Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಗೌರವ ಕಳೆದುಕೊಳ್ಳುತ್ತಿರುವ ‘ಗೌಡಾ’ಗಳು

ಗೌರವ ಕಳೆದುಕೊಳ್ಳುತ್ತಿರುವ ‘ಗೌಡಾ’ಗಳು

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ27 April 2026 1:56 PM IST
share
ಗೌರವ ಕಳೆದುಕೊಳ್ಳುತ್ತಿರುವ ‘ಗೌಡಾ’ಗಳು

ವಿಶ್ವವಿದ್ಯಾನಿಲಯಗಳು ನೀಡುವ ಗೌರವ ಡಾಕ್ಟರೇಟ್ ಬಗ್ಗೆ ರಾಜ್ಯದ ಎಲ್ಲ ವಿವಿಗಳಿಗೆ ಏಕರೂಪದ ಮಾರ್ಗಸೂಚಿ ಅಗತ್ಯವಿದೆ. ಈ ಬಗ್ಗೆ ಪರಿಶೀಲನೆ ಮಾಡಲು ತಜ್ಞರ ಸಮಿತಿಯೊಂದನ್ನು ರಚಿಸುವುದಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಹೇಳಿರುವುದು ಸೂಕ್ತವಾಗಿದೆ. ಈಗ ಗೌರವ ಡಾಕ್ಟರೇಟ್‌ಗಳಿಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳುವ ಅಧಿಕಾರ ರಾಜ್ಯಪಾಲರು ಹಾಗೂ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯೂ ಆದ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಇದೆ. ಅವರು ಇತ್ತ ಗಮನಿಸಬೇಕು.

ಈಗ ಊರಿಗೊಂದು ವಿಶ್ವವಿದ್ಯಾನಿಲಯಗಳು ತಲೆ ಎತ್ತಿವೆ. ಆದರೆ ಅವುಗಳನ್ನು ಆರಂಭಿಸಲು ಯಾವ ಮಾನದಂಡವನ್ನು ಅನುಸರಿಸಲಾಯಿತೆಂಬುದು ಅನುಮತಿ ನೀಡಿದವರಿಗೂ ಸ್ಪಷ್ಟವಿಲ್ಲ. ಇವುಗಳಿಂದ ಎಲ್ಲ ಭಾಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಿದ್ದರೆ ಅವುಗಳ ಆರಂಭಕ್ಕೆ ಯಾವ ಅಭ್ಯಂತರವೂ ಇಲ್ಲ. ಆದರೆ ಇವುಗಳಿಂದಾಗಿ ಈಗ ಅಸ್ತಿತ್ವದಲ್ಲಿರುವ ಯುನಿವರ್ಸಿಟಿಗಳ ಕೆಲವು ವಿಭಾಗಗಳಿಗೆ ವಿದ್ಯಾರ್ಥಿಗಳ ಕೊರತೆಯುಂಟಾಗಿ ಅವುಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಅದೇನೇ ಇರಲಿ ಅವುಗಳಿಂದ ಅಂದರೆ ಹೊಸ ವಿವಿಗಳಿಂದ ಉಳಿದುದೇನೇ ಆಗಲಿ, ಆಗದಿರಲಿ ಒಂದಂತೂ ಆಗಿದೆ. ಕಂಡ ಕಂಡವರಿಗೆಲ್ಲ ಮನ ಬಂದಂತೆ ಗೌರವ ಡಾಕ್ಟರೇಟ್ ಕೊಡುವುದು ಧಾರಾಳವಾಗಿ ನಡೆದಿದೆ. ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿಗೂ ಅದೇ ಸ್ಥಿತಿ ಬಂದಿದೆ.

ಗೌರವ ಡಾಕ್ಟರೇಟ್ ಕೊಡಲು ಅದರದೇ ಆದ ಶೈಕ್ಷಣಿಕ ಮಾನದಂಡವಿದೆ. ನಿಜವಾದ ಪ್ರತಿಭೆ, ಸಾಧನೆಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಿ ಅಭ್ಯಂತರವಿಲ್ಲ. ಆದರೆ ಈಗ ಅರ್ಹತೆಯ ಮಾನದಂಡವನ್ನು ಆಚೆಗಿಟ್ಟು ಸ್ವಾರ್ಥ ಸಾಧನೆಗಾಗಿ, ಓಲೈಕೆಗಾಗಿ ಇವುಗಳನ್ನು ಬೇಕಾಬಿಟ್ಟಿಯಾಗಿ ನೀಡಲಾಗುತ್ತದೆ. ರಿಯಲ್ ಎಸ್ಟೇಟ್ ದಂಧೆಕೋರರು, ಸಕ್ಕರೆ ಕಾರ್ಖಾನೆಗಳ ಮಾಲಕರು, ಗಣಿ ಖದೀಮರು, ಮಠಾಧಿಪತಿಗಳು, ಪ್ರಭಾವಿ ರಾಜಕಾರಣಿಗಳು ‘ಗೌಡಾ’ ಪಡೆಯುತ್ತಿದ್ದಾರೆ. ಉತ್ತಮ ಸಾಧಕರಿಗೆ ಕೊಟ್ಟಿಲ್ಲವೆಂದಲ್ಲ, ಅಂಥ ಒಬ್ಬಿಬ್ಬರಿಗೆ ಕೊಟ್ಟು ಉಳಿದವುಗಳನ್ನು ತಮಗೆ ಬೇಕಾದವರಿಗೆ ನೀಡಲಾಗುತ್ತದೆ.ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಕೆಲ ವರ್ಷಗಳ ಹಿಂದೆ ಯಾವುದೇ ಅರ್ಹತೆ ಇಲ್ಲದ ಸಕ್ಕರೆ ಕಾರ್ಖಾನೆ ಮಾಲಕರಿಗೆ ನಾಡೋಜ ಪ್ರಶಸ್ತಿ ನೀಡಿತು. ಆತ ವೇದಿಕೆಯ ಮೇಲೆ ನಿಂತು ‘ವಿಕ್ಟರಿ’ ಸಂಕೇತವಾಗಿ ಬೆರಳೆತ್ತಿ ತೋರಿಸಿ ಗೌಡಾ ಹೊಡೆದೇ ಬಿಟ್ಟೆ ಎಂದು ಸೂಚ್ಯವಾಗಿ ಹೇಳಿದರು. ಈ ಬಾರಿ ಅದೇ ಸಕ್ಕರೆ ಕಾರ್ಖಾನೆ ಮಾಲಕನ ಪತ್ನಿಗೆ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವೊಂದು ಗೌರವ ಡಾಕ್ಟರೇಟ್ ನೀಡಿದೆ.

ಕರ್ನಾಟಕದ ಮುಕ್ತ (ಕೆಎಸ್‌ಒಯು) ಕುಲಪತಿ ಏಕಪಕ್ಷೀಯವಾಗಿ ಎಂಟು ಮಂದಿಗೆ ಗೌರವ ಡಾಕ್ಟರೇಟ್ ನೀಡಲು ಪಟ್ಟಿಯನ್ನು ಅಂತಿಮಗೊಳಿಸಿದರು. ಆದರೆ ಇದರಿಂದ ರೋಸಿ ಹೋದ ನಿರ್ವಹಣಾ ಮಂಡಳಿಯ ಕೆಲವು ಸದಸ್ಯರು ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಿದರು. ಸಿಂಡಿಕೇಟ್ ಅನ್ನು ಕಡೆಗಣಿಸಿ ಹೆಚ್ಚುವರಿ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಕುಲಾಧಿಪತಿಗಳಿಗೆ ಕಳಿಸಿದ ಪ್ರಸಂಗ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯಿತು. ಹೀಗಾಗಿ ಬಹುತೇಕ ವಿಶ್ವವಿದ್ಯಾನಿಲಯಗಳು ಈಗ ‘ಡಾಕ್ಟರೇಟ್’ ಮಾರಾಟ ಮಾಡುವ ಅಂಗಡಿಗಳಾಗಿವೆ ಅಂದರೆ ಅತಿಶಯೋಕ್ತಿಯಲ್ಲ.

ಮೈಸೂರು ವಿಶ್ವವಿದ್ಯಾನಿಲಯ ಹಿಂದೆ ವರನಟ ರಾಜ್‌ಕುಮಾರ್ ಅವರಿಗೆ ‘ಗೌರವ ಡಾಕ್ಟರೇಟ್’ ನೀಡಿತು. ಅದರಿಂದ ವಿಶ್ವವಿದ್ಯಾನಿಲಯದ ಘನತೆ ಹೆಚ್ಚಾಯಿತು. ಇಡೀ ನಾಡು ಹೆಮ್ಮೆ ಪಟ್ಟುಕೊಂಡಿತು. ಆದರೆ ರಾಜ್‌ಕುಮಾರ್ ಅವರು ತಮ್ಮ ಹೆಸರಿನ ಮೊದಲಿಗೆ ‘ಡಾಕ್ಟರ್’ ಎಂದು ಎಂದೂ ಬರೆದುಕೊಳ್ಳಲಿಲ್ಲ. ಆದರೆ ಈಗ ಪ್ರಭಾವಿ ರಾಜಕಾರಣಿಗಳು, ಗಣಿ ಉದ್ಯಮಿಗಳು, ಸಿನೆಮಾ ನಟ, ನಟಿಯರು, ಸಕ್ಕರೆ ಕಾರ್ಖಾನೆಗಳ ಮಾಲಕರು ಮೊದಲಾದವರಿಗೆ ಯಾವುದೇ ವಿವೇಚನೆ ಮತ್ತು ಮಾನದಂಡವಿಲ್ಲದೇ ಗೌಡಾ ನೀಡುವ ಚಾಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಹಾವೇರಿ ವಿಶ್ವವಿದ್ಯಾನಿಲಯ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾದಾಗ ಬೊಮ್ಮಾಯಿಯವರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ಗೌರವ ಡಾಕ್ಟರೇಟ್ ಎಂಬುದನ್ನು ನಿರ್ದಿಷ್ಟ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಸಾಧಕರ ಜೀವಮಾನ ಸಾಧನೆಯನ್ನು ಗೌರವಿಸಲು ನೀಡಿದರೆ ಯಾವ ತಕರಾರೂ ಇಲ್ಲ ಎಂದು ಹೇಳಿದ ಬಸವರಾಜ ಬೊಮ್ಮಾಯಿಯವರು ಸಾರ್ವಜನಿಕ ಸೇವೆ ಮಾಡಿದವರಿಗೆ ಇದನ್ನು ನೀಡುವುದು ಸರಿಯಲ್ಲ ಎಂದು ಹೇಳಿದರು. ಕಳೆದ ವರ್ಷ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು) ತಮಗೆ ಗೌರವ ಡಾಕ್ಟರೇಟ್ ನೀಡಲು ಮುಂದಾದಾಗ ಅದನ್ನು ಸಚಿವ ಸತೀಶ್ ಜಾರಕಿಹೊಳಿಯವರು ನಿರಾಕರಿಸಿದ್ದರು. ಬಸವರಾಜ ಬೊಮ್ಮಾಯಿ ಮತ್ತು ಸತೀಶ್ ಜಾರಕಿಹೊಳಿ ಅವರ ಈ ಪ್ರಾಮಾಣಿಕ ನಿಲುವು ಇತರ ರಾಜಕಾರಣಿಗಳಿಗೆ ಮಾದರಿಯಾಗಬೇಕಾಗಿದೆ. ಅಷ್ಟೇ ಅಲ್ಲ ವಿಶ್ವವಿದ್ಯಾನಿಲಯಗಳಿಗೆ ಕೂಡ ಪಾಠ ಆಗಬೇಕಾಗಿದೆ.

ಅತ್ಯಂತ ವಿಷಾದದ ಸಂಗತಿಯೆಂದರೆ ರಾಜ್ಯದ ಬಹುತೇಕ ವಿಶ್ವವಿದ್ಯಾನಿಲಯಗಳು ಇತ್ತೀಚಿನ ವರ್ಷಗಳಲ್ಲಿ ಮಾಡಬೇಕಾದ ಕೆಲಸ ಬಿಟ್ಟು ಗೌರವ ಡಾಕ್ಟರೇಟ್‌ಗಳನ್ನು ಬೇಕಾಬಿಟ್ಟಿಯಾಗಿ ಹಂಚುವ ವ್ಯಾಪಾರ ಕೇಂದ್ರಗಳಾಗಿವೆ. ಜ್ಞಾನ ಕೇಂದ್ರಗಳಾದ ವಿಶ್ವವಿದ್ಯಾನಿಲಯಗಳು ಓಲೈಕೆ ಮತ್ತು ಚಮಚಾಗಿರಿ ಮಾಡುತ್ತಿವೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯ್ದೆಯ ಪ್ರಕಾರ ಗೌರವ ಡಾಕ್ಟರೇಟ್‌ನಂಥ ಪದವಿಗಳು ಅಸಾಧಾರಣ ಸನ್ನಿವೇಶಗಳಲ್ಲಿ ಅಸಾಮಾನ್ಯ ಸಾಧನೆಗಾಗಿ ಅಥವಾ ಗಮನಾರ್ಹ ಸೇವೆಗಾಗಿ ನೀಡಬೇಕಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಥ ಬಹುತೇಕ ಆಯ್ಕೆಗಳು ವಿಶ್ವವಿದ್ಯಾನಿಲಯ ಕಾಯ್ದೆಗೆ ವ್ಯತಿರಿಕ್ತವಾಗಿ ಹಾಗೂ ವಿಶ್ವವಿದ್ಯಾನಿಲಯಗಳ ಉನ್ನತ ಪರಂಪರೆಗೆ ಅಪಚಾರ ಮಾಡುವ ರೀತಿಯಲ್ಲಿ ನಡೆಯುತ್ತಿವೆ.

ವಿಶ್ವವಿದ್ಯಾನಿಲಯಗಳು ನೀಡುವ ಗೌರವ ಡಾಕ್ಟರೇಟ್ ಬಗ್ಗೆ ರಾಜ್ಯದ ಎಲ್ಲ ವಿವಿಗಳಿಗೆ ಏಕರೂಪದ ಮಾರ್ಗಸೂಚಿ ಅಗತ್ಯವಿದೆ. ಈ ಬಗ್ಗೆ ಪರಿಶೀಲನೆ ಮಾಡಲು ತಜ್ಞರ ಸಮಿತಿಯೊಂದನ್ನು ರಚಿಸುವುದಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಹೇಳಿರುವುದು ಸೂಕ್ತವಾಗಿದೆ. ಈಗ ಗೌರವ ಡಾಕ್ಟರೇಟ್‌ಗಳಿಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳುವ ಅಧಿಕಾರ ರಾಜ್ಯಪಾಲರು ಹಾಗೂ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯೂ ಆದ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಇದೆ. ಅವರು ಇತ್ತ ಗಮನಿಸಬೇಕು.

ಈ ಗೌರವ ಡಾಕ್ಟರೇಟ್ ಪದವಿಗಳನ್ನು ಮಾರಾಟ ಮಾಡುವ ನಕಲಿ ವಿಶ್ವವಿದ್ಯಾನಿಲಯಗಳೂ ಇವೆ. ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಗೌರವ ಡಾಕ್ಟರೇಟ್ ಪದವಿಯ ಮಾರಾಟದ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಈ ಗೌರವ ಡಾಕ್ಟರೇಟ್ ಪದವಿಯನ್ನು ಮಾರಾಟ ಮಾಡುವ ನಕಲಿ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿ, ಪ್ರೊಫೆಸರ್, ಡೀನ್ ಸಂಶೋಧನೆ ಮಾಡುವವರು ಯಾರೂ ಇರುವುದಿಲ್ಲ. ಕುಲಪತಿ, ಶಿಕ್ಷಕರು, ವಿದ್ಯಾರ್ಥಿಗಳು ಸಂಶೋಧಕರೇ ಇಲ್ಲದ ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಆಂಡ್ ಎಜುಕೇಶನ್ ಸಂಸ್ಥೆ, ವರ್ಚುವಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹೆಸರಿನ ಫೇಕ್ ವಿಶ್ವವಿದ್ಯಾನಿಲಯಗಳು ನಕಲಿ ಗೌಡಾ ಪದವಿಯನ್ನು ನೀಡುತ್ತವೆ. ಇದು ಬಹುದೊಡ್ಡ ಮೊತ್ತದ ಹಣಕಾಸಿನ ದಂಧೆಯಾಗಿದೆ.

ಈ ಗೌರವ ಡಾಕ್ಟರೇಟ್‌ಗಳ ಬಾನಗಡಿ ಸರಕಾರಕ್ಕೆ ಗೊತ್ತಿಲ್ಲದಿಲ್ಲ. ಗೊತ್ತಿರುವುದರಿಂದಲೇ ಗೌರವ ಡಾಕ್ಟರೇಟ್ ಪಡೆದವರು ತಮ್ಮ ತಮ್ಮ ಹೆಸರುಗಳ ಮುಂದೆ ‘ಡಾ’ ಪದವನ್ನು ಬಳಸುವುದನ್ನು ನಿರ್ಬಂಧಿಸಿ ರಾಜ್ಯ ಸರಕಾರ ಆದೇಶ ಮಾಡಿದೆ. ಕೇವಲ ವೈದ್ಯಕೀಯ ಪದವಿ, ಸ್ನಾತಕೋತ್ತರ ಪದವಿ, ಸರ್ಟಿಫಿಕೇಟ್‌ಗಳನ್ನು ಪಡೆದು ಪಿಎಚ್‌ಡಿ ಮಾಡಿದವರು ಮಾತ್ರ ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ಬರೆಯಬಹುದು. ಆದರೆ ಗೌರವ ಡಾಕ್ಟರೇಟ್ ಪಡೆದವರು ಡಾಕ್ಟರ್ ಪದವನ್ನು ಬಳಸ ಕೂಡದು ಎಂದು ಸರಕಾರ ತಿಳಿಸಿದೆ. ಆದರೆ ಇಷ್ಟು ಸಾಲದು. ಕಂಡ ಕಂಡವರಿಗೆಲ್ಲ ಗೌರವ ಡಾಕ್ಟರೇಟ್ ಪದವಿ ನೀಡುವುದಕ್ಕೆ ಕಡಿವಾಣ ಹಾಕಬೇಕಾಗಿದೆ. ಗೌರವ ಡಾಕ್ಟರೇಟ್ ಅಲ್ಲದೆ ಡಾಕ್ಟರೇಟ್ ಪದವಿಗಳನ್ನು ಮಾರಾಟ ಮಾಡುವುದು ಬಹುದೊಡ್ಡ ದಂಧೆಯಾಗಿದೆ. ಇವುಗಳ ವ್ಯಾಪಾರಕ್ಕಾಗಿಯೇ ದೇಶದ ಅನೇಕ ಕಡೆ ಹೊಸ ವಿಶ್ವವಿದ್ಯಾನಿಲಯಗಳು ತಲೆ ಎತ್ತಿವೆ. ಈ ರೀತಿ ಪದವಿ ಪಡೆದವರು ಅಕಸ್ಮಾತ್ ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಕರಾದರೆ ವಿದ್ಯಾರ್ಥಿಗಳ ಗತಿ ಏನು? ಇನ್ನು ಮುಂದಾದರೂ ಅಕ್ರಮ ವ್ಯವಹಾರಕ್ಕೆ ಸರಕಾರ ಕಡಿವಾಣ ಹಾಕಬೇಕು. ಸಮಾಜ ಸೇವೆಯ ಹೆಸರಿನಲ್ಲಿ ಕೆಲವು ವಿಶ್ವವಿದ್ಯಾನಿಲಯಗಳು ಕೆಲವು ಉದ್ಯಮಿಗಳಿಗೆ, ಗುತ್ತಿಗೆದಾರರಿಗೆ, ಮಠಾಧೀಶರಿಗೆ ಹಾಗೂ ಇತರರಿಗೆ ಗೌರವ ಡಾಕ್ಟರೇಟ್ ನೀಡುತ್ತವೆ. ಯಾವುದೇ ಉದ್ಯಮವಾಗಲಿ, ರಿಯಲ್ ಎಸ್ಟೇಟ್ ದಂಧೆಯಾಗಲಿ, ಮಠ, ಪೀಠಗಳಾಗಲಿ ಅವು ಮಾಡುತ್ತಿರುವುದು ಸಮಾಜ ಸೇವೆಯಲ್ಲ. ಬಂಡವಾಳ ಹೂಡಿಕೆ ಮಾಡಿ ಅದರ ಐದಾರು ಪಟ್ಟು ಗಳಿಸುವುದು ಸಮಾಜಸೇವೆ ಎನಿಸಿಕೊಳ್ಳುವುದಿಲ್ಲ. ಇಂಥವರಿಗೆ ಗೌರವ ಡಾಕ್ಟರೇಟ್ ನೀಡುವುದರಿಂದ ವಿಶ್ವವಿದ್ಯಾನಿಲಯದ ಘನತೆ ಮಣ್ಣು ಪಾಲಾಗುತ್ತದೆ. ವರನಟ ರಾಜ್‌ಕುಮಾರ್ ಅಂಥವರಿಗೆ ಗೌರವ ಡಾಕ್ಟರೇಟ್ ನೀಡುವುದರಿಂದ ವಿಶ್ವವಿದ್ಯಾನಿಲಯದ ಘನತೆ ಹೆಚ್ಚುತ್ತದೆ. ಅಪಾತ್ರರಿಗೆ ನೀಡುವುದರಿಂದ ಘನತೆ ಕುಸಿಯುತ್ತದೆ. ಅನರ್ಹರಿಗೆ ಗೌರವ ಡಾಕ್ಟರೇಟ್ ಕೊಡುವ ವಿಶ್ವವಿದ್ಯಾನಿಲಯಗಳಿಗೆ ವಿವೇಚನೆ ಎಂಬುದಿರಬೇಕು. ಕೊಡುವವರಿಗೆ ಮಾತ್ರವಲ್ಲ ಅದನ್ನು ಸ್ವೀಕರಿಸುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದಕ್ಕೆ ತಾನು ಅರ್ಹನೆ? ಎಂಬ ಪ್ರಶ್ನೆ ಪದೇ ಪದೇ ಎದುರಾಗಬೇಕು. ಅಂಥ ಪದವಿ ಮನೆ ಬಾಗಿಲಿಗೆ ಬಂದರೆ ಮುಲಾಜಿಲ್ಲದೇ ತಿರಸ್ಕರಿಸಬೇಕು. ಆದರೆ ವಿವೇಚನೆ ಮತ್ತು ಮಾನ ಮರ್ಯಾದೆಗಳು ಅರ್ಥ ಕಳೆದುಕೊಂಡ ಈ ದಿನಗಳಲ್ಲಿ ಫಲಾನುಭವಿಗಳಿಂದ ಇದನ್ನು ನಿರೀಕ್ಷಿಸಲು ಆಗುವುದಿಲ್ಲ. ಮಾರುಕಟ್ಟೆ ಆರ್ಥಿಕತೆಯ ಇಂದಿನ ದಿನಗಳಲ್ಲಿ ಉನ್ನತ ಮೌಲ್ಯಗಳು ಕುಸಿದು ಪಾತಾಳಕ್ಕೆ ಹೋಗಿರುವಾಗ ಪದವಿಗಳು ಕೂಡ ಮಾರುಕಟ್ಟೆಯ ಸರಕಾಗುತ್ತವೆ. ಇಂಥದ್ದನ್ನು ಸಣ್ಣಪುಟ್ಟ ಚಿಕಿತ್ಸೆಯಿಂದ ನಿವಾರಿಸಲು ಆಗುವುದಿಲ್ಲ. ಇದಕ್ಕೆ ಒಂದೇ ಪರಿಹಾರವೆಂದರೆ ಸಮಾಜ ಬದಲಾವಣೆಗಾಗಿ ಬಹು ವ್ಯಾಪಕವಾದ, ಸಮಗ್ರ ಜನ ಹೋರಾಟ ನಡೆಯಬೇಕಾಗಿದೆ.

Tags

respect
share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X