Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಭಯೋತ್ಪಾದನೆ ಯಾರಿಂದ ಯಾರಿಗೆ?

ಭಯೋತ್ಪಾದನೆ ಯಾರಿಂದ ಯಾರಿಗೆ?

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ21 Oct 2024 10:10 AM IST
share
ಭಯೋತ್ಪಾದನೆ ಯಾರಿಂದ ಯಾರಿಗೆ?
ಸ್ವಾತಂತ್ರ್ಯ ನಂತರ ನಡೆದ ಮೊದಲ ಭಯೋತ್ಪಾದಕ ಕೃತ್ಯವೆಂದರೆ ಮಹಾತ್ಮಾ ಗಾಂಧಿಯವರ ಹತ್ಯೆ. ಅದನ್ನು ಮಾಡಿದವರು ಯಾರು ಎಂಬುದನ್ನು ಕೂಡ ಮೋದಿಯವರು ಹೇಳಬೇಕಾಗಿತ್ತು.ಅದೇ ರೀತಿ ಒಡಿಶಾದಲ್ಲಿ ಕುಷ್ಟ ರೋಗಿಗಳ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಕ್ರೈಸ್ತ ಧರ್ಮದ ಫಾದರ್ ಗ್ರಹಾಂ ಸ್ಟೈನ್ ಮತ್ತು ಅವರ ಇಬ್ಬರು ಮಕ್ಕಳನ್ನು ಜೀವಂತ ಸುಟ್ಟು ಹಾಕಿದವರು ಯಾರು? ಇವರ ಹತ್ಯೆಗೆ ಕಾರಣನಾದ ದಾರಾ ಸಿಂಗ್ ಜೈಲಿನಿಂದ ಹೊರಗೆ ಬಂದಾಗ ಹೂ ಮಾಲೆ ಹಾಕಿ ಸನ್ಮಾನಿಸಿದವರು ಯಾರು? ಸ್ವಾಮಿ ಅಗ್ನಿವೇಶ್ ಅವರನ್ನು ನೆಲಕ್ಕೆ ಕೆಡವಿ , ಎಳೆದಾಡಿ ಮಾನಸಿಕವಾಗಿ ಕೊಂದವರು ಯಾರು ಎಂಬುದನ್ನು ಕೂಡ ಮೋದಿಯವರು ಮತ್ತು ಅವರ ಪಕ್ಷದವರು ಹೇಳಬೇಕಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಭಾಷಣ ಮಾಡುತ್ತ ‘ಕಾಂಗ್ರೆಸ್ ಪಕ್ಷವನ್ನು ನಗರ ನಕ್ಸಲರು ನಡೆಸುತ್ತಾರೆ’ ಎಂದು ಕಟುವಾಗಿ ಟೀಕಿಸಿದರು. ‘ನಗರ ನಕ್ಸಲರು’ ಎಂಬ ಪದವನ್ನು ಮೋದಿಯವರು ಎಲ್ಲಿಂದ ಎರವಲು ಪಡೆದರು? ಇದರ ಸೃಷ್ಟಿಕರ್ತರು ಯಾರು ಎಂಬುದಕ್ಕೆ ಉತ್ತರ ಹುಡುಕಲು ಹೊರಟರೆ ಕಣ್ಣಿಗೆ ಗೋಚರಿಸುವುದು ಸರಕಾರದ ಭದ್ರತಾ ಇಲಾಖೆ ಅಥವಾ ಗೃಹ ಸಚಿವಾಲಯ ಅಧಿಕೃತವಾಗಿ ಈ ಪದವನ್ನು ಬಳಸುವುದಿಲ್ಲ. ಸಾಮಾನ್ಯವಾಗಿ ಮಾವೊವಾದಿಗಳಿಗೆ ನಕ್ಸಲರು ಎಂದು ಬಳಸಲಾಗುತ್ತದೆ. ನಕ್ಸಲರು ಅಂದರೆ ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ನಗರ ನಕ್ಸಲರೆಂದರೆ ಯಾರು? ಈ ಪ್ರಶ್ನೆಗೆ ಉತ್ತರ ಬೇಕಾಗಿದೆ.

ನಗರ ನಕ್ಸಲರು ಎಂಬ ಪದವನ್ನು ಬಳಕೆಗೆ ತಂದಿದ್ದು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಕಚೇರಿಯಲ್ಲಿ. ಮುಂದೆ ಈ ಪದವನ್ನು ಸಂಘ ಪರಿವಾರದವರು ಮತ್ತು ಅವರ ಪರವಾದ ಮಾಧ್ಯಮಗಳಲ್ಲಿನ ಕರಸೇವಕರು ದೇಶದಲ್ಲಿ ಸಾಮಾನ್ಯವಾಗಿ ಬಳಸತೊಡಗಿದರು. ಅವರ ದೃಷ್ಟಿಯಲ್ಲಿ ನಗರ ಪ್ರದೇಶಗಳಲ್ಲಿ ಸಮಾನತೆಯ ಪರವಾಗಿ ಮಾತನಾಡುವವರು ಮತ್ತು ಬರೆಯುವವರು ಕೋಮುವಾದ ಮತ್ತು ಜಾತಿವಾದಗಳನ್ನು ವಿರೋಧಿಸುವ ಲೇಖಕರು, ಕವಿಗಳು, ಕಲಾವಿದರು, ಪತ್ರಕರ್ತರು ಹೀಗೆ ಬೌದ್ಧಿಕ ಲೋಕದ ಚಿಂತನಶೀಲರು ನಗರ ನಕ್ಸಲರೆಂದು ಕರೆಯಲ್ಪಡುತ್ತಾರೆ.ಇವರೆಲ್ಲರೂ ಕಾಡಿನಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ಓಡಾಡುವವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವವರು ಎಂಬುದು ಅವರ ಆರೋಪ. ಮೋದಿಯವರು ಪ್ರತಿಪಕ್ಷಗಳನ್ನು ಅದರಲ್ಲೂ ವಿಶೇಷವಾಗಿ ಮುಖ್ಯ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕತ್ವದಲ್ಲಿ ನಗರ ನಕ್ಸಲರಿದ್ದಾರೆ ಎಂದು ಆರೋಪಿಸಿದರು.

ಮೋದಿಯವರ ಈ ನಿಂದನೆಯಿಂದ ಕೆರಳಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ‘ಬಿಜೆಪಿಯವರು ನಿಜವಾದ ಭಯೋತ್ಪಾದಕರು’ ಎಂದು ತಿರುಗೇಟು ನೀಡಿದರು. ‘ಭಯೋತ್ಪಾದಕರು’ ಎಂಬ ಪದವನ್ನು ಖರ್ಗೆ ಅಥವಾ ಅವರ ಪಕ್ಷ ಸೃಷ್ಟಿಸಿಲ್ಲ. ಸಾಮಾನ್ಯವಾಗಿ ಗಡಿಯಾಚೆಯಿಂದ ಬಂದು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಮತ್ತು ಬಾಂಬುಗಳನ್ನು ಹಾಕಿ ಭಯವನ್ನು ಉಂಟು ಮಾಡುವ ಉಗ್ರರ ಗುಂಪುಗಳ ಬಗ್ಗೆ ಅಂತರ್‌ರಾಷ್ಟ್ರೀಯವಾಗಿ ಹಾಗೂ ಆಂತರಿಕವಾಗಿ ಸರಕಾರದ ಗೃಹ ಮತ್ತು ಇತರೆಲ್ಲ ಇಲಾಖೆಗಳು ಅಧಿಕೃತವಾಗಿ ಬಳಸುವ ಪದ ‘ಟೆರರಿಸ್ಟ್’ ಎಂದು ಇದನ್ನೇ ಮಾಧ್ಯಮಗಳು ಸೇರಿದಂತೆ ಸಾಮಾನ್ಯವಾಗಿ ಬಳಸಲಾಗುತ್ತದೆ.

ಸಂಘ ಪರಿವಾರ ಯಾರನ್ನು ಉದ್ದೇಶಿಸಿ ಈ ಪದವನ್ನು ಬಳಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಂತರ್‌ರಾಷ್ಟ್ರೀಯ ಖ್ಯಾತಿಯ ಚಿಂತಕ ಹಾಗೂ ಲೇಖಕ ಆನಂದ ತೇಲ್ತುಂಬ್ಡೆೆ , ಹಿರಿಯ ಪತ್ರಕರ್ತ ಗೌತಮ ನವ್ಲಾಖಾ, ಕವಿ ವರವರರಾವ್, ಹೋರಾಟಗಾರ್ತಿ , ನ್ಯಾಯವಾದಿ ಸುಧಾ ಬಾರಧ್ವ್ವಾಜ, ಶೋಮಾ ಸೇನ್ ಹೀಗೆ ಹಲವಾರು ಬುದ್ಧಿಜೀವಿಗಳು ಕೋಮುವಾದಿ ಕಾರ್ಯಸೂಚಿಯನ್ನು ಮುಂಚಿನಿಂದಲೂ ವಿರೋಧಿಸುತ್ತ ಬಂದವರು. ಇವರಾರೂ ಕೈಯಲ್ಲಿ ಬಂದೂಕು ಹಿಡಿದುಕೊಂಡು ಓಡಾಡುವವರಲ್ಲ. ತಮ್ಮ ಲೇಖನಿಯಿಂದಲೇ ಅಸಮಾನತೆ ಮತ್ತು ಜಾತಿ ತಾರತಮ್ಯವನ್ನು ವಿರೋಧಿಸುತ್ತ ಬಂದವರು. ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ಹುನ್ನಾರವನ್ನು ಖಂಡಿಸುತ್ತಲೇ ಬಂದವರು. ಇವರಲ್ಲಿ ಹೆಚ್ಚಿನವರು ಕಾರ್ಲ್ ಮಾರ್ಕ್ಸ್,

ಡಾ. ಅಂಬೇಡ್ಕರ್, ಜ್ಯೋತಿಬಾ ಫುಲೆ ಅವರಿಂದ ಪ್ರಭಾವಿತರಾದವರು. ಇವರು ಯಾರ ಕೈ ಕಾಲನ್ನು ತಗೆದವರಲ್ಲ, ಯಾರನ್ನು ಕೊಂದವರಲ್ಲ, ಆದರೂ ಅರವತ್ತು ದಾಟಿದ ಇವರನ್ನು ಜೈಲಿಗೆ ಹಾಕಿ ಜಾಮೀನು ಮೇಲೆ ಬಿಡುಗಡೆ ಮಾಡದೇ ಚಿತ್ರಹಿಂಸೆ ನೀಡಲಾಯಿತು. ಅತ್ಯಂತ ಭಯಾನಕ ಶಾಸನವನ್ನು ಬಳಸಿ ಇವರನ್ನು ಬಿಡುಗಡೆಯಾಗದಂತೆ, ಯಾತನೆಯನ್ನು ಅನುಭವಿಸುವಂತೆ ಮಾಡಲಾಯಿತು.

ಕೋಮುವಾದಿ ಪ್ರಭುತ್ವದ ಹಿಂಸೆಗೆ ಬಲಿಯಾದ ದಿಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದ ಜಿ.ಎನ್. ಸಾಯಿಬಾಬಾ ಅವರ ದಾರುಣ ಸಾವಿಗೆ ಯಾರು ಕಾರಣ ಎಂದು ಹುಡುಕುತ್ತ ಹೋದರೆ ಸತ್ಯ ಹೊರಬೀಳುತ್ತದೆ. ಉಳಿದ ಪ್ರಗತಿಪರ ಚಿಂತಕರನ್ನು ಬಂಧಿಸಿದಂತೆ ಸಾಯಿಬಾಬಾ ಅವರನ್ನು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣವನ್ನು ದಾಖಲಿಸಿ ಜೈಲಿಗೆ ತಳ್ಳಲಾಯಿತು. ಯಾವುದೇ ವಿಚಾರಣೆಯಿಲ್ಲದೆ ಹತ್ತು ವರ್ಷಗಳ ಕಾಲ ಜೈಲೆಂಬ ನಾಗಪುರದ ಕತ್ತಲ ಕೋಣೆಯಲ್ಲಿ ಸರಿಯಾಗಿ ಆಹಾರ, ಔಷಧಿ ಕೊಡದೇ ಸತಾಯಿಸಲಾಯಿತು.ಅವರ ತಾಯಿಯವರು ಅಸುನೀಗಿದಾಗಲೂ ಸಾಯಿಬಾಬಾ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಿಲ್ಲ. 57 ವರ್ಷ ಸಾಯುವ ವಯಸ್ಸಲ್ಲ. ಆದರೂ ಶೇಕಡಾ 90 ರಷ್ಟು ಅಂಗವಿಕಲರಾದ ಹಾಗೂ ಗಾಲಿ ಕುರ್ಚಿಯ ಮೇಲಿನಿಂದ ಬಿಟ್ಟೇಳದ ಸಾಯಿಬಾಬಾ ಅವರನ್ನು ಹತ್ತು ವರ್ಷಗಳ ನಂತರ ನ್ಯಾಯಾಲಯ ನಿರಪರಾಧಿ ಎಂದು ಬಿಡುಗಡೆ ಮಾಡಿತು. ಇದು ಆಕಸ್ಮಿಕ ಸಾವಲ್ಲ. ಭಯೋತ್ಪಾದಕರಿಗೆ ನೀಡುವ ಶಿಕ್ಷೆಗೆ ಅವರನ್ನು ಗುರಿಪಡಿಸಲಾಯಿತು. ಗಾಲಿ ಕುರ್ಚಿ ಇಲ್ಲದೇ ಎಲ್ಲೂ ಹೋಗಲಾಗದ ಸಾಯಿಬಾಬಾ ಅವರಿಗೆ ಪದೇ ಪದೇ ಜಾಮೀನು ನಿರಾಕರಿಸಲಾಯಿತು.

ಪ್ರೊಫೆಸರ್ ಸಾಯಿಬಾಬಾ ಅವರೊಬ್ಬರೇ ಅಲ್ಲ,ಆದಿವಾಸಿಗಳ ಏಳಿಗೆಗಾಗಿ ದುಡಿಯುತ್ತಿದ್ದ ಫಾದರ್ ಸ್ಟ್ಯಾನ್ ಸ್ವಾಮಿ ಅವರನ್ನು ಇದೇ ಕರಾಳ ಶಾಸನದನ್ವಯ ಬಂಧಿಸಿ ಜೈಲಿನಲ್ಲಿ ಅವರಿಗೆ ಸರಿಯಾಗಿ ಆಹಾರ ಮತ್ತು ಔಷಧಿಯನ್ನು ನೀಡದೇ ಸಾಯಿಸಲಾಯಿತು. ಹೀಗೆ ಇನ್ನೂ ಕೆಲವು ಹೋರಾಟಗಾರನ್ನು ಜಾಮೀನು ಕೂಡ ಸಿಗದಂತೆ ಜೈಲಿನಲ್ಲಿ ಕೊಳೆ ಹಾಕಲಾಗಿದೆ. ಜೆಎನ್‌ಯು ವಿದ್ಯಾರ್ಥಿ ನಾಯಕರಾದ ಉಮರ್ ಖಾಲಿದ್ ಕೂಡ ಯಾವ ತಪ್ಪೂ ಮಾಡದೆ ಜೈಲಿನಲ್ಲಿ ಯಾತನೆಪಡುತ್ತಿದ್ದಾರೆ. ಸೈದ್ಧಾಂತಿಕ ವಿರೋಧಿಗಳ ಮೇಲೆ ಈ ರೀತಿ ಯಾತನೆಗೆ ಗುರಿ ಪಡಿಸುತ್ತಿರುವ ಬಗ್ಗೆ ಅಂತಾರ್‌ರಾಷ್ಟ್ರೀಯ ಮಟ್ಟದ ಮಾನವ ಹಕ್ಕು ಸಂಘಟನೆಗಳು ಧ್ವನಿಯೆತ್ತುತ್ತಲೇ ಇವೆ.

ಕಾಡಿನಲ್ಲಿ ಇರುವ ನಕ್ಸಲರು ಸಮಾಜ ಬದಲಾವಣೆಗಾಗಿ ಹಿಡಿದ ದಾರಿಯನ್ನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಯಾರೂ ಒಪ್ಪುವುದಿಲ್ಲ. ಅವರಿಂದ ನಡೆದ ಹಿಂಸೆಯ ಬಗ್ಗೆ ಸಹಜವಾಗಿ ಭಿನ್ನಾಭಿಪ್ರಾಯಗಳಿವೆ. ಆದರೆ, ಅವರಿಗೆ ಮಾತ್ರವಲ್ಲ ಮೂಢ ನಂಬಿಕೆ, ಕಂದಾಚಾರ ಹಾಗೂ ಅಸಮಾನತೆಗಳನ್ನು ವಿರೋಧಿಸುವ ಚಿಂತಕರ ಬಗ್ಗೆ ಮಾತಾಡುವವರು ಗಾಂಧೀಜಿ, ದಾಭೋಳ್ಕರ್, ಗೋವಿಂದ ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಗೆ ಕಾರಣರಾದವರ ಬಗ್ಗೆ ಯಾಕೆ ಉಸಿರೆತ್ತುವುದಿಲ್ಲ? ಈ ಹತ್ಯೆಗಳಿಗೆ ನಗರ ನಕ್ಸಲರು ಕಾರಣರೋ ಅಥವಾ ನಗರ ಗೋಡ್ಸೆಗಳು ಕಾರಣರೋ ಎಂಬುದರ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮಾತಾಡಬೇಕಾಗಿದೆ.

ಗುಜರಾತಿನಲ್ಲಿ ಒಂದು ನಿರ್ದಿಷ್ಟ ಸಮುದಾಯದ ಎರಡು ಸಾವಿರಕ್ಕೂ ಹೆಚ್ಚು ಅಮಾಯಕರನ್ನು ಕೊಚ್ಚಿ ಹಾಕಿದವರು ಯಾರು? ಗರ್ಭಿಣಿಯ ಹೊಟ್ಟೆಗೆ ತ್ರಿಶೂಲದಿಂದ ಚುಚ್ಚಿ ಭ್ರೂಣ ಹತ್ಯೆಯನ್ನು ಮಾಡಿದವರು ಯಾರು? ಹಿಂಸಾಚಾರಕ್ಕೆ ಬಲಿಯಾದವರ ನೆರವಿಗೆ ಹೋದ ತಪ್ಪಿಗೆ ತೀಸ್ತಾ ಸೆಟಲ್ವಾಡ್ ಅವರಿಗೆ ಕಿರುಕುಳ ನೀಡಿದವರು ಯಾರು? ಈ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.

ಹೇಳಲು ಏನೂ ವಿಷಯಗಳಿಲ್ಲದ ಹಾಗೂ ಯಾವ ಸಾಧನೆಯನ್ನು ಮಾಡದವರು ಮಾತ್ರ ಸದಾ ಅರ್ಬನ್ ನಕ್ಸಲರು, ನಗರ ನಕ್ಸಲರು ಎಂದು ಹೇಳುತ್ತಾರೆ. ಆದರೆ, ಸ್ವಾತಂತ್ರ್ಯ ನಂತರ ನಡೆದ ಮೊದಲ ಭಯೋತ್ಪಾದಕ ಕೃತ್ಯವೆಂದರೆ ಮಹಾತ್ಮಾ ಗಾಂಧಿಯವರ ಹತ್ಯೆ. ಅದನ್ನು ಮಾಡಿದವರು ಯಾರು ಎಂಬುದನ್ನು ಕೂಡ ಮೋದಿಯವರು ಹೇಳಬೇಕಾಗಿತ್ತು.ಅದೇ ರೀತಿ ಒಡಿಶಾದಲ್ಲಿ ಕುಷ್ಟ ರೋಗಿಗಳ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಕ್ರೈಸ್ತ ಧರ್ಮದ ಫಾದರ್ ಗ್ರಹಾಂ ಸ್ಟೈನ್ ಮತ್ತು ಅವರ ಇಬ್ಬರು ಮಕ್ಕಳನ್ನು ಜೀವಂತ ಸುಟ್ಟು ಹಾಕಿದವರು ಯಾರು? ಇವರ ಹತ್ಯೆಗೆ ಕಾರಣನಾದ ದಾರಾ ಸಿಂಗ್ ಜೈಲಿನಿಂದ ಹೊರಗೆ ಬಂದಾಗ ಹೂ ಮಾಲೆ ಹಾಕಿ ಸನ್ಮಾನಿಸಿದವರು ಯಾರು? ಸ್ವಾಮಿ ಅಗ್ನಿವೇಶ್ ಅವರನ್ನು ನೆಲಕ್ಕೆ ಕೆಡವಿ ,

ಎಳೆದಾಡಿ ಮಾನಸಿಕವಾಗಿ ಕೊಂದವರು ಯಾರು ಎಂಬುದನ್ನು ಕೂಡ ಮೋದಿಯವರು ಮತ್ತು ಅವರ ಪಕ್ಷದವರು ಹೇಳಬೇಕಾಗಿದೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X