Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಚರಿತ್ರೆಯನ್ನು ಕೆದಕಿದರೆ...

ಚರಿತ್ರೆಯನ್ನು ಕೆದಕಿದರೆ ತಲುಪುವುದೆಲ್ಲಿಗೆ

ಸನತ್‌ಕುಮಾರ್ ಬೆಳಗಲಿಸನತ್‌ಕುಮಾರ್ ಬೆಳಗಲಿ15 Jan 2024 9:07 AM IST
share
ಚರಿತ್ರೆಯನ್ನು ಕೆದಕಿದರೆ ತಲುಪುವುದೆಲ್ಲಿಗೆ

ಬೌದ್ಧ ಧರ್ಮವನ್ನು ಬಾಬಾಸಾಹೇಬರು ಬಚಾವ್ ಮಾಡಿದ್ದಾರೆ. ಆದರೆ, ಅಪಾಯಕಾರಿ ಸಿದ್ಧಾಂತ ಹೊಂದಿದ ಶಕ್ತಿಗಳ ಜೊತೆ ಸರಸ ವಿರಸದ ಸಂಬಂಧವಿಟ್ಟುಕೊಂಡಿರುವ ಲಿಂಗಾಯತರು, ಜೈನರು ವೈದಿಕಶಾಹಿಯ ಹುನ್ನಾರ ಎದುರಿಸಿ ತಮ್ಮ ಉಳಿವಿನ ದಾರಿ ಕಂಡುಕೊಳ್ಳಬೇಕಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಒಂದು ಮಂದಿರ ನಿರ್ಮಾಣವಾಯಿತೆಂದು ನೆಮ್ಮದಿಯಿಂದ ಉಸಿರಾಡುವಂತಿಲ್ಲ. ಧರ್ಮವನ್ನು, ದೇವರನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಂಡು, ಓಟಿನ ಬೆಳೆ ತೆಗೆಯಲು ಹೊರಟರೆ ಬಹುತ್ವ ಭಾರತ ಸುರಕ್ಷಿತವಾಗಿ ಇರುವುದಿಲ್ಲ. ಇತಿಹಾಸದ ಗಾಯಗಳನ್ನು ಕೆದಕುವುದನ್ನು ನಿಲ್ಲಿಸಿ ಮನಸ್ಸು ಕಟ್ಟುವ, ದೇಶ ಕಟ್ಟುವ ಮಹತ್ಕಾರ್ಯಕ್ಕೆ ಮುಂದಾಗೋಣ. ಯಾವುದೇ ಮಂದಿರ, ಮಸೀದಿ, ಚರ್ಚ್ಗಳಿಗಿಂತ ರಾಷ್ಟ್ರ ಮಂದಿರ ಮುಖ್ಯ.

ಮನುಕುಲದ ನೂರಾರು ವರ್ಷಗಳ ನಡೆದು ಬಂದ ದಾರಿಯಲ್ಲಿ ಸಾವಿರಾರು ಘಟನೆ, ದಾಳಿ, ಪ್ರತಿದಾಳಿ ನಡೆದಿವೆ. ಜಗತ್ತಿನ ಇತರ ದೇಶಗಳಂತೆ ಭಾರತದಲ್ಲೂ ಜನಾಂಗೀಯ ಕಲಹಗಳು, ತಮ್ಮ ಧರ್ಮಗಳ ವಿಸ್ತರಣೆಗಾಗಿ ಯುದ್ಧ ನಡೆದಿವೆ. ಎಲ್ಲೆಲ್ಲೋ ನೆತ್ತರಿನ ಹೆಜ್ಜೆ ಗುರುತುಗಳು ಕಾಣುತ್ತವೆ. ಇವೆಲ್ಲ ಕೆಂಡದ ಮಾರ್ಗ ತುಳಿದು ಸ್ವತಂತ್ರ ಭಾರತದ ಪ್ರಜೆ ತನ್ನ ಬದುಕನ್ನು ಕಟ್ಟಿಕೊಂಡಿದ್ದಾನೆ.

500ಕ್ಕೂ ಹೆಚ್ಚು ಅರಸೊತ್ತಿಗೆಗಳನ್ನು ಹೊಂದಿದ್ದ ಈ ಭೂ ಪ್ರದೇಶ ಭಾರತ ಎಂಬ ಒಕ್ಕೂಟ ದೇಶವಾಗಿದ್ದು ಸ್ವಾತಂತ್ರ್ಯಾ ನಂತರ. ಇದು ಒಂದೇ ಧರ್ಮ, ಭಾಷೆ, ಸಂಸ್ಕೃತಿಗೆ ಸೇರಿದ ನೆಲವಲ್ಲ. ವಿಭಿನ್ನ ಭಾಷೆ, ಧರ್ಮ, ಸಂಸ್ಕೃತಿಗಳ ಸಮ್ಮಿಲನವೇ ಇದರ ಯಶಸ್ಸಿನ ಗುಟ್ಟು.

ಇಂತಹ ಸಮ್ಮಿಶ್ರ ಸಂಸ್ಕೃತಿ, ಬಹುಮುಖಿ ದೇಶದಲ್ಲಿ ಇತಿಹಾಸದ ಗಾಯಗಳನ್ನು ಮತ್ತೆ, ಮತ್ತೆ ಕೆದಕಬಾರದು. ಉದಾಹರಣೆಗೆ, ಅಯೋಧ್ಯೆಯ ರಾಮ ಮಂದಿರದ ವಿವಾದ. ಯಾವುದೇ ಊರಿನಲ್ಲಿ ಯಾವುದೇ ಸಮುದಾಯದ ಆರಾಧನಾ ಮಂದಿರದ ಸ್ಥಾಪನೆಗೆ ಯಾರ ಆಕ್ಷೇಪವೂ ಇಲ್ಲ. ಬಸವಣ್ಣನವರಂಥ ಮಹಾ ಚೇತನಗಳು ಸ್ಥಾವರ ಸಂಸ್ಕೃತಿಯನ್ನು ಒಪ್ಪಿಕೊಳ್ಳದೇ ಇಷ್ಟಲಿಂಗವನ್ನು ಪರ್ಯಾಯವಾಗಿ ರೂಪಿಸಿದ ಈ ನೆಲದಲ್ಲಿ ಸಾವಿರಾರು ಮಂದಿರ, ಮಸೀದಿ, ಚರ್ಚುಗಳಿವೆ. ಹಳ್ಳಿಹಳ್ಳಿಗಳಲ್ಲಿ ದುರುಗವ್ವ, ದ್ಯಾಮವ್ವ, ಕಬ್ಬಾಳಮ್ಮ, ಮಾರಮ್ಮ, ಮುಂತಾದ ಜನರ ನಂಬಿಕೆಯ ಗುಡಿ ಗುಂಡಾರಗಳಿವೆ.

ಜನಸಾಮಾನ್ಯರು ತಮ್ಮ ಮಾನಸಿಕ ಶಾಂತಿಗಾಗಿ, ಇಹದ ಜಂಜಡದಿಂದ ಕೊಂಚ ಸಮಯವಾದರೂ ವಿರಾಮ ಪಡೆಯಲು ಇಂತಹ ದೇವಾಲಯಗಳು ನೆರವಾಗುತ್ತವೆ. ಇದರ ಬಗ್ಗೆ ಆಕ್ಷೇಪವಿಲ್ಲ. ಆದರೆ, ಇತಿಹಾಸದ ಪುಟಗಳನ್ನು ಹೊರಳಿಸಿದಾಗ ಧರ್ಮ ಅಥವಾ ‘ಮತ’ ಎಂಬುದು ಆಳುವ ವರ್ಗದ ಅಸ್ತ್ರವಾದಾಗ, ಅದು ದುರ್ಬಳಕೆಯಾಗಿ ಇತರ ಧರ್ಮೀಯರ ಮೇಲೆ ದಾಳಿ ಮಾಡಿ ಮತಾಂತರ ಮಾಡಿಸಿಕೊಂಡ ಉದಾಹರಣೆಗಳಿವೆ.

ಹೊರಗಿನಿಂದ ಬಂದವರು ಮಾತ್ರವಲ್ಲ ಒಳಗಿನ ಬಲಾಢ್ಯರೂ ಕೂಡ ಇಂತಹ ದಬ್ಬಾಳಿಕೆ ಮಾಡಿದ್ದಾರೆ. ಅದೇನೇ ಇರಲಿ ಸ್ವಾತಂತ್ರ್ಯಾ ನಂತರ ಹಳೆಯದನ್ನೆಲ್ಲ ಮರೆತು ಹೊಸ ಬದುಕು, ಹೊಸ ಭಾರತವನ್ನು ಕಟ್ಟಿಕೊಳ್ಳಬೇಕಾದ ಕಾಲದಲ್ಲಿ ಮತ್ತೆ ಹಳೆಯ ಗಾಯ ಕೆದಕಿ ಇನ್ನೊಂದು ಧರ್ಮದ ಪ್ರಾರ್ಥನಾ ಮಂದಿರ ನೆಲಸಮಗೊಳಿಸಿ, ಅದಕ್ಕೆ ಪ್ರಭುತ್ವದ ಒಪ್ಪಿಗೆ ಪಡೆಯುವುದು ಎಷ್ಟು ಸರಿ? ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅಯೋಧ್ಯೆ ಮಾತ್ರವಲ್ಲ ಭಾರತದ ಇನ್ನೂ ಅನೇಕ ಕಡೆ ಬೌದ್ಧ ವಿಹಾರಗಳ, ಜೈನ್ ಬಸದಿಗಳ ನಾಶದ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ಈಗ ಬೇರೆ ಧರ್ಮದ ಮಂದಿರಗಳಾಗಿರುವ ಅವುಗಳನ್ನು ವಾಪಸು ಕೊಡಲು ಬೌದ್ಧರು, ಜೈನರು ಕೇಳಿದರೆ ಕೊಡುವಿರಾ?

ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿದ ಘಟನೆ ನಡೆದು ಎರಡೂವರೆ ದಶಕಗಳೇ ಗತಿಸಿದವು. ನ್ಯಾಯಾಲಯದಲ್ಲಿ ಈ ಪ್ರಕರಣದ ಇತ್ಯರ್ಥ ಹೇಗಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ತಿಂಗಳ 22 ರಂದು ಪ್ರಧಾನಿ ನರೇಂದ್ರ ಮೋದಿಯವರು ಇನ್ನೂ ಪೂರ್ಣಗೊಳ್ಳದ ನೂತನ ರಾಮ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಆದರೆ, ಇದು ಇಲ್ಲಿಗೆ ಮುಗಿಯುವ ಸೂಚನೆಗಳೂ ಕಾಣುತ್ತಿಲ್ಲ. ದೇಶದ ಎಲ್ಲಾ ಮಸೀದಿಗಳನ್ನು ಕೆಡವಿ ಮಂದಿರಗಳನ್ನು ನಿರ್ಮಿಸುವುದಾಗಿ ಬಿಜೆಪಿ ನಾಯಕ ಈಶ್ವರಪ್ಪ ಮುಂತಾದವರು ಬಹಿರಂಗವಾಗಿ ಹೇಳುತ್ತಿದ್ದಾರೆ. ಮಥುರಾ ಮತ್ತು ಕಾಶಿ ಎಂಬ ಇನ್ನೆರಡು ಕಡೆ ಹೊಸ ವಿವಾದದ ಮಸಲತ್ತು ನಡೆದಿದೆ. ಹಿಂದೆ ಯಾವುದೋ ಶತಮಾನದಲ್ಲಿ ಚರಿತ್ರೆಯಲ್ಲಿ ನಡೆದು ಹೋದ ತಪ್ಪುಗಳನ್ನು ಈ ಶತಮಾನದಲ್ಲಿ ಸರಿ ಪಡಿಸುವ ಸಮರ್ಥನೆಯೂ ಧ್ವಂಸ ಕಾರ್ಯಾಚರಣೆ ನಂತರ ಕೇಳಿ ಬರುತ್ತಿದೆ.

ಕೋಮುವಾದಿ ಸಂಘಟನೆಗಳು ಮೂರು ಸಾವಿರ ವಿವಾದಿತ ಪ್ರಾರ್ಥನಾಲಯಗಳ ಪಟ್ಟಿಯನ್ನು ಮಾಡಿವೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಈ ದೇಶದಲ್ಲಿ ಬರೀ ಮಂದಿರಗಳನ್ನು ಮಾತ್ರ ಧ್ವಂಸಗೊಳಿಸಲಾಗಿದೆಯೇ? ಮೊಗಲರು ಬರುವ ಎಷ್ಟೋ ವರ್ಷಗಳ ಮೊದಲು ಸಾವಿರಾರು ಬೌದ್ಧ ವಿಹಾರಗಳನ್ನು, ಜೈನ ಬಸದಿಗಳನ್ನು ಧ್ವಂಸಗೊಳಿಸಿಲ್ಲವೆ? ಜೈನರ, ಬೌದ್ಧರ ಅನೇಕ ಕ್ಷೇತ್ರಗಳನ್ನು ಬಲಾತ್ಕಾರದಿಂದ ಕಿತ್ತು ಕೊಂಡಿಲ್ಲವೇ? ಎಷ್ಟೋ ತೀರ್ಥಂಕರರ ಮೂರ್ತಿಗಳನ್ನು ನೆಲದಲ್ಲಿ ಹೂತು ಹಾಕಿಲ್ಲವೇ? ಇವುಗಳನ್ನು ಮಾಡಿದವರು ಯಾರು?

ಚರಿತ್ರೆಯ ಈ ತಪ್ಪುಗಳನ್ನು ಸರಿಪಡಿಸಲು ಹೊರಟರೆ ತಿರುಪತಿ, ಹೊರನಾಡು, ಸವದತ್ತಿ ಮುಂತಾದ ದೇವಾಲಯಗಳ ಈಗಿನ ಸ್ವರೂಪವೇ ಬದಲಾಗಬೇಕಾಗುತ್ತದೆ. ಇದಕ್ಕೆ ಇವರ ಬಳಿ ಏನು ಉತ್ತರವಿದೆ? ಜೈನ, ಬೌದ್ಧ, ಸಿಖ್, ಲಿಂಗಾಯತ, ಮುಂತಾದ ಅವೈದಿಕ ಧರ್ಮಗಳನ್ನು ಹಿಂದೂ ಧರ್ಮದ ಭಾಗಗಳೆಂದು ಕರೆದು ಅವುಗಳ ಅಸ್ತಿತ್ವವನ್ನೇ ಅಳಿಸಿ ಹಾಕುವ ಸಂಚು ಅತ್ಯಂತ ನಾಜೂಕಾಗಿ ಮತ್ತು ವ್ಯಾಪಕವಾಗಿ ನಡೆದಿಲ್ಲವೇ? ಇವುಗಳನ್ನೆಲ್ಲ ನಾಶ ಮಾಡಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಹಿಂದೂ ರಾಷ್ಟ್ರದ ಹೆಸರಿನಲ್ಲಿ ಹೇರುವ ಹುನ್ನಾರ ನಡೆದಿದೆಯಲ್ಲವೇ?

ಗೌತಮ ಬುದ್ಧನನ್ನು ವಿಷ್ಣುವಿನ ಹತ್ತನೇ ಅವತಾರ ಎಂದು ಬಿಂಬಿಸಲು ಹೊರಟವರೇ ಜೈನ ತೀರ್ಥಂಕರ ಆದಿನಾಥರನ್ನು ಶಿವನ ಅವತಾರ ಎಂದು ಬದಲಿಸಲು ಹೊರಟಿದ್ದಾರೆ. ಇದೇ ಪರಮ ಘಾತುಕರು ಭಗವಾನ್ ಬಾಹುಬಲಿಯನ್ನು ವಿಷ್ಣುವಿನ ಅವತಾರ ಎಂದು ಕರೆಯಲಾರಂಭಿಸಿದ್ದಾರೆ ಇದು ಇಲ್ಲಿಗೆ ಮುಗಿದಿಲ್ಲ. ನೇಮಿನಾಥ ತೀರ್ಥಂಕರರು ಮುಕ್ತಿ ಹೊಂದಿದರೆನ್ನಲಾದ ಗಿರಿನಾರ್ ಕ್ಷೇತ್ರವನ್ನು ಜೈನರಿಂದ ಕಿತ್ತುಕೊಳ್ಳಲು ಹೊರಟಿದ್ದಾರೆ. ಜೈನ ತೀರ್ಥಂಕರರಾದ ನೇಮಿನಾಥರನ್ನು ದತ್ತಾವತಾರ ಎಂದು ಕರೆದು ಹೈಜಾಕ್ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ.

ಹೆಸರಾಂತ ಮಾರ್ಕ್ಸ್ವಾದಿ ಇತಿಹಾಸಕಾರರಾದ ಧರ್ಮಾನಂದ ಕೊಸಾಂಬಿ ಮತ್ತು ರಾಹುಲ್ ಸಾಂಕೃತ್ಯಾಯನರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬುದ್ಧ ಮತ್ತು ಬೌದ್ಧ ಧರ್ಮದ ಬಗ್ಗೆ ಅಧ್ಯಯನ ಮಾಡಿ ಹೊಸ ಬೆಳಕನ್ನು ಚೆಲ್ಲಿರದಿದ್ದರೆ ಇಷ್ಟೊತ್ತಿಗೆ ಬುದ್ಧನನ್ನು ವಿಷ್ಣುವಿನ ಅವತಾರ ಮಾಡಿ ಧರ್ಮೋದ್ಯಮ ಚಾಲೂ ಮಾಡುತ್ತಿದ್ದರು. ಬಾಬಾ ಸಾಹೇಬರು ಲಕ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧರ್ಮ ಸೇರಿದ ನಂತರ ಇವರು ಬೌದ್ಧ ಧರ್ಮದ ತಂಟೆಗೆ ಹೋಗುವುದು ಕಡಿಮೆಯಾಯಿತು. ಇಲ್ಲಿಯವರೆಗೆ ಜೈನರ ಉಸಾಬರಿಗೂ ಹೋಗಿರಲಿಲ್ಲ.

ಈಗ ಕೇಂದ್ರದಲ್ಲಿ ರಾಜಕೀಯ ಅಧಿಕಾರ ಭದ್ರವಾದ ನಂತರ ಇಡೀ ಭಾರತವನ್ನು ತಮ್ಮ ಪರಿಕಲ್ಪನೆಯ ಹಿಂದೂ ರಾಷ್ಟ್ರ ಮಾಡುವ ಯೋಜನೆಯ ಭಾಗವಾಗಿ ಜೈನರ ಮೇಲೆ ಆಕ್ರಮಣ ಆರಂಭವಾಗಿದೆ. ಎರಡು ವರ್ಷಗಳ ಹಿಂದೆ ಕಾರ್ಕಳದಲ್ಲಿ 1545ರಲ್ಲಿ ಪಾಂಡ್ಯನಾಥ ಕಟ್ಟಿಸಿದ ಆನೆಕೆರೆ ಬಸದಿ ಜೈನರದಲ್ಲ ಅದು ಹನುಮಂತನ ದೇವಾಲಯ ಎಂದು ಕತೆ ಹೆಣೆದು ವಿವಾದ ಎಬ್ಬಿಸಲಾಗಿತ್ತು.

ಕರ್ನಾಟಕದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಜೊತೆ ಒಮ್ಮೆ ಮಾತಾಡುತ್ತಿದ್ದಾಗ ಜೈನ ಧರ್ಮದ ಬಸದಿಗಳನ್ನು ಹೇಗೆ ಆಕ್ರಮಿಸಿ ತಮ್ಮ ದೇವಾಲಯಗಳನ್ನಾಗಿ ಮಾಡಲಾಯಿತು ಎಂಬ ಬಗ್ಗೆ ಉದಾಹರಣೆಗಳ ಸಹಿತ ಹೇಳಿದ್ದರು. ಈಗ ಅವುಗಳ ಬಗ್ಗೆ ವಿವಾದ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅಲ್ಪಸಂಖ್ಯಾತ ಜೈನರು ತಮ್ಮ ಪಾಡಿಗೆ ತಾವಿದ್ದಾರೆ. ಅದನ್ನು ಸಹಿಸಿಕೊಳ್ಳಲು ಆಗದವರು ಯುಟ್ಯೂಬ್ಗಳನ್ನು ಬಳಸಿಕೊಂಡು ಬಾಹುಬಲಿ ವಿಷ್ಣುವಿನ ಅವತಾರ, ನೇಮಿನಾಥ ಶಿವನ ಅವತಾರ ಎಂದೆಲ್ಲ ರೈಲು ಬಿಡುತ್ತಿದ್ದಾರೆ. ಈ ಬಗ್ಗೆ ವಿದ್ವಾಂಸರಾದ ಪ್ರೊ. ಅಜೀತ್ ಪ್ರಸಾದ್ ಆಕ್ಷೇಪಿಸಿದ ನಂತರ ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸುಮ್ಮನೆ ಕತೆ ಕಟ್ಟುತ್ತಿದ್ದಾರೆ.

ಕಳೆದ ವರ್ಷ ಉತ್ತರ ಪ್ರದೇಶ ಎಂಬ ಆದಿತ್ಯನಾಥ್ ರಾಜ್ಯದ ಬಾಗಪತ್ ಜಿಲ್ಲೆಯ ಬರೌತನಲ್ಲಿ ದಿಗಂಬರ ಜೈನ ಸಮಾಜಕ್ಕೆ ಸೇರಿದ ಕಾಲೇಜಿನಲ್ಲಿ ಜೈನ ಧರ್ಮದ ಶ್ರುತಿದೇವಿಯ ಮೂರ್ತಿಯನ್ನು ತೆರವುಗೊಳಿಸುವಂತೆ ಎಬಿವಿಪಿ ಕಾರ್ಯಕರ್ತರು ಕಾಲೇಜು ಕ್ಯಾಂಪಸ್ಗೆ ನುಗ್ಗಿ ಗಲಾಟೆ ಮಾಡಿದ ಘಟನೆ ವರದಿಯಾಗಿತ್ತು. ಅದೇ ಉತ್ತರ ಪ್ರದೇಶದಲ್ಲಿ ಜೈನರ ಎರಡು ಸಾವಿರ ವರ್ಷದ ಹಿಂದಿನ ಶ್ರುತಿ ದೇವಿಯ ಮೂರ್ತಿಯನ್ನು ಭಗ್ನಗೊಳಿಸಿದ ಬಗ್ಗೆ ಹೆಸರಾಂತ ವಿದ್ವಾಂಸ, ಲೇಖಕ ದೇವದತ್ತ ಪಟ್ನಾಯಕ್ ಟ್ವೀಟ್ ಮಾಡಿದ್ದರು. ಇದ್ಯಾವುದೂ ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯವೆಂದು ತಳ್ಳಿ ಹಾಕಲಾಗುವುದಿಲ್ಲ. ಇದು ಅತ್ಯಂತ ವ್ಯವಸ್ಥಿತವಾಗಿ

ರೂಪಿಸಿದ ದುಷ್ಕೃತ್ಯದ ಸಂಚು.

ಬಾಬರಿ ಮಸೀದಿಯನ್ನು ಕೆಡವಿದವರು, ಚರ್ಚ್ಗಳ ಮೇಲೆ ದಾಳಿ ಮಾಡಿ ಏಸು ಪ್ರತಿಮೆಯನ್ನು ಭಗ್ನಗೊಳಿಸುವವರು, ಹೋರಾಡುತ್ತಿರುವ ರೈತರನ್ನು ಖಾಲಿಸ್ತಾನಿಗಳೆಂದು ಅವಹೇಳನ ಮಾಡುವ ಸೈದ್ಧಾಂತಿಕ ಹಿನ್ನೆಲೆ ಹೊಂದಿದವರೇ ಜೈನ ಧರ್ಮವನ್ನು ಆಪೋಶನ ಮಾಡಿಕೊಳ್ಳುವ ಪಿತೂರಿಯ ಭಾಗವಾಗಿ ಇಂಥ ಗೊಬ್ಬೆಲ್ಸ್ ಮಾದರಿ ಪ್ರಚಾರ ಮಾಡುತ್ತಾರೆ. ಹೀಗೊಂದು ಕಡೆ ಮಾಡಿ ಅದರ ಬಗ್ಗೆ ಜೈನರ ಪ್ರತಿಕ್ರಿಯೆ ಏನು ಬರುತ್ತದೆ ಎಂದು ನೋಡಿ ಮುಂದಿನ ಕಾರ್ಯ ಯೋಜನೆ ರೂಪಿಸುತ್ತಾರೆ.

ಜೈನರು ಬಿಜೆಪಿ ಬೆಂಬಲಿಗರು, ಆದರೆ ಎಲ್ಲ ಜೈನರೂ ಬಿಜೆಪಿ ಬೆಂಬಲಿಗರಲ್ಲ. ವಿಶೇಷವಾಗಿ ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಮಾರವಾಡಿ ಜೈನರಲ್ಲಿ ಬಹುತೇಕ ಬಿಜೆಪಿ ಬೆಂಬಲಿಗರು ಇರಬಹುದು. ಆದರೆ ಸ್ಥಳೀಯ ಜೈನರಲ್ಲಿ ರೈತಾಪಿ ಜನರಿದ್ದಾರೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಮಾಡುವವರು ಇದ್ದಾರೆ. ಅವರಾರು ಕೋಮುವಾದಿ ರಾಜಕಾರಣದ ಉಸಾಬರಿಗೆ ಹೋಗುವುದಿಲ್ಲ.

ಇತರ ರಾಜ್ಯಗಳಿಂದ ಬರುವ ಮಾರವಾಡಿ ಜೈನರಿಗೆ ತಮ್ಮ ವ್ಯಾಪಾರಿ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ರಾಷ್ಟ್ರೀಯವಾದ ಪ್ರತಿಪಾದನೆ ಮಾಡುವ ದೊಡ್ಡ ಪಕ್ಷವೊಂದರ ಅಗತ್ಯವಿರುತ್ತದೆ. ಪ್ರಾದೇಶಿಕ ಅಸ್ಮಿತೆಯ ಮುಲಾಜಿಲ್ಲದೇ ರಾಷ್ಟ್ರೀಯತೆಯ ರಕ್ಷಾ ಕವಚದಲ್ಲಿ ಅವರು ರಕ್ಷಣೆ ಪಡೆಯುತ್ತಾರೆ.

ಈಗ ಆಚರಣೆಯಲ್ಲಿರುವ ಜೈನ ಧರ್ಮ ಆ ಧರ್ಮದ ನಿಜವಾದ ಆಶಯಗಳಿಗೆ ಪೂರಕವಾಗಿಲ್ಲ. ಇತಿಹಾಸದಲ್ಲಿ ಶೈವರ, ವೈಷ್ಣವರ ಹೊಡೆತಕ್ಕೆ ಸಿಕ್ಕು ಬದುಕಿ ಉಳಿದ ಅತ್ಯಂತ ಅಲ್ಪಸಂಖ್ಯಾತ ವೆನಿಸಿರುವ ಜೈನ ಧರ್ಮೀಯರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ವೈದಿಕಶಾಹಿ ಆಚರಣೆಗಳನ್ನು ರೂಢಿಸಿಕೊಂಡಿದ್ದಾರೆ. ಅನೇಕಾಂತವಾದ ಸಿದ್ಧಾಂತವಾಗಿ ಮಾತ್ರ ಉಳಿದಿದೆ. ಜೈನರಲ್ಲಿ ಇಂದಿಗೂ ಶ್ರೇಣೀಕೃತ ಜಾತಿ ಪದ್ಧತಿ ಇಲ್ಲವೆಂಬುದು ನಿಜ. ಆದರೆ ಪೂಜಾದಿ ವಿಧಿ ವಿಧಾನಗಳ ಸ್ವರೂಪ ವೈದಿಕಶಾಹಿಗಿಂತ ಭಿನ್ನವಾಗಿಲ್ಲ. ವೀರಶೈವರ ಸಹವಾಸದಿಂದ ಲಿಂಗಾಯತರಲ್ಲೂ ಇದು ಪ್ರವೇಶಿಸಿದೆ. ಬಾಬಾ ಸಾಹೇಬರು ದೀಕ್ಷೆ ಪಡೆದ ಇಂದಿನ ಬೌದ್ಧ ಧರ್ಮದ ಬಗೆಗೂ ವಿಮರ್ಶೆಗಳಿವೆ. ಈ ಬಿರುಕುಗಳಲ್ಲೇ ಪುರೋಹಿತಶಾಹಿ ಪ್ರವೇಶಿಸಿ ಆಯಾ ಧರ್ಮದ ನೈಜ ಸ್ವರೂಪಕ್ಕೆ ಚ್ಯುತಿ ತರುತ್ತದೆ. ಪುರೋಹಿತ ಶಾಹಿ ಅಂದ ತಕ್ಷಣ ಬ್ರಾಹ್ಮಣರೆಂದು ಪರಿಗಣಿಸಬೇಕಾಗಿಲ್ಲ. ಎಲ್ಲ ಧರ್ಮಗಳಲ್ಲೂ ಇದು ಪ್ರವೇಶಿಸಿದೆ. ಮುಸಲ್ಮಾನರು, ಕ್ರೈಸ್ತರು ಮಾತ್ರವಲ್ಲ , ಜೈನ, ಬೌದ್ಧ ಧರ್ಮೀಯರ ವಿರುದ್ಧ ಕೂಡ ಈಗ ನಡೆದಿರುವ ಮಸಲತ್ತಿಗೆ ಯಾವುದೇ ಧರ್ಮೀಯರನ್ನು ಹೆಸರಿಸಿ ದೂಷಿಸಬೇಕಾಗಿಲ್ಲ. ಇದಕ್ಕೆಲ್ಲ ಬಹುತ್ವ ಭಾರತವನ್ನು ನುಚ್ಚು ನೂರು ಮಾಡಿ ಹಿಟ್ಲರ್ ಮಾದರಿಯ ಏಕಧರ್ಮೀಯ ಮನುವಾದಿ ಪರಮಾಧಿಕಾರದ ರಾಷ್ಟ್ರ ಕಟ್ಟಲು ಹೊರಟಿದ್ದಾರಲ್ಲ ಅವರ ಸಿದ್ಧಾಂತ ಕಾರಣ.

ಈ ಫ್ಯಾಶಿಸ್ಟ್ ಸಿದ್ಧಾಂತ ಮುಸಲ್ಮಾನರು, ಕ್ರೈಸ್ತರು ದಲಿತರು, ಹಿಂದುಳಿದವರಿಗೆ ಮಾತ್ರವಲ್ಲ ಜೈನರು, ಬೌದ್ಧರು ಬ್ರಾಹ್ಮಣರು, ಲಿಂಗಾಯತರು, ಸಿಖ್ಖರು ಮರಾಠರೂ ಸೇರಿ ಎಲ್ಲ ಭಾರತೀಯರಿಗೂ ಅಪಾಯಕಾರಿ. ಎಲ್ಲ ಸಮುದಾಯಗಳ ಜನರನ್ನು ಬಾಧಿಸುತ್ತಿರುವ ನೈಜ ಸಮಸ್ಯೆಗಳಿಂದ ಅವರನ್ನು ವಿಮುಖರನ್ನಾಗಿ ಮಾಡಿ ಕೋಮು ಕಲಹದ ದಳ್ಳುರಿಯಲ್ಲಿ ಅವರನ್ನು ತಳ್ಳುತ್ತದೆ. ಜೈನ, ಬೌದ್ಧ, ಸಿಖ್, ಲಿಂಗಾಯತ ಇವೆಲ್ಲ ಧರ್ಮಗಳಿಗೆ ಈಗ ಅಪಾಯ ಇರುವುದು ಮನುವಾದಿ ಶಕ್ತಿಗಳಿಂದ. ಸಿಖ್ಖರೇನೋ ಅದನ್ನು ಎದುರಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬಹುದು.

ಬೌದ್ಧ ಧರ್ಮವನ್ನು ಬಾಬಾಸಾಹೇಬರು ಬಚಾವ್ ಮಾಡಿದ್ದಾರೆ. ಆದರೆ, ಅಪಾಯಕಾರಿ ಸಿದ್ಧಾಂತ ಹೊಂದಿದ ಶಕ್ತಿಗಳ ಜೊತೆ ಸರಸ ವಿರಸದ ಸಂಬಂಧವಿಟ್ಟುಕೊಂಡಿರುವ ಲಿಂಗಾಯತರು, ಜೈನರು ವೈದಿಕಶಾಹಿಯ ಹುನ್ನಾರ ಎದುರಿಸಿ ತಮ್ಮ ಉಳಿವಿನ ದಾರಿ ಕಂಡುಕೊಳ್ಳಬೇಕಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಒಂದು ಮಂದಿರ ನಿರ್ಮಾಣವಾಯಿತೆಂದು ನೆಮ್ಮದಿಯಿಂದ ಉಸಿರಾಡುವಂತಿಲ್ಲ. ಧರ್ಮವನ್ನು, ದೇವರನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಂಡು, ಓಟಿನ ಬೆಳೆ ತೆಗೆಯಲು ಹೊರಟರೆ ಬಹುತ್ವ ಭಾರತ ಸುರಕ್ಷಿತವಾಗಿ ಇರುವುದಿಲ್ಲ. ಇತಿಹಾಸದ ಗಾಯಗಳನ್ನು ಕೆದಕುವುದನ್ನು ನಿಲ್ಲಿಸಿ ಮನಸ್ಸು ಕಟ್ಟುವ, ದೇಶ ಕಟ್ಟುವ ಮಹತ್ಕಾರ್ಯಕ್ಕೆ ಮುಂದಾಗೋಣ. ಯಾವುದೇ ಮಂದಿರ, ಮಸೀದಿ, ಚರ್ಚ್ಗಳಿಗಿಂತ ರಾಷ್ಟ್ರ ಮಂದಿರ ಮುಖ್ಯ.

ಈಗ ದೇಶದಲ್ಲಿ ಸಾಕಷ್ಟು ಮಂದಿರಗಳಿವೆ. ಇನ್ನಷ್ಟು ಕಟ್ಟಲು ಅಭ್ಯಂತರವಿಲ್ಲ. ಆದರೆ, ಇನ್ನೊಂದು ಧರ್ಮದ ಪ್ರಾರ್ಥನಾ ಕೇಂದ್ರವನ್ನು ಕೆಡವಿ ಮಂದಿರ ಕಟ್ಟುವುದನ್ನು ಯಾವ ದೇವರೂ ಒಪ್ಪುವುದಿಲ್ಲ.

share
ಸನತ್‌ಕುಮಾರ್ ಬೆಳಗಲಿ
ಸನತ್‌ಕುಮಾರ್ ಬೆಳಗಲಿ
Next Story
X