Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಧಾರ್ಮಿಕ ಗುರುಗಳ ರಾಜಕೀಯ ಬಯಕೆ

ಧಾರ್ಮಿಕ ಗುರುಗಳ ರಾಜಕೀಯ ಬಯಕೆ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ28 Oct 2024 10:32 AM IST
share
ಧಾರ್ಮಿಕ ಗುರುಗಳ ರಾಜಕೀಯ ಬಯಕೆ
ಭಾರತದ ಬಹುತ್ವ ಮತ್ತು ಪ್ರಜಾಪ್ರಭುತ್ವದ ಮೇಲೆ ನಿತ್ಯವೂ ದಾಳಿ ನಡೆಯುತ್ತಿದೆ.ಜನಸಾಮಾನ್ಯರ ಅನ್ನ, ಬಟ್ಟೆ, ಶಿಕ್ಷಣ, ರಸ್ತೆ ಹೀಗೆ ಮೂಲಭೂತ ಸೌಕರ್ಯಗಳ ಸಲುವಾಗಿ ಹೋರಾಡಬೇಕಾದ ಯುವಕರಿಗೆ ಜನಾಂಗ ದ್ವೇಷದ ಮತ್ತೇರಿಸಿ ಅದನ್ನು ರಾಷ್ಟ್ರಭಕ್ತಿ ಎಂಬಂತೆ ವ್ಯಾಖ್ಯಾನಿಸಲಾಗುತ್ತಿದೆ. ಕೋಮು ಹಿಂಸೆಗೆ ಪ್ರಚೋದಿಸಲು ಶಿವಾಜಿ, ಭಗತ್ ಸಿಂಗ್ ಅವರ ಪೋಟೊಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ.

ರಾಜಕೀಯ ಮತ್ತು ಧಾರ್ಮಿಕತೆ ಇವೆರಡೂ ಬೇರೆ, ಬೇರೆ ಕ್ಷೇತ್ರಗಳು. ಇವುಗಳಿಗೆ ಅವುಗಳದ್ದೇ ಪ್ರತ್ಯೇಕ ಕಟ್ಟುಪಾಡುಗಳಿವೆ.ಅವುಗಳದ್ದೇ ಆದ ಪಾವಿತ್ರ್ಯವಿದೆ. ಒಂದರೊಳಗೆ ಇನ್ನೊಂದು ಪ್ರವೇಶ ಮಾಡಬಾರದು. ಈ ಲಕ್ಷ್ಮಣ ರೇಖೆಯನ್ನು ಯಾರೂ ದಾಟಬಾರದು. ಹಸ್ತಕ್ಷೇಪ ಮಾಡಬಾರದು. ನಮ್ಮ ಇಂದಿನ ಆಧ್ಯಾತ್ಮಿಕ ಮಹಾಪುರುಷರು ರಾಜಕೀಯದಲ್ಲಿ ಕೈ ಹಾಕಬಾರದು. ಒಂದು ಪ್ರಜಾಪ್ರಭುತ್ವ ದೇಶದಲ್ಲಿ ಶಿಕ್ಷಣ, ಆರೋಗ್ಯ ,ಅಭಿವೃದ್ಧಿ, ಹೀಗೆ ಸಾಮಾಜಿಕ ಬದುಕಿಗೆ ಸಂಬಂಧಿಸಿದ ಕ್ಷೇತ್ರಗಳನ್ನು ನಿರ್ವಹಿಸುವುದು ಸರಕಾರದ ಹೊಣೆಗಾರಿಕೆ. ಅವುಗಳಲ್ಲಿ ಯಾವುದೇ ಧಾರ್ಮಿಕ ಗುರುಗಳು ಹಸ್ತಕ್ಷೇಪ ಮಾಡಬಾರದು ಎಂಬುದು ಸಾಮಾನ್ಯ ತಿಳಿವಳಿಕೆ.

ಆದರೆ, ತೊಂಭತ್ತರ ದಶಕದ ನಂತರ ಎಲ್ಲವೂ ಬದಲಾಗಿದೆ. ಧಾರ್ಮಿಕ ಗುರುಗಳು ತಮ್ಮ ಮಠಗಳಲ್ಲಿ, ಧಾರ್ಮಿಕ ಸಂಸ್ಥೆಗಳಲ್ಲಿ ರಾಜಕೀಯ ಮತ್ತು ಅಧಿಕಾರ ರಾಜಕಾರಣದಲ್ಲಿ ಕೈ ಹಾಕುತ್ತಿರುವುದು ಈಗ ಸಾಮಾನ್ಯವಾಗಿದೆ. ಹಿಂದೆ ‘ಇಹದ ಜಂಜಡದಿಂದ ದೂರ ಸರಿದು ಪಾರಮಾರ್ಥಿಕ ಚಿಂತನೆಯಲ್ಲಿ ತೊಡಗಿ’ ಎಂದು ಗುರುಗಳು ತಮ್ಮ ಭಕ್ತರಿಗೆ ಕರೆ ಕೊಡುತ್ತಿದ್ದರು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಹುಬ್ಬಳ್ಳಿಯ ಸಿದ್ದಾರೂಡರು, ರಮಣ ಮಹರ್ಷಿಗಳು ಹೀಗೆ ಅನೇಕ ಗುರುಗಳು ತಮ್ಮ ದೇಹ ದಂಡನೆ ಮಾಡಿಕೊಂಡು ಸತ್ಯದ ದಾರಿ ಹುಡುಕುತ್ತ ಸಾಗಿದ್ದರು. ಆದರೆ, ಈಗ ಇಹದ ಭೌತಿಕ ಸುಖ ಸವಲತ್ತುಗಳಲ್ಲಿ ಮುಳುಗಿದ ವ್ಯಾಪಾರಿ ಭೈರಾಗಿಗಳ ಸಂಖ್ಯೆ ಮಿತಿ ಮೀರಿದೆ. ಪರಮಾತ್ಮನ ಹೆಸರಿನಲ್ಲಿ ಮಾಡಬಾರದ ದಂಧೆ ಮಾಡುತ್ತ ಜನರಿಂದ ಚುನಾಯಿತ ಗೊಂಡ ಸರಕಾರಕ್ಕೆ ಸವಾಲು ಹಾಕುವಂತೆ ಮಾತನಾಡುತ್ತಿದ್ದಾರೆ. ಇಂಥವರಲ್ಲಿ ಮೊದಲ ಸ್ಥಾನದಲ್ಲಿ ಇರುವವರು ಕಾರ್ಪೊರೇಟ್ ಸನ್ಯಾಸಿ ಎಂದು ಹೆಸರಾದ ಬಾಬಾ ರಾಮ್‌ದೇವ್.

ಈ ಬಾಬಾ ರಾಮ್‌ದೇವ್ ಕಳೆದ 24ರಂದು ಉಡುಪಿಗೆ ಬಂದಿದ್ದರು. ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಆಕ್ಸಪರ್ಡ್, ಕೆಂಬ್ರಿಡ್ಜ್ ಮತ್ತು ಹಾರ್ವರ್ಡ್ ಗಳ ಜಮಾನ ಮುಗಿದಿದೆ. ಇದರ ಬದಲಿಗೆ ಗುರುಕುಲ ಜಮಾನ ಬರಲಿದೆ. ವಿಶ್ವದಾದ್ಯಂತ ಮುಂದೆ ಸನಾತನ ಧರ್ಮದ ಸಾಮ್ರಾಜ್ಯ ನಿರ್ಮಾಣವಾಗಲಿದೆ’ ಎಂದು ರೈಲು ಬಿಟ್ಟರು. ಇಂಗ್ಲಿಷ್ ಮೇಲೆ ಕೆಂಡಕಾರಿದ ರಾಮ್‌ದೇವ್ ಸಂಸ್ಕೃತ ನಮ್ಮ ಮೂಲ ಭಾಷೆ ಎಂದು ಹೇಳಿದರು ಆಧುನಿಕ ಅಲೊಪಥಿ ವೈದ್ಯ ಪದ್ಧತಿ ವಿರುದ್ಧ ವಾಗ್ದಾಳಿ ನಡೆಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ನಾವೀಗ ಸ್ವಾವಲಂಬಿಗಳು ಎಂದು ತಮ್ಮ ಪತಂಜಲಿ ಕಂಪೆನಿಯ ಸಾಧನೆಯ ಬಗ್ಗೆ ಬೆನ್ನನ್ನು ತಾವೇ ತಟ್ಟಿಕೊಂಡರು.

ಈ ಬಾಬಾ ರಾಮ್‌ದೇವ್ ಎಂಥ ಸ್ವಾಮಿ ಎಂಬುದು ಎಲ್ಲರಿಗೂ ಗೊತ್ತಿದೆ. ಆಯುರ್ವೇದವನ್ನು ಬಳಸಿಕೊಂಡು ಅದನ್ನು ಹಾಳು ಮಾಡಿದ ಬಾಬಾ ರಾಮ್‌ದೇವ್ ತನ್ನ ಔಷಧಿಗಳ ಬಗ್ಗೆ ಹೇಳಿಕೊಳ್ಳದೆ ಅಲೋಪಥಿ ಸ್ಟುಪಿಡ್ ಮತ್ತು ದಗಾಕೋರ ವಿಜ್ಞಾನ ಎಂದೆಲ್ಲಾ ನಾಲಿಗೆ ಹರಿ ಬಿಟ್ಟಿದ್ದಾರೆ. ಕೆಲ ಕಾಯಿಲೆಗಳಿಗೆ ಅಲೋಪಥಿಯಲ್ಲಿ ಔಷಧವೇ ಇಲ್ಲ ತನ್ನ ಪತಂಜಲಿ ಯಲ್ಲಿ ಎಲ್ಲದಕ್ಕೂ ಔಷಧಿಗಳು ಇವೆ ಎಂದು ಹೇಳುತ್ತಾರೆ.

ರಾಮ್‌ದೇವ್ ಅವರ ಈ ಅಪಪ್ರಚಾರದ ಬಗ್ಗೆ ಕೆಂಡ ಕಾರಿದ ಅಲೋಪಥಿ ಡಾಕ್ಟರಗಳು ಐಎಂಎ ಮೂಲಕ ಸುಪ್ರೀಂ ಕೋರ್ಟಿಗೂ ಹೋಗಿದ್ದರು. ಈ ಹಂತದಲ್ಲಿ ಸುಪ್ರೀಂ ಕೋರ್ಟ್ ‘ಹೀಗೆಲ್ಲ ಜನರಿಗೆ ತಪ್ಪು ಮಾಹಿತಿಯನ್ನು ನೀಡುವ ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು’ ಎಂದು 2022 ರಲ್ಲಿ ಶೋಕಾಸ್ ನೋಟಿಸ್ ನೀಡಿತು. ನ್ಯಾಯಾಲಯದ ನೋಟಿಸನ್ನು ಕಡೆಗಣಿಸಿದ ಪತಂಜಲಿ ಸಂಸ್ಥೆ ಆಧುನಿಕ ವೈದ್ಯ ಪದ್ಧ್ದತಿಯನ್ನು ಹೀಗೆಳೆಯುತ್ತ ಸುಳ್ಳು ಜಾಹೀರಾತುಗಳನ್ನು ನೀಡತೊಡಗಿತು. ಮೋದಿ ಸರಕಾರವೇ ತನ್ನ ಬೆಂಬಲಕ್ಕಿದೆ ಎಂಬ ಭಂಡ ಧೈರ್ಯದಿಂದ ವರ್ತಿಸಿದ ಬಾಬಾ ರಾಮ್‌ದೇವ್ ಮತ್ತು ಆತನ ಪಾಲುಗಾರ ಬಾಲಕೃಷ್ಣ ಗೆ ಎಚ್ಚರಿಕೆಯನ್ನು ನೀಡಿತು.ಕೊನೆಗೆ ಇವರು ಕ್ಷಮಾಪಣೆ ಕೇಳಬೇಕಾಯಿತು.

ರಾಮ್‌ದೇವ್ ಮಾತ್ರವಲ್ಲ ಇಂಥ ಹಲವಾರು ಬಾಬಾಗಳು ಕಪಟ ಸನ್ಯಾಸಿಗಳು, ಸ್ವಯಂ ಘೋಷಿತ ದೇವ ಮಾನವರು ಈಗ ಎಲ್ಲೆಡೆ ಹುಟ್ಟಿಕೊಂಡಿದ್ದಾರೆ. ಇವರಿಗೆ ಅಧ್ಯಾತ್ಮ ಅಥವಾ ಧರ್ಮ ಎಂಬುದು ದುಡ್ಡು ಮಾಡಿಕೊಳ್ಳುವ ದಂಧೆ.ಇವರು ಹೂಡಿದ ಬಂಡವಾಳಕ್ಕೆ ನೂರಾರು ಪಟ್ಟು ಲಾಭ ಮಾಡಿಕೊಳ್ಳುತ್ತಾರೆ. ಬಾಬಾ ರಾಮ್‌ದೇವ್, ರವಿಶಂಕರ್ ಎಂಬವರು ಬದಕುವ ಕಲೆಯನ್ನು ಹೇಳಿಕೊಡುವ ಮೂಲಕ ಕಾರ್ಪೊರೇಟ್ ಭಕ್ತರ ಅಜ್ಞಾನದ ಮೇಲೆ ಸವಾರಿ ಮಾಡುತ್ತಾರೆೆ .ಇದೇ ಸಾಲಿಗೆ ಸೇರಿದ ಜಗ್ಗಿ ವಾಸುದೇವ್, ಆಸಾರಾಮ್ ಬಾಪು ಎಂಬವರು ಮಕ್ಕಳನ್ನು ಲೈಂಗಿಕ ಹಿಂಸೆಗೆ ಗುರಿಪಡಿಸಿದ ಆರೋಪ ಹೊತ್ತವರು. ಹೀಗೆ ನೂರಾರು ದಗಾಕೋರ ಧಾರ್ಮಿಕ ದಂಗೆಕೋರರು ಇದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಭಾಷೆಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮಿಗಳು ತಮ್ಮ ಜ್ಞಾನ ಭಂಡಾರವನ್ನು ಬಿಚ್ಚಿಟ್ಟರು.ಈ ಪುತ್ತಿಗೆ ಸ್ವಾಮಿಗಳು, ‘ಇಂಗ್ಲಿಷ್ ಅಸ್ಪಷ್ಟ ಭಾಷೆ , ಸಂಸ್ಕೃತ ಸುಸ್ಪಷ್ಟ್ಟ ಭಾಷೆ’ ಎಂದರು. ಇವರು ಸಂಸ್ಕೃತವನ್ನು ಹೊಗಳುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ, ಇಂಗ್ಲಿಷ್ ಭಾಷೆಯನ್ನು ಅನಗತ್ಯವಾಗಿ ಟೀಕಿಸುವ ಅಗತ್ಯವಿರಲಿಲ್ಲ ಹಾಗೂ ಆಧುನಿಕ ಶಿಕ್ಷಣದ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವುದು ಅವರಿಗೆ ಶೋಭೆ ತರುವುದಿಲ್ಲ.

ಉಡುಪಿಯ ಈ ಸಭೆಯಲ್ಲಿ ಇವರ ಭಾಷಣವನ್ನು ಕೇಳಿದವರೆಲ್ಲ ಇಂಗ್ಲಿಷ್ ಭಾಷೆಯನ್ನು ವ್ಯಾಸಂಗ ಮಾಡಿದವರು. ಇವರ ಮಕ್ಕಳು ಹಾಗೂ ಮೊಮ್ಮಕ್ಕಳು ವಿದೇಶದಲ್ಲಿ ನೌಕರಿ ಮಾಡುತ್ತಿದ್ದಾರೆ. ಉಡುಪಿ ಮಠಗಳೂ ಇಂಗ್ಲಿಷ್ ಭಾಷೆಯ ಶಾಲೆಗಳನ್ನು ನಡೆಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಇಂಗ್ಲಿಷ್, ಹಿಂದಿ, ಕನ್ನಡ ಹಾಗೂ ತಮಿಳು, ಮರಾಠಿಗಳಂತೆ ಸಂಸ್ಕೃತವೂ ಒಂದು ಭಾಷೆ ಮಾತ್ರ. ಯಾವ ಭಾಷೆಯೂ ಮೇಲಲ್ಲ, ಕೀಳಲ್ಲ.

ರಾಜಕಾರಣಿಗಳು ಹಾಗೂ ಮಠಾಧೀಶರ ಸಂಬಂಧ ಈಗ ಎಷ್ಟು ನಿಕಟವಾಗಿದೆಯೆಂದರೆ ಅಧಿಕಾರ ರಾಜಕಾರಣದಲ್ಲಿ ಇರುವ ರಾಜಕಾರಣಿಗಳು ತಮ್ಮ ಕಪ್ಪುಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಮಠಾಧೀಶರನ್ನು ಹುಡುಕಿ ನೋಡಿ, ಅವರ ಗುಪ್ತ ತಾಣದಲ್ಲಿ ಹಣ ಇಡುತ್ತಾರೆ. ಈ ಮಠಗಳು ರಾಜಕಾರಣಿಗಳ ಸ್ವಿಸ್ ಬ್ಯಾಂಕುಗಳಾಗಿವೆ. ಹಿಂದಿನ ರಾಜಕಾರಣಿಗಳು ಚುನಾವಣೆಗಳು ಬಂದಾಗ ಓಟಿಗಾಗಿ ಮಠ,ಮಂದಿರಗಳ ದರ್ಶನ ಮಾಡುತ್ತಿದ್ದರು

ಅದರೆ, ಈಗ ಮಂತ್ರಿ ಮತ್ತು ನಿಗಮಗಳ ಕುರ್ಚಿಗಾಗಿ ಮಠಾಧೀಶರ ಮೂಲಕ ಒತ್ತಡ ಹೇರುತ್ತಿದ್ದಾರೆ . ಇದು ಇವತ್ತಿನ ಪರಿಸ್ಥಿತಿ.

ಇದು ಭಾರತದ ಪ್ರಜಾಪ್ರಭುತ್ವದ ಇಂದಿನ ಸ್ಥಿತಿ. ಸ್ವಾತಂತ್ರ್ಯದ ಹೊಸದರಲ್ಲಿ ಜನಸೇವೆಗಾಗಿ ರಾಜಕಾರಣಕ್ಕೆ ಬರುತ್ತಿದ್ದರು.

ಈಗ ಹೇಗಾದರೂ ಅಧಿಕಾರದ ಕುರ್ಚಿ ಸ್ವಾಧೀನ ಪಡಿಸಿಕೊಂಡು ತಮ್ಮ ಗಣಿಗಾರಿಕೆ, ರಿಯಲ್ ಎಸ್ಟೇಟ್ ಮುಂತಾದ ಅಕ್ರಮ ದಗಾಕೋರ ಚಟುವಟಿಕೆಗಳನ್ನು ಕಾಪಾಡಿಕೊಳ್ಳಲು ರಾಜಕೀಯಕ್ಕೆ ಬರುತ್ತಿದ್ದಾರೆ.ಇದು ಗಾಂಧಿ, ಭಗತ್ ಸಿಂಗ್,

ಅಂಬೇಡ್ಕರ್, ನೆಹರೂ, ಸುಭಾಸ್ ಚಂದ್ರ ಬೋಸ್ ಬಯಸಿದ ಭಾರತವಲ್ಲ.ಸೌಹಾರ್ದ ಭಾರತಕ್ಕಾಗಿ ಇವರೆಲ್ಲ ಜೀವ ತೆತ್ತವರು ಎಂಬುದನ್ನು ಮರೆಯಬಾರದು.ದುರಂತವೆಂದರೆ ಸ್ವಾತಂತ್ರ್ಯದ ಏಳು ದಶಕಗಳ ನಂತರ ಸ್ವಾತಂತ್ರ್ಯ ಹೋರಾಟಗಾರರನ್ನು ಇಂದಿನ ಪೀಳಿಗೆಯವರು ಮರೆತಿದ್ದಾರೆ. ಗಾಂಧಿ, ನೆಹರೂ ಮುಂತಾದವರನ್ನು ಖಳ ನಾಯಕರನ್ನಾಗಿ ಬಿಂಬಿಸಲಾಗುತ್ತಿದೆ. ಗೋಡ್ಸೆಯನ್ನು ಹೀರೊ ಎಂಬಂತೆ ವೈಭವೀಕರಿಸಲಾಗುತ್ತಿದೆ.

ಭಾರತದ ಬಹುತ್ವ ಮತ್ತು ಪ್ರಜಾಪ್ರಭುತ್ವದ ಮೇಲೆ ನಿತ್ಯವೂ ದಾಳಿ ನಡೆಯುತ್ತಿದೆ.ಜನಸಾಮಾನ್ಯರ ಅನ್ನ, ಬಟ್ಟೆ, ಶಿಕ್ಷಣ, ರಸ್ತೆ ಹೀಗೆ ಮೂಲಭೂತ ಸೌಕರ್ಯಗಳ ಸಲುವಾಗಿ ಹೋರಾಡಬೇಕಾದ ಯುವಕರಿಗೆ ಜನಾಂಗ ದ್ವೇಷದ ಮತ್ತೇರಿಸಿ ಅದನ್ನು ರಾಷ್ಟ್ರಭಕ್ತಿ ಎಂಬಂತೆ ವ್ಯಾಖ್ಯಾನಿಸಲಾಗುತ್ತಿದೆ. ಕೋಮು ಹಿಂಸೆಗೆ ಪ್ರಚೋದಿಸಲು ಶಿವಾಜಿ, ಭಗತ್ ಸಿಂಗ್ ಅವರ ಪೋಟೊಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ.

ಅಪಾರ ತ್ಯಾಗ, ಬಲಿದಾನದಿಂದ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಜೊತೆಗೆ ಇಷ್ಟು ವರ್ಷ ದೇಶವನ್ನು ಕಾಪಾಡಿದ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳನ್ನು ಉಳಿಸಿಕೊಳ್ಳುವುದು ಇಂದಿನ ಜನ ಹೋರಾಟಗಳ ಮೊದಲ ಆದ್ಯತೆ ಆಗಬೇಕಿದೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X