Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ವಿಮರ್ಶೆಯ ವಿವೇಕವನ್ನು ವಿಸ್ತರಿಸುವ...

ವಿಮರ್ಶೆಯ ವಿವೇಕವನ್ನು ವಿಸ್ತರಿಸುವ ‘ಹದವಾಗುವ ಹಾದಿಯಲಿ’

ರಜನಿ ಎಂ.ಬಿ. ಬೆಂಗಳೂರುರಜನಿ ಎಂ.ಬಿ. ಬೆಂಗಳೂರು27 Oct 2026 2:49 PM IST
share
ವಿಮರ್ಶೆಯ ವಿವೇಕವನ್ನು ವಿಸ್ತರಿಸುವ ‘ಹದವಾಗುವ ಹಾದಿಯಲಿ’

ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಬರವಣಿಗೆಯ ಮೂಲಕ ತಮ್ಮದೇ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಮಹಾದೇವ ಬಸರಕೋಡ ನಮ್ಮ ನಡುವಿನ ಮಹತ್ವದ ಬರಹಗಾರರು. ಕವಿ ಮನಸ್ಸಿನ ಸೂಕ್ಷ್ಮ ನೋಟಗಳು, ವೈಚಾರಿಕ ದೃಷ್ಟಿಕೋನಗಳು, ಅವೆಲ್ಲದಕ್ಕಿಂತ ಮಿಗಿಲಾಗಿ ಜೀವಪರ ನಿಲುವುಗಳು ಅವರ ಬರವಣಿಗೆಯ ಮೂಲದ್ರವ್ಯವಾಗಿದೆ. ವಿಜ್ಞಾನದೊಂದಿಗೆ ಒಡನಾಡುವ ಅವರು ವೈಜ್ಞಾನಿಕ ತಾತ್ವಿಕತೆಯಿಂದ ಸಂಸ್ಕೃತಿಯ ಸಂವೇದನೆಯನ್ನು ಹೊಸ ಪೀಳಿಗೆಗೆ ದಾಟಿಸುವ ಜವಾಬ್ದಾರಿಯನ್ನು ತಮ್ಮ ಸಾಹಿತ್ಯ ಚಟುವಟಿಕೆಗಳ ಮೂಲಕ ನಿಭಾಯಿಸುತ್ತಿದ್ದಾರೆ. ತಮ್ಮ ಅಧ್ಯಯನಶೀಲತೆ ಮತ್ತು ಚಿಂತನಶೀಲತೆಯ ತಳಹದಿಯ ಮೇಲೆ ಸಹೃದಯನೊಬ್ಬನ ಕೃತಿಯನ್ನು ಪರಿಭಾವಿಸಿ ಪ್ರತಿಕ್ರಿಯಿಸುವ, ಒಂದು ಕೃತಿಯ ಸಂರಚನೆಯೊಳಗಿನ ಸೃಜನಶೀಲತೆಯನ್ನು ಮತ್ತು ಅದರ ಉದ್ದೇಶದ ಸಾಫಲ್ಯವನ್ನು ತೆರೆದಿಡುವ ಹಿನ್ನೆಲೆಯಲ್ಲಿ ಮತ್ತೊಂದು ಕೃತಿ ‘ಹದವಾಗುವ ಹಾದಿಯಲ್ಲಿ’ ಸೇರ್ಪಡೆಯಾಗಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ವಿಮರ್ಶೆಯನ್ನು, ಬರೀ ವಿಮರ್ಶಾ ಪರಂಪರೆ ಮತ್ತು ಸೈದ್ಧಾಂತಿಕ ನೆಲೆಯಲ್ಲಿ ನೋಡದೆ ಕೃತಿಯ ಒಳಹೊಕ್ಕು, ತಾವು ಕಂಡುಂಡ ಅದರ ತಿರುಳನ್ನು ಇತರ ಓದುಗರ ಹೃದಯಕ್ಕೆ ತಲುಪಿಸುವ ಸಹೃದಯಕೇಂದ್ರಿತ ವಿಮರ್ಶೆಯನ್ನು ಕಟ್ಟಿಕೊಡುವ ಹಿನ್ನೆಲೆಯಲ್ಲಿ ಅವರ ಪ್ರಸ್ತುತ ಕೃತಿ ಮೂಡಿ ಬಂದಿರುವುದು ಗಮನಾರ್ಹವಾಗಿದೆ.

ಇಪ್ಪತ್ತು ಕೃತಿಗಳ ಪರಿಚಯಾತ್ಮಕ ಪ್ರಾಯೋಗಿಕ ವಿಮರ್ಶೆ ಮಾತ್ರವಲ್ಲದೆ ಆಕೃತಿ ಮತ್ತು ಆಶಯಗಳನ್ನು ಮಹಾದೇವ ಬಸರಕೋಡ ಅವರು ಇಲ್ಲಿ ಸಮರ್ಥವಾಗಿ ಪ್ರತಿಬಿಂಬಿಸುತ್ತಾರೆ. ಕೇವಲ ಸೌಂದರ್ಯ ಮೀಮಾಂಸೆಯ ಆವರಣದಲ್ಲಿ ನಿಂತು ರಸಾನುಭವ ಅಳೆಯದೆ, ನಮ್ಮ ಚಾರಿತ್ರಿಕ ಪ್ರಜ್ಞೆ, ಜಾತಿ-ಮತ ಪಂಥಗಳ ಕಂದಕ, ಅಧಿಕಾರದ ನೆಲೆಗಳೊಂದಿಗೆ ನಡೆಸುವ ಸಂಕೀರ್ಣತೆಗಳೊಂದಿಗೆ ಮುಖಾಮುಖಿಯಾಗುತ್ತಾರೆ. ಇಲ್ಲಿನ ಲೇಖನಗಳೆಲ್ಲವೂ ಮೆಲುದನಿಯದ್ದು. ಕಣ್ಣು ಕೋರೈಸುವ ಮೈ ಮರೆಸುವ ಮಾಟಗಳದ್ದಲ್ಲ. ವಿಮರ್ಶೆಯ ಒಂದಷ್ಟು ಭಿನ್ನ ಮಾದರಿಯ ರೂಪದ್ದು ಎಂಬುದು ಪ್ರಸ್ತುತ ಕೃತಿಯ ವಿಶೇಷತೆಯಾಗಿದೆ.

ಸಂಕಲನದ ಮೊದಲ ಲೇಖನ ಗಣೇಶ ಅಮೀನಗಡ ಅವರ ‘ತುಸುವೆ ಕುಡಿವ ಗಂಡನ ಕೊಡು ತಾಯಿ’ ಕೃತಿಯ ಲಲಿತ ಪ್ರಬಂಧಗಳ ಲೇಖನಗಳ ಒಳಆಶಯಗಳನ್ನು ಸಮರ್ಥವಾಗಿ ದರ್ಶಿಸುತ್ತದೆ. ಬಂಡವಾಳಶಾಹಿ, ಜಾಗತೀಕರಣ, ವೈಜ್ಞಾನಿಕ ಆವಿಷ್ಕಾರಗಳ ಹಿನ್ನೆಲೆಯಲ್ಲಿ ಬದುಕಿನ ರೀತಿ ರಿವಾಜುಗಳು ನಮ್ಮ ದೇಶಿ ಸಮುದಾಯ ಪ್ರಜ್ಞೆಯನ್ನು ಪಲ್ಲಟಗೊಳಿಸಿದ ಪರಿಯನ್ನು ಮನೋಜ್ಞವಾಗಿ ಪರಿಚಯಿಸುತ್ತದೆ. ಫ.ಗು. ಸಿದ್ಧಾಪುರ ಅವರು ತಮ್ಮ ಆತ್ಮಕಥೆ ಕರುಣಾಂಜಲಿ ದ್ವಿಪದಿ ದೇಶಿ ಛಂದಸ್ಸಿನ ರೂಪವನ್ನು ಮೆಚ್ಚಿಕೊಳ್ಳುತ್ತಲೇ ಇನ್ನೊಂದಡೆ ಅಲ್ಲಲ್ಲಿ ವಾಚ್ಯವಾಗಿ ಕಾಣುವುದನ್ನು ಬೆಟ್ಟುಮಾಡಿ ತೋರಿಸುತ್ತಾರೆ. ಅಕ್ಬರ್ ಕಾಲಿಮಿರ್ಚಿ ಅವರ ‘ಹಸಿವು ಮತ್ತು ತಲ್ಲಣಗಳ ನದಿ’, ಸದಾಶಿವ ದೊಡಮನಿ ಅವರ ‘ಇರುವುದು ಒಂದೇ ರೊಟ್ಟಿ’, ಶ್ರೀದೇವಿ ಕರ್ಜಗಿ ಅವರ ‘ಏನಂತಿ’, ಎಚ್.ಆರ್. ಸುಜಾತಾ ಅವರ ‘ಮೋಡ ಕಟ್ಟುವ ಕನಸು’ ಕವನ ಸಂಕಲಗಳ ಒಳನೋಟಗಳನ್ನು ತಮ್ಮದೇ ಆದ ಶೈಲಿಯಲ್ಲಿ ವಿಭಿನ್ನವಾಗಿ ಅನಾವರಣಗೊಳಿಸುತ್ತಾರೆ. ಕವನ ಸಂಕಲನಗಳಲ್ಲಿ ಪ್ರವಹಿಸುವ ಪರಿಸರದ ಮೇಲಾಗುತ್ತಿರುವ ಅನಾಚಾರಗಳನ್ನು, ಹೆಣ್ಣಿನ ಒಳ ಮನಸ್ಸಿನ ಸೂಕ್ಷ್ಮ ಸಂವೇದನೆಗಳನ್ನು, ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಮತ್ತೆ ಹಂಬಲಿಸಿ ಮುಕ್ತವಾದ ನೆಲೆಗೆ ಬಂದು ನಿಲ್ಲುವ ನೂರೆಂಟು ಆಶಯಗಳನ್ನು, ಮಾನವ ಮುಖಿಯಾದ ಸ್ಥಾಯಿ ಭಾವಗಳನ್ನು ನಿಚ್ಚಳವಾಗಿ ಗುರುತಿಸುತ್ತಾರೆ. ಸಲ್ಲದ ಬಿಗಿಯಾದ ನಾಗರಿಕತೆಯ ನಿಯಂತ್ರಣಗಳಲ್ಲಿ ನಿಲುಗಡೆ ಹೊಂದಿರುವ ಸಂಗತಿಗಳನ್ನು ಅಲ್ಲಗಳೆಯುತ್ತಾರೆ. ವಿಶ್ವಾಸ, ನಿರ್ಭಯತೆಯಿಂದ ಹೊಸತನಕ್ಕಾಗಿ ಹಂಬಲಿಸುವ ಮನೋಧರ್ಮವನ್ನು ಗುರುತಿಸಿ ಅದು ನೊಂದ ಜೀವಿಗಳ ಬಾಳಿಗೆ ಬೆಳಕಾಗಿಸುವ ಪ್ರಯತ್ನವನ್ನು ಮಾಡುತ್ತಾರೆ.

ಕಾದಂಬರಿಕಾರ ಶಶಿಧರ ಹಾಲಾಡಿಯವರ ‘ನದಿ ದಾಟಿ ಬಂದವರು’ ಕಾದಂಬರಿಯಲ್ಲಿನ ಜಮೀನ್ದಾರಿ ಊಳಿಗಮಾನ್ಯ ಪದ್ಧತಿಯ ಕಬಂಧ ಬಾಹುಗಳು ತನ್ನ ಕಪಿಮುಷ್ಟಿಯಲ್ಲಿ ಬಂಧಿಸಿದ ಕಾರಣಕ್ಕಾಗಿ ಕಂಗೆಟ್ಟ ಜನಸಾಮಾನ್ಯರ ಬದುಕಿಗೆ ಸ್ವಾತಂತ್ರ್ಯದ ಸವಿರುಚಿಯನ್ನು ತಂದು ಕೊಡುವ ನಿಟ್ಟಿನಲ್ಲಿ ಗೇಣಿದಾರರ ಬದುಕನ್ನು ಅತ್ಯಂತ ಸಮರ್ಥವಾಗಿ ಕಟ್ಟಿಕೊಟ್ಟ ಪರಿಯನ್ನು ಸಹೃದಯಿ ಓದುಗರ ಮನದಾಳಕ್ಕೆ ದಾಟಿಸುತ್ತಾರೆ. ಕಣ್ಣಂಚು ತೇವಗೊಳಿಸುವ ಪರಿಯನ್ನು ಪ್ರಬುದ್ಧವಾಗಿ ತೆರೆದಿಡುತ್ತಾರೆ. ಬದಲಾದ ಕಾಲಘಟ್ಟದಲ್ಲಿ ಕಾದಂಬರಿಯ ನಾಯಕ ಕುಯೀರನ ಭೌಗೋಳಿಕ ವಲಸೆಯನ್ನು ಸಂಕೇತಿಸಿಕೊಂಡರೂ ಅದು ಜೀತ ಪದ್ಧತಿಯಿಂದ ಮಾಲಕತ್ವದೆಡೆಗೆ, ಅಸಮಾನತೆಯಿಂದ ಸಮಾನತೆಯ ಬದುಕಿನೆಡೆಗೆ, ಅಸಂಗತದಿಂದ ಸಂಗತದೆಡೆಗಿನ ಮಹತ್ತರ ಪಲ್ಲಟಗೊಂಡಿರುವುದನ್ನು ಶೋಧಿಸುತ್ತಾರೆ. ಇನ್ನುಳಿದಂತೆ ಶಿವಶಂಕ್ರಪ್ಪ ಶಿರೋಳ ಅವರ ನಳದಮಯಂತಿ ನಾಟಕ, ಹಸನ್ ಬೇಪಾರಿಯ ಅವರ ಅಮ್ಮ ಎಂಬ ಕಡಲು, ಶ್ರೀಧರ ಬನವಾಸಿ ಅವರ ಜಯಂತಿಪುರದ ಕಥೆಗಳು, ಎಂ.ವಿ. ಷಡಕ್ಷರಿ ಅವರ ಅಂತಿಮ ತೀರ್ಪು ಕಾದಂಬರಿಗಳಲ್ಲಿ ಶೋಷಣೆಯ ಕರಾಳತೆಯ ಬೆತ್ತಲು ಮಾಡಿ ಅಹಿಂಸಾತ್ಮಕವಾದ ಜೀವಪ್ರೀತಿಯನ್ನು ಹುಡುಕುವ ಪ್ರಯತ್ನಗಳನ್ನು ಗಂಭೀರತೆಯಿಂದ ಗಮನಿಸುತ್ತಾರೆ

ಮಹಾದೇವ ಬಸರಕೋಡ ಅವರ ಇಲ್ಲಿನ ಲೇಖನಗಳು ಮೇಲ್ನೋಟಕ್ಕೆ ಪರಿಚಯಾತ್ಮಕದಂತೆ ತೋರಿದರೂ ಆಧುನಿಕ ಕನ್ನಡ ಸಂವೇದನೆಯ ಪರಂಪರೆ ಮತ್ತು ವರ್ತಮಾನದ ಬಿಕ್ಕಟ್ಟುಗಳೊಂದಿಗೆ ನಡೆಸುತ್ತಿರುವ ಸಂಘರ್ಷಗಳನ್ನು ಶೋಧಿಸುತ್ತವೆ. ಅವರು ಕನ್ನಡ ವಿಮರ್ಶಾ ಪರಂಪರೆಯ ಸೈದ್ಧಾಂತಿಕ ತಳಹದಿಯಾಚೆ ಒಂದಷ್ಟು ದೂರ ಸರಿದು ವಿಮರ್ಶೆಯ ವಿವೇಕವನ್ನು ವಿಸ್ತರಿಸುತ್ತಾರೆ. ಪುಸ್ತಕ ವಿಮರ್ಶೆಯ ಹೊಸದಾರಿಯನ್ನು ಕಂಡುಕೊಳ್ಳಲು ಇಲ್ಲಿನ ಬರಹಗಳು ತಹತಹಿಸುತ್ತವೆ. ಅತ್ಯಂತ ಸರಳ ಮತ್ತು ಹದವಾದ ಭಾಷೆ, ಸ್ವಷ್ಟ ನಿಲುವುಗಳು ಓದುವ ಮನಸ್ಸುಗಳು ಮುದುಡುತ್ತಿರುವ ಈ ಹೊತ್ತಿನ ಸಂದರ್ಭಗಳಲ್ಲಿ ಓದಿನತ್ತ ಒಲವನ್ನು ಹುಟ್ಟಿಸುತ್ತವೆ.

share
ರಜನಿ ಎಂ.ಬಿ. ಬೆಂಗಳೂರು
ರಜನಿ ಎಂ.ಬಿ. ಬೆಂಗಳೂರು
Next Story
X