Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಫ್ಯಾಶಿಸ್ಟ್ ರಾಜ್ಯದಲ್ಲಿ ಜನ ಹೋರಾಟ...

ಫ್ಯಾಶಿಸ್ಟ್ ರಾಜ್ಯದಲ್ಲಿ ಜನ ಹೋರಾಟ ಸುಲಭವಲ್ಲ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ26 Oct 2026 1:09 PM IST
share
ಫ್ಯಾಶಿಸ್ಟ್ ರಾಜ್ಯದಲ್ಲಿ ಜನ ಹೋರಾಟ ಸುಲಭವಲ್ಲ

1993ನೇ ಇಸವಿಯಿಂದ ಭ್ರಷ್ಟಾಚಾರ, ಕೋಮುವಾದ ವಿರುದ್ಧ ಹೋರಾಟ, ಮಹಿಳೆಯರ ಮತ್ತು ರೈತರ ಚಳವಳಿ ಹಾಗೂ ಹಲವಾರು ಜನಸಾಮಾನ್ಯರ ಹೋರಾಟಗಳಿಗೆ ಈ ಜಂತರ್ ಮಂತರ್ ಸಾಕ್ಷಿಯಾಗಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿ ಪಡಿಸುವ ಸಂವಿಧಾನದ 19ನೇ ಕಲಮಿಗೆ ಒಂದು ಚಹರೆ ಅಥವಾ ಸ್ವರೂಪವನ್ನು ನೀಡಿರುವ ಸ್ಥಳ ಜಂತರ್ ಮಂತರ್. ಇಂಥ ಜಾಗದಲ್ಲಿ ಪ್ರತಿಭಟನೆಯ ಧ್ವನಿಗಳು ಕೇಳಿ ಬರುವುದು ಮೋದಿ ಸರಕಾರಕ್ಕೆ ಇಷ್ಟವಾಗುತ್ತಿಲ್ಲ

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಾಗ ಬೇರೆ ದಾರಿ ಕಾಣದೇ ಜನರು ಅನಿವಾರ್ಯವಾಗಿ ಬೀದಿಗೆ ಬರುತ್ತಾರೆ.ಅಸಮಾನತೆಯಿಂದ ಕೂಡಿದ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯಲ್ಲಿ ಶೋಷಕ ವರ್ಗಗಳು ತಮ್ಮ ವರ್ಗ ಹಿತಾಸಕ್ತಿಯ ರಕ್ಷಣೆಗಾಗಿ ಮತ್ತು ನಿರ್ವಹಣೆಗಾಗಿ ಆಡಳಿತ ವ್ಯವಸ್ಥೆ, ನ್ಯಾಯಾಂಗ, ಪೊಲೀಸ್ ಮತ್ತು ಸೇನಾ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತವೆ. ತಮ್ಮ ವಿರುದ್ಧ ತಿರುಗಿ ಬೀಳಬಾರದೆಂದು ಪ್ರಜೆಗಳಿಗೆ ಕೆಲವು ರಿಯಾಯಿತಿ, ಅನುಕೂಲಗಳನ್ನು ಮಾಡಿಕೊಟ್ಟಿರುತ್ತವೆ.ಆದರೆ ಇವೆಲ್ಲ ತೋರಿಕೆಗೆ ಮಾತ್ರ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮ್ಮ ಬೇಡಿಕೆ ಗಳಿಗಾಗಿ ಬೀದಿಗೆ ಬಂದು ಪ್ರತಿಭಟನೆ ನಡೆಸುವುದು ಸಹಜ. ಇಂಥ ಆಕ್ರೋಶದ ಧ್ವನಿಗಳನ್ನು ಪ್ರಭುತ್ವದ ಅಧಿಕಾರ ಸೂತ್ರ ಹಿಡಿದವರು ಸಹಾನುಭೂತಿಯಿಂದ ನೋಡಬೇಕಾಗುತ್ತದೆ ಎಂಬುದು ಆಶಯ ಮಾತ್ರ.ಆದರೆ ಇಂಥ ಸಹನೆ ಮತ್ತು ಸಹಾನುಭೂತಿ ಈಗ ಅಧಿಕಾರದಲ್ಲಿದ್ದವರಿಗೆ ಇಲ್ಲ. ಅದಕ್ಕೂ ಕಾರಣವಿದೆ.ಉದಾರವಾದಿ ಬೂರ್ಜ್ವಾ ಪಕ್ಷಗಳು ಅಧಿಕಾರದಲ್ಲಿದ್ದರೆ ಪ್ರತಿಭಟನೆಗೆ ಒಂದಿಷ್ಟು ಅವಕಾಶವಿರುತ್ತದೆ. ಆದರೆ ಫ್ಯಾಶಿಸ್ಟ್ ವಿಚಾರಧಾರೆಯ ಪಕ್ಷಗಳು ಅಧಿಕಾರದಲ್ಲಿದ್ದರೆ ಪ್ರತಿರೋಧದ ಉಸಿರೆತ್ತಲು ಬಿಡುವುದಿಲ್ಲ. ಚಳವಳಿಯನ್ನು ಮುರಿಯಲು ನಾನಾ ಕುತಂತ್ರಗಳನ್ನು ಮಾಡುತ್ತವೆ.

ಪೊಲೀಸ್, ಮಿಲಿಟರಿ ಹೀಗೆ ಎಲ್ಲ ಬಲವನ್ನು ಬಳಸಿದ ನಂತರ ಶರತ್ತುಗಳ ಬಲೆಯಲ್ಲಿ ಸಿಲುಕಿಸಲು ಯತ್ನಿಸುತ್ತವೆ. ದಿಲ್ಲಿಯ ಹೋರಾಟದ ನಾಯಕಿ ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ ಅವರಿಗೆ ಶಾಂತಿ ಬಾಂಡ್‌ಗೆ ಸಹಿ ಹಾಕುವಂತೆ ಒತ್ತಡ ಹೇರಲಾಗುತ್ತಿದೆ.ಆಕೆ ನಿರಾಕರಿಸಿದ್ದಾರೆ. ಯಾರ ಶಾಂತಿಯನ್ನು ಕಾಪಾಡಲು ನನಗೆ ನೊಟೀಸ್ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ಅಪರಾಧವೇ ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಸೇರಿದಂತೆ ದೇಶದ ಪ್ರಮುಖ ಪ್ರತಿಪಕ್ಷಗಳ ಕಾರ್ಯಕರ್ತರು ರಾಜಧಾನಿ ದಿಲ್ಲಿಗೆ ಬಂದರು. ಇದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ(ಎನ್‌ಡಿಎ) ಸರಕಾರಕ್ಕೆ ಇಷ್ಟವಾಗಲಿಲ್ಲ. ಈ ಪ್ರತಿಭಟನೆಯನ್ನು ತಡೆಯಲು ಸರಕಾರ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿತು. ಮುಂಚಿನಿಂದಲೂ ಪ್ರತಿಭಟನೆಗಳು ನಡೆಯುತ್ತಿದ್ದ ಜಂತರ್ ಮಂತರ್ ನಲ್ಲಾಗಲಿ ಅಥವಾ ದಿಲ್ಲಿಯ ಬೇರೆಡೆಯಾಗಲಿ ಜನ ಸೇರದಂತೆ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿತು.ಇಂಥ ದಮನ ನೀತಿಯಿಂದ ಪ್ರತಿರೋಧವನ್ನು ತಡೆಯಲು ಆಗಲಿಲ್ಲ. ಅದು ಇನ್ನಷ್ಟು ವ್ಯಾಪಕ ಸ್ವರೂಪ ಪಡೆಯಿತು.

ಜನತೆಯ ಮುಖ್ಯವಾಗಿ ವಿದ್ಯಾರ್ಥಿ ಯುವಜನರ ಪ್ರತಿಭಟನೆಯನ್ನು ತಡೆಯಲು ಪೊಲೀಸರು, ಗಡಿ ಭದ್ರತಾ ಪಡೆಗಳು, ಅರೆಸೇನಾ ಪಡೆಗಳನ್ನು ಬಳಸಲಾಯಿತು. ಪ್ರತಿರೋಧವನ್ನು ಹತ್ತಿಕ್ಕಲು ಈ ಸರಕಾರ ಎಷ್ಟು ಅತಿರೇಕಕ್ಕೆ ಹೋಯಿತು! ಜೈಲಿನಲ್ಲಿದ್ದ ಕ್ರಿಮಿನಲ್ ಕೈದಿಗಳನ್ನು ಬಿಡುಗಡೆ ಮಾಡಿ ತಂದು ಜಂತರ್ ಮಂತರ್ ಮುಂತಾದ ಕಡೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅವರಿಂದ ಹಲ್ಲೆ ಮತ್ತು ಆರೆಸ್ಸೆಸ್, ಎಬಿವಿಪಿ ಕಾರ್ಯಕರ್ತರ ಮೂಲಕ ಕೂಡ ಚಳವಳಿಕಾರರ ಮೇಲೆ ದಾಳಿ ಮಾಡಿಸಲಾಯಿತು ಮತ್ತು ಮಾಡಿಸಲಾಗುತ್ತಿದೆ ಎಂಬ ಆರೋಪ ಸರಕಾರದ ಮೇಲಿದೆ. ಸರಕಾರ ಎಷ್ಟು ಹೆದರಿದೆಯೆಂದರೆ ದಿಲ್ಲಿಯ ಪ್ರಮುಖ ಭಾಗಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದು ಸಾಲದೆಂಬಂತೆ ದಿಲ್ಲಿಗೆ ಬರುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಮೆಟ್ರೊ ನಿಲ್ದಾಣಗಳ ಬಾಗಿಲುಗಳನ್ನು ಮುಚ್ಚಲಾಗಿತ್ತು. ನಗರದಾದ್ಯಂತ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಯಿತು. ಐವತ್ತು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಪ್ರಮುಖ ನಾಯಕರನ್ನು ಬಂಧಿಸಲಾಯಿತು. ಆದರೂ ಪ್ರತಿಭಟನೆಯ ಧ್ವನಿಗಳನ್ನು ಹತ್ತಿಕ್ಕಲು ಸರಕಾರದಿಂದ ಆಗಲಿಲ್ಲ.

ಪ್ರತಿಭಟನೆ ಎಂಬುದು ಯಾರೋ ನೀಡಿದ ಭಿಕ್ಷೆಯಲ್ಲ, ಅದು ಜನತಾಂತ್ರಿಕ ಹಕ್ಕು. ಅದನ್ನು ದಮನ ಮಾಡಲು ಯತ್ನಿಸುವುದು ಸರ್ವಾಧಿಕಾರಿ ಫ್ಯಾಶಿಸ್ಟ್ ಮನೋಭಾವ ಅಂದರೆ ತಪ್ಪಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ದಿಲ್ಲಿಯ ಎಲ್ಲ ಮೆಟ್ರೊ ನಿಲ್ದಾಣಗಳನ್ನು ಮುಚ್ಚುವುದಕ್ಕೂ ಮೋದಿ ಸರಕಾರ ಹಿಂಜರಿಯಲಿಲ್ಲ. ಮೋದಿ ಸರಕಾರ ಮಾತ್ರವಲ್ಲ ಕರ್ನಾಟಕದ ಕಾಂಗ್ರೆಸ್ ಸರಕಾರ ಕೂಡ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಬೀದಿಗೆ ಇಳಿದ ಚಳವಳಿಗಾರರನ್ನು ಸಹಿಸಲಿಲ್ಲ. ದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕ ಗಾಂಧಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಇಲ್ಲಿ ಅವರದೇ ಕಾಂಗ್ರೆಸ್ ಪಕ್ಷದ ಸರಕಾರ ಪ್ರತಿಭಟನೆಗೆ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ನೆಪ ಹೇಳಿ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿತು. ನಂತರ ಮುಖ್ಯಮಂತ್ರಿಗಳ ಮಧ್ಯ ಪ್ರವೇಶದಿಂದ ಸರಕಾರ ತಪ್ಪನ್ನು ತಿದ್ದಿಕೊಂಡಿತು. ಆದರೆ ಈ ವ್ಯವಸ್ಥೆಯಲ್ಲಿ ಯಾವುದೇ ಸರಕಾರ ಪ್ರತಿಭಟನೆಯನ್ನು ಇಷ್ಟ ಪಡುವುದಿಲ್ಲ ಎಂಬುದಂತೂ ಸತ್ಯ.

ಪ್ರತಿರೋಧ ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕಲು ನಮ್ಮ ಸರಕಾರಗಳು ಹಲವಾರು ತಂತ್ರ, ಕುತಂತ್ರಗಳನ್ನು ಮಾಡುತ್ತದೆ. ಅವುಗಳಲ್ಲಿ ಮುಖ್ಯವಾದದು ಪ್ರತಿಭಟನೆ ನಡೆಸುವ ಸ್ಥಳದ ಬದಲಾವಣೆ. ದೇಶದ ರಾಜಧಾನಿ ದಿಲ್ಲಿಯಲ್ಲಿ ಮುಂಚಿನಿಂದಲೂ ಸತ್ಯಾಗ್ರಹ ಮತ್ತು ಪ್ರತಿಭಟನೆಗಳು ನಡೆಯುತ್ತಾ ಬಂದ ಮುಖ್ಯವಾದ ಜಾಗವೆಂದರೆ ಜಂತರ್ ಮಂತರ್. ಸಂಸತ್ ಭವನ, ರಾಷ್ಟ್ರಪತಿ ಭವನ ಹಾಗೂ ಪ್ರಧಾನಿ ನಿವಾಸಕ್ಕೆ ಹತ್ತಿರದಲ್ಲಿ ಇರುವ ಈ ಜಂತರ್ ಮಂತರ್‌ನಲ್ಲಿ ಇನ್ನು ಮುಂದೆ ಯಾವುದೇ ಪ್ರತಿಭಟನೆ ನಡೆಸುವುದನ್ನು ಮೋದಿ ಸರಕಾರ ನಿಷೇಧಿಸಿದೆ. 1993ನೇ ಇಸವಿಯಿಂದ ಭ್ರಷ್ಟಾಚಾರ, ಕೋಮುವಾದ ವಿರುದ್ಧ ಹೋರಾಟ, ಮಹಿಳೆಯರ ಮತ್ತು ರೈತರ ಚಳವಳಿ ಹಾಗೂ ಹಲವಾರು ಜನಸಾಮಾನ್ಯರ ಹೋರಾಟಗಳಿಗೆ ಈ ಜಂತರ್ ಮಂತರ್ ಸಾಕ್ಷಿಯಾಗಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿ ಪಡಿಸುವ ಸಂವಿಧಾನದ 19ನೇ ಕಲಮಿಗೆ ಒಂದು ಚಹರೆ ಅಥವಾ ಸ್ವರೂಪವನ್ನು ನೀಡಿರುವ ಸ್ಥಳ ಜಂತರ್ ಮಂತರ್. ಇಂಥ ಜಾಗದಲ್ಲಿ ಪ್ರತಿಭಟನೆಯ ಧ್ವನಿಗಳು ಕೇಳಿ ಬರುವುದು ಮೋದಿ ಸರಕಾರಕ್ಕೆ ಇಷ್ಟವಾಗುತ್ತಿಲ್ಲ

ಈ ಜಂತರ್ ಮಂತರ್ ಬದಲಿಗೆ ದೂರದ ರಾಮಲೀಲಾ ಮೈದಾನ, ಸಿಬಿಡಿ ಮೈದಾನ ಹಾಗೂ ಬುರಾರಿಗಳಲ್ಲಿ ಪ್ರತಿಭಟನೆ ನಡೆಸಬಹುದು ಎಂದು ಸರಕಾರ ಹೇಳುತ್ತಿದೆ. ಇವುಗಳಲ್ಲಿ ಕೂಡ ಲಕ್ಷಾಂತರ ರೂ. ಶುಲ್ಕ ನೀಡಿ ಪ್ರತಿಭಟನೆ ಅಥವಾ ಸತ್ಯಾಗ್ರಹ ನಡೆಸಬೇಕಾಗುತ್ತದೆ. ಇವುಗಳು ರಾಜಧಾನಿಯ ಕೇಂದ್ರ ಸ್ಥಳಗಳಿಂದ ಅತ್ಯಂತ ದೂರದಲ್ಲಿವೆ. ಪ್ರತಿವರ್ಷ ರಾಮಲೀಲಾ, ದಸರಾ, ದೀಪಾವಳಿಯಂಥ ಉತ್ಸವಗಳು ನಡೆಯುವ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆಗಳಿಗೆ ಅನುಮತಿ ಸಿಗುವುದು ಮಾತ್ರ ಅಪರೂಪ. ಇನ್ನು ಪ್ರತಿಭಟನೆಗೆ ನಿಗದಿ ಪಡಿಸಲಾದ ಬುರಾರಿ ಹಾಗೂ ಸಿಬಿಡಿ ಮೈದಾನಗಳು ಕೂಡ ದಿಲ್ಲಿಯ ಪ್ರಮುಖ ಕೇಂದ್ರಗಳಿಂದ 20-25 ಕಿ.ಮೀ. ದೂರದಲ್ಲಿವೆ. ಅಲ್ಲಿ ಅನುಮತಿ ನೀಡಿದರೂ ಅಲ್ಲಿ ನಡೆಯುವ ಪ್ರತಿಭಟನೆಗಳು ಮತ್ತು ಸತ್ಯಾಗ್ರಹಗಳು ಸ್ಥಳೀಯರು, ಪ್ರತಿಭಟನಾಕಾರರನ್ನು ಹೊರತು ಪಡಿಸಿ ಉಳಿದ ಯಾರಿಗೂ ಸುಲಭವಾಗಿ ಗೊತ್ತಾಗುವುದಿಲ್ಲ.ಅಧಿಕಾರದಲ್ಲಿದ್ದವರ, ಮಾಧ್ಯಮಗಳ ಹಾಗೂ ಸರಕಾರದ ಗಮನವನ್ನು ಸೆಳೆಯುವುದಿಲ್ಲ. ಹೀಗಾಗಿ ಸರಕಾರದ ಗಮನವನ್ನು ಸೆಳೆಯುವ ಚಳವಳಿಗಾರರ ಉದ್ದೇಶವೂ ನಿರರ್ಥಕವಾಗುತ್ತದೆ. ಇದಕ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರು ಕೂಡ ಹೊರತಲ್ಲ. ಅರುವತ್ತು ಎಪ್ಪತ್ತರ ದಶಕದ ಮುಂಚೆ ವಿಧಾನ ಸೌಧದ ಮುಂದೆಯೇ ಪ್ರತಿಭಟನೆಗಳು ನಡೆಯುತ್ತಿದ್ದವು. ನಂತರ ಕ್ರಮೇಣ ವಿಧಾನ ಸೌಧದ ಎದುರಿನ ಕಬ್ಬನ್ ಉದ್ಯಾನದಲ್ಲಿ ಪ್ರತಿಭಟನಾ ಸಭೆಗಳು ನಡೆಯತೊಡಗಿದವು. ನರಗುಂದ ರೈತ ಜಾಥಾ ಬೆಂಗಳೂರಿಗೆ ಬಂದಾಗ ಕಬ್ಬನ್ ಉದ್ಯಾನದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಸೇರಿದ ರೈತರ ಸಭೆ ನಡೆಯಿತು. ಚಳವಳಿಗಾರರು ವಿಧಾನ ಸೌಧದ ಮೆಟ್ಟಿಲು ಹತ್ತಿ ಸರಕಾರದ ಬಾಗಿಲನ್ನು ತಟ್ಟುವ ಅವಕಾಶವೂ ದೊರಕಿತು. ಕಮ್ಯುನಿಸ್ಟ್ ಪಕ್ಷಗಳ ಸಭೆ ಮೆರವಣಿಗೆಗಳು ವಿಧಾನ ಸೌಧದ ಮುಂದೆ ನಡೆಯುತ್ತಿದ್ದವು. ಇದರ ಜೊತೆಗೆ ಮೈಸೂರು ಬ್ಯಾಂಕ್ ಸರ್ಕಲ್, ಟೌನ್ ಹಾಲ್ ಮೊದಲಾದ ಕಡೆ ಏಕಕಾಲದಲ್ಲಿ ಸತ್ಯಾಗ್ರಹ ಮತ್ತು ಪ್ರತಿಭಟನೆಗಳು ನಡೆಯುತ್ತಿದ್ದವು.

ನಂತರದ ವಿಧಾನ ಸೌಧ ಹಾಗೂ ಕಬ್ಬನ್ ಉದ್ಯಾನ ಗಳಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಯಿತು. ಅದರ ಬದಲಿಗೆ ಕೆ.ಆರ್.ಸರ್ಕಲ್‌ಗೆ ಪ್ರತಿಭಟನೆಯ ಜಾಗ ಬದಲಾಯಿತು. ಈಗಂತೂ ಬಹುತೇಕ ಪ್ರತಿಭಟನೆಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿವೆ.

ಏತನ್ಮಧ್ಯೆ ಕರ್ನಾಟಕ ಹೈಕೋರ್ಟ್ 2022ರಲ್ಲಿ ಪ್ರತಿಭಟನೆ ಹಾಗೂ ಸಭೆಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸೀಮಿತಗೊಳಿಸಿ ಆದೇಶ ನೀಡಿತು. ಇದೀಗ ಮತ್ತೆ ವಿವಾದದಕ್ಕೆ ಕಾರಣವಾಗಿದೆ. ಹೋರಾಟದ ಧ್ವನಿಗಳಿಂದ ನಮ್ಮ ಪ್ರಭುತ್ವದ ಮಾಲಕರಿಗೆ ಅಂದರೆ ಮಂತ್ರಿಗಳು,ಶಾಸಕರು ಹಾಗೂ ಅಧಿಕಾರಿಗಳ ನೆಮ್ಮದಿಗೆ ಭಂಗ ಬರಬಾರದೆನ್ನುವ ಉದ್ದೇಶ ಇದರ ಹಿಂದೆ ಅಡಗಿದೆ.

ಇವೆಲ್ಲ ವಿದ್ಯಮಾನಗಳ ಜೊತೆಗೆ ಕೇರಳಂನ ಮಾದರಿಯೊಂದು ನೆನಪಿಗೆ ಬರುತ್ತದೆ. ಐವತ್ತು, ಅರವತ್ತರ ದಶಕಗಳಲ್ಲಿ ಅಲ್ಲಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಸರಕಾರವಿದ್ದಾಗ ಕೇರಳದ ರಾಜಧಾನಿಯಾದ ತಿರುವನಂತಪುರಂನಲ್ಲಿ ವಿಧಾನ ಸೌಧದ ದ್ವಾರದ ಎದುರಿಗೆ ಧರಣಿ ನಡೆಸಲು ಶಾಶ್ವತವಾದ ಕಟ್ಟಡವನ್ನು ನಿರ್ಮಿಸಲಾಯಿತು. ಈಗಲೂ ಅಲ್ಲಿ ಚಳವಳಿಗಳು ನಡೆಯುತ್ತವೆ. ಅಲ್ಲಿನ ಸರಕಾರದ ಜನಪರ ಕಾಳಜಿಗೆ ಇದೊಂದು ನಿದರ್ಶನವಾಗಿದೆ. ಯಾವುದೇ ಹೋರಾಟ, ಚಳವಳಿಗಳಿಗೆ ಒಂದು ದಿಕ್ಕು ದೆಸೆ ಇರಬೇಕಾಗುತ್ತದೆ. ಪರ್ಯಾಯದ ಸ್ಪಷ್ಟ ಪರಿಕಲ್ಪನೆ ಇರಬೇಕಾಗುತ್ತದೆ.ಆದರೆ ಈಗ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ನಡೆದ ಹೋರಾಟದಲ್ಲಿ ಪಾಲ್ಗೊಂಡ ಕೆಲವು ಎಡಪಂಥೀಯ ಸಂಘಟನೆಗಳು ಹಾಗೂ ಸಮಾಜವಾದಿಗಳನ್ನು ಹೊರತು ಪಡಿಸಿದರೆ ಉಳಿದ ಯಾರಿಗೂ ಸ್ಪಷ್ಟ ಸೈದ್ಧಾಂತಿಕ ನಿಲುವುಗಳಿಲ್ಲ. ಸಿಜೆಪಿಯ ನಾಯಕರು ತಮ್ಮದು ಗಾಂಧಿ, ಅಂಬೇಡ್ಕರ್ ಹಾಗೂ ನೆಹರೂ ಮಾರ್ಗ ಎಂದು ಹೇಳುತ್ತಿದ್ದರೂ ಅದಿನ್ನೂ ಸ್ಪಷ್ಟವಾಗಿ ಸಾಕಾರಗೊಳ್ಳಬೇಕಾಗಿದೆ.

ಫ್ಯಾಶಿಸ್ಟ್ ಶಕ್ತಿಗಳು ಪ್ರಭುತ್ವದ ಮೇಲೆ ಹಿಡಿತ ಸಾಧಿಸಿದಾಗ ಅದನ್ನು ವಾಪಸ್ ಕಿತ್ತುಕೊಂಡು ಜನರು ತಮ್ಮ ವಶಕ್ಕೆ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಸ್ಪಷ್ಟ ಸೈದ್ಧಾಂತಿಕ ನಿಲುವು, ಪರ್ಯಾಯದ ದಿಕ್ಕು ದೆಸೆಗಳ ಬಗ್ಗೆ ಖಚಿತ ಗುರಿಗಳಿದ್ದಾಗ ಮಾತ್ರ ಹೋರಾಟ ಯಶಸ್ವಿಯಾಗುತ್ತದೆ.

Tags

peopleStrugglefasciststate
share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X