Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ತೀಕ್ಷ್ಣ ಒಳನೋಟಗಳ ‘ತೆರೆದ ನೋಟ’

ತೀಕ್ಷ್ಣ ಒಳನೋಟಗಳ ‘ತೆರೆದ ನೋಟ’

ನಾ. ದಿವಾಕರನಾ. ದಿವಾಕರ28 Jun 2026 1:19 PM IST
share
ತೀಕ್ಷ್ಣ ಒಳನೋಟಗಳ ‘ತೆರೆದ ನೋಟ’

ವೃತ್ತಿಯಲ್ಲಿ ಕನ್ನಡ ಅಧ್ಯಾಪಕರಾಗಿರುವ ಶ್ರೀಯುತ ಶಿವಣ್ಣ ಕೆಂಸಿ ಸಮಾಜವನ್ನು ನೋಡುವ ನೋಟ ಬೋಧನೆಯ ಆಯಾಮಗಳನ್ನು ದಾಟಿ ಹೋಗುತ್ತದೆ ಎನ್ನುವುದಕ್ಕೆ ಅವರ 23 ಲೇಖನಗಳ ಸಂಕಲನ ‘ತೆರೆದ ನೋಟ’ ಸಾಹಿತ್ಯಿಕ ಸಾಕ್ಷಿಯಾಗಿ ನಿಲ್ಲುತ್ತದೆ. ಮುಂದಿನ ತಲೆಮಾರಿನ ಬೌದ್ಧಿಕ ಸಮಾಜಕ್ಕೆ ಅಗತ್ಯವಾದ ಅರಿವು, ಜ್ಞಾನ ಮತ್ತು ಸಾಮಾಜಿಕ ಪ್ರಜ್ಞೆಯನ್ನು ವರ್ತಮಾನದ ಮಕ್ಕಳಲ್ಲಿ, ಯುವಜನರಲ್ಲಿ ಬೇರೂರಿಸುವ ಒಂದು ಕಾಯಕ ಈ ಶಿಕ್ಷಕ ವೃತ್ತಿ. ಹಾಗಾಗಿ ಶಿಕ್ಷಕರ ಕಣ್ಣೋಟ-ಮುನ್ನೋಟ, ಸಮಾಜ ಮತ್ತು ಸಂಸ್ಕೃತಿಯ ಒಳನೋಟಗಳ ಸಮ್ಮಿಲನವಾಗಿರುವುದು ಸಹಜ. ಶಿವಣ್ಣ ಅವರ ಬರಹಗಳು ಇದನ್ನು ಸಾಕ್ಷೀಕರಿಸುತ್ತವೆ.

ಎರಡು ಭಾಗಗಳಲ್ಲಿರುವ ‘ತೆರೆದ ನೋಟ’ದಲ್ಲಿ ಮೊದಲ ಭಾಗ ಸಾಹಿತ್ಯಿಕ ಒಳನೋಟಗಳಿಂದ ಕೂಡಿದೆ. ಅಭಿಜಾತ ಅರ್ಥದಲ್ಲಿ (Classical Sense) ವಿಮರ್ಶೆ ಎಂದು ವರ್ಗೀಕರಿಸುವುದರ ಬದಲು ಶಿವಣ್ಣ ಅವರ ವಿಮರ್ಶಾತ್ಮಕ ಬರಹಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವರು ಕನ್ನಡದ ಸೃಜನಶೀಲ ಸಾಹಿತ್ಯವನ್ನು ಎಷ್ಟು ಆಳವಾಗಿ ಅಧ್ಯಯನ ಮಾಡಿ ತಮ್ಮದೇ ಆದ ಅಭಿವ್ಯಕ್ತಿಯನ್ನು ದಾಖಲಿಸಿರುವುದು ಎದ್ದು ಕಾಣುತ್ತದೆ. ಪೂರ್ಣಚಂದ್ರ ತೇಜಸ್ವಿಯವರ ‘ಚಿದಂಬರ ರಹಸ್ಯ’ ಬಹಳ ಸುಲಭವಾಗಿ ಓದುಗರ ಗ್ರಹಿಕೆಗೆ ನಿಲುಕುವ ಸಂಕೀರ್ಣ ಕಥಾ ಹಂದರದ ಕೃತಿ. ತೇಜಸ್ವಿ ಅವರ ಅರ್ಥದಲ್ಲಿ ರಹಸ್ಯ ಎನ್ನುವುದು, ನಮ್ಮ ಸಾಮಾಜಿಕ ಪರಿಸರದಲ್ಲಿ ಅಡಗಿರುವ ಒಳಸೂಕ್ಷ್ಮಗಳು ಎನ್ನುವುದನ್ನು ಶಿವಣ್ಣ ಅವರು ಗುರುತಿಸಿದ್ದಾರೆ.

ಹಾಗೆಯೇ ಸಮಕಾಲೀನ ವಾಸ್ತವಗಳನ್ನೇ ವಸ್ತುಗಳನ್ನಾಗಿಸಿ ತಮ್ಮ ಸಾಹಿತ್ಯ ಕೃಷಿ ನಡೆಸಿದ್ದ ಚಂಪಾ ಅವರ ನಾಟಕಗಳನ್ನು ಕುರಿತ ಬರಹ, ಅವರ ನಾಟಕಗಳ ಒಳಸೂಕ್ಷ್ಮಗಳನ್ನು ಬಿಡಿಬಿಡಿಯಾಗಿ ತೆರೆದಿಡುತ್ತದೆ. ಚಂಪಾ ಅವರಲ್ಲಿ ಕಾಣಬಹುದಾದ ತಕ್ಷಣದ ಸ್ಪಂದನ, ಕಾಳಜಿ ಮತ್ತು ಸಂವೇದನೆಯ ತಂತುಗಳನ್ನು ಅವರ ನಾಟಕಗಳಲ್ಲಿ ಗುರುತಿಸುವ ಮೂಲಕ ಶಿವಣ್ಣ ಕೆಂಸಿ ಯುವ ಜನಾಂಗಕ್ಕೆ ಅವರನ್ನು ಪರಿಚಯಿಸುತ್ತಾರೆ. ಅಷ್ಟೇ ಪರಿಣಾಮಕಾರಿಯಾಗಿ ಲೇಖಕರು ಕೃಷ್ಣಮೂರ್ತಿ ಹನೂರು ಅವರ ಕನ್ನಮರಿ ಕೃತಿಯನ್ನು ಭೇದಿಸಿ ಅದರ ಒಳಹೊರಗುಗಳನ್ನು ತೆರೆದಿಡುತ್ತಾರೆ. ‘ಕನ್ನಮರಿ’ ಮನುಷ್ಯ ಸಂಬಂಧಗಳನ್ನು ಸಮಾಜ, ಸಮುದಾಯ ಮತ್ತು ಬದುಕಿನ ಜಂಜಡಗಳ ನಡುವೆ ಗುರುತಿಸುವ ಗಂಭೀರ ಕೃತಿ. ಶಿವಣ್ಣ ಅವರ ಈ ಬರಹ ಮನಸೆಳೆಯುವಂತಿದೆ.

ಅಧ್ಯಯನ ಡಿಜಿಟಲ್ ಆಗಿ ಸಂಶೋಧನೆ ಕತ್ತರಿಸಿ ಅಂಟಿಸುವ ಕ್ರಿಯೆ ಆಗಿರುವ ಈ ಹೊತ್ತಿನಲಿ ಸುರೇಶ್ ನಾಗಲಮಡಿಕೆ ಅವರ ‘ಹಾಡು ಕಲಿಸಿದ ಹರ’ ಬೌದ್ಧಿಕವಾಗಿ ಮುಖ್ಯ ಗ್ರಂಥವಾಗಿ ಕಾಣುತ್ತದೆ. ಶಿವಣ್ಣ ಕೆಂಸಿ ತಮ್ಮ ವಿಮರ್ಶಾತ್ಮಕ ಲೇಖನದಲ್ಲಿ ಈ ಕೃತಿಯನ್ನು ಎಳೆಎಳೆಯಾಗಿ ಓದುಗರ ಮುಂದೆ ತೆರೆದಿಡುತ್ತಲೇ, ಸಂಶೋಧಕರ ತೀಕ್ಷ್ಣ ಒಳನೋಟಗಳನ್ನೂ ನಿಕಷಕ್ಕೊಡ್ಡುವ ಮೂಲಕ, ಮೂಲ ಸಂಶೋಧನೆಯ ಔದಾತ್ಯವನ್ನು ಗುರುತಿಸುತ್ತಾರೆ. ಜನಪದ ಮಹಾಕಾವ್ಯಗಳು ಪ್ರದರ್ಶನಕ್ಕೆ ಸೀಮಿತವಾಗಿರುವ ಹೊತ್ತಿನಲ್ಲಿ ಇಂತಹ ಒಂದು ಕೃತಿಯನ್ನು ಸರಳವಾಗಿ ತಲುಪಿಸುವಲ್ಲಿ ಲೇಖಕರು ಯಶಸ್ವಿಯಾಗುತ್ತಾರೆ.

ಈ ಸಂಕಲನದ ಎರಡನೇ ಭಾಗದಲ್ಲಿ ಶಿವಣ್ಣ ಕೆಂಸಿ ಅವರ ಸಮಕಾಲೀನ ಚೌಕಟ್ಟಿನ ಬರಹಗಳು ಕಾಣುತ್ತವೆ. ಮೊದಲ ಲೇಖನ ‘ಮಳವಳ್ಳಿ ನುಡಿ ಕನ್ನಡ’ ಕರ್ನಾಟಕದ ಭಾಷಾ ವೈವಿಧ್ಯವನ್ನು ಎಲ್ಲ ಆಯಾಮಗಳಲ್ಲೂ ಬಿಚ್ಚಿಡುವಂತಹ ಒಂದು ಬರಹ. ಭಾರತದ ಒಂದು ವೈಶಿಷ್ಟ್ಯ ಎಂದರೆ ಯಾವುದೇ ರಾಜ್ಯದಲ್ಲಿ ಪಯಣಿಸಿದರೂ ಪ್ರತೀ ನೂರು ಕಿಲೋಮೀಟರ್‌ಗೂ ಭಾಷೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಭೌಗೋಳಿಕವಾಗಿ ಚಿಕ್ಕದಾದರೂ ಈ ಜನಭಾಷೆಗಳು ಒಂದು ಸಮಾಜದ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುತ್ತವೆ. ಇಂತಹ ಒಂದು ವಿಶಿಷ್ಟ ಭಾಷೆಯನ್ನು ಶಿವಣ್ಣ ಅವರು ಮಳವಳ್ಳಿಯಲ್ಲಿ ನಿಂತು ಪರಿಚಯಿಸಿರುವುದು ನಿಜಕ್ಕೂ ಸ್ತುತ್ಯರ್ಹ ಕೆಲಸ. ಈ ಬರಹದ ಆಳ ಮತ್ತು ವಿಸ್ತಾರ ಇದನ್ನು ಸಂಶೋಧನಾ ಲೇಖನವಾಗಿಸುತ್ತದೆ. ಈ ಲೇಖನದ ಬಹಳಷ್ಟು ಅಂಶಗಳು ‘ಮೈಸೂರು ಪ್ರಾಂತದ...’ ಲೇಖನದಲ್ಲೂ ಪುನರಾವರ್ತನೆಯಾಗಿದೆ.

ಶಿವಣ್ಣ ಅವರ ಕಣ್ಣೋಟ ಕೇವಲ ಸಾಹಿತ್ಯ-ಸಂಶೋಧನೆಗೆ ಸೀಮಿತವಾಗಿಲ್ಲ. ಸಮಾಜದ ತಳಸ್ತರದ ಜನರನ್ನು, ಕೆಲವೊಮ್ಮೆ ವಿದ್ಯಾವಂತರನ್ನೂ ಆವರಿಸುವ ಮೂಢ ನಂಬಿಕೆಗಳು ಮತ್ತು ಮಾಟಮಂತ್ರ ಇತ್ಯಾದಿ ಮೌಢ್ಯಗಳನ್ನು ಸವಿಸ್ತಾರವಾಗಿ ಚರ್ಚಿಸುವ ಲೇಖಕರು ಕೊಳ್ಳೆಗಾಲವನ್ನು ಕೇಂದ್ರದಲ್ಲಿಟ್ಟು ಈ ಪ್ರಾಚೀನ ನಂಬಿಕೆಗಳನ್ನು ಪುನರ್ ನಿರ್ವಚಿಸುತ್ತಾರೆ. ಈ ಲೇಖನದ ಕೊನೆಯಲ್ಲಿ ‘‘ತಮ್ಮ ಸೌಖ್ಯಕ್ಕಾಗಿ, ತಮ್ಮ ತೆವಲುಗಳನ್ನು ತೀರಿಸಿಕೊಳ್ಳುವುದಕ್ಕಾಗಿ ಈ ರೀತಿಯ ಮೌಢ್ಯತೆಯನ್ನು ಬಿತ್ತುವ ಕೆಲಸ ನಡೆಯುತ್ತಿದೆ’’ ಎಂದು ಹೇಳುವ ಮೂಲಕ ಶಿವಣ್ಣ ಅವರು ತಮ್ಮ ಸಂವೇದನೆಯನ್ನು ವ್ಯಕ್ತಪಡಿಸುತ್ತಾರೆ. ಈ ಮೌಢ್ಯಗಳಿಂದ ಹೊರಬರುವ ಜವಾಬ್ದಾರಿ ಅಂತಿಮವಾಗಿ ಸಮಾಜದ ಮೇಲೆ ಇರುತ್ತದೆ.

ಮತ್ಸ್ಯೋದ್ಯಮವನ್ನು ಕುರಿತ ‘ಕಸುಬು ಕದಿಯುವ...’ ಲೇಖನ ಈ ಉದ್ಯಮವನ್ನು ಕುರಿತು ಹೆಚ್ಚು ಅವರಿವಿಲ್ಲದವರಿಗೆ ಕಣ್ತೆರೆಸುವಂತಿದೆ. ನವ ಉದಾರವಾದದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಎಲ್ಲ ಪಾರಂಪರಿಕ ಉದ್ಯಮಗಳೂ ನೆಲೆ ಕಳೆದುಕೊಳ್ಳುತ್ತಿದ್ದು, ಈ ಚಿಕ್ಕ ಬರಹದ ಮೂಲಕ ಶಿವಣ್ಣ ಅವರು ಮತ್ಸ್ಯೋದ್ಯಮದ ಒಳನೋಟ ಮತ್ತು ಅದನ್ನೇ ಅವಲಂಬಿಸಿದ ಬದುಕು ಜನಸಮುದಾಯಗಳ ಸಂಕಟಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಎನ್.ಸಿ. ಸಿದ್ಧಲಿಂಗಯ್ಯ ಅವರನ್ನು ಒಂದು ಸಂದರ್ಶನದ ಮುಖಾಂತರ ಓದುಗರಿಗೆ ಪರಿಚಯಿಸಿರುವ ಶಿವಣ್ಣ ಕೆಂಸಿ, ಹೊರಜಗತ್ತಿಗೆ ಕಾಣದ ಒಂದು ವ್ಯಕ್ತಿತ್ವವನ್ನು ಹೃದಯಸ್ಪರ್ಶಿಯಾಗಿ ಸಮಾಜಕ್ಕೆ ಪರಿಚಯ ಮಾಡಿದ್ದಾರೆ. ಮಂಗಳೂರು ವಿಜಯ ಅವರನ್ನು ಕುರಿತ ಲೇಖನ ಆಪ್ತತೆಯಿಂದ ಕೂಡಿದೆ.

ಮಕ್ಕಳಿಗೆ, ಎಳೆಯ ಪೀಳಿಗೆಗೆ ಸಾಹಿತ್ಯವನ್ನು ಪರಿಚಯಿಸುವ, ಅವರಲ್ಲಿ ಓದು ಅಧ್ಯಯನದ ಆಸಕ್ತಿಯನ್ನು ಬೆಳೆಸುವ ಸಾಮಾಜಿಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಶಿವಣ್ಣ ಕೆಂಸಿ, ಈ ಹಾದಿಯಲ್ಲಿ ಇನ್ನೂ ಗಮನನೀಡದ ಶಿಕ್ಷಕ ವೃಂದಕ್ಕೂ ಒಂದು ಮಾರ್ಗದರ್ಶನ ನೀಡಿದ್ದಾರೆ. ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡ ಹೊಸ ಕಣ್ಣೋಟವನ್ನು ಸಾಹಿತ್ಯಿಕವಾಗಿ ದಾಖಲಿಸಿರುವ ಶಿವಣ್ಣ ಕೆಂಸಿ ಅವರಿಂದ ಇನ್ನೂ ಹೆಚ್ಚಿನ ವಿದ್ವತ್ ಪೂರ್ಣ ಕೃತಿಗಳನ್ನು ನಿರೀಕ್ಷಿಸಬಹುದು. ‘ತೆರೆದ ನೋಟ’ ಆ ಭರವಸೆಯನ್ನು ನೀಡುತ್ತದೆ.

ಈ ಕೃತಿಯ ಮುಖಬೆಲೆ: ರೂ. 220

ಪ್ರಕಾಶಕರು: ಡಾ. ಮಮತಾ ಕೆ.ಎನ್.

ಕೌದಿ ಪ್ರಕಾಶನ,

ಚರ್ಚ್ ರಸ್ತೆ, ಆನೇಕಲ್-562106

ಮೊ: 9008660371

Tags

Books
share
ನಾ. ದಿವಾಕರ
ನಾ. ದಿವಾಕರ
Next Story
X