Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ದಲಿತ ಹೋರಾಟದ ಮತ್ತೊಂದು ಮಗ್ಗುಲು

ದಲಿತ ಹೋರಾಟದ ಮತ್ತೊಂದು ಮಗ್ಗುಲು

ನಾ. ದಿವಾಕರನಾ. ದಿವಾಕರ29 Nov 2026 1:46 PM IST
share
ದಲಿತ ಹೋರಾಟದ ಮತ್ತೊಂದು ಮಗ್ಗುಲು

ಕರ್ನಾಟಕದ ದಲಿತ ಚಳವಳಿಗೆ ಸಮಾನಾಂತರವಾಗಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ ಚಳವಳಿ 50ರ ಹೊಸ್ತಿಲಲ್ಲಿದೆ. ಎರಡೂ ನೆರೆರಾಜ್ಯಗಳನ್ನು ಬಂಧಿಸುವ ಸಮಾನ ಎಳೆ ಎಂದರೆ ದಲಿತ ಚಳವಳಿಯ ವಿಘಟನೆ, ವ್ಯಕ್ತಿ ಪ್ರತಿಷ್ಠೆಗೆ ಬಲಿಯಾದ ಹೋರಾಟ, ಸ್ಪಷ್ಟ ರಾಜಕೀಯ ನಿಲುವಿನ ಕೊರತೆ ಹಾಗೂ ಗತಕಾಲದ ಹಿರಿಮೆಯಲ್ಲಿ ಮೀಯುವ ಧೋರಣೆ. ಚಂದ್ರಕಾಂತ ಪೋಕಳೆ ಕನ್ನಡಕ್ಕೆ ಸಂಗ್ರಹಾನುವಾದ ಮಾಡಿರುವ ಅರ್ಜುನ ಡಾಂಗಳೆ ಅವರ ಮರಾಠಿ ಕೃತಿ ‘ದಲಿತ ಪ್ಯಾಂಥರ್-ಒಂದು ಸತ್ಯಕಥನ’ ಇದರ ಮತ್ತೊಂದು ಆಯಾಮವನ್ನು ಓದುಗರಿಗೆ ಪರಿಚಯಿಸುತ್ತದೆ. ಲೇಖಕರು ತಮ್ಮನ್ನು ದಲಿತ ಸಾಹಿತ್ಯ ಮತ್ತು ಅದರಿಂದಲೇ ಕುಡಿಯೊಡೆದ ದಲಿತ ಪ್ಯಾಂಥರ್ಎರಡಕ್ಕೂ ಸಾಕ್ಷಿದಾರ ಎಂದೇ ಗುರುತಿಸಿಕೊಳ್ಳುವುದರಿಂದ (ಪುಟ 5) ಈ ಕಥನದ ನಿರೂಪಣೆ ವಸ್ತುನಿಷ್ಠ ಎಂದು ಭಾವಿಸಬಹುದು.

14 ಅಧ್ಯಾಯಗಳ ‘ದಲಿತ ಪ್ಯಾಂಥರ್’ ಪುಸ್ತಕವು ಈ ಚಳವಳಿಯ ಪೂರ್ವಾಶ್ರಮ ಸನ್ನಿವೇಶಗಳಿಂದ ಬಹುತೇಕ ಅಪ್ರಸ್ತುತವಾಗುವ ಹಂತದವರೆಗೆ ನಡೆದ ಘಟನೆಗಳನ್ನು ಓದುಗರ ಮುಂದಿಡುತ್ತದೆ. ಯಾವುದೇ ಮಗ್ಗುಲಿನಿಂದ ನೋಡಿದರೂ 1970ರ ದಶಕದ ಈ ಚಳವಳಿ ದಲಿತ ಹೋರಾಟಗಳ ದಿಕ್ಕು ಬದಲಿಸಿದ, ನವ ಚೇತನ ಕಲ್ಪಿಸಿದ ಹಾಗೂ ಚೈತನ್ಯಶೀಲ ಯುವಶಕ್ತಿಯನ್ನು ಸೃಷ್ಟಿಸಿದ ಒಂದು ಬಲವಾದ ಹೋರಾಟ ಎನ್ನುವುದು ನಿರ್ವಿವಾದ. ಕೃತಿಯ ಮೊದಲ ಅಧ್ಯಾಯದಲ್ಲೇ ಡಾಂಗ್ಲೆ ಅವರು ಈ ವರೆಗಿನ ದಲಿತ ಚಳವಳಿಯ ಕಥನಗಳನ್ನು ‘ಚಳವಳಿಯ ಪ್ರವಾದಿಯಾಗಲು ಬರೆದದ್ದು... ತಾನೇ ಅಂಬೇಡ್ಕರ್ ಚಳವಳಿಯ ಭಾಷ್ಯಕಾರನೆಂದು ಕರೆದುಕೊಳ್ಳುವ’ (ಪುಟ 9) ಪ್ರಯತ್ನಗಳೆಂದು ವರ್ಗೀಕರಿಸುವ ಮೂಲಕ, ಪ್ರಸ್ತುತ ನಿರೂಪಣೆಯನ್ನು ಪ್ರಾಮಾಣಿಕ ಎಂದು ಸಾಕ್ಷೀಕರಿಸಿಬಿಡುತ್ತಾರೆ.

ಈ ಕೃತಿಯ ಹಿರಿಮೆ ಇರುವುದು 1960-70ರ ದಶಕದ ಬೆಳವಣಿಗೆಗಳ ವಿವರಗಳಲ್ಲಿ. ಡಾಂಗ್ಲೆ ಅವರ ವಿಮರ್ಶಾತ್ಮಕ ಒಳನೋಟ ಅವರನ್ನು ಅಂತಿಮ ನ್ಯಾಯಪೀಠದವರೆಗೂ ಕರೆದೊಯ್ಯುವ ಒಂದು ಮಾದರಿ ಇಲ್ಲಿ ಕಾಣುತ್ತದೆ. ಚಳವಳಿಯಲ್ಲಿ ತಲೆದೋರಿದ ಮಾಲಿನ್ಯ ! ಎಂದು ಹೇಳುವಾಗ, ಪ್ರಜ್ಞೆಯ ಕೊರತೆ ಮತ್ತು ಆತ್ಮಕೇಂದ್ರಿತ ಲಕ್ಷಣವನ್ನು ಪ್ರಧಾನವಾಗಿ ಉಲ್ಲೇಖಿಸುವ ಡಾಂಗ್ಲೆ ತಮ್ಮ ಇಡೀ ಕಥನಕ್ಕೆ ಒಂದು ನಿರ್ದಿಷ್ಟ ಸ್ವ-ಸ್ಪರ್ಶವನ್ನು ಒದಗಿಸಿಬಿಡುತ್ತಾರೆ. ಹಾಗಾಗಿ ಮುಂದಿನ ಪುಟಗಳೆಲ್ಲವೂ ತಾತ್ವಿಕವಾಗಿ ನಿರೀಕ್ಷಿಸಬಹುದಾದ ಪಯಣವನ್ನೇ ಕಥಿಸುತ್ತಾ ಹೋಗುತ್ತದೆ. (ಇದು ಸಂಗ್ರಹಾನುವಾದವಾಗಿರುವುದರಿಂದ ಮೂಲ ಕೃತಿಯನ್ನು ಕುರಿತು ಸ್ಪಷ್ಟವಾಗಿ ಹೇಳುವುದು ಉಚಿತವಲ್ಲ).

ಅಧ್ಯಾಯ 3 ಮತ್ತು 4ರಲ್ಲಿ ಲೇಖಕರು ದಲಿತ ಪ್ಯಾಂಥರ್ ಸ್ಥಾಪನೆ, ಚಳವಳಿಯ ದಿಕ್ಕಿನಲ್ಲಿ ಪಯಣ ಎರಡನ್ನೂ ದಾಖಲಿಸುತ್ತಾರೆ. ಈ ಅಧ್ಯಾಯದ ಆರಂಭದಲ್ಲೇ ಲೇಖಕರು ‘ಚಳವಳಿಯಲ್ಲಿಯ ನಾಯಕತ್ವ ಮತ್ತು ವಿಚಾರವಾದಿ ಬುದ್ಧಿಜೀವಿಗಳ ನಡುವೆ ಎಂದೂ ಹೊಂದಾಣಿಕೆಯಾಗಲೇ ಇಲ್ಲ’ (ಪುಟ 17) ಎಂದು ಪ್ರಮಾಣೀಕರಿಸುವ ಮೂಲಕ ಇಡೀ ಚಳವಳಿಯ ಏಳು ಬೀಳುಗಳ ತಾತ್ವಿಕ ಕಾರಣಗಳನ್ನು ಸೂಚ್ಯವಾಗಿ ನಮೂದಿಸಿಬಿಡುತ್ತಾರೆ. ಚಳವಳಿಯೊಡನೆ ನಡೆದುಬಂದ ವ್ಯಕ್ತಿ, ಸವೆದ ಹಾದಿಯನ್ನು ತಮ್ಮ ವೈಯಕ್ತಿಕ ಕಣ್ಣೋಟದಿಂದ ನೋಡುವುದು ಒಂದು ವಿಧಾನವಾದರೆ, ಒಟ್ಟಾರೆ ಚಳವಳಿಯ ಕಣ್ಣೋಟದಿಂದ ತನ್ನನ್ನು ತಾನೇ ವಿಮರ್ಶಿಸಿಕೊಳ್ಳುವುದು ಮತ್ತೊಂದು ವಿಧಾನ. ಡಾಂಗ್ಲೆ ಅವರು ಎರಡನೆಯ ವಿಧಾನವನ್ನು ಅನುಸರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದೇ ಧಾಟಿಯನ್ನು ಪರಿವರ್ತನೆಯ ಸಾಹಿತ್ಯದ ದಸ್ತಾವೇಜು ಅಧ್ಯಾಯದಲ್ಲೂ ಅನುಸರಿಸುತ್ತಾರೆ.

‘ಎಪ್ಪತ್ತರ ಆಸುಪಾಸಿನ ಚಡಪಡಿಕೆ’ ದಲಿತ ಚಳವಳಿ ಎದುರಿಸಿದ ಸೈದ್ಧಾಂತಿಕ ಪಲ್ಲಟಗಳನ್ನು, ತಾತ್ವಿಕ ವ್ಯತ್ಯಯಗಳನ್ನು ಹಾಗೂ ಭಿನ್ನ ಕವಲುಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತದೆ. ಸಮಾಜದಲ್ಲಿ ಶತಮಾನಗಳಿಂದ ಬೇರೂರಿರುವ ಶೋಷಣೆ-ದೌರ್ಜನ್ಯಗಳನ್ನು ಕೊನೆಗಾಣಿಸಲು ರೂಪುಗೊಳ್ಳುವ ಚಳವಳಿಗಳು, ವರ್ತಮಾನದ ಘಟನೆಗಳಿಂದ ಸ್ಫೂರ್ತಿ-ಉತ್ಸಾಹ ಪಡೆಯುವುದು ಸ್ವಾಭಾವಿಕ ಪ್ರಕ್ರಿಯೆ. ಆದರೆ ಈ ಘಟನೆಗಳಲ್ಲಿ ಪ್ರಕಟವಾಗುವ ಕ್ರೌರ್ಯ, ಹಿಂಸೆ, ಅಮಾನುಷ ಪ್ರವೃತ್ತಿ ಮತ್ತು ಅಸಂವೇದನೆಗಳನ್ನು ವಿಮರ್ಶಿಸುವಾಗ, ಅವುಗಳ ಹಿಂದಿನ ಮೂಲ ಬೇರುಗಳನ್ನೂ ಗುರುತಿಸದೆ ಹೋದರೆ, ಹೋರಾಟಗಳೆಲ್ಲವೂ ಸಾಂಕೇತಿಕ ರೂಪ ಪಡೆದು ಕಾಲಕ್ರಮೇಣ ಶಿಥಿಲವಾಗಿಬಿಡುತ್ತವೆ. ಇದರ ಒಂದು ಝಲಕ್ ಈ ಅಧ್ಯಾಯದಲ್ಲಿ ಕಾಣುತ್ತದೆ.

ದಲಿತ ಪ್ಯಾಂಥರ್ ಬೆಳವಣಿಗೆಯಲ್ಲಿ ಯುವಶಕ್ತಿಯ ಪಾತ್ರ ಮತ್ತು ಅಂಬೇಡ್ಕರ್ ಅವರಿಂದ ಈ ಯುವ ಜನಾಂಗ ಪ್ರಭಾವಿತರಾದ ಕೆಲವು ಪ್ರಸಂಗಗಳನ್ನು ಡಾಂಗ್ಲೆ ದಾಖಲಿಸುತ್ತಾರೆ. ಚಳವಳಿಗಳಿಗೆ ಸೈದ್ಧಾಂತಿಕ ಅಡಿಪಾಯ ಒದಗಿಸುವ ಬೌದ್ಧಿಕ ಚಿಂತನಾ ಮಾದರಿಯಲ್ಲಿ ಭಿನ್ನಮತ-ಭಿನ್ನಾಭಿಪ್ರಾಯಗಳ ಮೊಳಕೆ ಇರುವುದು ಅಪೇಕ್ಷಣೀಯ. ಇದು ಭವಿಷ್ಯದ ಬಲವರ್ಧನೆಯ ಸೂಚಕ. ಆದರೆ ಈ ಮೊಳಕೆಗಳು ಬೆಳೆಯುತ್ತಾ ವ್ಯಕ್ತಿನಿಷ್ಠವಾಗುತ್ತಾ ಹೋದಂತೆಲ್ಲಾ, ಯುವ ಕಾರ್ಯಕರ್ತರು ಮೂಲ ಬೇರುಗಳಿಂದ ದೂರ ಸರಿಯುತ್ತಾ ಮತ್ತಾವುದೋ ಚೌಕಟ್ಟಿನೊಳಗೆ ಲೀನವಾಗಿಬಿಡುತ್ತಾರೆ. ಡಾಂಗ್ಲೆ ಅವರ ಕಥನದಲ್ಲಿ ಇದನ್ನು ಸೂಚ್ಯವಾಗಿ ದಾಖಲಿಸಿರುವುದನ್ನು ಗುರುತಿಸಬಹುದು.

ದಲಿತ ಪ್ಯಾಂಥರ್ ಬೆಳವಣಿಗೆಯಲ್ಲಿ ಆಳವಾಗಿದ್ದ ಬೌದ್ಧಿಕ ಶಕ್ತಿ ಮತ್ತು ಸಾಂಸ್ಕೃತಿಕ ಔನ್ನತ್ಯಗಳನ್ನು ಡಾಂಗ್ಲೆ ‘...ಆರೋಹಣದ ಆಲೇಖ’ (ಅಧ್ಯಾಯ 11)ರಲ್ಲಿ ದಾಖಲಿಸುತ್ತಾರೆ. ರಿಪಬ್ಲಿಕನ್ ನಾಯಕರ ಗುಂಪುಗಾರಿಕೆಯ ವಿರುದ್ಧವಾಗಿ ರೂಪುಗೊಂಡ ದಲಿತ ಪ್ಯಾಂಥರ್ ಸೈದ್ಧಾಂತಿಕವಾಗಿ ಬಲಗೊಂಡಿದ್ದನ್ನು ಈ ಅಧ್ಯಾಯದಲ್ಲಿ ಡಾಂಗ್ಲೆ ಕಥಿಸುತ್ತಾರೆ. ದಲಿತ ಪ್ಯಾಂಥರ್ ಇಬ್ಭಾಗವಾದದ್ದನ್ನು ಡಾಂಗ್ಲೆ ಅವರು ಎರಡು ಅಧ್ಯಾಯಗಳಲ್ಲಿ (14 ಮತ್ತು 15) ದಾಖಲಿಸುತ್ತಾರೆ. ಈ ವಿಘಟನೆಗೆ ಸೈದ್ಧಾಂತಿಕ ಕಾರಣಗಳು ಒಂದೆಡೆಯಾದರೆ ಮತ್ತೊಂದೆಡೆ ವ್ಯಕ್ತಿಗತ ಕಾರಣಗಳೂ ಇರುವುದನ್ನು ಲೇಖಕರು ಉಲ್ಲೇಖಿಸುತ್ತಾರೆ.

ಕೊನೆಯ ಅಧ್ಯಾಯದಲ್ಲಿ ದಲಿತ ಫ್ಯಾಂಥರ್ನ ಮರುಹುಟ್ಟು ದಾಖಲಿಸಿದರೂ ತದನಂತರದ ಚರಿತ್ರೆಯನ್ನು ಡಾಂಗ್ಲೆ ಅವರು ದಾಖಲಿಸಿಲ್ಲ. ಈ ಹಂತದಲ್ಲಿ ದಲಿತ ಪ್ಯಾಂಥರ್ ಸಂಪರ್ಕ ಸಮಿತಿಯ ರಚನೆ ಮತ್ತು ಅದರ ವಿಸ್ತರಣೆಯಲ್ಲಿ ಮಹಿಳೆಯರು ಇಲ್ಲದಿರುವುದನ್ನು ಲೇಖಕರು ಕೊನೆಯಲ್ಲಿ ಮಾರ್ಮಿಕವಾಗಿ ಹೇಳುತ್ತಾರೆ. ಒಟ್ಟಾರೆಯಾಗಿ ನೋಡಿದಾಗ ಅರ್ಜುನ್ ಡಾಂಗ್ಲೆ ಅವರ ‘ದಲಿತ ಪ್ಯಾಂಥರ್- ಒಂದು ಸತ್ಯ ಕಥನ’, ಇಡೀ ಚಳವಳಿಯನ್ನು ನಿರ್ದಿಷ್ಟ ಕೋನದಿಂದ ನೋಡಿದಂತೆ ಭಾಸವಾಗುತ್ತದೆ. ಚಂದ್ರಕಾಂತ್ ಪೋಕಳೆ ಅವರ ಕನ್ನಡಾನುವಾದ ಎಐ ಆಧರಿಸಿದಂತೆ ತೋರುತ್ತದೆ. ಹಾಗಾಗಿ ಕೆಲವು ಅಭಾಸಗಳೂ ಕಾಣುತ್ತವೆ. ಪರಿಚಯಾತ್ಮಕವಾಗಿ ಓದಬಹುದಾದ ಕೃತಿ.

ಈ ಕೃತಿಯ ಮುಖಬೆಲೆ: 140 ರೂ.

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ. ಲಿ., ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001, ಫೋನ್: 080-22161900/ 22161901/ 22161902

(ಲೇಖಕರು: ಹಿರಿಯ ಬರಹಗಾರರು, ಸಾಮಾಜಿಕ ಹೋರಾಟಗಾರರು)

Tags

Dalit
share
ನಾ. ದಿವಾಕರ
ನಾ. ದಿವಾಕರ
Next Story
X