನೆಲೆಸಿದ ಶಾಂತಾರಾಮ ವಣಕುದ್ರೆ ‘ಡಾ.ಕೊಟ್ನಿಸ್ ಕಿ ಅಮರ್ ಕಹಾನಿ’ ಅಂಥ ಸಿನೆಮಾ ಗಳನ್ನು ನಿರ್ದೇಶಿಸಿದರು.ಅವರು ಬೆಂಗಳೂರಿಗೆ ಕನ್ನಡ ವಾಕ್‌ಚಿತ್ರಗಳ ಸುವರ್ಣ ಮಹೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬಂದಾಗ ಹುಬ್ಬಳ್ಳಿಯ ನೆನಪು ತೆಗೆದು ಭಾವುಕವಾಗಿ ಮಾತನಾಡಿದ್ದರು.

ಬಾಲಿವುಡ್‌ನಲ್ಲಿ ಆರಂಭದ ದಿನಗಳಲ್ಲಿ ತಮ್ಮ ಅಭಿನಯದ ಮೂಲಕ ಬಹುದೊಡ್ಡ ಹೆಸರು ಮಾಡಿದ ಅಮೀರಬಾಯಿ ಕರ್ನಾಟಕಿ ಮತ್ತು ಶಾಂತಾ ಹುಬ್ಳೀಕರ್ ಕತೆ ರೋಮಾಂಚಕವಾದುದು. ಅಮೀರಬಾಯಿ ಕರ್ನಾಟಕಿ ಅವರು ಅವಿಭಜಿತ ಬಿಜಾಪುರ ಜಿಲ್ಲೆಯ ಬೀಳಗಿಯವರು.ಅವರು ಬದುಕಿರುವವರೆಗೆ ಆಗಾಗ ಬಿಜಾಪುರಕ್ಕೆ ಬಂದು ಹೋಗುತ್ತಿದ್ದರು. ತಮ್ಮ ಹೆಸರಿನ ಮುಂದೆ ಇದ್ದ ಮನೆಯ ಅಡ್ಡ ಹೆಸರು (ಸರ್ ನೇಮ್) ತಗೆದು ‘ಕರ್ನಾಟಕಿ’ ಎಂದು ಮಾಡಿಕೊಂಡವರು ಅಮೀರಬಾಯಿ. ಅವರ ಬಗ್ಗೆ ರಹಮತ್ ತರೀಕೆರೆ ಅವರು ಬರೆದ ಪುಸ್ತಕ ಮಾಹಿತಿಪೂರ್ಣವಾಗಿದೆ.ಅವರಷ್ಟೇ ಹೆಸರು ಮಾಡಿದ ಶಾಂತಾ ಹುಬ್ಳೀಕರ್ ಅವರು ಹುಬ್ಬಳ್ಳಿ ಸಮೀಪದ ಅದರಗುಂಚಿಯವರು. ಆರಂಭದಲ್ಲಿ ಕರ್ನಾಟಕದ ಗುಬ್ಬಿ ವೀರಣ್ಣ ಮೊದಲಾದವರ ಕಂಪೆನಿಗಳಲ್ಲಿ ಅಭಿನಯಿಸುತ್ತಿದ್ದ ಶಾಂತಾ ಹುಬ್ಳೀಕರ್ ಅವರು ಮತ್ತೆ ವಾಪಸ್ ಬರಲಿಲ್ಲ. ಅವರ ಕೊನೆಯ ದಿನಗಳು ದಾರುಣವಾಗಿದ್ದವು. ಪುಣೆಯ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದ ಶಾಂತಾ ಅವರನ್ನು ಪುಣೆಯ ಕನ್ನಡಿಗರು ಪತ್ತೆ ಹಚ್ಚಿ ಸನ್ಮಾನಿಸಿದ್ದರು.

ಹುಬ್ಬಳ್ಳಿಯಲ್ಲಿ ಮೇ 16 ಮತ್ತು 17 ರಂದು ನಡೆಯಲಿರುವ ಮೇ ಸಾಹಿತ್ಯ ಸಮ್ಮೇಳನದಲ್ಲಿ ಇವರನ್ನೆಲ್ಲ ನಾವು ಸ್ಮರಿಸಬೆಕಾಗಿದೆ.

ಅಮೀರಬಾಯಿ ಕರ್ನಾಟಕಿ ,ಶಾಂತಾ ಹುಬ್ಳೀಕರ್ ಮತ್ತು ವಣಕುದ್ರೆ ಅವರನ್ನು ಕನ್ನಡಿಗರು ಈಗ ಮರೆತಿದ್ದಾರೆ.ಆದರೆ ಇದೇ ನೆಲದಲ್ಲಿ ಅರಳಿದ ಮೇ ಸಾಹಿತ್ಯ ಮೇಳ ಮರೆತಿಲ್ಲ.

ಧಾರವಾಡ ಒಂದಿಷ್ಟು ಸಾಂಸ್ಕೃತಿಕ ಬೇರುಗಳನ್ನು ಉಳಿಸಿಕೊಂಡಿದೆ.ಆದರೆ ಹುಬ್ಬಳ್ಳಿ ಈಗ ಸಂಪೂರ್ಣ ವಾಣಿಜ್ಯ ನಗರವಾಗಿದೆ.ಅಷ್ಟೇ ಆಗಿದ್ದರೆ ಆತಂಕ ಪಡಬೇಕಾಗಿರಲಿಲ್ಲ.ಆದರೆ ಅದೀಗ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ಬಹುದೊಡ್ಡ ಕೇಂದ್ರವಾಗಿದೆ. ಸಂಘ ಪರಿವಾರಕ್ಕೆ ಭಿನ್ನವಾದ ಯಾವುದೇ ವಿಚಾರಕ್ಕೆ ಇಲ್ಲಿ ಆಸ್ಪದವಿಲ್ಲ. ಕಮ್ಯೂನಿಸ್ಟ್ ನಾಯಕ ಎ.ಜೆ.ಮುಧೋಳ ಅವರು ಬದುಕಿದ್ದಾಗ ಕೋಮುವಾದಿ ಶಕ್ತಿಗಳಿಗೆ ಪ್ರತಿರೋಧ ಒಡ್ಡುತ್ತಿದ್ದರು.ಆದರೆ ಈಗ ತಾತ್ವಿಕ ಪ್ರತಿರೋಧವೇ ಇಲ್ಲದಂತಾಗಿದೆ. ಇಂಥ ಊರಿನಲ್ಲಿ ಮೇ ಸಾಹಿತ್ಯ ಮೇಳದ ಮೂಲಕ ಹೊಸ ಬೆಳಕು ಚೆಲ್ಲಲು ಹೊರಟಿದ್ದಾರೆ.ಈ ಬಾರಿ ನಾಡಿನ ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು ಬರಲಿದ್ದಾರೆ.

ರಾಜಕೀಯವಾಗಿ ಮಾತ್ರವಲ್ಲ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಹುಬ್ಬಳ್ಳಿಗೆ ಒಂದು ಇತಿಹಾಸವಿದೆ. ಕೊಲ್ಲಾಪುರದ ಶಾಹು ಮಹಾರಾಜರು ಮತ್ತು ಆಗ ಮುಂಬೈ ಸರಕಾರದಲ್ಲಿ ಮಂತ್ರಿಯಾಗಿದ್ದ ಸರ್ ಕಂಬಳಿ ಸಿದ್ಧಪ್ಪನವರು ಜೊತೆ ಸೇರಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಮೊದಲ ಬ್ರಾಹ್ಮಣೇತರ ಸಮ್ಮೇಳನವನ್ನು ಏರ್ಪಡಿಸಿದ್ದರು.ಸಿದ್ಧ್ಧಾರೂಢರು ಅಧ್ಯಕ್ಷತೆಯನ್ನು ವಹಿಸಿದ್ದರು. ಇದರಿಂದ ಗಾಬರಿಯಾದ ಬಾಲ ಗಂಗಾಧರ ತಿಲಕರು ಪುಣೆಯಿಂದ ಹುಬ್ಬಳ್ಳಿಗೆ ಧಾವಿಸಿ ಬಂದು ಸಿದ್ಧಾರೂಢರನ್ನು ಭೇಟಿಯಾಗಿ ಹೋದರು. ಅದರ ನಂತರ ಬಾಬಾ ಸಾಹೇಬ ಅಂಬೇಡ್ಕರ್ ಅವರು

ಮೂವತ್ತರ ದಶಕದ ಕೊನೆಯಲ್ಲಿ ಧಾರವಾಡಕ್ಕೆ ಬಂದು ಒಂದೆರಡು ವಾರ ವಾಸ್ತವ್ಯ ಮಾಡಿದ್ದರು. ಆಗ ಊಟಿಯಂತೆ ತಂಪು ಹವೆಗೆ ಹೆಸರಾಗಿದ್ದ ಧಾರವಾಡಕ್ಕೆ ಅಸ್ವಸ್ಥರಾಗಿದ್ದ ತಮ್ಮ ಜೀವನ ಸಂಗಾತಿ ರಮಾಬಾಯಿ ಅವರನ್ನು ಕರೆದುಕೊಂಡು ಬಂದಿದ್ದರು. ಇಂಥ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನ್ನೆಲೆ ಹೊಂದಿರುವ ಹುಬ್ಬಳ್ಳಿಯಲ್ಲಿ ನಡೆಯಲಿರುವ ಮೇ ಸಾಹಿತ್ಯ ಸಮ್ಮೇಳನ ನಾಡಿಗೆ ಭರವಸೆದಾಯಕ ಹೊಸ ಸಂದೇಶವನ್ನು ನೀಡಲಿ.

Tags

hubballi
share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X