Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ನವ ಭಾರತದ ನಿರ್ಮಾಪಕ ನೆಹರೂ

ನವ ಭಾರತದ ನಿರ್ಮಾಪಕ ನೆಹರೂ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ15 Jun 2026 10:37 AM IST
share
ನವ ಭಾರತದ ನಿರ್ಮಾಪಕ ನೆಹರೂ

ತಮ್ಮ ಟೀಕಾಕಾರರನ್ನು ‘ದೇಶ ದ್ರೋಹಿ’ ಎಂದು ನೆಹರೂ ಕರೆಯುತ್ತಿರಲಿಲ್ಲ. ಸಿಬಿಐ, ಈ.ಡಿ., ಐಟಿ, ರಾಷ್ಟ್ರೀಯ ತನಿಖಾ ಸಂಸ್ಥೆ, ಚುನಾವಣಾ ಆಯೋಗಗಳನ್ನು ನೆಹರೂ ಎಂದೂ ದುರುಪಯೋಗ ಮಾಡಿಕೊಂಡ ಉದಾಹರಣೆ ಇಲ್ಲ. ವ್ಯಂಗ್ಯ ಚಿತ್ರಗಳ ವಾರಪತ್ರಿಕೆಯಾದ ‘ಶಂಕರ್ಸ್‌ ವೀಕ್ಲಿ’ಯಲ್ಲಿ ತಮ್ಮ ಬಗ್ಗೆ ಬರುತ್ತಿದ್ದ ವ್ಯಂಗ್ಯ ಚಿತ್ರಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದರು. ಅಂತಲೇ ಭಾರತದ ಕೋಟ್ಯಂತರ ಜನರು ನೆಹರೂ ಅವರನ್ನು ಈಗಲೂ ಗೌರವಿಸುತ್ತಾರೆ.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಡಾ.ಬಾಬಾಸಾಹೇಬ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿರದಿದ್ದರೆ ಹಾಗೂ ಪಂಡಿತ್ ಜವಾಹರಲಾಲ್ ನೆಹರೂ ಅವರು ಪ್ರಧಾನ ಮಂತ್ರಿಯಾಗಿರದಿದ್ದರೆ ಬಹುತ್ವ ಭಾರತ ಈಗಿದ್ದಂತೆ ಇರುತ್ತಿರಲಿಲ್ಲ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ದೇಶಕ್ಕೆ ರಕ್ಷಾ ಕವಚವಾಗಿ ಬಂದ ಸಂವಿಧಾನ ರಕ್ಷಣೆ ನೀಡಿತು ಮತ್ತು ಮೊದಲ ಹದಿನಾರು ವರ್ಷ ನೆಹರೂ ಪ್ರಧಾನಿಯಾಗಿ ನವ ಭಾರತದ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದರು. ನಾವು ಒಪ್ಪಿಕೊಂಡ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿರದಿದ್ದರೆ ಗುಜರಾತ್‌ನ ಸಾಮಾನ್ಯ ಕುಟುಂಬದಿಂದ ಬಂದ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಸಾಧ್ಯವಾಗುತ್ತಿರಲಿಲ್ಲ. ಇದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೇ ಮೋದಿ ಪ್ರಧಾನಿಯಾಗಿ ನೆಹರೂ ಅವರ ರೆಕಾರ್ಡನ್ನು ಮುರಿದರು ಎಂಬಂಥ ಕೊಳಕು ಮಾತುಗಳನ್ನು ಕೇಳುತ್ತಿದ್ದೇವೆ.

ನೆಹರೂ ಅವರಿಗಿಂತ ಹೆಚ್ಚು ಕಾಲ ಮೋದಿ ಪ್ರಧಾನಿಯಾಗಿ ದಾಖಲೆ ಸೃಷ್ಟಿಸಿದರು ಎಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುವವರಿಗೆ ವಾಸ್ತವ ಸಂಗತಿಯನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. 1952ರ ಸಾರ್ವತ್ರಿಕ ಚುನಾವಣೆ ನಂತರ ನೆಹರೂ ಪ್ರಧಾನಿಯಾದರು ಎಂದು ತನ್ನ ಅನುಕೂಲಕ್ಕೆ ತಕ್ಕಂತೆ ಸುಳ್ಳು ಹೇಳುವ ಬಿಜೆಪಿ ಇತಿಹಾಸಕ್ಕೆ ಅಪಚಾರ ಮಾಡಲು ಹೊರಟಿದೆ. ವಾಸ್ತವವಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನದಿಂದಲೇ ನೆಹರೂ ಪ್ರಧಾನಿಯಾದರು. ಅಂದರೆ 1947ರಿಂದ 1950ರವರೆಗೆ ನೆಹರೂ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂತು. ವಲ್ಲಭಭಾಯಿ ಪಟೇಲ್ ಉಪ ಪ್ರಧಾನಿ ಹಾಗೂ ಗೃಹ ಮಂತ್ರಿಯಾಗಿದ್ದರು. ಇದು ಶಾಲಾ ಮಕ್ಕಳಿಗೂ ತಿಳಿದ ಐತಿಹಾಸಿಕ ಸಂಗತಿ. ಆದರೆ ಇತಿಹಾಸವನ್ನು ಅಳಿಸಲು ಹೊರಟವರಿಗೆ ಸತ್ಯವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.

ಯಾವುದರಲ್ಲೂ ನೆಹರೂ ಜೊತೆಗೆ ಮೋದಿಯವರನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದವರು ನೆಹರೂ. ಸಾಕಷ್ಟು ಶ್ರೀಮಂತ ಕುಟುಂಬದಿಂದ ಬಂದರೂ ಅದನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು ನೆಹರೂ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಯೌವನದ ಒಂಭತ್ತು ವರ್ಷಗಳಷ್ಟು ಜೈಲಿನಲ್ಲಿ ಕಳೆದವರು ನೆಹರೂ. 3,259 ದಿನಗಳನ್ನು ಸೆರೆಮನೆಯಲ್ಲಿ ಇದ್ದ ನೆಹರೂ ಜೊತೆಗೆ ಮೋದಿ ಮಾತ್ರವಲ್ಲ ಸಂಘ ಪರಿವಾರದ ಯಾರನ್ನೂ ಹೋಲಿಕೆ ಮಾಡಲು ಆಗುವುದಿಲ್ಲ.

ಭಾರತ ಎಂಬುದು ಯಾವುದೇ ಒಂದು ಸಮುದಾಯಕ್ಕೆ, ಧರ್ಮಕ್ಕೆ, ಭಾಷೆಗೆ ಸೇರಿದ ಭೂ ಪ್ರದೇಶವಲ್ಲ. ಇದು ಇಲ್ಲಿ ಶತಮಾನಗಳಿಂದ ನೆಲೆಸಿದ ವಿವಿಧ, ವಿಭಿನ್ನ ಸಮುದಾಯಗಳಿಗೆ, ಧರ್ಮಗಳಿಗೆ, ಭಾಷೆಗಳಿಗೆ, ಸಂಸ್ಕೃತಿಗಳಿಗೆ ಆಸರೆಯಾದ ಭೂ ಪ್ರದೇಶ. ಸ್ವಾತಂತ್ರ್ಯಾ ನಂತರ ಒಂದು ದೇಶವಾಗಿ ಹೊರ ಹೊಮ್ಮಿದ ಇದರ ಮಹತ್ವ ನೆಹರೂ ಅವರಿಗೆ ಗೊತ್ತಿತ್ತು. ಸ್ವಾತಂತ್ರ್ಯ ಬಂದ ಆ ನಿರ್ಣಾಯಕ ಕಾಲ ಘಟ್ಟದಲ್ಲಿ ಇದರ ಮುಂದಿನ ದಾರಿ ಯಾವುದು ಎಂಬುದರ ಬಗ್ಗೆ ಜಿಜ್ಞಾಸೆ ನಡೆಯಿತು. ಇದನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬ ಮಸಲತ್ತನ್ನು ಸಾವರ್ಕರ್, ಗೋಳ್ವಾಲ್ಕರ್ ಸೇರಿದಂತೆ ಅವರ ಪರಿವಾರದವರು ನಡೆಸಿದ್ದರು. ಇದಕ್ಕೆ ಪೂರಕವಾಗಿ ವೇದ, ಪುರಾಣ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಮನುಸ್ಮತಿ ಸೇರಿದಂತೆ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಾಗದ ‘ಹಿಂದೂ’ ಎಂಬ ಪದವನ್ನು ಸೃಷ್ಟಿಸಿ ಅದರ ಸುತ್ತ ಒಂದು ಸಿದ್ಧಾಂತವನ್ನು ರೂಪಿಸಿದರು. ಆ ಸಿದ್ಧಾಂತದ ಮೂಲ ಭಾರತವಲ್ಲ. ಅದು ಜರ್ಮನಿ ಮತ್ತೆ ಇಟಲಿಗಳಿಂದ ಎರವಲು ತಂದ ಸಿದ್ಧಾಂತ. ನಾಗಪುರದ ಹೆಡ್ಗೆವಾರ್ ಅವರ ಮಿತ್ರ ಶಿವರಾಮ ಮುಂಜೆ, ಇಟಲಿ ಮತ್ತು ಜರ್ಮನಿಗಳಿಗೆ ಹೋಗಿ ಮುಸ್ಸೋಲಿನಿ ಮತ್ತು ಹಿಟ್ಲರ್ ಅವರನ್ನು ಭೇಟಿಯಾಗಿ ಬಂದರು. ಅವರಿಂದ ತಂದ ನಾಝಿ, ಫ್ಯಾಶಿಸ್ಟ್ ಸಿದ್ಧಾಂತಕ್ಕೆ ಹಿಂದುತ್ವದ ಲೇಪನ ಮಾಡಿ ಹೊಸ ಹೆಸರನ್ನು ಕೊಟ್ಟು ಹೊಸ ಸಿದ್ಧಾಂತವನ್ನು ಹುಟ್ಟು ಹಾಕಿದರು.

1947ರಲ್ಲಿ ಸ್ವಾತಂತ್ರ್ಯ ಬಂದು ನೆಹರೂ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಎಲ್ಲವನ್ನೂ ಶೂನ್ಯದಿಂದಲೇ ಆರಂಭಿಸಬೇಕಾಗಿತ್ತು. ದೇಶದಲ್ಲಿ ಒಂದು ಸೂಜಿಯೂ ಉತ್ಪಾದನೆಯಾಗುತ್ತಿರಲಿಲ್ಲ. ಕೆಲವೇ ಕೆಲವು ಹಳ್ಳಿಗಳಿಗೆ ಮಾತ್ರ ವಿದ್ಯುತ್ ಸೌಕರ್ಯವಿತ್ತು. ರಾಜ ಮಹಾರಾಜರ ಬಳಿ ಮಾತ್ರ ಫೋನ್ ಲಭ್ಯವಿತ್ತು. ಸಣ್ಣಪುಟ್ಟ ನಗರಗಳು ಮತ್ತು ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಇರಲಿಲ್ಲ. ಕೆಲವೇ ಕೆಲವು ದೊಡ್ಡ ನಗರಗಳಲ್ಲಿ ಆಸ್ಪತ್ರೆ ಮತ್ತು ಶಾಲೆಗಳಿದ್ದವು. ಕೃಷಿ ಉತ್ಪದನಾ ಪ್ರಮಾಣ ಅತ್ಯಂತ ಕಡಿಮೆ ಇತ್ತು. ಹಸಿವು ಸಾಮಾನ್ಯವಾಗಿತ್ತು. ಶಿಶು ಮರಣದ ಪ್ರಮಾಣ ಜಾಸ್ತಿ ಇತ್ತು. ಸೇನೆಯಲ್ಲಿ ಸಿಬ್ಬಂದಿಯ ಕೊರತೆ, ಕೇವಲ ಐದಾರು ಯುದ್ಧ ವಿಮಾನಗಳು ಮತ್ತು ಟ್ಯಾಂಕ್‌ಗಳು ಮಾತ್ರ ಇದ್ದವು. ರಸ್ತೆ, ಸೇತುವೆಗಳು ಅತ್ಯಂತ ಕಡಿಮೆ ಇದ್ದವು. ಖಜಾನೆ ಖಾಲಿ ಇತ್ತು. ಇಂಥ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನೆಹರೂ ಅಧಿಕಾರ ವಹಿಸಿಕೊಂಡ ನಂತರ ಅರ್ಧ ಶತಮಾನದಲ್ಲಿ ಭಾರತ ಹೇಗಾಯಿತು ಎಂಬುದನ್ನು ವಿವರಿಸಬೇಕಾಗಿಲ್ಲ.

ಈಗ ಭಾರತದ ಬಹುತೇಕ ಎಲ್ಲ ಹಳ್ಳಿಗಳಲ್ಲಿ ವಿದ್ಯುತ್ ಸೌಕರ್ಯ ವಿದೆ. ಜಗತ್ತಿನಲ್ಲೇ ದೊಡ್ಡ ಸೇನಾ ಬಲ ಭಾರತಕ್ಕೆ ಇದೆ. ಸಾವಿರಾರು ಯುದ್ಧ ವಿಮಾನಗಳಿವೆ. ದೇಶವ್ಯಾಪಿ ಲಕ್ಷಾಂತರ ಕೈಗಾರಿಕೆಗಳಿವೆ. ಲಕ್ಷಾಂತರ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗಳಿವೆ. ಎಲ್ಲೆಡೆ ರೈಲು ಮಾರ್ಗಗಳಿವೆ. ಕ್ರೀಡಾಂಗಣಗಳು ಮತ್ತು ಸೂಪರ್ ಸ್ಪೆಶಲ್ ಆಸ್ಪತ್ರೆಗಳಿಗೆ ಕೊರತೆಯಿಲ್ಲ. ಬ್ಯಾಂಕುಗಳು, ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ನೀಡುವ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಒದಗಿಸುವ ಸಂಸ್ಥೆಗಳಿವೆ. ಬ್ರಹತ್ ಪ್ರಮಾಣದ ಸಾರ್ವಜನಿಕ ರಂಗದ ಉದ್ದಿಮೆಗಳು ನಮ್ಮಲ್ಲಿವೆ. ಪಂಚವಾರ್ಷಿಕ ಯೋಜನೆಗಳ ಮೂಲಕ ಇವುಗಳನ್ನು ರೂಪಿಸಿದವರು ನೆಹರೂ ಮತ್ತು ನಂತರ ಬಂದ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು.

ಸ್ವತಂತ್ರ ಭಾರತಕ್ಕೆ ಭದ್ರ ಆರ್ಥಿಕ ಅಡಿಪಾಯ ಹಾಕಿದ ನೆಹರೂ ಸಾರ್ವಜನಿಕ ರಂಗದಲ್ಲಿ ಬ್ರಹತ್ ಕೈಗಾರಿಕೆಗಳನ್ನು ಸ್ಥಾಪಿಸಿದರು. ಆಗ ಇದ್ದ ಸಮಾಜವಾದಿ ಸೋವಿಯತ್ ರಶ್ಯ ಭಾರತಕ್ಕೆ ಎಲ್ಲ ನೆರವನ್ನೂ ನೀಡಿತು. ಭಾರತೀಯ ಬಾಹ್ಯಾಕಾಶ ಕೇಂದ್ರ (ಇಸ್ರೊ), ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಕೇಂದ್ರ (ಎಐಎಂಎಸ್), ಐಐಟಿ, ಎಚ್‌ಎಎಲ್, ಒಎನ್‌ಜಿಸಿ, ಬಿಎಚ್‌ಇಲ್, ಎಚ್‌ಎಂಟಿ ಹಾಗೂ ಬಾಕ್ರಾ ನಂಗಲ್‌ನಂಥ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿದರು. ನವ ಭಾರತದ ನಿರ್ಮಾಣಕ್ಕೆ ಕೃಷಿ ಮತ್ತು ಕೈಗಾರಿಕೆಗಳ ಸಮಾನ ಬೆಳವಣಿಗೆ ಅಗತ್ಯವೆಂಬ ಅರಿವಿದ್ದ ನೆಹರೂ ಅವುಗಳಿಗೆ ಮೊದಲ ಆದ್ಯತೆ ನೀಡಿದರು. ಆದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಹನ್ನೊಂದು ವರ್ಷಗಳಲ್ಲಿ ಮಾಡಿದ್ದೇನು? ನೆಹರೂ ಸ್ಥಾಪಿಸಿದ ಸಾರ್ವಜನಿಕ ರಂಗದ ಉದ್ದಿಮೆಗಳನ್ನು, ಸಂಸ್ಥೆಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ. ಅದಾನಿ, ಅಂಬಾನಿ ಅಂಥ ಕಾರ್ಪೊರೇಟ್ ಅಧಿಪತಿಗಳ ಸುಮಾರು 20 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದಾರೆ. ಇದೇ ಇವರ ಸಾಧನೆಯಾಗಿದೆ.

ಗಾಂಧಿ, ಅಂಬೇಡ್ಕರ್ ಮತ್ತು ನೆಹರೂ ಅವರ ಮೇಲೆ ಮನುವಾದಿಗಳು ಮತ್ತು ಕೋಮುವಾದಿಗಳಿಗೆ ಯಾಕೆ ಕೋಪವೆಂದರೆ ಅವರು ನಿರ್ಮಿಸಲು ಹೊರಟಿದ್ದ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಅವರು ಅವಕಾಶ ಕೊಡಲಿಲ್ಲ.

ನೆಹರೂ ಅವರನ್ನು ಟೀಕಿಸುವವರು ಅವರು ಬರೆದ ‘ಡಿಸ್ಕವರಿ ಆಫ್ ಇಂಡಿಯಾ’ ಮತ್ತು ‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’ ಪುಸ್ತಕಗಳನ್ನು ಓದಬೇಕು. ಇವುಗಳನ್ನು ಓದುವುದು ಕೋಮುವಾದಿಗಳಿಗೆ ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷವಾದರೂ ತನ್ನ ಕಾರ್ಯಕರ್ತರಿಗೆ ಅಧ್ಯಯನ ಶಿಬಿರಗಳನ್ನು ಏರ್ಪಡಿಸಿ ಅವರಿಗೆ ನೆಹರೂ ವ್ಯಕ್ತಿತ್ವ ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸಬೇಕು. ನೆಹರೂ ಅವರು ಜೈಲಿನಲ್ಲಿ ಇದ್ದಾಗ ಮಗಳು ಇಂದಿರಾಗೆ ಬರದ ಪತ್ರಗಳು ಅಮೂಲ್ಯವಾಗಿವೆ. ಅವುಗಳಲ್ಲಿ ಮನು ಕುಲ ನಡೆದು ಬಂದ ಇತಿಹಾಸವೇ ಇದೆ. ಆದರೆ ಸಂಘದ ಸ್ವಯಂ ಸೇವಕರಿಗೆ ಇವುಗಳನ್ನು ಓದುವ ಅವಕಾಶ ಇಲ್ಲ. ತಮ್ಮ ವಿಚಾರಕ್ಕೆ ಭಿನ್ನವಾದ ಸಾಹಿತ್ಯವನ್ನು ಓದಲು ಅಲ್ಲಿ ಅವಕಾಶವಿಲ್ಲ.

ನೆಹರೂ ತಪ್ಪು ಮಾಡಿಯೇ ಇಲ್ಲ ಎಂದಲ್ಲ. ಎಲ್ಲ ಮನುಷ್ಯರಂತೆ ಒಂದೆರಡು ತಪ್ಪುಗಳು ಅವರಿಂದಲೂ ಆಗಿವೆ. ಉದಾಹರಣೆಗೆ 1957ರಲ್ಲಿ ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬಂದ ಭಾರತದ ಮಾತ್ರವಲ್ಲ ಜಗತ್ತಿನ ಏಕೈಕ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಸರಕಾರವನ್ನು ವಜಾ ಮಾಡಿದರು. ನಂತರ ನಂಬೂದಿರಿಪಾಡ್ ಅವರನ್ನು ಖಾಸಗಿಯಾಗಿ ಭೇಟಿಯಾದಾಗ ಕೆಲವರ ಒತ್ತಡಕ್ಕೆ ಮಣಿದು ಕೇರಳದ ಕಮ್ಯುನಿಸ್ಟ್ ಪಕ್ಷದ ಸರಕಾರವನ್ನು ವಜಾ ಮಾಡಬೇಕಾಯಿತು ಎಂದು ಹೇಳಿದರಂತೆ. ಇಂಥ ಒಂದೆರಡು ಉದಾಹರಣೆಗಳನ್ನು ಬಿಟ್ಟರೆ ನೆಹರೂ ಅತ್ಯಂತ ದಿಟ್ಟ ಪ್ರಜಾಪ್ರಭುತ್ವವಾದಿಯಾಗಿದ್ದರು.

ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶಗಳ ಪೈಕಿ ಭಾರತದಲ್ಲಿ ಮಾತ್ರ ಸಂಸದೀಯ ಪ್ರಜಾಪ್ರಭುತ್ವ ಯಶಸ್ವಿಯಾಗಿ ಬೇರೂರಿದೆ. ಇದರ ಶ್ರೇಯಸ್ಸು ನೆಹರೂ ಮತ್ತು ಅಂಬೇಡ್ಕರ್ ಅವರಿಗೆ ಸಲ್ಲಬೇಕು. ಲೋಕಸಭೆಯ ಅಧಿವೇಶನ ನಡೆದಾಗ ಒಂದು ದಿನವೂ ತಪ್ಪಿಸದೇ ಸದನಕ್ಕೆ ಬರುತ್ತಿದ್ದ ನೆಹರೂ ಪ್ರತಿಪಕ್ಷ ನಾಯಕರ ಭಾಷಣಗಳನ್ನು ಅತ್ಯಂತ ಆಸಕ್ತಿಯಿಂದ ಕೇಳುತ್ತಿದ್ದರು, ಬರೆದುಕೊಳ್ಳುತ್ತಿದ್ದರು. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಿದ್ದರು. ತಮ್ಮ ಕಟು ಟೀಕಾಕಾರರಾಗಿದ್ದ ಕಮ್ಯುನಿಸ್ಟ್ ಪಕ್ಷದ ಎ.ಕೆ.ಗೋಪಾಲನ್, ಡಾಂಗೆ, ಭೂಪೇಶ್ ಗುಪ್ತಾ, ಜನಸಂಘದ ವಾಜಪೇಯಿ ಮಾತ್ರವಲ್ಲದೆ ಎಲ್ಲ ಸದಸ್ಯರ ಭಾಷಣಗಳನ್ನು ಗಮನ ಕೊಟ್ಟು ಕೇಳುತ್ತಿದ್ದರು. ಆಗಾಗ ಪತ್ರಿಕಾಗೊಷ್ಠಿಯಲ್ಲೂ ಮಾತನಾಡುತ್ತಿದ್ದರು.

ತಮ್ಮ ಟೀಕಾಕಾರರನ್ನು ‘ದೇಶ ದ್ರೋಹಿ’ ಎಂದು ನೆಹರೂ ಕರೆಯುತ್ತಿರಲಿಲ್ಲ. ಸಿಬಿಐ, ಈ.ಡಿ., ಐಟಿ, ರಾಷ್ಟ್ರೀಯ ತನಿಖಾ ಸಂಸ್ಥೆ, ಚುನಾವಣಾ ಆಯೋಗ ಗಳನ್ನು ನೆಹರೂ ಎಂದೂ ದುರುಪಯೋಗ ಮಾಡಿಕೊಂಡ ಉದಾಹರಣೆ ಇಲ್ಲ.

ವ್ಯಂಗ್ಯ ಚಿತ್ರಗಳ ವಾರಪತ್ರಿಕೆಯಾದ ‘ಶಂಕರ್ಸ್‌ ವೀಕ್ಲಿ’ಯಲ್ಲಿ ತಮ್ಮ ಬಗ್ಗೆ ಬರುತ್ತಿದ್ದ ವ್ಯಂಗ್ಯ ಚಿತ್ರಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದರು. ಅಂತಲೇ ಭಾರತದ ಕೋಟ್ಯಂತರ ಜನರು ನೆಹರೂ ಅವರನ್ನು ಈಗಲೂ ಗೌರವಿಸುತ್ತಾರೆ.

ಗಾಂಧೀಜಿ ಜೊತೆಗೆ ಅಂಬೇಡ್ಕರ್ ಅವರಿಗೆ ಭಿನ್ನಾಭಿಪ್ರಾಯ ಇತ್ತು. ಆದರೆ ನೆಹರೂ ಬಗ್ಗೆ ಅವರಿಗೆ ಗೌರವವಿತ್ತು. ಸಂವಿಧಾನ ರಚನಾ ಕಾರ್ಯದಲ್ಲಿ ನೆಹರೂ ಪ್ರಧಾನಿಯಾಗಿ ಸಂಪೂರ್ಣ ಸಹಕಾರ ನೀಡಿದರು. ನೆಹರೂ ಮಂತ್ರಿ ಮಂಡಲದಲ್ಲಿ ಅಂಬೇಡ್ಕರ್ ಮಂತ್ರಿಯಾಗಿದ್ದರು. ಅವರ ಮಂತ್ರಿ ಖಾತೆಯಲ್ಲಿ ನೆಹರೂ ಎಂದೂ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಹಿಂದೂ ಕೋಡ್ ಬಿಲ್ ಬಗ್ಗೆ ಮಾತ್ರ ನೆಹರೂ ಅಸಹಾಯಕರಾಗಿದ್ದರು. ತಾತ್ವಿಕವಾಗಿ ಅಂಬೇಡ್ಕರ್ ನಿಲುವಿಗೆ ನೆಹರೂ ಬೆಂಬಲ ನೀಡಿದರು. ಆದರೆ ತಮ್ಮ ಸ್ವಂತ ಪಕ್ಷದಲ್ಲಿ ಸಂಪ್ರದಾಯವಾದಿಗಳನ್ನು ಎದುರಿಸಲು ನೆಹರೂ ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಕೆಲ ತಿಂಗಳ ನಂತರ ಈ ವಿಧೇಯಕವನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.

ಜಾತಿ, ಮತ, ಭೇದ ಹೋಗಬೇಕೆಂದು ಎಲ್ಲರೂ ಬಾಯಿಯಲ್ಲಿ ಹೇಳುತ್ತಾರೆ. ಆದರೆ ನೆಹರೂ ಕುಟುಂಬದವರು ತಮ್ಮ ಸ್ವಂತ ಬದುಕಿನಲ್ಲಿ ಅದನ್ನು ಅಳವಡಿಸಿದರು. ಇಂದಿರಾ ಗಾಂಧಿ ಪಾರ್ಸಿ ಸಮುದಾಯದ ಪಿರೋಝ್ ಗಾಂಧಿಯವರನ್ನು ವಿವಾಹವಾದರು. ರಾಜೀವ್ ಗಾಂಧಿ ಅವರು ಇಟಲಿಯ ಸೋನಿಯಾ ಗಾಂಧಿ ಅವರನ್ನು, ಸಂಜಯ್ ಗಾಂಧಿ ಸಿಖ್ ಸಮುದಾಯದ ಮೇನಕಾ ಗಾಂಧಿಯವರನ್ನು ವಿವಾಹವಾದರು. ಸೈದ್ಧಾಂತಿಕ ಪ್ರಶ್ನೆಯಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಬಹುತ್ವ ಭಾರತದಲ್ಲಿ ಅಪಾರ ನಂಬಿಕೆ ಹೊಂದಿರುವ ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ಬಿಟ್ಟರು. ಪತಿಯ ಹತ್ಯೆಯ ನಂತರ ಮಕ್ಕಳನ್ನು ಕಟ್ಟಿಕೊಂಡು ಇಟಲಿಗೆ ಹೋಗದ ಸೋನಿಯಾ ಗಾಂಧಿ ಕಣ್ಣಾರೆ ಅತ್ತೆ ಮತ್ತು ಗಂಡ ಇಬ್ಬರ ಸಾವುಗಳನ್ನು ಕಂಡಿದ್ದರೂ ಈ ಭಾರತ ನನ್ನದು ಎಂದೂ ಇಲ್ಲೇ ಉಳಿದರು. ನನ್ನ ಪರಿಚಯದ ಜ್ಯೋತಿಷಿ ಸ್ನೇಹಿತರೊಬ್ಬರು ರಾಜೀವ್ ಗಾಂಧಿಯವರಿಗೆ ‘ನಿಮ್ಮ ಜೀವಕ್ಕೆ ಅಪಾಯವಿದೆ, ಇಂಥ ಪೂಜೆ ಮಾಡಿಸಿ’ ಎಂದು ಸಲಹೆ ನೀಡಿದಾಗ ರಾಜೀವ್ ಗಾಂಧಿಯವರು ‘ಪೂಜೆ, ಗೀಜೆಯಲ್ಲಿ ನನಗೆ ನಂಬಿಕೆಯಿಲ್ಲ, ದೇಶಕ್ಕಾಗಿ ಸಾವು ಬಂದರೆ ಬರಲಿ’ ಎಂದು ಹೇಳಿದರಂತೆ. ಇಂಥವರೊಂದಿಗೆ ದೇಶಕ್ಕಾಗಿ ಯಾವ ತ್ಯಾಗವನ್ನೂ ಮಾಡದ ಕೇವಲ ತುಟಿ ಸೇವೆಯನ್ನು ಸಲ್ಲಿಸುವ ನಕಲಿ ರಾಷ್ಟ್ರೀಯ ವಾದಿಗಳನ್ನು, ರಾಷ್ಟ್ರ ಭಕ್ತರನ್ನು ಹೋಲಿಕೆ ಮಾಡಲು ಹೇಗೆ ಸಾಧ್ಯ?

Tags

NehruNew India
share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X