Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಜನ ಚಳವಳಿಗಳ ತಾಣ ಕಲ್ಯಾಣ ಕರ್ನಾಟಕ

ಜನ ಚಳವಳಿಗಳ ತಾಣ ಕಲ್ಯಾಣ ಕರ್ನಾಟಕ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ1 Dec 2025 9:34 AM IST
share
ಜನ ಚಳವಳಿಗಳ ತಾಣ ಕಲ್ಯಾಣ ಕರ್ನಾಟಕ

ಯಾವುದೇ ಪ್ರದೇಶದಲ್ಲಿ ಸಂಘ ಪರಿವಾರ ಹಾಗೂ ಅದರ ರಾಜಕೀಯ ವೇದಿಕೆಯಾಗಿರುವ ಬಿಜೆಪಿ ನೆಲೆಯೂರಬೇಕಾದರೆ ಅಲ್ಲಿ ಜನರ ನಡುವೆ ಕೋಮು ಕಲಹದ ಕಿಚ್ಚು ಹಚ್ಚಲೇ ಬೇಕು. ಯಾಕೆಂದರೆ ಅದಕ್ಕೆ ಬೇರೆ ಯಾವುದೇ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳಿಲ್ಲ. ಬೆಲೆ ಏರಿಕೆ, ನಿರುದ್ಯೋಗ, ಹಸಿವು ,ಬಡತನ ಇಂಥ ವಿಷಯಗಳು ಅದರ ಕಾರ್ಯಸೂಚಿಯಲ್ಲಿ ಇಲ್ಲ. ಅಂತಲೇ ಕಲ್ಯಾಣ ಕರ್ನಾಟಕದಲ್ಲಿ ಕಿಡಿ ಹೊತ್ತಿಸಲು ಆಳಂದದ ಲಾಡ್ಲೆ ಮಶಾಕ ದರ್ಗಾದ ಆವರಣದಲ್ಲಿ ಶಿವಲಿಂಗ ಇದೆ, ಅದು ತಮ್ಮದೆಂದು ಗಲಾಟೆ ಎಬ್ಬಿಸಿದರು.

ರಾಜ್ಯದ ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ ಈಗಲೂ ಉತ್ತರ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಹೋರಾಟಗಳು, ಚಳವಳಿಗಳು ನಡೆಯುವ ನಗರ ಕಲಬುರಗಿ.ಆದರೆ ಈ ಪ್ರತಿಭಟನೆ, ಹೋರಾಟಗಳು ಕೇವಲ ವಿಭಾಗೀಯ ಕೇಂದ್ರವಾದ ಕಲಬುರಗಿಗೆ ಮಾತ್ರ ಸೀಮಿತವಾಗಿಲ್ಲ.ರಾಯಚೂರು, ಯಾದಗಿರಿ, ದೂರದ ಕೊಪ್ಪಳ, ಸಮೀಪದ ಬೀದರ್ ನಗರಗಳು ಮಾತ್ರವಲ್ಲ ಈ ಭಾಗದ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ನಿತ್ಯವೂ ಒಂದಿಲ್ಲೊಂದು ಚಳವಳಿಗಳು ನಡೆಯುತ್ತಲೇ ಇರುತ್ತವೆ. ಕಳೆದ ಒಂದೆರಡು ದಶಕಗಳಲ್ಲಿ ನಡೆದ ಬಹುದೊಡ್ಡ ಹೋರಾಟವೆಂದರೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ 371 ಜೆ ಕಾಯ್ದೆಗಾಗಿ ನಡೆದ ಹೋರಾಟ. ಈಗಿನ ಎಐಸಿಸಿ ಅಧ್ಯಕ್ಷ ಹಾಗೂ ಹಿಂದಿನ ಕೇಂದ್ರ ಮಂತ್ರಿ ಮಲ್ಲಿಕಾರ್ಜುನ ಖರ್ಗೆಯವರ ಶತ ಪ್ರಯತ್ನದಿಂದ ಈಗ ವಿಶೇಷ ಸ್ಥಾನಮಾನ ದೊರಕಿದೆ.

ನಾನು ಜನಿಸಿ ಆರಂಭದ ಎರಡೂವರೆ ದಶಕಗಳ ಕಾಲ ಬೆಳೆದಿದ್ದು ಮುಂಬೈ ಕರ್ನಾಟಕದ ಬಿಜಾಪುರ (ಈಗ ವಿಜಯಪುರ) ಜಿಲ್ಲೆಯಲ್ಲಿ. ಆದರೂ ನಮ್ಮ ಪಕ್ಕದ 160 ಕಿ.ಮೀ. ಅಂತರದ ಕಲಬುರಗಿ ಜೊತೆಗೆ ನನಗೆ ವಿಶೇಷ ಒಡನಾಟ. ಕಲ್ಯಾಣ ಕರ್ನಾಟಕ ಹಿಂದೆ ಹೈದರಾಬಾದ್‌ನ ನಿಜಾಮರ ಆಡಳಿತಕ್ಕೊಳಪಟ್ಟಿದ್ದರಿಂದ ಅದನ್ನು ‘ಹೈದರಾಬಾದ್ ಕರ್ನಾಟಕ’ ಎಂದು ಕರೆಯಲಾಗುತ್ತಿತ್ತು. ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಚಿದಾನಂದ ಮೂರ್ತಿ ಅವರ ಸಲಹೆಯ ಮೇರೆಗೆ ಕಲ್ಯಾಣ ಕರ್ನಾಟಕ ಎಂದು ಹೆಸರನ್ನು ಬದಲಿಸಲಾಯಿತು. ಆದರೂ ಬಹುತೇಕ ಇಲ್ಲಿನ ಜನರ ಬಾಯಲ್ಲಿ ಅದು ಈಗಲೂ ಹೈದರಾಬಾದ್ ಕರ್ನಾಟಕವೇ ಆಗಿದೆ. ಹಾಗೆ ನೋಡಿದರೆ ಕಲ್ಯಾಣ ಕರ್ನಾಟಕ ಹೆಸರೂ ಕೂಡ ಸೂಕ್ತವಾಗಿದೆ. ಅಣ್ಣ ಬಸವಣ್ಣ ನಮ್ಮ ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರೂ ಅವರ ಕರ್ಮ ಭೂಮಿ ಕಲ್ಯಾಣ. ಅದೀಗ ಅಧಿಕೃತವಾಗಿ ಬಸವ ಕಲ್ಯಾಣ. ಹನ್ನೆರಡನೇ ಶತಮಾನದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಕಂದಾಚಾರಗಳ ವಿರುದ್ಧ ಬಹುದೊಡ್ಡ ಆಂದೋಲನದ ನೇತೃತ್ವವನ್ನು ವಹಿಸಿದ ಬಸವಣ್ಣನವರು ಜೀವದ ಬೆಲೆ ತೆತ್ತು ಕಲ್ಯಾಣದ ಸಾಮಾಜಿಕ ಕ್ರಾಂತಿಯ ಜ್ಯೋತಿಯನ್ನು ಹೊತ್ತಿಸಿ ಬೆಳಕು ನೀಡಿದರು. ಅದು ಅವರ ಏಕಾಂಗಿ ಹೋರಾಟವಾಗಿರಲಿಲ್ಲ ಬದಲಾಗಿ ತಳ ಸಮುದಾಯಗಳ ವಚನ ಚಳವಳಿಯಾಗಿ,

ಶರಣಾಂದೋಲನವಾಗಿ ಬಹುದೊಡ್ಡ ಪ್ರಭಾವವನ್ನು ಬೀರಿತು.

ಎಂಟು ನೂರು ವರ್ಷಗಳ ಹಿಂದಿನ ಶರಣ ಚಳವಳಿಯ ಬಗ್ಗೆ ಬರೆಯಲು ಹೊರಟರೆ ಒಂದು ಅಂಕಣವಾಗಲಿ, ಒಂದು ಪುಸ್ತಕವಾಗಲಿ ಸಾಲುವುದಿಲ್ಲ. ನಾನು ಬರೆಯಲು ಹೊರಟಿದ್ದು ಅದನ್ನಲ್ಲ. ಇಂದಿನ ಕಲ್ಯಾಣ ಕರ್ನಾಟಕದ ಬಗ್ಗೆ ಬರೆಯಬೇಕೆಂದರೆ ಅದರ ಹಿನ್ನೆಲೆಯ ಇತಿಹಾಸದ ಮೇಲೆ ಬೆಳಕು ಚೆಲ್ಲದೇ ಬರೆಯಲು ಆಗುವುದಿಲ್ಲ. ಕಲ್ಯಾಣದ ಅಂದಿನ ಸಮಾನತೆಯ ಕ್ರಾಂತಿಯ ಪ್ರಭಾವ ರಾಜ್ಯದ ಉಳಿದ ಭಾಗಗಳಿಗಿಂತ ಈ ಭಾಗದಲ್ಲಿ ಹೆಚ್ಚಿಗಿದೆ. ಅಂತಲೇ ಎಲ್ಲರನ್ನೂ ‘ಅಣ್ಣ’ ಎಂದು ಕರೆಯುವ ಇಲ್ಲಿ ಜಾತಿ,ಮತ, ಅದರಲ್ಲೂ ಕೋಮುವಾದದ ಹಾವಳಿ ಅಷ್ಟೊಂದು ಇಲ್ಲ. ಸೂಫಿ, ಶರಣ ಸಂಸ್ಕೃತಿಯ ಸೌಹಾರ್ದ ತಾಣವಾದ ಇದನ್ನು ಹಾಳು ಮಾಡಲು ಕೋಮುವ್ಯಾಧಿಗಳು ಎಷ್ಟೇ ಮಸಲತ್ತು ಮಾಡಿದರೂ ಅದು ಇಲ್ಲಿ ನಡೆದಿಲ್ಲ, ನಡೆಯುವುದಿಲ್ಲ. ಕಾರಣ ಕೇವಲ ಇದು ಆಗಿನ ಕಾಲದ ಶರಣಾಂದೋಲನದ ಪ್ರಭಾವ ಮಾತ್ರವಲ್ಲ, ಅದರ ಜೊತೆಗೆ ಈಗಲೂ ಅನ್ಯಾಯದ ವಿರುದ್ಧ ನಡೆಯುತ್ತಿರುವ ಜನ ಹೋರಾಟಗಳು. ಈ ಹೋರಾಟಗಳಲ್ಲಿ ಹಿಂದೂ, ಮುಸ್ಲಿಮ್, ಬೌದ್ಧ, ಲಿಂಗಾಯತ ,ಜೈನ ಎನ್ನದೇ ಎಲ್ಲರೂ ಅಂದರೆ ಅನ್ಯಾಯಕ್ಕೊಳಗಾದವರು ಭಾಗವಹಿಸುತ್ತಾರೆ. ಬಸವಣ್ಣನವರ ಅಂದಿನ ಪ್ರಭಾವದ ಜೊತೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಇಂದಿನ ಪ್ರಭಾವ ಮೇಳೈಸಿ ಬಹುದೊಡ್ಡ ಶಕ್ತಿಯಾಗಿದೆ. ಅಷ್ಟೇ ಅಲ್ಲ ರಾಜ್ಯದ ಉಳಿದೆಡೆ ಮಾತ್ರವಲ್ಲ ಜಾಗತಿಕವಾಗಿಯೂ ಹಿನ್ನಡೆ ಅನುಭವಿಸುತ್ತಿರುವ ಕಮ್ಯುನಿಸ್ಟ್ ಚಳವಳಿ ಇಂದಿಗೂ ಇಲ್ಲಿ ಪ್ರಭಾವಶಾಲಿಯಾಗಿದೆ.ಅದರ ಜೊತೆಗೆ ಸಮಾಜವಾದಿಗಳ ಸ್ಪರ್ಶವೂ ಇಲ್ಲಿದೆ. ಹೀಗಾಗಿ ಇದು ರಾಜ್ಯದ ಇತರ ಭಾಗಗಳಿಗಿಂತ ವಿಭಿನ್ನವಾಗಿದೆ.

ನಾನು ಬಿಜಾಪುರದಲ್ಲಿದ್ದಾಗ ಆಗಾಗ ಕಲಬುರಗಿಗೆ ಹೋಗುತ್ತಿದ್ದೆ. ನಂತರ ಹುಬ್ಬಳ್ಳಿ ಮತ್ತು ಬೆಂಗಳೂರು ಸೇರಿದ ನಂತರ ಸಂಪರ್ಕ ತಪ್ಪಿದಂತಾಗಿತ್ತು. ಆದರೂ ಸ್ನೇಹಿತರಾದ ಮಾರುತಿ ಗೋಖಲೆಯವರ ಆತ್ಮೀಯ ಒಡನಾಟದಿಂದಾಗಿ ಆಗಾಗ ಹೋಗುತ್ತಿದ್ದೆ. ಆದರೆ ಮತ್ತೆ ಕಲಬುರಗಿಯ ನಿಕಟ ಸಂಪರ್ಕ ಬಂದಿದ್ದು 2016ರ ನಂತರ ಐದಾರು ವರ್ಷ ಅಲ್ಲೇ ನೆಲೆಸಬೇಕಾಯಿತು. __ಈಗ ಇದು ಹಿಂದಿನ ಕಲಬುರಗಿ ಅಲ್ಲ. ಅದೀಗ ಎಲ್ಲ ಸೌಕರ್ಯಗಳನ್ನು ಹೊಂದಿದ ಆಧುನಿಕ ಮಹಾನಗರವಾಗಿ ಬೆಳೆದಿದೆ. ಶರಣ ಬಸಪ್ಪನ ಗುಡಿ ಮತ್ತು ಬಂದೇ ನವಾಝ್ ದರ್ಗಾಗಳು ಇಲ್ಲಿನ ಸೌಹಾರ್ದ ಸಂಕೇತಗಳು. ಇವುಗಳ ಜೊತೆ, ಜೊತೆಗೆ ಮಲ್ಲಿಕಾರ್ಜುನ ಖರ್ಗೆಯವರು ನಿರ್ಮಿಸಿದ ವಿಶಾಲವಾದ ಬೌದ್ಧ ವಿಹಾರವೂ ಇದೆ. ಈ ನಗರ ಹಿಂದೂ ಮುಸ್ಲಿಮ್ ಬಾಂಧವ್ಯಕ್ಕೆ ಇಡೀ ದೇಶಕ್ಕೆ ಮಾದರಿಯಾಗಿದೆ.

ಇಲ್ಲಿಯ ಜನರ ಅಗಾಧ ಪ್ರೀತಿಯನ್ನು ನಾನೆಂದೂ ಮರೆಯುವುದಿಲ್ಲ. ಇದು ಬಿಸಿಲೂರಿನ ಬೆಚ್ಚಗಿನ ಪ್ರೀತಿ. ರಾಜ್ಯದ ಹಿರಿಯ ಕಮ್ಯುನಿಸ್ಟ್ ನಾಯಕರಾಗಿದ್ದ ಶ್ರೀನಿವಾಸ ಗುಡಿ ಮತ್ತು ಕಮ್ಯುನಿಸ್ಟ್ ಶಾಸಕರಾಗಿದ್ದ ಗಂಗಾಧರ ನಮೋಶಿ ಒಡನಾಟ ನನಗಿತ್ತು. ಉಳಿದ ಕಡೆಗಳಂತೆ ಅವರು ಕಟ್ಟಿದ ಚಳವಳಿ ಅವರ ನಂತರ ಅಳಿದು ಹೋಗಲಿಲ್ಲ. ರಾಜ್ಯದಲ್ಲಿ ಉಭಯ ಕಮ್ಯುನಿಸ್ಟ್ ಪಕ್ಷಗಳು ಅತ್ಯಂತ ಕ್ರಿಯಾಶೀಲವಾಗಿರುವ ಪ್ರದೇಶವಿದು. ನಾನಲ್ಲಿ ಇದ್ದಾಗ ನಿತ್ಯವೂ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಬೀದಿಗಿಳಿದು ಹೋರಾಡುತ್ತಿದ್ದ ಕಮ್ಯುನಿಸ್ಟ್ ನಾಯಕ ಮಾರುತಿ ಮಾನ್ಪಡೆಯವರು ಆಗಾಗ ಸಿಗುತ್ತಿದ್ದರು. ಎಲ್ಲೇ ಸಣ್ಣ ಅನ್ಯಾಯವಾದರೂ ಜಿಲ್ಲಾಧಿಕಾರಿ ಕಚೇರಿಯ ಮುಂದೆ ನೂರಾರು ಜನರನ್ನು ಕಟ್ಟಿಕೊಂಡು ಬರುತ್ತಿದ್ದ ಮಾನ್ಪಡೆ ಎಂಥ ಹೋರಾಟಗಾರನೆಂದರೆ ಒಮ್ಮೆ ರಸ್ತೆಯಲ್ಲಿ ಅಡ್ಡ ಮಲಗಿ ಬೆಂಗಾವಲಿನೊಂದಿಗೆ ಬಂದ ಮುಖ್ಯಮಂತ್ರಿಗಳ ವಾಹನವನ್ನೇ ತಡೆದು ನಿಲ್ಲಿಸಿದ್ದರು. ಇಂಥ ಮಾನ್ಪಡೆಯವರನ್ನು ಕೋವಿಡ್ ಬಲಿ ತೆಗೆದುಕೊಂಡಿತು. ಅವರ ನಂತರ ಕಮ್ಯುನಿಸ್ಟ್ ಚಳವಳಿಯ ನಾಯಕತ್ವ ವಹಿಸಿದ ಕೆ.ನೀಲಾ ಮತ್ತು ನಾಡಿನ ಖ್ಯಾತ ಚಿಂತಕಿ ಮೀನಾಕ್ಷಿ ಬಾಳಿ ಮೊದಲಾದವರು ಚಳವಳಿಗಳನ್ನು ಮುಂದುವರಿಸಿದ್ದಾರೆ. ಇಲ್ಲಿ ಎಡಪಂಥೀಯ ಚಿಂತಕರ ದೊಡ್ಡ ಪಡೆಯೇ ಇದೆ. ಮನುವಾದ ಮತ್ತು ಕೋಮುವಾದಗಳ ವಿರುದ್ಧ ನಿರಂತರ ಜನಜಾಗೃತಿಯನ್ನು ಮೂಡಿಸುತ್ತಿರುವ ಲೇಖಕ ಪ್ರೊ.ಆರ್.ಕೆ.ಹುಡಗಿ, ಮಾರುತಿ ಗೋಖಲೆ, ಪ್ರಕಾಶಕ ದತ್ತಾತ್ರೇಯ ಇಕ್ಕಳಕಿ, ಮಲ್ಲಿಕಾರ್ಜುನ ಸಜ್ಜನ ಹೀಗೆ ನೂರಾರು ಜೀವಪರ ಕಾಳಜಿಯ ಚಿಂತಕರು ಇಲ್ಲಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ವಿಶೇಷವಾಗಿ ಕಲಬುರಗಿಯಲ್ಲಿ ಸಾಕಷ್ಟು ಓದಿಕೊಂಡಿರುವ ರಾಜಕೀಯ ನಾಯಕರಿಗೆ ಕೊರತೆಯಿಲ್ಲ. ಈಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ದಕ್ಷ ಆಡಳಿತಗಾರರು ಮಾತ್ರವಲ್ಲ ಬೌದ್ಧ ಧರ್ಮ ಹಾಗೂ ಅಂಬೇಡ್ಕರ್ ಸಾಹಿತ್ಯವನ್ನು ಸಾಕಷ್ಟು ಓದಿಕೊಂಡವರು.ಲೋಹಿಯಾ ಸಮಾಜವಾದಿಗಳಾದ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಮಾಜಿ ಮಂತ್ರಿ ಎಸ್.ಕೆ.ಕಾಂತಾ, ಹೀಗೆ ಹಲವಾರು ಜನರಿದ್ದಾರೆ. ಶಾಸನ ಸಭೆಗೆ ಬರುವ ಮುನ್ನ ಎಂ.ಎಸ್.ಕೆ. ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾಂತಾ ಅವರು ಪ್ರಾಮಾಣಿಕತೆ ಮತ್ತು ಬದ್ಧತೆಗೆ ಹೆಸರಾದವರು. ಮಂತ್ರಿಯಾಗಿದ್ದಾಗಲೂ ಕಾರ್ಮಿಕರ ವಸತಿ ಪ್ರದೇಶದ ಹಳೆಯ ಮನೆಯಲ್ಲಿ ಇದ್ದ ಕಾಂತಾ ಅವರು ಅಧಿಕಾರದಲ್ಲಿದ್ದಾಗಲೂ ಹೆಸರು ಕೆಡಿಸಿಕೊಳ್ಳಲಿಲ್ಲ. ಈ ಇಳಿ ವಯಸ್ಸಿನಲ್ಲೂ ಅವರು ಕೂಡ ಕಣ್ಣಿಗೆ ಕಂಡ ಅನ್ಯಾಯದ ವಿರುದ್ಧ ಬೀದಿ ಹೋರಾಟಗಳನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ಎಸ್ ಯುಸಿಐ ಎಂಬ ಎಡಪಂಥೀಯ ರಾಜಕೀಯ ಸಂಘಟನೆಯೂ ಕ್ರಿಯಾಶೀಲವಾಗಿದೆ. ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳು ಇಲ್ಲಿವೆ. ಸಿಪಿಐ ನಾಯಕರಾದ ಮೌಲಾ ಮುಲ್ಲಾ, ಮಹೇಶ ರಾಠೋಡ್, ಭೀಮಾಶಂಕರ್ ಮಡಿಯಾಳ, ಪತಕಿ, ಯಳಸಂಗಿ ಹೀಗೆ ಹಲವಾರು ಹೋರಾಟಗಾರರು ಇಲ್ಲಿದ್ದಾರೆ.

ಬದಲಾಗಿರುವ ಹುಬ್ಬಳ್ಳಿಗೆ ಇಂದಿನ ಕಲಬುರಗಿಯನ್ನು ಹೋಲಿಸಿದರೆ ವಿಭಿನ್ನ ಚಿತ್ರ ಕಣ್ಣ ಮುಂದೆ ಬರುತ್ತದೆ. ಹಿಂದೆ ಎಂಭತ್ತರ ದಶಕದ ಕೊನೆಯವರೆಗೆ ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣ ಹೋರಾಟದ ಕಾಲದಲ್ಲಿ ಉತ್ತರ ಕರ್ನಾಟಕದ ಕೇಂದ್ರವೆಂದು ಹೆಸರಾಗಿದ್ದ ನಾಡಿನ ಎಲ್ಲ ಸಂಘಟನೆಗಳ ಮತ್ತು ಹೋರಾಟಗಾರರ ಕೇಂದ್ರ ಹುಬ್ಬಳ್ಳಿ ಆಗಿತ್ತು.

ಕರ್ನಾಟಕ ರಾಜ್ಯ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಕಮ್ಯುನಿಸ್ಟ್ ಪಕ್ಷದ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿತ್ತು.‘ಚಿರಸ್ಮರಣೆ’ ಕಾದಂಬರಿ ಬರೆದ ನಿರಂಜನ (ಆಗ ಕುಳಕುಂದ ಶಿವರಾಯ) ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿದ್ದರು.‘ಜನಶಕ್ತಿ’ ಕಮ್ಯುನಿಸ್ಟ್ ಪಕ್ಷದ ಮುಖಪತ್ರವಾಗಿತ್ತು. ನಿರಂಜನ ಅದರ ಸಂಪಾದಕರು. ಅದೇ ರೀತಿ ಸಮಾಜವಾದಿ ಚಳವಳಿಯ ತಾಣ ಎಂದು ಧಾರವಾಡ ಹೆಸರಾಗಿತ್ತು. ಹೆಸರಾಂತ ಪತ್ರಕರ್ತ ಖಾದ್ರಿ ಶಾಮಣ್ಣ ಧಾರವಾಡದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿದ್ದರು.ಆದರೆ ಈಗ ಅದೆಲ್ಲ ಇಲ್ಲ. ಈಗ ಹುಬ್ಬಳ್ಳಿ ಸಂಘ ಪರಿವಾರದ ಕೇಂದ್ರ. ಸದ್ಯ ಯಾವುದೇ ಜನಪರ ಹೋರಾಟಗಳು ಅಲ್ಲಿ ನಡೆಯುತ್ತಿಲ್ಲ.ಕೋಮು ಆಧಾರದಲ್ಲಿ ಜನರನ್ನು ವಿಭಜಿಸುವ ವಿಚ್ಛಿದ್ರಕಾರಿ ಶಕ್ತಿಗಳು ಬೇರು ಬಿಟ್ಟಿವೆ. ಆಗಾಗ ಪ್ರ ಯೋಜಿತ ಕೋಮು ಗಲಭೆಗಳು ಇಲ್ಲಿ ನಡೆಯುತ್ತವೆ. ಜ್ವಲಂತ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಯಾರೂ ಬೀದಿಗೆ ಬರುವುದಿಲ್ಲ.

ಈಗ ಮುಂಬೈ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟ, ಬಿಜಾಪುರ, ಕಾರವಾರ, ಹಾವೇರಿ ಮೊದಲಾದ ಜಿಲ್ಲೆಗಳು ಕೋಮುವಾದಿ ಶಕ್ತಿಗಳ ಕೇಂದ್ರಗಳಾಗಿವೆ. ಇಲ್ಲಿ ಜನಪರ ಹೋರಾಟಗಳು ಅಪರೂಪವಾಗಿ ನಡೆಯುತ್ತಿವೆ. ಬಿಜಾಪುರದಲ್ಲಿ ಈಗ ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ನಡೆಯುತ್ತಿರುವ ಹೋರಾಟ ಇತ್ತೀಚಿನ ಬಹುದೊಡ್ಡ ಹೋರಾಟವಾಗಿದೆ. ಆದರೆ ಕಲ್ಯಾಣ ಕರ್ನಾಟಕ ಈಗಲೂ ಚಳವಳಿಗಳ ತಾಣವಾಗಿದೆ. ರಾಯಚೂರು, ಸಿಂಧನೂರು, ಯಾದಗಿರಿ, ಬೀದರ,ಕೊಪ್ಪಳ, ಬಳ್ಳಾರಿ ಇವೇ ಮೊದಲಾದ ಜಿಲ್ಲೆಗಳಲ್ಲಿ ಅನ್ಯಾಯದ ವಿರುದ್ಧ ಹೋರಾಟಗಳು ನಡೆಯದ ದಿನಗಳೇ ಇಲ್ಲ. ಕೊಪ್ಪಳದಲ್ಲಿ ಪ್ರಾಣ ಘಾತುಕ ಕೈಗಾರಿಕೆಗಳ ವಿರುದ್ಧ ಈಗಲೂ ನಿರಂತರ ಧರಣಿ ನಡೆಯುತ್ತಿದೆ.

ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ ಭಾಗ, ಮಧ್ಯ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನ ಬಹುತೇಕ ಕಡೆ ವ್ಯಾಪಿಸಿರುವ ಕೋಮುವಾದಿ ಶಕ್ತಿಗಳು ಎಷ್ಟೇ ಕಸರತ್ತು ಮಾಡಿದರೂ ಗೆಲ್ಲಲು ಸಾಧ್ಯವಾಗದಿರುವ ಭಾಗವೆಂದರೆ ಕಲ್ಯಾಣ ಕರ್ನಾಟಕ. ಇಲ್ಲಿ ನೆಲೆಯೂರಲು ರೂಪಿಸುತ್ತಿರುವ ನಾನಾ ತಂತ್ರಗಳು ವಿಫಲವಾಗುತ್ತಲೇ ಇವೆ. ಆರೆಸ್ಸೆಸ್‌ನ ಸರ ಸಂಘಚಾಲಕ ಮೋಹನ್ ಭಾಗವತರು ಆಗಾಗ ಇಲ್ಲಿ ವಿಶೇಷ ಭೇಟಿಯನ್ನು ನೀಡುತ್ತಲೇ ಇರುತ್ತಾರೆ. ಎರಡು ವರ್ಷಗಳ ಹಿಂದೆ ನಾಲ್ಕು ದಿನ ಇಲ್ಲಿ ವಾಸ್ತವ್ಯ ಮಾಡಿದ್ದರು. ಬೇರೆ, ಬೇರೆ ಹೆಸರುಗಳಿಂದ ಜನರ ಮಧ್ಯೆ ನುಸುಳಲು ಯತ್ನಿಸಿದರೂ ಜನ ನಂಬುತ್ತಿಲ್ಲ. ಆದರೂ ಹೋರಾಟಗಳ ಹಿನ್ನೆಲೆಯಿಲ್ಲದ ಜಾಗತೀಕರಣದ ನಂತರ ಬಂದ ಹೊಸ ಪೀಳಿಗೆಯಲ್ಲಿ ಭರವಸೆಯನ್ನು ಇಟ್ಟುಕೊಂಡು ಪ್ರಯತ್ನಿಸುತ್ತಲೇ ಇದ್ದಾರೆ.

ಯಾವುದೇ ಪ್ರದೇಶದಲ್ಲಿ ಸಂಘ ಪರಿವಾರ ಹಾಗೂ ಅದರ ರಾಜಕೀಯ ವೇದಿಕೆಯಾಗಿರುವ ಬಿಜೆಪಿ ನೆಲೆಯೂರಬೇಕಾದರೆ ಅಲ್ಲಿ ಜನರ ನಡುವೆ ಕೋಮು ಕಲಹದ ಕಿಚ್ಚು ಹಚ್ಚಲೇ ಬೇಕು. ಯಾಕೆಂದರೆ ಅದಕ್ಕೆ ಬೇರೆ ಯಾವುದೇ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳಿಲ್ಲ. ಬೆಲೆ ಏರಿಕೆ, ನಿರುದ್ಯೋಗ, ಹಸಿವು ,ಬಡತನ ಇಂಥ ವಿಷಯಗಳು ಅದರ ಕಾರ್ಯಸೂಚಿಯಲ್ಲಿ ಇಲ್ಲ. ಅಂತಲೇ ಕಲ್ಯಾಣ ಕರ್ನಾಟಕದಲ್ಲಿ ಕಿಡಿ ಹೊತ್ತಿಸಲು ಆಳಂದದ ಲಾಡ್ಲೆ ಮಶಾಕ ದರ್ಗಾದ ಆವರಣದಲ್ಲಿ ಶಿವಲಿಂಗ ಇದೆ, ಅದು ತಮ್ಮದೆಂದು ಗಲಾಟೆ ಎಬ್ಬಿಸಿದರು. ಸಾಮಾನ್ಯವಾಗಿ ಹಿಂದೂ ಮುಸ್ಲಿಮ್ ಸಮುದಾಯಗಳ ಜನ ಒಟ್ಟಾಗಿ ನಡೆದುಕೊಳ್ಳುವ ದರ್ಗಾದಂಥ ತಾಣಗಳಲ್ಲಿ ಎರಡೂ ಧರ್ಮಕ್ಕೆ ಸೇರಿದ ಧಾರ್ಮಿಕ ಸಂಕೇತಗಳು ಇರುತ್ತವೆ. ಬಾಬಾ ಬುಡಾನಗಿರಿಯಲ್ಲಿ ದತ್ತಾತ್ರೇಯ ಸ್ವಾಮಿಗಳ ಪಾದುಕೆಗಳು ಇರುವಂತೆ ಆಳಂದದ ಲಾಡ್ಲೆ ಮಶಾಕ ದರ್ಗಾದ ಆವರಣದಲ್ಲಿ ಮಹಾರಾಷ್ಟ್ರದ ರಾಘವ ಚೈತನ್ಯರ ಶಿವಲಿಂಗವೂ ಇದೆ. ಇಲ್ಲಿ ನೂರಾರು ವರ್ಷಗಳಿಂದ ಮುಸಲ್ಮಾನರು ಉರೂಸು ಹಾಗೂ ಹಿಂದೂಗಳು ಅಂದರೆ ಲಿಂಗಾಯತರು ಲಿಂಗದ ಪೂಜೆಯನ್ನು ಮಾಡುತ್ತ ಬಂದಿದ್ದಾರೆ. ಆದರೆ ಕೋಮುವಾದಿಗಳು ಇದನ್ನು ದುರ್ಬಳಕೆ ಮಾಡಿಕೊಂಡು 2021ರಲ್ಲಿ ಶಿವಲಿಂಗಕ್ಕೆ ಅವಮಾನವಾಗಿದೆಯೆಂದು ಗಲಾಟೆ ಮಾಡಿದರು. ಆದರೆ ಜನ ಇವರನ್ನು ಬೆಂಬಲಿಸಲಿಲ್ಲ. ನಂತರ ನಡೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಕೋಮು ದ್ವೇಷಕ್ಕೆ ಪ್ರಚೋದನೆ ನೀಡಿದ ಆಳಂದದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ , ಕೇಂದ್ರ ಮಂತ್ರಿಯಾಗಿದ್ದ ರಾಜ ಕುಮಾರ್ ಪಾಟೀಲ್ ತೇಲ್ಕೂರು, ದತ್ತಾತ್ರೇಯ ಪಾಟೀಲ್‌ರೇವೂರ ಅವರನ್ನು ಜನ ಸೋಲಿಸಿದರು.

ಹೀಗಾಗಿ ಕರ್ನಾಟಕದ ಈ ಭಾಗ ಅಂದರೆ ಕಲ್ಯಾಣ ಕರ್ನಾಟಕ ಇಂದಿಗೂ ಸೌಹಾರ್ದದ ತಾಣವಾಗಿ ಉಳಿದುಕೊಂಡಿದೆ. ಇಂಥ ಸಹೋದರತ್ವದ ನೆಲೆಗಳೇ ಭರವಸೆಯ ದೀಪಗಳಾಗಿ ಬೆಳಕು ಚೆಲ್ಲುತ್ತಿವೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X