Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಜನ ವಿಭಜನೆಗೆ ರಾಷ್ಟ್ರ ಗೀತೆಯ ದುರ್ಬಳಕೆ

ಜನ ವಿಭಜನೆಗೆ ರಾಷ್ಟ್ರ ಗೀತೆಯ ದುರ್ಬಳಕೆ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ3 Aug 2026 10:57 AM IST
share
ಜನ ವಿಭಜನೆಗೆ ರಾಷ್ಟ್ರ ಗೀತೆಯ ದುರ್ಬಳಕೆ

ಪ್ರಸಕ್ತ ತಿದ್ದುಪಡಿ ವಿಧೇಯಕವನ್ನು ಸಮರ್ಥಿಸಲು ದೇಶದ ಮೊದಲ ಗೃಹ ಮಂತ್ರಿ ವಲ್ಲಭಬಾಯಿ ಪಟೇಲ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ತಮ್ಮ ಎಂದಿನ ಚಾಳಿಯಾದ ನೆಹರೂ ಮತ್ತು ಪಟೇಲರ ನಡುವೆ ಭಿನ್ನಾಭಿಪ್ರಾಯ ಇತ್ತೆಂದು ಕತೆ ಕಟ್ಟಿ ಹೇಳಲಾಗುತ್ತಿದೆ.‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಹಾಡುವ ಬಗ್ಗೆ ಸರಕಾರ ಹಿಂದೆ ಕೈಗೊಂಡ ತೀರ್ಮಾನಕ್ಕೆ ನೆಹರೂ ಕಾರಣ, ಇದರಿಂದಲೇ ರಾಷ್ಟ್ರ ವಿಭಜನೆಯಾಯಿತೆಂದು ಕೇಂದ್ರ ಸರಕಾರ ಹೇಳುತ್ತದೆ.

ಸ್ವಾತಂತ್ರ್ಯದ ಎಪ್ಪತ್ತು ವರ್ಷಗಳ ನಂತರ ಭಾರತದ ಪ್ರಜಾಪ್ರಭುತ್ವ ದ ಬುಡ ಅಲ್ಲಾಡುವಂಥ ವಿದ್ಯಮಾನಗಳನ್ನು ನೋಡುತ್ತಿದ್ದೇವೆ. ಸರ್ವರಿಗೂ ಸಮಾನಾವಕಾಶ ಇರುವ ಹೊಸ ಭಾರತವನ್ನು ಕಟ್ಟುವುದು ನಮ್ಮ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಅದಕ್ಕೆ ಪೂರಕವಾದ ಸಂವಿಧಾನ ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡಿತು. ಈಗ ಏಳು ದಶಕಗಳ ನಂತರ ಆ ಕನಸುಗಳು ಭಗ್ನಗೊಂಡಿವೆ. ಪ್ರಭುತ್ವದ ಸೂತ್ರ ಹಿಡಿದವರಿಂದಲೇ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಿರುವ ಕೇಂದ್ರದ ಆಡಳಿತ ಪಕ್ಷ ಜನಾಭಿಪ್ರಾಯ ಮತ್ತು ಭಿನ್ನಾಭಿಪ್ರಾಯಗಳನ್ನು ಸಹಿಸುವ ಸ್ಥಿತಿಯಲ್ಲಿ ಇಲ್ಲ. ಸರಕಾರದ ಲೋಪ ದೋಷಗಳ ವಿರುದ್ಧ ಧ್ವನಿಯೆತ್ತಿದವರನ್ನು ‘ದೇಶದ್ರೋಹಿ’ಗಳು, ಚೀನಾ ಏಜೆಂಟರು ಎಂದೆಲ್ಲಾ ಹಿಯಾಳಿಸಿ ಕರಾಳ ಕಾನೂನುಗಳ ಮೂಲಕ ಪ್ರತಿಭಟನೆಯ ಧ್ವನಿಗಳನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಲೇ ಇದೆ. ಅಂತಿಮವಾಗಿ ಜನತಂತ್ರದ ಚಟ್ಟ ಕಟ್ಟಿ ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಸಂಪೂರ್ಣವಾಗಿ ದೇಶದ ಮೇಲೆ ಹೇರುವ ದಿನಗಳು ದೂರವಿಲ್ಲವೇನೋ ಎಂದು ಆತಂಕ ಉಂಟಾಗುತ್ತದೆ.ವಿಷಾದದ ಸಂಗತಿಯೆಂದರೆ ಪ್ರತಿಭಟನೆಯ, ಪ್ರತಿರೋಧದ ದನಿಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ.

2014ರ ನಂತರ ನಿರಂತರವಾಗಿ ಅಧಿಕಾರದಲ್ಲಿ ಇರುವವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹುಮತಕ್ಕೆ ಸಾಕಾಗುವಷ್ಟು ಸ್ಥಾನಗಳನ್ನು ಗೆಲ್ಲಲಾಗದಿದ್ದರೂ ಚಂದ್ರಬಾಬು ನಾಯ್ಡು ಅವರ ನೇತೃತ್ವದ ತೆಲುಗು ದೇಶಂ ಹಾಗೂ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳದ ಬೆಂಬಲ ಪಡೆದು ಅಧಿಕಾರ ವಶಪಡಿಸಿಕೊಂಡರು.ಅಧಿಕಾರ ಇರುವಾಗಲೆಲ್ಲಾ ಸಾವರ್ಕರ್ ಮತ್ತು ಗೊಳ್ವಾಲ್ಕರ್ ಅವರ ಕಲ್ಪನೆಯ ‘ಹಿಂದೂ ರಾಷ್ಟ್ರ’ ಗುರಿ ಸಾಧನೆಗಾಗಿ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಪ್ರತಿರೋಧವೇ ಇಲ್ಲದಂತೆ ಮಾಡಲು ಏನೇನು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ.ಈಗಾಗಲೇ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಳ್ಳಲಾಗಿದೆ.

ಈ ಮಸಲತ್ತು ಈಗ ಎಂಥ ಅಪಾಯಕಾರಿ ಹಂತವನ್ನು ತಲುಪಿದೆಯೆಂದರೆ, ಅಧಿಕಾರದಲ್ಲಿರುವ ಪಕ್ಷ ತನ್ನ ಗುಪ್ತ ಕಾರ್ಯಸೂಚಿಗೆ ಪೂರಕವಾಗಿ ಮತ್ತು ಅನುಕೂಲ ಮಾಡಿಕೊಳ್ಳಲು ರಾಷ್ಟ್ರ ಗೀತೆಯೊಂದನ್ನು, ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

‘ವಂದೇ ಮಾತರಂ’ ಗೀತೆಗೆ ರಾಷ್ಟ್ರ ಗೀತೆಯ ಸಮಾನವಾದ ಸ್ಥಾನ ಮಾನವನ್ನು ನೀಡಲು ಮುಂದಾಗಿದೆ. ‘ವಂದೇ ಮಾತರಂ’ ಗೀತೆಗೆ ಅಗೌರವವನ್ನು ತೋರಿಸುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುವ ವಿಧೇಯಕವೊಂದನ್ನು ಅಂಗೀಕರಿಸಲಾಗಿದೆ

ಜನ ವಿಭಜನೆ ಹಾಗೂ ಕೋಮು ಧ್ರುವೀಕರಣಕ್ಕೆ ಪೂರಕವಾದ ತನ್ನ ಕಾರ್ಯಸೂಚಿಯ ಅನುಕೂಲಕ್ಕಾಗಿ ಸರಕಾರ ರಾಷ್ಟ್ರ ಗೀತೆಯನ್ನು ಬಳಸಿಕೊಳ್ಳಲು ಹೊರಟಿರುವುದು ಸ್ಪಷ್ಟವಾಗುತ್ತದೆ. ಎಲ್ಲರನ್ನೂ ಒಳಗೊಳ್ಳುವ ಎಲ್ಲರೂ ಒಪ್ಪಿರುವ ‘ಜನಗಣ ಮನ’ವನ್ನು ಒಪ್ಪಿಕೊಳ್ಳಲು ಸಂಘ ಪರಿವಾರ ತಯಾರಿಲ್ಲ.

ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ಈ ವಿಧೇಯಕದ ಬಗ್ಗೆ ರಾಷ್ಟ್ರ ಮಟ್ಟದ ಚರ್ಚೆ ನಡೆಯಬೇಕಾಗಿದೆ. ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆ -1971ಕ್ಕೆ ತಿದ್ದುಪಡಿಯನ್ನು ತರುವ ಮೂಲಕ ರಾಷ್ಟ್ರ ಧ್ವಜ, ಸಂವಿಧಾನ ಹಾಗೂ ರಾಷ್ಟ್ರ ಗೀತೆಯಂಥ ರಾಷ್ಟ್ರೀಯ ಸಂಕೇತಗಳನ್ನು ಅಪವಿತ್ರಗೊಳಿಸುವುದು ಮತ್ತು ಅವಮಾನ ಗೊಳಿಸುವುದು ಈ ವಿಧೇಯಕದ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಈ ಅಪರಾಧಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಇಷ್ಟೇ ಅಲ್ಲ, ಅಂಗೀಕೃತ ವಿಧೇಯಕದ ಪ್ರಕಾರ ಈ ಮೊದಲು ಪ್ರಸ್ತುತ ‘ವಂದೇ ಮಾತರಂ’ ನ ಮೊದಲ ಎರಡು ಚರಣಗಳನ್ನು ಮಾತ್ರವಲ್ಲ ಹಾಡದೇ ಗೀತೆಯ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಪ್ರಸಕ್ತ ತಿದ್ದುಪಡಿ ವಿಧೇಯಕವನ್ನು ಸಮರ್ಥಿಸಲು ದೇಶದ ಮೊದಲ ಗೃಹ ಮಂತ್ರಿ ವಲ್ಲಭಬಾಯಿ ಪಟೇಲ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ತಮ್ಮ ಎಂದಿನ ಚಾಳಿಯಾದ ನೆಹರೂ ಮತ್ತು ಪಟೇಲರ ನಡುವೆ ಭಿನ್ನಾಭಿಪ್ರಾಯ ಇತ್ತೆಂದು ಕತೆ ಕಟ್ಟಿ ಹೇಳಲಾಗುತ್ತಿದೆ.‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಹಾಡುವ ಬಗ್ಗೆ ಸರಕಾರ ಹಿಂದೆ ಕೈಗೊಂಡ ತೀರ್ಮಾನಕ್ಕೆ ನೆಹರೂ ಕಾರಣ. ಇದರಿಂದಲೇ ರಾಷ್ಟ್ರ ವಿಭಜನೆಯಾಯಿತೆಂದು ಕೇಂದ್ರ ಸರಕಾರ ಹೇಳುತ್ತದೆ, ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿಯವರು ಸದನದಲ್ಲಿ ಹೀಗೆ ತಪ್ಪಾಗಿ ಪ್ರತಿಪಾದನೆ ಮಾಡಿದ್ದಾರೆ. ಸರಕಾರದ ಈ ಪ್ರತಿಪಾದನೆ ಅವಾಸ್ತವಿಕ ಮಾತ್ರವಲ್ಲ ಆಕ್ಷೇಪಕಾರಿಯಾಗಿದೆ.ಸಹಬಾಳ್ವೆ ಮತ್ತು ಸೌಹಾರ್ದದತೆಯ ಸ್ವಾತಂತ್ರ್ಯ ಹೋರಾಟದ ಆಶಯಗಳಿಗೆ ಅಪಚಾರ ಮಾಡಿದಂತಾಗಿದೆ.ಕೋಮುವಾದ ಮತ್ತು ಬಹುಸಂಖ್ಯಾತ ದೃಷ್ಟಿ ಕೋನದಿಂದ ಕೂಡಿದ ಸದರಿ ವ್ಯಾಖ್ಯಾನವು ಭಾರತದ ಶತಮಾನಗಳ ಇತಿಹಾಸದ ಮಾನವೀಯ ಮೌಲ್ಯಗಳಿಗೆ ವಿರುದ್ಧವಾದುದಾಗಿದೆ.

ವಾಸ್ತವವಾಗಿ ಬಂಕಿಮಚಂದ್ರ ಚಟರ್ಜಿಯವರು ಬರೆದ ‘ವಂದೇ ಮಾತರಂ’ ಗೀತೆ 1882ರಲ್ಲಿ ಪ್ರಕಟವಾದ ‘ಆನಂದ ಮಠ’ ಕಾದಂಬರಿಯಲ್ಲಿ ಮೊದಲು ಪ್ರಕಟವಾಯಿತು .ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹೋರಾಟಗಾರರಿಗೆ ಸ್ಫೂರ್ತಿ ಮತ್ತು ಉತ್ಸಾಹ ತುಂಬಲು ಪ್ರೇರಣೆಯಾಗಿ ಜನಪ್ರಿಯವಾಯಿತು. ಈ ಗೀತೆಯ ಕೆಲವು ಚರಣಗಳಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಸಂಕೇತಗಳು ಇರುವುದರಿಂದ ಅದನ್ನು ಹಾಡುವುದನ್ನು ಅಲ್ಪಸಂಖ್ಯಾತ ಸಮುದಾಯಗಳು ಅದರಲ್ಲೂ ವಿಶೇಷವಾಗಿ ಮುಸಲ್ಮಾನರು ಇಷ್ಟ ಪಡುತ್ತಿರಲಿಲ್ಲ. ಈ ಅಸಮಾಧಾನವನ್ನು ಗಮನಿಸಿ 1937ರಲ್ಲಿ ಅಂದಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಶಿಫಾರಸು ಮಾಡಿತ್ತು. ಈ ವಾಸ್ತವವನ್ನು ಮರೆ ಮಾಚಿ ಜನ ವಿಭಜನೆಗೆ ಇದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಈಗ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಕಾಯ್ದೆಗೆ ತಂದಿರುವ ತಿದ್ದುಪಡಿ ವಿಧೇಯಕ ಸಹಜವಾಗಿ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೇಕೆಂತಲೆ ನಿರ್ದಿಷ್ಟ ಸಮುದಾಯದ ಜನರಿಗೆ ಕಿರಿ ಕಿರಿ ಉಂಟು ಮಾಡುವ ಅವಕಾಶವನ್ನು ಇದು ಕಲ್ಪಿಸುತ್ತದೆ. ಯಾವುದೇ ರಾಷ್ಟ್ರದ ಸಂಕೇತಗಳನ್ನು ಜನರು ತಾವಾಗಿ

ಸ್ವಯಂ ಪ್ರೇರಣೆಯಿಂದ ಒಪ್ಪಿಕೊಳ್ಳಬೇಕು. ಯಾವುದೂ ಬಲವಂತದ ಹೇರಿಕೆಯಾಗಬಾರದು. ಭಾರತದ ಕೋಟ್ಯಂತರ ಹೃದಯಗಳಲ್ಲಿ ರಾಷ್ಟ್ರೀಯ ಸಂಕೇತಗಳು ನೆಲೆಯೂರುವಂಥ ವಾತಾವರಣವನ್ನು ಮೊದಲು ಕಲ್ಪಿಸಬೇಕು.ಅಲ್ಪ ಸಂಖ್ಯಾತ ಸಮುದಾಯಗಳನ್ನು ಮುಖ್ಯ ವಾಹಿನಿಯಿಂದ ಬೇರ್ಪಡಿಸುವ ಕೋಮುವಾದಿ ಚಟುವಟಿಕೆಗಳನ್ನು ವರ್ಷಾನುಗಟ್ಟಲೆ ಮಾಡಿ ಈಗ ಒಮ್ಮಲೇ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಬಾರದು. ‘ವಂದೇ ಮಾತರಂ’ ಎಲ್ಲ ಚರಣಗಳನ್ನು ಕಡ್ಡಾಯಗೊಳಿಸಿರುವುದು ಸರಿಯಲ್ಲ. ಈಗ ‘ಜೈ ಶ್ರೀ ರಾಮ್’ ಘೋಷಣೆ ಕೂಗಲು ಕಂಡ ಕಂಡಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಜನರನ್ನು ಒತ್ತಾಯಿಸಿದಂತೆ ಮುಂದೆ ಸಿಕ್ಕ ಸಿಕ್ಕಲ್ಲಿ ವಂದೇ ಮಾತರಂ ನ ಎಲ್ಲ ಚರಣಗಳನ್ನು ಹಾಡುವಂತೆ ಬಲವಂತಪಡಿಸುವ ವಾತಾವರಣ ನಿರ್ಮಾಣವಾಗಬಹುದು.

ಬಾಬಾಸಾಹೇಬ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ ರಚನೆಯ ಸಭೆ ‘ವಂದೇ ಮಾತರಂನ ಎರಡು ಚರಣಗಳನ್ನಷ್ಟೇ ರಾಷ್ಟ್ರ ಗೀತೆಯನ್ನಾಗಿ ಅಂಗೀಕರಿಸಿತ್ತು. ಆದರೆ ಈಗಿನ ನರೇಂದ್ರ ಮೋದಿಯವರ ಸರಕಾರ ಇಡೀ ಗೀತೆಯನ್ನು ರಾಷ್ಟ್ರೀಯ ಗೀತೆಯೆಂದು ಘೋಷಿಸಿದೆ. ಭಾರತದ ಅತ್ಯುನ್ನತ ರಾಷ್ಟ್ರೀಯ ಸಂಕೇತವಾದ ಸಂವಿಧಾನ ರಚನಾ ಸಭೆಯ ಆಶಯಕ್ಕೆ ವಿರುದ್ಧವಾಗಿ ಈ ಸರಕಾರ ನಡೆದುಕೊಂಡಿದೆ ಎಂದು ಹೇಳಿದರೆ ತಪ್ಪಿಲ್ಲ. ಈ ವಿಧೇಯಕದಿಂದ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸಂಭವವಿದೆ. ದೇಶ ಭಕ್ತಿ ಎಂಬುದು ಎಲ್ಲ ಪ್ರಜೆಗಳನ್ನು ಒಳಗೊಳ್ಳುವ ಆಶಯ ದಿಂದ ಕೂಡಿರಬೇಕು.ಜೈಲು ಶಿಕ್ಷೆಯ ಬೆದರಿಕೆ ಹಾಕಿ ಇಲ್ಲವೇ ಕಣ್ಗಾವಲಿಟ್ಟು ಹೇರುವುದು ಸರಿಯಲ್ಲ.

Tags

National Anthemmisusepeople
share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X