Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ‘ಧಣಿಯ ಹಿಂದಿನ ಧ್ವನಿ’ಯೊಳಗೆ...

‘ಧಣಿಯ ಹಿಂದಿನ ಧ್ವನಿ’ಯೊಳಗೆ...

ಡಾ. ಎಚ್.ಎಸ್. ಶಿವಪ್ರಕಾಶಡಾ. ಎಚ್.ಎಸ್. ಶಿವಪ್ರಕಾಶ16 July 2026 3:37 PM IST
share
‘ಧಣಿಯ ಹಿಂದಿನ ಧ್ವನಿ’ಯೊಳಗೆ...

ಡಾ.ಯಶವಂತ ಕೊಕ್ಕನವರ ಅವರ ನಾಟಕ ಕೃತಿ ನಮ್ಮ ಸಾಹಿತ್ಯ ಮತ್ತು ರಂಗಭೂಮಿಗಳಲ್ಲಿ ಮತ್ತೆ ಮತ್ತೆ ಕಾಡುವ ದಮನ ಮತ್ತು ಜಾತಿಗಳ ಸಂಘರ್ಷವನ್ನು ಎದುರುಗೊಂಡಿದೆ.

ಬಂಡಾಯದ ಬುನಾದಿ ಹೊಂದಿರುವ ನಾಟಕದ ವಸ್ತು ಹಳೆಯದು. ಆದರೆ ಕೊಕ್ಕನವರ ಅವರು ಅದನ್ನು ಬಿಡಿಸಿರುವ ಬಗೆ ಹೊಸದು. ಈ ವರೆಗೆ ತಂದೆ-ಮಗನ ಅಂದರೆ ಗಂಡಾಳಿಕೆ ದೃಷ್ಟಿಯಿಂದ ಈ ವಸ್ತುವನ್ನು ಪರಿಭಾವಿಸಿ ಬಹು ಸನ್ಮಾನಿತರಾದ ಪ್ರಸಿದ್ಧ ನಾಟಕಕಾರರು ನಮ್ಮಲ್ಲಿದ್ದಾರೆ. ಆದರೆ ಕೊಕ್ಕನವರ ಅವರು ವಸ್ತುವನ್ನು ಗ್ರಹಿಸಿರುವುದು ತಾಯಿ ಮತ್ತು ಮಗನ ಸಂಬಂಧದ ಮೂಲಕ. ಇದೊಂದು ಸ್ವಾಗತಾರ್ಹ ಮಾದರಿ ಪಲ್ಲಟ. ಆಧುನಿಕ ‘ಬಾಡಗಿ-ತಾಯಿ’ ಪರಿಕಲ್ಪನೆಯನ್ನು ಪ್ರಾಚೀನ ಕಾಲದಲ್ಲಿ ಕಲ್ಪಿಸಿ ಬರೆದ ನಾಟಕವಾದರೂ ವಾಸ್ತವಿಕ ಹೊಸ್ತಿಲು ದಾಟಿ ಹೋಗಿಲ್ಲ. ಇದು ನಾಟಕಕಾರರ ವಾಸ್ತವ ಪ್ರಜ್ಞೆಗೆ ಸಾಕ್ಷಿಯೆನ್ನುವಂತಿದೆ.

ಯಶವಂತ ಅವರ ಭಾಷೆಯಲ್ಲಿ ದೇಸಿ ಸೊಗಡು ಗಾಢವಾಗಿದೆ. ಅವರು ತಂದಿರುವ ಕತೆ, ಪಾತ್ರಗಳು ಸ್ವಾರಸ್ಯವಾಗಿವೆ. ಇದಕ್ಕೆ ಅವರು ಅನುಸರಿಸಿರುವ ರಿಯಲಿಸ್ಟಿಕ್ ನಾಟಕ ರಚನಾಕ್ರಮ ಮತ್ತು ಕೆಲವು ಸಲ ಮೆಲೊಡ್ರಾಮಾ ಕಸರತ್ತುಗಳು ನಿರೂಪಣೆಯನ್ನು ಆಗಾಗ ಅಡ್ಡಿಗೊಳಿಸುತ್ತವೆ. ಆದರೆ ಕಾವ್ಯಾತ್ಮಕ ಹೂರಣದಿಂದ ಕೂಡಿದ ಕೃತಿಯನ್ನು ನುರಿತ ನಿರ್ದೇಶಕರು ಯಶಸ್ವಿಯಾಗಿ ಪ್ರಯೋಗಿಸುವರೆಂಬ ವಿಶ್ವಾಸ ನನ್ನದು. ಇದು ಅವರ ಮೊದಲ ನಾಟಕವಾದರೂ ಮಾಗಿದ ಅನುಭವ, ಪೂರ್ವಭಾವಿ ಓದಿನ ವಿಸ್ತಾರ, ಜಗತ್ತನ್ನು ನೋಡಿದ ರೀತಿ, ನಾಟಕ ತಂತ್ರಗಳ ಪರಿಚಯ, ವಸ್ತು ವಿನ್ಯಾಸದ ನಿರೂಪಣೆ ಇವೆಲ್ಲ ಕೊಕ್ಕನವರ ಅವರ ಪ್ರತಿಭಾ ಸ್ಪರ್ಶಕ್ಕೆ ದಕ್ಕಿದ ಪೋಷಕಾಂಶಗಳಾಗಿ ಕೆಲಸ ಮಾಡಿವೆ. ‘ಇತಿಹಾಸ-ವಿಜ್ಞಾನ -ಸಮಾಜ’ ಈ ತ್ರಿಕೋನ ಜ್ಞಾನತರಂಗದ ಮೇಲೆ ಈ ನಾಟಕದ ದಿವ್ಯ ಸೌಧ ನಿರ್ಮಾಣಗೊಂಡಿದೆ. ಇದಕ್ಕೆ ಕೇವಲ ಸಾಹಿತ್ಯಕ ಪ್ರತಿಭೆ ಇದ್ದರೆ ಸಾಲದು ಕಲಾತ್ಮಕತೆಯೂ ಅನಿವಾರ್ಯವಾಗುತ್ತದೆ. ಇವೆರಡರ ಸಮನ್ವಯ ನಾಟಕದಲ್ಲಿ ಮೈದಾಳಿ ಬಂದಿದೆ. ಅವರ ನಾಟಕ ರಚನಾಯಜ್ಞ ಸಾಂಗವಾಗಿ ಮುಂದುವರಿಯಲಿ, ಹೊಸ ಹೊಸ ದಿಗಂತವನ್ನು ಅನ್ವೇಷಿಸಲಿ.

ಕೃತಿ: ಧಣಿಯ ಹಿಂದಿನ ಧ್ವನಿ

ನಾಟಕ

ಮುಖಬೆಲೆ: 190 ರೂ.

ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್,

ಯಳಗಲ್ಲು, ಕೋಡೂರು ಅಂಚೆ,

577418 ಹೊಸನಗರ (ತಾ.), ಶಿವಮೊಗ್ಗ ಜಿಲ್ಲೆ

ಮೊ: 7338437666

Tags

Dhaniya hindina dhvaniBooks
share
ಡಾ. ಎಚ್.ಎಸ್. ಶಿವಪ್ರಕಾಶ
ಡಾ. ಎಚ್.ಎಸ್. ಶಿವಪ್ರಕಾಶ
Next Story
X