Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ‘ಸಂವಿಧಾನ ನುಡಿ ಸಂಹಿತೆ’ ಒಂದು ಅಪರೂಪದ...

‘ಸಂವಿಧಾನ ನುಡಿ ಸಂಹಿತೆ’ ಒಂದು ಅಪರೂಪದ ದಾಖಲೆ

ಪು.ಸೂ.ಲಕ್ಷ್ಮೀನಾರಾಯಣ ರಾವ್  ಬೆಂಗಳೂರು.ಪು.ಸೂ.ಲಕ್ಷ್ಮೀನಾರಾಯಣ ರಾವ್ ಬೆಂಗಳೂರು.2 July 2026 10:29 AM IST
share
‘ಸಂವಿಧಾನ ನುಡಿ ಸಂಹಿತೆ’ ಒಂದು ಅಪರೂಪದ ದಾಖಲೆ

ಡಾ. ಸಂತೋಷ ಹಾನಗಲ್ಲರ ಈ ಕೃತಿ ಕನ್ನಡ ಭಾಷಾಸಕ್ತರು ಹಾಗೂ ಸಂವಿಧಾನದ ಬಗ್ಗೆ ಒಲವುಳ್ಳವರು ಓದಲೇಬೇಕಾದದ್ದಾಗಿದೆ.

ಭಾರತದ ಸಂವಿಧಾನದ ಹದಿನೇಳನೆಯ ವಿಭಾಗದಲ್ಲಿ 343 ರಿಂದ 351 ಮತ್ತು 394ನೇ ಅನುಚ್ಛೇದಗಳನ್ನು ಮತ್ತು ಎಂಟನೇ ಅನುಸೂಚಿಯಲ್ಲಿ ಪಟ್ಟಿ ಮಾಡಿರುವ ಅಧಿಕೃತ ಭಾಷೆಗಳ ವಿವರವನ್ನು ನೋಡುತ್ತೇವೆ. ಆದರೆ ಈ ವಿಧಿಗಳನ್ನು ರೂಪಿಸುವುದಕ್ಕೆ ಮೊದಲು ನಮ್ಮ ದೇಶದಲ್ಲಿ ಎಷ್ಟು ದೀರ್ಘವಾದ ಸಂವಾದ, ಚರ್ಚೆ, ವಾಗ್ವಾದಗಳು ನಡೆದವು ಮತ್ತು ಆ ಅದ್ಭುತವಾದ ಸಮಾವೇಶಗಳಲ್ಲಿ ಭಾಗವಹಿಸಿದ್ದ ಪ್ರಬುದ್ಧ ಚಿಂತಕರು, ಸ್ವಾತಂತ್ರ್ಯ ಹೋರಾಟಗಾರರು, ಕವಿಗಳು, ವಿದ್ವಾಂಸರು, ವಕೀಲರು ಮುಂತಾದ ಮೇಧಾವಿಗಳು ಯಾರು ಹಾಗೂ ಅವರ ವಾದಸರಣಿಯ ವಾಗ್ವೈಭವ ಹೇಗಿತ್ತು ಎಂಬುದನ್ನು ಅರಿಯಬೇಕಾದರೆ ಅವಶ್ಯ ಈ ಪುಸ್ತಕವನ್ನು ಅಧ್ಯಯನ ಮಾಡಬೇಕಾಗುತ್ತದೆ.

ನಮ್ಮ ದೇಶದ ರಾಷ್ಟ್ರ ಭಾಷೆ ಅಥವಾ ಆಡಳಿತದ ಭಾಷೆ ಯಾವುದಾಗಬೇಕು, ಯಾವ ಲಿಪಿ ಹಾಗೂ ಅಂಕಿಗಳನ್ನು ಬಳಸಬೇಕು, ರಾಜ್ಯಗಳ ಭಾಷೆ, ಅಂತರ್‌ರಾಜ್ಯಗಳ ಭಾಷೆ ಮತ್ತು ರಾಜ್ಯ ಹಾಗೂ ಕೇಂದ್ರಗಳ ನಡುವಿನ ಸಂಪರ್ಕದ ಭಾಷೆ ಯಾವುದಾಗಿರಬೇಕು, ನ್ಯಾಯಾಲಯಗಳ ಭಾಷೆಯ ಕಥೆ ಏನು ಇತ್ಯಾದಿ ಹಲವು ಹತ್ತು ವಿಷಯಗಳನ್ನು ಕುರಿತು ಮಾಡಿದ ಚರ್ಚೆಗಳನ್ನು ಸವಿಸ್ತಾರವಾಗಿ ಯಥಾವತ್ತು ದಾಖಲಿಸಿದ್ದಾರೆ.

ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ತಯಾರಾದ ಕರಡಿನ ಆಧಾರದ ಮೇಲೆ ಈ ಚರ್ಚೆ ಸಾಗುತ್ತದೆ.

ಮೊದಲಿಗೆ ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಅವರು ಹಿಂದಿ ಭಾಷೆಯನ್ನು ಭಾರತದ ಒಕ್ಕೂಟದಲ್ಲಿ ಎಲ್ಲ ಉದ್ದಿಶ್ಯಗಳಿಗೆ ಔಪಚಾರಿಕ ಭಾಷೆಯಾಗಿ ಸ್ವೀಕರಿಸಬೇಕು, ಆದರೆ ಹಿಂದಿ ಭಾಷೆಯು ಇಂಗ್ಲಿಷ್ ಭಾಷೆಯ ಸ್ಥಾನವನ್ನು ಸಮರ್ಥವಾಗಿ ಗಳಿಸುವವರೆಗೆ ಇಂಗ್ಲಿಷ್ ಅನ್ನು ಮುಂದುವರಿಸಬೇಕು ಎಂದು ತೀರ್ಮಾನಿಸಿರುವುದಾಗಿ ಸಭೆಗೆ ತಿಳಿಸುತ್ತಾರೆ.

ರಾಜ್ಯಗಳಲ್ಲಿ ಪ್ರಚುರವಾಗಿರುವ ಭಾಷೆ ಆಡಳಿತ ಭಾಷೆಯಾಗಬೇಕು ಮತ್ತು ರಾಜ್ಯ ರಾಜ್ಯಗಳ ನಡುವೆ ಅಥವಾ ರಾಜ್ಯ ಕೇಂದ್ರಗಳ ನಡುವೆ ಹಿಂದಿ ಅಥವಾ ಇಂಗ್ಲಿಷ್ ಭಾಷೆ ವ್ಯವಹಾರ್ಯವಾಗಬೇಕು ಎಂದು ಸಹ ತೀರ್ಮಾನವಾಗಿರುವುದಾಗಿ ಅರಹುತ್ತಾರೆ.

ಇನ್ನು ದೇವನಾಗರಿ ಲಿಪಿ ಹಾಗೂ ಅಂಕಿಗಳು ಅಖಿಲ ಭಾರತೀಯ ಅಂಕಿಗಳೆಂದು ಪ್ರಸಿದ್ಧವಾಗಿರುವ ಅಂಕಿಗಳನ್ನು ಬಳಸಬೇಕೆಂಬುದು ರಚನಾಕಾರರ ಅಭಿಮತವೆಂದು ತಿಳಿಸುತ್ತಾರೆ. ಆದರೆ ಅಯ್ಯಂಗಾರರನ್ನು ಒಳಗೊಂಡಂತೆ ದಕ್ಷಿಣದವರು ಅಂತರ್‌ರಾಷ್ಟ್ರೀಯ ಅಂಕಿಗಳನ್ನು ಬಳಸಬೇಕೆಂಬ ಅಭಿಪ್ರಾಯವನ್ನು ಮುಂದಿಡುತ್ತಿರುವುದನ್ನು ಸಹ ಅವರು ಸಭೆಗೆ ಸೂಚಿಸುತ್ತಾರೆ.

ಆದರೆ ಸೇಠ್ ಗೋವಿಂದ ದಾಸ್, ಹಿಂದಿ ಭಾಷೆ ಹಾಗೂ ದೇವನಾಗರಿ ಲಿಪಿಯನ್ನು ಅಂದರೆ ಶೇ.95ರಷ್ಟನ್ನು ಒಪ್ಪಿರುವವರು ಭಾರತೀಯ ಅಂದರೆ ದೇವನಾಗರಿ ಲಿಪಿಯನ್ನು, ಶೇ.5 ಅನ್ನು ಒಪ್ಪುವ ತ್ಯಾಗ ಮಾಡಬೇಕೆಂದು ಅಭಿಪ್ರಾಯ ಪಡುತ್ತಾರೆ. ಈ ಚರ್ಚೆ ಸಾಕಷ್ಟು ದೀರ್ಘವಾಗಿಯೇ ಮತ್ತೆ ಮತ್ತೆ ಸಾಗುತ್ತಿರುತ್ತದೆ. ನಝೀರುದ್ದೀನ್ ಅಹ್ಮದ್ ಇಂಗ್ಲಿಷ್ ಭಾಷೆಗೆ ಒತ್ತುಕೊಡುತ್ತಲೇ ಬಂಗಾಳಿ ಮತ್ತು ಸಂಸ್ಕೃತ ಭಾಷೆಗಳ ಹಿರಿಮೆಯನ್ನು ವಿವರಿಸುತ್ತಾರೆ. ಮುಹಮ್ಮದ್ ಹಿಫುರು ರ‌್ರಹಮಾನ್ ಹಿಂದೂಸ್ತಾನಿ ರಾಷ್ಟ್ರ ಭಾಷೆಯಾಗಬೇಕೆಂದು ತಮ್ಮ ವಾದ ಮಂಡಿಸುತ್ತಾರೆ. ಪಂಡಿತ್ ಲಕ್ಷ್ಮೀಕಾಂತ್ ಮೈತ್ರ ಸಂಸ್ಕೃತ ರಾಷ್ಟ್ರೀಯ ಭಾಷೆ ಆಗಬೇಕು ಎಂಬುದಕ್ಕೆ ಅದನ್ನು ಕುರಿತ ಪಾಶ್ಚಾತ್ಯರ ಪ್ರಶಂಸೆಗಳನ್ನು ಉಲ್ಲೇಖಿಸುತ್ತಾರೆ. ಸತೀಶ್ಚಂದ್ರ ಸಾಮಂತ ಬಂಗಾಳಿಯೂ ರಾಷ್ಟ್ರ ಭಾಷೆಯಾಗಲು ಸಮರ್ಥವಿದೆ ಎಂಬುದಕ್ಕೆ ಟಾಗೋರ್, ವಂದೇ ಮಾತರಂ ಮೊದಲ್ಗೊಂಡು ಹಲವಾರು ಅದರ ಸಿದ್ಧಿಗಳನ್ನು ಉಲ್ಲೇಖಿಸುತ್ತಾರೆ. ಹಿಂದಿಯನ್ನು ಉಳಿದಂತೆ ತೆಲುಗನ್ನು ಮಾತನಾಡುವವರ ಸಂಖ್ಯೆ ಹೆಚ್ಚಿದ್ದು, ಆ ಭಾಷೆಯನ್ನು ರಾಷ್ಟ್ರಭಾಷೆ ಮಾಡಬಹುದೆಂದು ಅನಿಸಿದರೂ ಆ ಕುರಿತು ಒತ್ತಾಯ ಮಾಡದ ದಕ್ಷಿಣದವರ ತ್ಯಾಗಬುದ್ಧಿಯನ್ನು ಹಾಗೂ ಉತ್ತರದವರ ಭಾಷಾ ನಿರಂಕುಶತ್ವ ಮತ್ತು ಅಸಹನೆಯ ಪರಮಾವಧಿ ಎಂದು ಜಿ.ದುರ್ಗಾಬಾಯಿಯವರು ಆಕ್ಷೇಪಿಸುತ್ತಾರೆ.

ಹೀಗೆ ಹಲವಾರು ಭಾಷೆಗಳಿಗೆ ಸಂಬಂಧಪಟ್ಟ ಜಾಗತಿಕ ಹಾಗೂ ದೇಶೀಯ ಮಹತ್ವದ ವಿಷಯಗಳು ಅಲ್ಲಲ್ಲಿ ಪ್ರಸ್ತಾಪವಾಗಿರುವುದು ಭಾಷಾಸಕ್ತರ ಆಸಕ್ತಿಯನ್ನು ಕೆರಳಿಸುತ್ತದೆ. ಆಗಲೂ ಸಹ ಈಗಿನಂತೆಯೇ ಉತ್ತರದವರ ಪ್ರಾಬಲ್ಯ ಹಾಗೂ ದಕ್ಷಿಣದವರ ಪ್ರತಿರೋಧ ವ್ಯಕ್ತವಾಗುವುದನ್ನೂ ಸಹ ಗಮನಿಸಬಹುದು. ಕೋಮುವಾದದ ಮನಸ್ಥಿತಿಗಳೂ ಕಂಡುಬರುತ್ತವೆ. ಅನೇಕರು ಭಾರತದ ಎಲ್ಲ ಭಾಷೆಗಳ ತಾಯಿಬೇರು ಸಂಸ್ಕೃತ ಭಾಷೆ ಎಂಬ ಅವಾಸ್ತವ ಸಂಗತಿಯನ್ನು ಸ್ಪಷ್ಟವಾಗಿ ಹೇಳುವುದನ್ನು ನೋಡಿದಾಗ ಬಹುಶಃ ಆಗ ಇದ್ದಂತಹ ಭಾಷಾಶಾಸ್ತ್ರದ ಸಂಶೋಧನೆಗಳ ಕೊರತೆ ಎದ್ದು ಕಾಣಿಸುತ್ತದೆ. ಆದರೆ ಫ್ರಾಂಕ್ ಆಂಥಣಿ ಮತ್ತು ಕೆಲವು ದಕ್ಷಿಣದ ವಿದ್ವಾಂಸರು ಅದನ್ನು ಅಲ್ಲಗಳೆಯುತ್ತಾರೆ. ಕೊನೆಗೆ ಇವೆಲ್ಲದರ ಮಧ್ಯೆ ಸರ್ವಾನುಮತದ ಅಭಿಪ್ರಾಯ ಮೂಡುವುದಕ್ಕೆ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ರಾಜಕೀಯ ಸ್ವರೂಪದ ಜೊತೆಗೆ ಉಜ್ವಲವಾದ ಸಮಾಜದ ಸುಧಾರಣಾತ್ಮಕ ಚಿಂತನೆಗಳು ಹಾಗೂ ನೈತಿಕತೆಯ ಆತ್ಮಸಾಕ್ಷಿಯೂ ಕಾರಣವೆನಿಸುತ್ತದೆ.

ಪ್ರಧಾನವಾದ ಈ ಭಾಷಾ ಚರ್ಚೆಯಷ್ಟೇ ಅಲ್ಲದೆ, ‘ಭಾಷಾ ಆಯೋಗದ ಮಹತ್ವ’, ’ರಾಜ್ಯಗಳ ಪುನರ್ವಿಂಗಡಣೆ’, ’ಕನ್ನಡ ಅಭಿವೃದ್ಧಿಯ ಕುರಿತ ರಾಜ್ಯದ ಇತರ ನಿಯಮಗಳು’ ‘ಅಭಿವೃದ್ಧಿ ಪ್ರಾಧಿಕಾರದ ರಚನೆ’, ‘ಕನ್ನಡ ಭಾಷಾ ಕಲಿಕಾ ಅಧಿನಿಯಮ’ ಬೇರೆ ಬೇರೆ ಅಧಿಸೂಚನೆಗಳು, ಸಮಿತಿಗಳು ಮುಂತಾದ ಹಲವಾರು ಕನ್ನಡ ಭಾಷೆಗೆ ಸಂಬಂಧಿಸಿದ ಮಾಹಿತಿಗಳಿಂದ ಕೂಡಿದ ಈ ಕೃತಿ ಕನ್ನಡದ ಬಗೆಗಿನ ಅರಿವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಆರಂಭದಲ್ಲಿ ಕನ್ನಡದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ, ಭಾಷಾಶಾಸ್ತ್ರಜ್ಞರೂ ಆದ ಡಾ.ಪುರುಷೋತ್ತಮ ಬಿಳಿಮಲೆಯವರ ಭಾಷೆ ಹಾಗೂ ಬದುಕಿಗೆ ಪೂರಕವಾದ ಪ್ರಬುದ್ಧ ಚಿಂತನೆಗಳಿಂದ ಕೂಡಿದ ಮುನ್ನುಡಿ ಹಾಗೂ ಕೊನೆಯಲ್ಲಿ ಡಾ.ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಂದರ್ಭದಲ್ಲಿ ಮಾಡಿದ ಕೊನೆಯ ಅಮೂಲ್ಯ ಭಾಷಣ ಈ ಕೃತಿಯ ಮಹತ್ವವನ್ನು ಹೆಚ್ಚಿಸಿದೆ ಎಂದು ಹೇಳಬಹುದು.

ಇಂತಹ ಅಪರೂಪದ ಹಾಗೂ ಶ್ರಮದಾಯಕವಾದ ಕನ್ನಡದ ಕೈಂಕರ್ಯವನ್ನು ಕೈಗೊಂಡು ಯಶಸ್ವಿಗೊಳಿಸಿದ ಡಾ. ಸಂತೋಷ ಹಾನಗಲ್ಲ ಅವರಿಗೆ ಕನ್ನಡಿಗರೆಲ್ಲರ ಧನ್ಯವಾದಗಳು ಸಲ್ಲುತ್ತವೆ.

ಪ್ರಕಾಶಕರು: ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ವಿಧಾನ ಸೌಧ, ಬೆಂಗಳೂರು - 560001.

ಪುಟಗಳು: 462.

ಬೆಲೆ: ರೂ. 200

share
ಪು.ಸೂ.ಲಕ್ಷ್ಮೀನಾರಾಯಣ ರಾವ್  ಬೆಂಗಳೂರು.
ಪು.ಸೂ.ಲಕ್ಷ್ಮೀನಾರಾಯಣ ರಾವ್ ಬೆಂಗಳೂರು.
Next Story
X