Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಕುಖ್ಯಾತ ಅಪರಾಧಿಗಳು ಮತ್ತು ಅವರ ರಕ್ಷಕರು

ಕುಖ್ಯಾತ ಅಪರಾಧಿಗಳು ಮತ್ತು ಅವರ ರಕ್ಷಕರು

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ23 Nov 2026 12:31 PM IST
share
ಕುಖ್ಯಾತ ಅಪರಾಧಿಗಳು ಮತ್ತು ಅವರ ರಕ್ಷಕರು

ಸರಕಾರ, ಸರಕಾರದ ಇಲಾಖೆಗಳು, ಶಾಸಕರು, ಮಂತ್ರಿಗಳು, ಎಲ್ಲಿ, ಯಾರ ಬಳಿ ಹೋದರೂ ನ್ಯಾಯ ಸಿಗದೇ ಇದ್ದಾಗ ಕೊನೆಗೆ ಸುಪ್ರೀಂ ಕೋರ್ಟಿಗೆ ಹೋದರೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿತ್ತು. ಆದರೆ ಈಗ ಅಲ್ಲಿ ಹೋದರೂ ನ್ಯಾಯ ಸಿಗುವುದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿ ನ್ಯಾಯವನ್ನು ನಿರಾಕರಿಸುವುದು ಈಗ ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಗುಜರಾತಿನ ಬಿಲ್ಕಿಸ್ ಬಾನು ಪ್ರಕರಣ ತಾಜಾ ಉದಾಹರಣೆಯಾಗಿದೆ.

ಸ್ವತಂತ್ರ ಭಾರತದಲ್ಲಿ ತುಂಬಾ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ.ಅಪರಾಧಗಳು ನಡೆಯುತ್ತಲೇ ಇವೆ. ಅಪರಾಧಿಗಳು ಪತ್ತೆಯಾಗುತ್ತಿಲ್ಲ. ಪತ್ತೆಯಾದರೂ ನ್ಯಾಯಾಲಯಗಳಲ್ಲಿ ದೋಷಮುಕ್ತರಾಗಿ ಹೊರಗೆ ಬರುತ್ತಿದ್ದಾರೆ. ಅಲ್ಲಲ್ಲಿ ಕೊಲೆಗಳಾಗುತ್ತಿವೆ ಆದರೆ ಕೊಲೆಗಡುಕರು ನಾಪತ್ತೆಯಾಗುತ್ತಾರೆ. ಇಲ್ಲವೇ ನಿರಪರಾಧಿಗಳಾಗುತ್ತಾರೆ. ಅಪರಾಧ ಎಸಗಿದವನನ್ನು ಶಿಕ್ಷೆಗೆ ಗುರಿಪಡಿಸಿದರೆೆ. ಸರಕಾರ ನಂತರ ದಂಡನೆಗೆ ಗುರಿಯಾಗಿ ಶಿಕ್ಷೆಯನ್ನು ಅನುಭವಿಸುತ್ತಿರುವವರನ್ನು ಬಿಡುಗಡೆ ಮಾಡಬೇಕೆಂದು ಕೋರ್ಟಿಗೆ ಮನವಿ ಮಾಡಿಕೊಳ್ಳುತ್ತದೆ.ಕೋರ್ಟು ಬಿಡುಗಡೆ ಮಾಡುತ್ತದೆ. ಉದಾಹರಣೆಗೆ ಗುಜರಾತಿನಲ್ಲಿ 2002ರಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರ ಸಾಮೂಹಿಕ ಹತ್ಯಾಕಾಂಡ ನಡೆಯಿತು. ಅಮಾಯಕ ಮಹಿಳೆಯರು ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟರು. ಸಣ್ಣಪುಟ್ಟ ಮಕ್ಕಳು ಬೀದಿ ಹೆಣವಾದರು. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಕೊನೆಗೆ ಪರಿಸ್ಥಿತಿಯ ನಿಯಂತ್ರಣ ಕ್ಕೆ ಸೇನಾಪಡೆಗಳು ಬರಬೇಕಾಯಿತು. ಇಷ್ಟು ಜನರ ಹತ್ಯೆಗೆ, ಅನಾಹುತಕ್ಕೆ ಕಾರಣರಾದವರು ಯಾರು? ಅಥವಾ ಹಿಂಸಾಚಾರ ತಡೆಯಬೇಕಾಗಿದ್ದ ಸರಕಾರದ ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಯಾರು? ಅವರು ಬೇಕೆಂತಲೇ ಕರ್ತವ್ಯ ಲೋಪವನ್ನು ಎಸಗಿದರೇ? ಲೋಪಕ್ಕೆ ಕಾರಣರಾದವರಿಗೆ ಯಾವ ಶಿಕ್ಷೆಯಾಗಿದೆ? ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

ಆಗ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು.ಅವರ ಆಪ್ತ ಅಮಿಥ್ ಶಾ ಗೃಹ ಮಂತ್ರಿಯಾಗಿದ್ದರು. ಅಮಾಯಕ ಅಲ್ಪಸಂಖ್ಯಾತ ಸಮುದಾಯಗಳ ಜನರ ಹತ್ಯಾಕಾಂಡ ನಡೆದಾಗ ಇವರಿಬ್ಬರು ಏನು ಮಾಡುತ್ತಿದ್ದರು? ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಅಹಮದಾಬಾದ್‌ಗೆ ಧಾವಿಸಿ ಬಂದು ‘ರಾಜ ಧರ್ಮ ಪಾಲಿಸುವಂತೆ ಮೋದಿಯವರಿಗೆ ಕಿವಿ ಮಾತು ಹೇಳಿದರು’. ಅದನ್ನೇ ಮಾಡುತ್ತಿರುವುದಾಗಿ ಮೋದಿ ಉತ್ತರಿಸಿದರು. ಅವರ ರಕ್ಷಣೆಗೆ ಅಡ್ವಾಣಿ ಇದ್ದರು.ಆದರೆ ಬೀದಿಗೆ ಬಿದ್ದವರಿಗೆ ನ್ಯಾಯ ಸಿಗಲಿಲ್ಲ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದಿನ ಕೇಂದ್ರ ಕಾನೂನು ಮಂತ್ರಿ ವೀರಪ್ಪ ಮೊಯ್ಲಿ ಅವರು ಕಳೆದ ವಾರ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಗುಜರಾತಿನಲ್ಲಿ ನಡೆದ ಹತ್ಯಾಕಾಂಡದ ಬಗ್ಗೆ ಪ್ರಸ್ತಾಪಿಸಿ ನರೇಂದ್ರ ಮೋದಿ ಮತ್ತು ಅಮಿತ್‌ಶಾ ಎಂದೋ ಜೈಲಿಗೆ ಹೋಗಬೇಕಾಗಿತ್ತು, ಆದರೆ ನಮ್ಮವರೇ (ಕಾಂಗ್ರೆಸ್ ನ ಕೆಲವು ನಾಯಕರು) ಅವರನ್ನು ರಕ್ಷಿಸಿದರು. ವಿಚಾರಣೆ ಎದುರಿಸದಂತೆ ರಕ್ಷಣೆ ನೀಡಿದರು ಎಂದು ಅತ್ಯಂತ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರ ಪುಸ್ತಕ (ಆತ್ಮಚರಿತ್ರೆ) ಬಿಡುಗಡೆ ಸಮಾರಂಭದಲ್ಲಿ ಮೊಯ್ಲಿ ಅವರು ಆಡಿದ ಮಾತುಗಳು ಸಾಮಾನ್ಯ ಮಾತುಗಳಲ್ಲ.ರಾಜ್ಯದ ಮುಖ್ಯಮಂತ್ರಿ ಮತ್ತು ಕೇಂದ್ರ ಕಾನೂನು ಸಚಿವರಾಗಿದ್ದ ಅವರು ಆಡಿರುವ ಮಾತುಗಳು ನಮ್ಮ ದೇಶದ ಇಂದಿನ ದುಸ್ಥಿತಿಗೆ ಸಾಕ್ಷಿಯಾಗಿವೆ.

ಭಾರತದಲ್ಲಿ ಗಾಂಧಿ ಹಂತಕ ಕೋಮುವಾದಿ ಶಕ್ತಿಗಳು ಇಷ್ಟೊಂದು ಭಯಾನಕವಾಗಿ ಬೆಳೆಯಲು ಯಾರು ಕಾರಣ? ಎಂಬುದಕ್ಕೆ ಮೊಯ್ಲಿ ಅವರ ಮಾತು ಮಾತ್ರವಲ್ಲ ಬೇರೆ ಹಲವಾರು ಉದಾಹರಣೆಗಳಿವೆ. 1992ರ ಡಿಸೆಂಬರ್ 6ರಂದು ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡಿತು. ಅದರಲ್ಲಿ ಅಂದಿನ ಪ್ರಧಾನ ಮಂತ್ರಿ ಪಿ.ವಿ.ನರಸಿಂಹರಾವ್ ಅವರ ಮೂಕ ಪ್ರೇಕ್ಷಕನ ಪಾತ್ರದ ಬಗ್ಗೆ ವಿರೋಧಿಗಳು ಮಾತ್ರವಲ್ಲ ಗಿರೀಶ್ ಕಾರ್ನಾಡರ್‌ಂಥ ಸಾಂಸ್ಕೃತಿಕ ಲೋಕದ ದಿಗ್ಗಜರೂ ತಮ್ಮ ಆತ್ಮ ಚರಿತ್ರೆ (ಆಡಾಡತ ಆಯುಷ್ಯ) ಬರೆದಿದ್ದಾರೆ.

ರಾಜ ಪ್ರಭುತ್ವದಲ್ಲಿ ಕೂಡ ಎಲ್ಲಿಯೂ ನ್ಯಾಯ ಸಿಗದಿದ್ದರೆ ಅರಮನೆಗೆ ಹೋಗಿ ಗಂಟೆ ಬಾರಿಸಿದರೆ ಸಾಕು ನ್ಯಾಯ ಸಿಗಬಹುದು ಎಂಬ ನಂಬಿಕೆ ಪ್ರಜೆಗಳಲ್ಲಿ ಇತ್ತು. ಅದಕ್ಕಿಂತಲೂ ಉನ್ನತವಾದ ಪ್ರಜೆಗಳದೇ ಆದ ಪ್ರಭುತ್ವದಲ್ಲಿ ಅನ್ಯಾಯಕ್ಕೊಳಗಾದ ಜನರಿಗೆ ಸಹಜ ನ್ಯಾಯ ಎಂಬುದು ಮರೀಚಿಕೆಯಾಗಿದೆ. ಎಲ್ಲ ಸರಕಾರ, ಸರಕಾರದ ಇಲಾಖೆಗಳು, ಶಾಸಕರು, ಮಂತ್ರಿಗಳು, ಎಲ್ಲಿ, ಯಾರ ಬಳಿ ಹೋದರೂ ನ್ಯಾಯ ಸಿಗದೇ ಇದ್ದಾಗ ಕೊನೆಗೆ ಸುಪ್ರೀಂ ಕೋರ್ಟಿಗೆ ಹೋದರೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿತ್ತು. ಆದರೆ ಈಗ ಅಲ್ಲಿ ಹೋದರೂ ನ್ಯಾಯ ಸಿಗುವುದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿ ನ್ಯಾಯವನ್ನು ನಿರಾಕರಿಸುವುದು ಈಗ ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಗುಜರಾತಿನ ಬಿಲ್ಕಿಸ್ ಬಾನು ಪ್ರಕರಣ ತಾಜಾ ಉದಾಹರಣೆಯಾಗಿದೆ.

2002ರ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬದವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಿಪಿನ್ ಚಂದ್ರ ಜೋಶಿ ಮತ್ತು ಪ್ರದೀಪ್ ಮೊರ್ದಿಯಾ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್ ಆ ಪಾತಕಿಗಳಿಗೆ ಜಾಮೀನು ನೀಡಿತು. ಸಂತ್ರಸ್ತೆಯಾದ ತನ್ನ ವಾದವನ್ನು ಆಲಿಸದೇ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಬಿಲ್ಕಿಸ್ ಬಾನು ಗಂಭೀರ ಆರೋಪವನ್ನು ಮಾಡಿದ್ದಾರೆ. ಇಂಥ ಪ್ರಕರಣಗಳಲ್ಲಿ ಸಂತ್ರಸ್ತೆಯು ವಿಚಾರಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮತ್ತು ತನ್ನ ಅಭಿಪ್ರಾಯ ವನ್ನು ವ್ಯಕ್ತಪಡಿಸುವ ಹಕ್ಕು ಹೊಂದಿರುತ್ತಾಳೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.ಈಗ ಸುಪ್ರೀಂ ಕೋರ್ಟ್ ಉಲ್ಟಾ ತೀರ್ಪು ನೀಡಿದೆ. ಇದರಿಂದ ಬಲ್ಕಿಸ್ ಬಾನು ಅವರಿಗೆ ತೀವ್ರ ಆಘಾತವಾಗಿದೆ.

2002ರ ಗುಜರಾತ್ ಹತ್ಯಾಕಾಂಡದಲ್ಲಿ ಅನೇಕ ಭಯಾನಕ ಘನ ಘೋರ ಘಟನೆಗಳು ನಡೆದವು. ಅವುಗಳಲ್ಲೆಲ್ಲ ಬಿಲ್ಕಿಸ್ ಬಾನು ಪ್ರಕರಣ ಅತ್ಯಂತ ಭೀಕರವಾದುದು.ಆಕೆಯ ಕುಟುಂಬದ ಹದಿನಾಲ್ಕು ಮಂದಿ ಸದಸ್ಯರನ್ನು ಬಿಲ್ಕಿಸ್ ಬಾನು ಕಣ್ಣೆದುರಿಗೆ ಅತ್ಯಂತ ಪೈಶಾಚಿಕವಾಗಿ ಹತ್ಯೆ ಮಾಡಲಾಯಿತು. ಇಷ್ಟೇ ಅಲ್ಲದೆ ಗರ್ಭಿಣಿಯಾದ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು.ಸಾಕ್ಷ್ಯ ನಾಶದ ಅಪಾಯದ ಹಿನ್ನೆಲೆಯಲ್ಲಿ ಸದರಿ ಪ್ರಕರಣದ ವಿಚಾರಣೆಯನ್ನು ಗುಜರಾತಿನಿಂದ ಮಹಾರಾಷ್ಟ್ರಕ್ಕೆ ಸುಪ್ರೀಂ ಕೋರ್ಟ್ ವರ್ಗಾವಣೆ ಮಾಡಿತ್ತು.ಈಗ ಜಾಮೀನು ಪಡೆದಿರುವ ಇಬ್ಬರು ಸೇರಿದಂತೆ 11 ಆರೋಪಿಗಳನ್ನು ವಿಚಾರಣಾ ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು.

ಆ ದಂಡನೆಯನ್ನು ಮುಂಬೈ ಹೈ ಕೋರ್ಟ್ ಕೂಡ ಎತ್ತಿ ಹಿಡಿದಿತ್ತು.ಆದರೆ 2022 ರಲ್ಲಿ ಗುಜರಾತಿನ ಬಿಜೆಪಿ ಸರಕಾರ ಅಪರಾಧಿಗಳ ಶಿಕ್ಷೆಗೆ ವಿನಾಯಿತಿ ನೀಡಿ ಎಲ್ಲ ಆರೋಪಿಗಳನ್ನು ಬಿಡುಗಡೆ ಮಾಡಿತ್ತು. ಗುಜರಾತ್ ಸರಕಾರದ ನಿರ್ಣಯವನ್ನು ಬಿಲ್ಕಿಸ್ ಬಾನು ಅವರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟು ಆಕೆಯ ಮನವಿಯನ್ನು ಪುರಸ್ಕರಿಸಿತ್ತು.

ದುರಂತ ಮತ್ತು ಆತಂಕಪಡಬೇಕಾದ ವಿಷಯವೆಂದರೆ ಅಪರಾಧಿಗಳನ್ನು ಬಿಡುಗಡೆ ಮಾಡಬೇಕೆಂಬ ಗುಜರಾತ್ ಸರಕಾರದ ಶಿಫಾರಸನ್ನು ಗುಜರಾತ್ ಹೈಕೋರ್ಟ್ ಒಪ್ಪಿಕೊಂಡು ಬಿಡುಗಡೆ ಮಾಡುತ್ತದೆ. ಬಿಡುಗಡೆಯಾಗಿ ಹೊರಗೆ ಬಂದ ಅಪರಾಧಿಗಳನ್ನು ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರು ಹಾರ ಹಾಕಿ ಸ್ವಾಗತಿಸುತ್ತಾರೆ. ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾರೆ.

ಪ್ರಸ್ತುತ ಇಬ್ಬರು ಆರೋಪಿಗಳ ಬಿಡುಗಡೆ ನಂತರ ಭೀತಿಯಿಂದ ಗುಜರಾತನ್ನು ತೊರೆದು ಹೋಗಿರುವ ಬಿಲ್ಕಿಸ್ ಬಾನು ತಮ್ಮ ಕುಟುಂಬ ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕಗೊಂಡಿದ್ದಾರೆ. ತಮ್ಮ ವಾದವನ್ನು ಸುಪ್ರೀಂ ಕೋರ್ಟ್ ಯಾಕೆ ಕೇಳುವುದಿಲ್ಲ ಎಂದು ಪ್ರಶ್ನಿಸಿದ್ದಾರೆ

ಒಟ್ಟಾರೆ ಸುಪ್ರೀಂ ಕೋರ್ಟ್‌ಗೆ ಹೋದರೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯೇ ಹೊರಟು ಹೋದಂತಾಗಿದೆ. ಮುಂಬೈ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಅಪರಾಧಿಗಳು ಈ ಹಿಂದೆ ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಈಗ ಅವುಗಳನ್ನು ವಿಚಾರಣೆಗೆ ಸ್ವೀಕರಿಸಿದೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಈ ಹಿಂದೆ ಗೊತ್ತುಪಡಿಸಿದ ನ್ಯಾಯಿಕ ಪ್ರಕ್ರಿಯೆಯನ್ನು ಮತ್ತು ತನ್ನದೇ ನಿರ್ದೇಶನಗಳನ್ನು ಸುಪ್ರೀಂ ಕೋರ್ಟು ಯಾಕೆ ಪಾಲಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.

ಸುದೀರ್ಘ ಕಾಲ ಸೆರೆಮನೆ ವಾಸ ಮತ್ತು ಅಪರಾಧಿಗಳೊಬ್ಬರ ದೈಹಿಕ ಅನಾರೋಗ್ಯದ ಕಾರಣ ನೀಡಿ ಶಿಕ್ಷೆಯನ್ನು ಅಮಾನತುಗೊಳಿಸಿರುವ ಕ್ರಮವನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿಕೊಂಡಿದೆ. ಇಂಥದೇ ಕಾರಣಗಳನ್ನು ನೀಡಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್

ಈ ಹಿಂದೆ ತಿರಸ್ಕರಿಸಿತ್ತು.ಈಗ ಜಾಮೀನು ಪಡೆದಿರುವ ಇಬ್ಬರು ಪೆರೋಲ್ ಮತ್ತು ಶಿಕ್ಷೆ ವಿನಾಯಿತಿ ಮೂಲಕ ಸುಮಾರು 4 ವರ್ಷಗಳ ಕಾಲ ಸ್ವಾತಂತ್ರ್ಯ ವನ್ನು ಅನುಭವಿಸಿದ್ದಾರೆ. ಅಪರಾಧಗಳ ಗಂಭೀರತೆಯನ್ನು ಪರಿಗಣಿಸಿ ಕೆಲವು ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಿರುವ ನ್ಯಾಯಾಲಯ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಗಂಭೀರ ಪ್ರಕರಣವೆಂದು ಹೆಸರಾದ ಪ್ರಕರಣದ ಅಪರಾಧಿಗಳಿಗೆ ಅಗತ್ಯದ ನ್ಯಾಯಿಕ ಪ್ರಕ್ರಿಯೆ ಗಳನ್ನು ಅನುಸರಿಸದೇ ಜಾಮೀನು ನೀಡಿರುವುದು ಅತ್ಯಂತ ಕೆಟ್ಟ ಪೂರ್ವ ನಿದರ್ಶನಕ್ಕೆ ಕಾರಣ ಆಗಬಹುದು. ಇಂಥ ಆದೇಶಗಳಿಂದ ನ್ಯಾಯಾಲಯದ ಮೇಲೆ ಜನರ ನಂಬಿಕೆ ಹೊರಟು ಹೋಗಬಹುದು. ಆದ್ದರಿಂದ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಮರು ಪರಿಶೀಲನೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ.

Tags

criminalsProtectorsSupremeCourtBilkis Bano
share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X