Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಸಂವಿಧಾನ ಎಂಬ ಬಹುತ್ವ ಭಾರತದ ರಕ್ಷಾ ಕವಚ

ಸಂವಿಧಾನ ಎಂಬ ಬಹುತ್ವ ಭಾರತದ ರಕ್ಷಾ ಕವಚ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ26 Jan 2026 11:42 AM IST
share
ಸಂವಿಧಾನ ಎಂಬ ಬಹುತ್ವ ಭಾರತದ ರಕ್ಷಾ ಕವಚ

ಉಮರ್ ಖಾಲಿದ್ ಅವರಂಥ ಹೋರಾಟಗಾರರು ಹಾಗೂ ಚಿಂತಕರನ್ನು ಬಂದಿಖಾನೆಯಲ್ಲಿ ಇಟ್ಟು ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಸುಕುತ್ತಿರುವ ಭಾರತದ ಆಳುವ ವರ್ಗ ಸರ್ವಾಧಿಕಾರಿ ವ್ಯವಸ್ಥೆಯತ್ತ ದಾಪುಗಾಲಿಡುತ್ತ ಸಾಗಿದೆ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ತನ್ನ ಏಜೆಂಟರಾದ ರಾಜ್ಯಪಾಲರ ಮೂಲಕ ನಿತ್ಯ ಕಿರುಕುಳ ಕೊಡುವ ಇಂಥ ಕಡು ಕಷ್ಟದ ಕಾಲ ಘಟ್ಟದಲ್ಲಿ ಪ್ರಜಾರಾಜ್ಯೋತ್ಸವ ಮತ್ತೆ ಬಂದಿದೆ. ಉಳಿದ ದೇಶಗಳಂತೆ ವ್ಯವಸ್ಥೆಯ ಹೊಡೆತಕ್ಕೆ ಅಲುಗಾಡುವ ಜನತಂತ್ರ ನಮ್ಮದಲ್ಲ. ಮತ ಧರ್ಮದ ಆಧಾರದಲ್ಲಿ ರಾಷ್ಟ್ರವನ್ನು ಕಟ್ಟುವ ಸಿದ್ಧಾಂತವನ್ನು ಹೊಂದಿದವರು ಅಧಿಕಾರದಲ್ಲಿ ಇದ್ದರೂ ಪ್ರಜಾಪ್ರಭುತ್ವ ಭದ್ರವಾಗಿದೆ.ಇದನ್ನು ಬದಲಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಬಾಬಾಸಾಹೇಬರ ಸಂವಿಧಾನದ ರಕ್ಷಾ ಕವಚವಿದೆ.ಅಂತಲೇ ವಿದೇಶಾಂಗ ನೀತಿ ಸೇರಿದಂತೆ ಕೆಲವು ಮೂಲಭೂತ ವಿಚಾರಗಳಲ್ಲಿ ಬದಲಾವಣೆ ಮಾಡಲು ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಪ್ರತೀ ವರ್ಷ ಆಚರಿಸುವ ಈ ಜನವರಿ 26 ಸಾಮಾನ್ಯ ದಿನವಲ್ಲ. ಆಗಸ್ಟ್ 15 ರಂತೆ ಭಾರತದ ಪಾಲಿಗೆ ಇದು ಅತ್ಯಂತ ಮಹತ್ವದ ದಿನ.1947ರ ಆಗಸ್ಟ್ 15 ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ದಿನ.ಅದೇ ರೀತಿ 1950ನೇ ಇಸವಿ ಜನವರಿ 26ರಂದು ನಾವು ಒಪ್ಪಿಕೊಂಡಿರುವ ಸಂವಿಧಾನ ಜಾರಿಗೆ ಬಂದ ದಿನ.ಆ ಸಂವಿಧಾನವೇ ಪ್ರಜಾಪ್ರಭುತ್ವ ಭಾರತದ ನೈಜ ಪವಿತ್ರ ಗ್ರಂಥವಾಗಿದೆ.

ಆದರೂ ಈ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಇದೇ ಸಂವಿಧಾನವನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಅಧಿಕಾರ ಕೈಗೆ ತೆಗೆದುಕೊಂಡು ಹನ್ನೊಂದು ವರ್ಷಗಳಾದವು. ಅವರಿಂದಲೇ ಸಂವಿಧಾನಕ್ಕೆ ಗಂಡಾಂತರ ಎದುರಾಗುತ್ತಲೇ ಇದೆ.ಸ್ವಾತಂತ್ರ್ಯ ಬಂದ ನಂತರ ನಮ್ಮನ್ನು ಆಳಿದ ಸರಕಾರಗಳು ಹಾಗೂ ಪ್ರಜಾಪ್ರಭುತ್ವವಾದಿ ಶಕ್ತಿಗಳು ಹೊಸ ಪೀಳಿಗೆಯಲ್ಲಿ ಸಂವಿಧಾನದ ಅರಿವು ಮೂಡಿಸಿದ್ದರೆ ದೇಶ ಇಂಥ ಸಂಕಟದ ಸಂದರ್ಭ ಎದುರಿಸುವ ಪರಿಸ್ಥಿತಿ ಬರುತ್ತಿರಲಿಲ್ಲ.

ಈ ಸಂವಿಧಾನ ಬರುವ ಮುಂಚೆ ಈ ಭಾರತ ಹೇಗಿತ್ತು ಎಂದು ವಿವರಿಸಿ ಹೇಳಬೇಕಾಗಿಲ್ಲ.ಹಿಂದೆ ಇಲ್ಲಿ ಶ್ರೇಣೀಕೃತ ಜಾತಿ ಪದ್ಧತಿ ಇತ್ತು.ಅಸ್ಪಶ್ಯತೆಯ ನಗ್ನ ತಾಂಡವ ನೃತ್ಯವಿತ್ತು.ತುಳಿಯುವ ವರ್ಗದ ಹಿತಾಸಕ್ತಿಗಳನ್ನು ರಕ್ಷಿಸುವ ನ್ಯಾಯ ವ್ಯವಸ್ಥೆ ಇತ್ತು.ಹೆಣ್ಣು ಮಕ್ಕಳಿಗೆ ಸಮಾನತೆ ಇರಲಿಲ್ಲ. ಹೀಗೆ ಮನುಷ್ಯರ ನಡುವೆ ತಾರತಮ್ಯಗಳಿಂದ ಕೂಡಿದ ಸಮಾಜ ಇಲ್ಲಿತ್ತು.ಇದನ್ನು ಪ್ರತಿರೋಧಿಸುವ ಸ್ವಾತಂತ್ರ್ಯವೂ ಇರಲಿಲ್ಲ. ಈಗ ಇದೆಲ್ಲ ಸಂಪೂರ್ಣ ಮಾಯವಾಗಿದೆಯೆಂದಲ್ಲ. ಆದರೆ ಧ್ವನಿ ಕಳೆದುಕೊಂಡ ಸಮುದಾಯಗಳಿಗೆ ಸಂವಿಧಾನ ರಕ್ಷಾ ಕವಚವಾಗಿದೆ ಎಂಬುದು ನಿಜ.

ಸಂವಿಧಾನ ಬಂದ ನಂತರ ಅಸ್ಪಶ್ಯತೆಯ ಆಚರಣೆ ಅಪರಾಧವಾಗಿದೆ.ವರದಕ್ಷಿಣೆ ನಿರ್ಬಂಧಿಸಲ್ಪಟ್ಟಿದೆ.ಶತಮಾನಗಳಿಂದ ದುಡಿದು ದೇಶ ಕಟ್ಟಿದವರ ರಕ್ಷಣೆಗೆ ಮೀಸಲು ವ್ಯವಸ್ಥೆ ಜಾರಿಗೆ ಬಂದಿದೆ.ಅನ್ಯಾಯವನ್ನು ಪ್ರತಿಭಟಿಸುವ ಅವಕಾಶ ದೊರಕಿದೆ. ಆದರೆ ಈಗ ನಮ್ಮೆದುರು ಹೊಸ ಸವಾಲು ಎದುರಾಗಿದೆ.

ನಮ್ಮ ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನ ಒಂದು ದೇಶವಾಗಿರಲಿಲ್ಲ.ಇಲ್ಲಿ ಊರಿಗೊಬ್ಬ ರಾಜ,ಪ್ರದೇಶಕ್ಕೊಬ್ಬ ಸಾಮ್ರಾಟ,ಚಕ್ರವರ್ತಿ ಗಳು ತುಂಬಿದ್ದರು.ಸ್ವಾತಂತ್ರ್ಯ ಬಂದಾಗ ಇವರನ್ನು ದೂರವಿಟ್ಟು ಸಮಸ್ತ ಭಾರತೀಯರ ಕೈಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ರಾಷ್ಟ್ರೀಯ ಆಂದೋಲನದ ಮುಖ್ಯ ಉದ್ದೇಶವಾಗಿತ್ತು.

ಸಮಸ್ತ ಭಾರತೀಯರೆಂದರೆ ಯಾವುದೇ ಒಂದು ಧರ್ಮ, ಇಲ್ಲವೇ ಜಾತಿಗೆ ಸೇರಿದವರಲ್ಲ.ಶತಮಾನಗಳಿಂದ ಈ ನೆಲದಲ್ಲಿ ಒಟ್ಟಿಗೆ ಬಾಳಿದ,

ಒಂದಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ ಎಲ್ಲ ಸಮುದಾಯಗಳ ಜನರೂ ಭಾರತೀಯರು ಇದರಲ್ಲಿ ಹಿಂದೂ, ಮುಸ್ಲಿಂ, ಜೈನ,ಸಿಖ್ ಕ್ರೈಸ್ತ, ಎಲ್ಲರೂ ಇದ್ದಾರೆ.ಅಂತಲೇ ಇದು ಹಿಂದೂ ರಾಷ್ಟ್ರವಲ್ಲ, ಮುಸ್ಲಿಮ್ ರಾಷ್ಟ್ರವಲ್ಲ, ಕ್ರೈಸ್ತ ರಾಷ್ಟ್ರವಲ್ಲ ,ಇದು ಇವರೆಲ್ಲರನ್ನು ಒಳಗೊಂಡ ಧರ್ಮ ನಿರಪೇಕ್ಷ ಜಾತ್ಯತೀತ ರಾಷ್ಟ್ರ ಎಂದು ಒಪ್ಪಿಕೊಂಡೆವು.ಇದಕ್ಕೆ ಪೂರಕವಾದ ಸಂವಿಧಾನವನ್ನು ಬಾಬಾ ಸಾಹೇಬರು ನಮಗೆ ನೀಡಿದರು.ಅದೇ ಸಂವಿಧಾನ ಭಾರತಕ್ಕೆ ಬೆಳಕು ನೀಡುತ್ತಿದೆ.

ಭಾರತದ ಸಂವಿಧಾನವನ್ನು ರೂಪಿಸಲು 1946ರ ಜುಲೈ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸಂವಿಧಾನ ರಚನಾ ಸಭೆಗೆ 299 ಜನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಭಿನ್ನಾಭಿಪ್ರಾಯ ಕಾರಣ ಕೆಲ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು.1946 ಡಿಸೆಂಬರ್ 6 ರಂದು ಮೊದಲ ಸಭೆ ನಡೆದು ಸಂವಿಧಾನ ರಚನೆಯ ಪ್ರಕ್ರಿಯೆ ಆರಂಭವಾಯಿತು. ಒಂದು ವರ್ಷ ಎರಡು ತಿಂಗಳ ಕಾಲಾವಧಿಯಲ್ಲಿ ಹಲವಾರು ಬಾರಿ ಸಭೆ ಸೇರಿ ಸಂವಿಧಾನದ ಮೊದಲ ಕರಡನ್ನು 1948ರ ಫೆಬ್ರವರಿ 21ರಂದು ಭಾರತದ ಜನತೆಯ ಮುಂದೆ ಚರ್ಚೆಗೆ ಇಡಲಾಯಿತು.ಜನತೆ ಇದಕ್ಕೆ 7,635 ತಿದ್ದುಪಡಿಗಳನ್ನು ಸೂಚಿಸಿದರು.ಈ ತಿದ್ದುಪಡಿಗಳನ್ನು ಪರಿಶೀಲನೆ ಮಾಡಿ ಸೂಕ್ತವಾದವುಗಳನ್ನು ಒಪ್ಪಿ 1949 ನವೆಂಬರ್ 26 ರಂದು ಅಂತಿಮ ಕರಡನ್ನು ಭಾರತ ಸರಕಾರಕ್ಕೆ ಸಲ್ಲಿಸಲಾಯಿತು. ಮುಂದೆ 1950 ಜನವರಿ 26 ರಂದು ಈ ಸಂವಿಧಾನ ಜಾರಿಗೆ ಬಂತು.

ಸಂವಿಧಾನ ರಚನೆಯಲ್ಲಿ ಕೆಲವೇ ಕೆಲವು ಸದಸ್ಯರ ಕೊಡುಗೆ ಅಮೂಲ್ಯವಾಗಿದೆ.ಅದರಲ್ಲೂ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಬಾಬಾಸಾಹೇಬ ಅಂಬೇಡ್ಕರ್ ಅವರು ದಿನಕ್ಕೆ ಹದಿನೆಂಟು ತಾಸು ಕೆಲಸ ಮಾಡಿ ನಮಗೊಂದು ಸಂವಿಧಾನವನ್ನು ನೀಡಿದರು.ಸಂವಿಧಾನ ರಚನೆಯಲ್ಲಿ ಬಾಬಾಸಾಹೇಬರ ಕೊಡುಗೆಯನ್ನು ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದರು.ಇದು ವಾಸ್ತವ ಸಂಗತಿಯಾದರೂ ಮನುವಾದಿ ಶಕ್ತಿಗಳು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವನ್ನು ನಗಣ್ಯಗೊಳಿಸಲು ಯತ್ನಿಸುತ್ತಲೇ ಇವೆ.

ಭಾರತದ ಸಂವಿಧಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ಹೆಸರಾಗಿದೆ.ಅತ್ಯಂತ ವೈವಿಧ್ಯಪೂರ್ಣವಾದ ಬಹುಧರ್ಮೀಯ,ಬಹುಜನಾಂಗೀಯ,ಬಹುಭಾಷಿಕ,ಬಹು ಸಾಂಸ್ಕೃತಿಕ ಹಾಗೂ ಬಹು ರಾಷ್ಟ್ರೀಯತೆಗಳನ್ನು ಒಳಗೊಂಡ ಭೂ ಪ್ರದೇಶಕ್ಕೆ ಅತ್ಯಂತ ಸೂಕ್ತ ವಾದ ,ಎಲ್ಲ ಜನ ಸಮುದಾಯಗಳ ಜನರ ಭಾವನೆಗಳನ್ನು ಪ್ರತಿನಿಧಿಸುವ ಸಂವಿಧಾನವಿದು.ಶತಮಾನಗಳಿಂದ ಗೂಟಕ್ಕೆ ಕಟ್ಟಿದ ದನಗಳಂತೆ ನರಳಿ ನರಳಿ ಬದುಕಿದ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಬೆಳಕನ್ನು ನೀಡಿರುವ ಸಂವಿಧಾನವಿದು.

ಇಂಥ ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಅಧಿಕಾರದಲ್ಲಿರುವುದರಿಂದ ಈಗ ಅದಕ್ಕೆ ಅಪಾಯ ಎದುರಾಗಿದೆ.ಇದನ್ನು ಬುಡಮೇಲು ಮಾಡಿ ಮನುವಾದಿ, ಮನುವಾದಿ ರಾಷ್ಟ್ರ ನಿರ್ಮಿಸುವ ಮಸಲತ್ತು ನಡೆಯುತ್ತಿದೆ.ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುವ ಯತ್ನ ನಡೆದಿದೆ.ಸಂವಿಧಾನದ 19(1) (ಎ) ಎಲ್ಲಾ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ.ಸಂವಿಧಾನ ದತ್ತವಾದ ಈ ವಾಕ್ ಸ್ವಾತಂತ್ರ್ಯ ಇರುವಾಗಲೂ ಈಗಿನ ಕೇಂದ್ರ ಸರಕಾರವನ್ನು, ಪ್ರಧಾನಿಯನ್ನು ಟೀಕಿಸಿದರೆ ಅಪರಾಧ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ . ಲೇಖಕರು,ಕಲಾವಿದರು, ಚಿಂತಕರ ಬಾಯಿ ಮುಚ್ಚಿಸುವ ಸರ್ವಾಧಿಕಾರಿ ನೀತಿ ಸಂವಿಧಾನದ ಮೇಲೆ ಸವಾರಿ ಮಾಡುತ್ತಿದೆ.

ಸ್ವತಂತ್ರ ಭಾರತ ನಡೆಯಬೇಕಾಗಿರುವುದು ಸಂವಿಧಾನದ ಆಧಾರದಲ್ಲಿ.ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗಗಳು ಸಾಂವಿಧಾನಿಕವಾಗಿ ಕಾರ್ಯ ನಿರ್ವಹಿಸಬೇಕು.ಆದರೆ ಅದಕ್ಕೆ ಈಗ ಚ್ಯುತಿ ಬರುತ್ತಿದೆ.ಕ್ರಿಮಿನಲ್ ಮಾಫಿಯಾಗಳು ಕಾನೂನಿನ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿವೆ.ಸಂವಿಧಾನ ರಕ್ಷಣೆ ನೀಡಿದ್ದರೂ ಅಸ್ಪಶ್ಯರ ಮೇಲೆ ಪ್ರತೀ ದಿನ ಸರಾಸರಿ 28 ಕ್ಕೂ ಹೆಚ್ಚು ದೌರ್ಜನ್ಯಗಳು ನಡೆಯುತ್ತಿವೆ.ಪ್ರತಿದಿನ ಐವರು ಅಸ್ಪ್ರಶ್ಯ ರ ಮನೆಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ.ಪ್ರತಿವಾರ ಹನ್ನೊಂದು ಅಸ್ಪಶ್ಯರ ಹತ್ಯೆಯಾಗುತ್ತಿದೆ.ಮಹಿಳೆಯರ ಮೇಲೆ ಅತ್ಯಾಚಾರದ ಘಟನೆಗಳು ಹೆಚ್ಚಾಗುತ್ತಲೇ ಇವೆ.ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯ ವರದಿಯ ಪ್ರಕಾರ ಪ್ರತೀ 77 ನಿಮಿಷಗಳಗೆ ಒಬ್ಬ ಮಹಿಳೆ ಹಿಂಸೆಯಿಂದ ಅಸು ನೀಗುತ್ತಿದ್ದಾಳೆ.ಪ್ರತೀ 6 ತಾಸಿಗೆ ಒಬ್ಬ ವಿವಾಹಿತ ಮಹಿಳೆಯನ್ನು ಜೀವಂತ ಸುಟ್ಟು ಹಾಕಲಾಗುತ್ತಿದೆ.ದೇಶದಲ್ಲಿ ಸುಮಾರು 45 ಸಾವಿರ ಮಕ್ಕಳು ಪ್ರತಿವರ್ಷ ಕಾಣೆಯಾಗುತ್ತಿದ್ದಾರೆ. ನಕಲಿ ಎನ್‌ಕೌಂಟರ್‌ಗಳು,ಪೊಲೀಸ್ ಠಾಣೆಗಳಲ್ಲಿ ಸಂಶಯಾಸ್ಪದ ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.ಇವುಗಳನ್ನೆಲ್ಲ ಪ್ರಶ್ನಿಸಿ ಧ್ವನಿಯೆತ್ತಿದರೆ ಅಂಥವರನ್ನು ಅರ್ಬನ್ ನಕ್ಸಲ್ ಎಂದು ಕರೆದು ಜೈಲಿಗೆ ದಬ್ಬಲಾಗುತ್ತಿದೆ

ಧರ್ಮನಿರಪೇಕ್ಷತೆ ನಮ್ಮ ಸಂವಿಧಾನದ ಮೂಲತತ್ವವಾಗಿದ್ದರೂ ಅದರ ಮೇಲೆಯೇ ದಾಳಿ ನಡೆದಿದೆ.ಯಾರು ಏನನ್ನು ತಿನ್ನಬೇಕು,ಏನನ್ನು ತಿನ್ನಬಾರದು,ಯಾವ ಬಟ್ಟೆ ಧರಿಸಬೇಕು,ಯಾರನ್ನು ಪ್ರೀತಿಸಬೇಕು,ಯಾರನ್ನು ಮದುವೆಯಾಗಬೇಕು,ಯಾರೊಂದಿಗೆ ಯಾರು ಮಾತಾಡಬೇಕು, ಎಷ್ಟು ಮದುವೆಯಾಗಬೇಕು,ಎಷ್ಟು ಮಕ್ಕಳನ್ನು ಹಡೆಯಬೇಕು ಎಂಬ ಅತ್ಯಂತ ವೈಯಕ್ತಿಕ ವಿಷಯಗಳನ್ನು ತೀರ್ಮಾನಿಸುವ ದೊಣ್ಣೆ ನಾಯಕರು ಈ ದೇಶದಲ್ಲಿ ಹುಟ್ಟಿಕೊಂಡಿದ್ದಾರೆ.ಗೋ ರಕ್ಷಣೆ,ಮತಾಂತರದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಪ್ರತೀ ದಿನ ಹಲ್ಲೆ ಮಾಡುತ್ತ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಭಾರತವನ್ನು ಕಲ್ಯಾಣ ರಾಜ್ಯ ಮಾಡುವುದು ನಮ್ಮ ಸಂವಿಧಾನದ ಗುರಿಯಾಗಿದೆ.ಕಲ್ಯಾಣ ರಾಜ್ಯವೆಂದರೆ ಜನ ಸಾಮಾನ್ಯರಿಗೆ ಆಹಾರ,ಕುಡಿಯುವ ನೀರು,ಆರೋಗ್ಯ, ಶಿಕ್ಷಣ ,ಉದ್ಯೋಗ ಸುಲಭವಾಗಿ ಸಿಗುವಂತೆ ನೋಡಿಕೊಳ್ಳುವದು.ಅದು ಸರಕಾರದ ಜವಾಬ್ದಾರಿ. ಆದರೆ ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಎಲ್ಲವನ್ನೂ ಅಂಬಾನಿ,ಅದಾನಿಯಂಥ ಖಾಸಗಿ ರಂಗದ ತಿಮಿಂಗಿಲಗಳ ಮಡಿಲಿಗೆ ಹಾಕಲು ಹೊರಟ ಸರಕಾರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿದೆ.ಸಾಮಾಜಿಕ ನ್ಯಾಯದ ಉದ್ದೇಶದಿಂದ ತರಲಾಗಿರುವ ದಲಿತ ದಮನಿತ ಸಮುದಾಯಗಳ ಮೀಸಲು ವ್ಯವಸ್ಥೆಯನ್ನು ನಾಶ ಮಾಡುವ ಮಸಲತ್ತು ನಡೆದಿದೆ.

ಸಂವಿಧಾನವನ್ನು ಸಂಪೂರ್ಣ ಬದಲಾಯಿಸಲಾಗದಿದ್ದರೂ ಇದನ್ನು ದುರ್ಬಲಗೊಳಿಸುವ ಯತ್ನಗಳು ನಡೆಯುತ್ತಲೇ ಇವೆ.ಒಂದೇ ದೇಶ ಒಂದೇ ಭಾಷೆ,ಒಂದೇ ಧರ್ಮ ಒಂದೇ ಸಂಸ್ಕೃತಿ ಹೆಸರಿನಲ್ಲಿ ವೈವಿಧ್ಯಮಯವಾದ ಭಾರತದ ಪ್ರಾದೇಶಿಕ ಅಸ್ಮಿತೆಗಳನ್ನು ನಾಶ ನಾಡುವ ಹುನ್ನಾರ ನಡೆದಿದೆ.ದಕ್ಷಿಣ ಮತ್ತು ಈಶಾನ್ಯ ಭಾರತದ ರಾಜ್ಯಗಳ ಮೇಲೆ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಹೇರುವ ದೌರ್ಜನ್ಯ ನಡೆದಿದೆ.

ಕೇಂದ್ರದ ಚುಕ್ಕಾಣಿ ಹಿಡಿದ ನಾಗಪುರ ನಿರ್ದೇಶಿತ ಪಕ್ಷ ಸಂಸತ್ತಿನಲ್ಲಿ ಚರ್ಚೆ ಮಾಡದೇ ಕಾರ್ಮಿಕ ಮತ್ತು ರೈತ ವಿರೋಧಿಯಾದ ಕರಾಳ ಕಾಯ್ದೆಗಳನ್ನು ದೇಶದ ಮೇಲೆ ಹೇರುತ್ತಿದೆ.ಇನ್ನು ಮುಂದೆ ಕಾರ್ಮಿಕರು ಹನ್ನೆರಡು ತಾಸು ಕೆಲಸ ಮಾಡಬೇಕಾಗುತ್ತದೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣವಾಯಿತೆಂದು ಅವರಿಗೆ ಸಮಾಧಾನವಿಲ್ಲ.ಅವರ ಅಜೆಂಡಾ ಅಷ್ಟಕ್ಕೇ ಮುಗಿಯುವುದಿಲ್ಲ. ಹೊಸ ವಿವಾದಗಳನ್ನು ಕೆರಳಿಸಲಾಗುತ್ತಿದೆ. ಕೋಮು ವೈಷಮ್ಯವನ್ನು ಜೀವಂತವಾಗಿಡುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ.

ಇಂಥ ಸನ್ನಿವೇಶದಲ್ಲಿ ಈಗ ದೇಶದ ಮುಂದೆ ಉಳಿದ ಏಕೈಕ ದಾರಿ ಬಾಬಾಸಾಹೇಬರ ಸಂವಿಧಾನದ ಸಂರಕ್ಷಣೆ.ಅದನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎಂಬುದನ್ನು ಮರೆಯಬಾರದು.

Tags

ConstitutionIndia
share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X