Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪುಸ್ತಕ ಸಾಂಗತ್ಯ
  5. ಆಧುನಿಕ ಭಾರತ ಶಿಲ್ಪಿಯ ಅನಾವರಣ

ಆಧುನಿಕ ಭಾರತ ಶಿಲ್ಪಿಯ ಅನಾವರಣ

-ನಾ. ದಿವಾಕರ-ನಾ. ದಿವಾಕರ23 Aug 2026 11:27 AM IST
share
ಆಧುನಿಕ ಭಾರತ ಶಿಲ್ಪಿಯ ಅನಾವರಣ

ವರ್ತಮಾನದ ಭಾರತ 2047ರ ವಿಕಸಿತ ಭಾರತದ ಕಲ್ಪನೆಯೊಂದಿಗೆ ಮುನ್ನುಗ್ಗುತ್ತಿರುವ ಹೊತ್ತಿನಲ್ಲಿ ಎಲ್ಲ ಪೂರ್ವಾಗ್ರಹಗಳನ್ನೂ ಬದಿಗಿಟ್ಟು ನಮ್ಮ ಕೃತಜ್ಞತೆಯನ್ನು ಸಲ್ಲಿಸಬೇಕಾದ ಮಹಾನ್ ನಾಯಕರಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಪ್ರಮುಖರು. ಕಳೆದ 12 ವರ್ಷಗಳ ಹಿಂದುತ್ವ ಆಳ್ವಿಕೆಯಲ್ಲಿ ಸಾಕಷ್ಟು ನಿಂದನೆ, ದೂಷಣೆ, ಆರೋಪಗಳಿಗೆ ಗುರಿಯಾಗಿದ್ದರೂ, ನಮ್ಮ ದೇಶ ನಿಂತ ನೆಲದಡಿಯಲ್ಲಿ ನೆಹರೂ ಯುಗದ ಅಡಿಪಾಯ ಇನ್ನೂ ಗಟ್ಟಿಯಾಗಿರುವುದನ್ನು ಯಾರಿಂದಲೂ ಅಲ್ಲಗಳೆಯಲಾಗುವುದಿಲ್ಲ. ಇದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವ ಅಮೂಲ್ಯ ಕೃತಿ ಡಾ. ಬಿ.ಆರ್.ಮಂಜುನಾಥ್‌ಮತ್ತು ಡಾ. ಎಚ್.ಕೆ. ಜಯಲಕ್ಷ್ಮಿ ಅವರು ಅನುವಾದಿಸಿರುವ ಕೃತಿ ‘ನೆಹರೂ ಕಲ್ಪನೆಯ ಭಾರತ’ (ಮೂಲ ಆದಿತ್ಯ ಮುಖರ್ಜಿ).

ಭವಿಷ್ಯದ ಭಾರತವನ್ನು ಕಲ್ಪಿಸಿಕೊಳ್ಳುವುದೇ ಅಲ್ಲದೆ, ತಮ್ಮ ಕನಸನ್ನು ಸಾಕಾರಗೊಳಿಸಲು ಆಡಳಿತಾತ್ಮಕವಾಗಿ ಶ್ರಮಿಸಿರುವ ನೆಹರೂ, ತಾವು ಕನಸಿದ ಭಾರತವನ್ನು ಅಕ್ಷರಗಳಲ್ಲಿ ಹಿಡಿದಿಟ್ಟಿರುವ ಏಕೈಕ ಪ್ರಧಾನಮಂತ್ರಿ. ಇದನ್ನು ವಿವಿಧ ಸ್ತರಗಳಲ್ಲಿ, ಆಯಾಮಗಳಲ್ಲಿ ಸಾಂಸ್ಥಿಕ ದಾಖಲೆಗಳ ಸಮೇತ ಓದುಗರ ಮುಂದಿಡುವ ಕೃತಿ ‘ನೆಹರೂ ಕಲ್ಪನೆಯ ಭಾರತ’. ಮೂಲ ಲೇಖಕ ಆದಿತ್ಯ ಮುಖರ್ಜಿ ಅವರ ಒಂದು ಉಪನ್ಯಾಸವನ್ನೇ ಪೀಠಿಕೆಯಾಗಿಸಿರುವ ಈ ಕೃತಿಯಲ್ಲಿ 80 ವರ್ಷಗಳ ಭಾರತ ಯಶಸ್ವಿಯಾಗಿ ನಡೆದು ಬರಲು ಸುಸ್ಥಿರ ಹೆದ್ದಾರಿಯನ್ನು ನಿರ್ಮಿಸಿದ ನೆಹರೂ ಅವರ ವಿಭಿನ್ನ ಚಿಂತನೆ, ಕಾರ್ಯವೈಖರಿ ಮತ್ತು ಸಾಧನೆಗಳನ್ನು ತೆರೆದಿಡಲಾಗಿದೆ.

ಬೇರೆ ಯಾವುದೇ ದೇಶದಲ್ಲಾದರೂ ನೆಹರೂ ಅವರಂತಹ ಮೇರು ವ್ಯಕ್ತಿತ್ವವನ್ನು ಭಾರತದಲ್ಲಿ ಮಾಡಿದಂತೆ ರಾಕ್ಷಸೀಕರಿಸಿರಲು (Villanise) ಸಾಧ್ಯವಿಲ್ಲ. ‘ನೆಹರೂ ಅವರನ್ನು ರಾಕ್ಷಸೀಕರಿಸಿರುವುದು’ ಅಧ್ಯಾಯದಲ್ಲಿ ಲೇಖಕರು ಇದನ್ನು ಎಲ್ಲ ಆಯಾಮಗಳಿಂದಲೂ ಚರ್ಚಿಸಿದ್ದಾರೆ. ಈ ಪ್ರಯತ್ನ ‘ಅಭಿಪ್ರಾಯ ಉತ್ಪಾದಕರನ್ನು’ ಬೆತ್ತಲೆಗೊಳಿಸಿದೆಯೇ ಹೊರತು, ನೆಹರೂ ಅವರನ್ನಲ್ಲ. ನೆಹರೂ ಅವರ ‘ಇತಿಹಾಸದ ಶಿಸ್ತು’ ಅಧ್ಯಾಯದಲ್ಲಿ ಒಬ್ಬ ರಾಜಕೀಯ ಮುತ್ಸದ್ದಿಯಾಗಿ, ರಾಜನೀತಿಜ್ಞರಾಗಿ (Statesman) ಹಾಗೂ ಪ್ರಜಾಸತ್ತೆಯ ಆರಾಧಕರಾಗಿ ನೆಹರೂ ಏಕೆ ಕಾಣುತ್ತಾರೆ ಎನ್ನುವುದನ್ನು ಚಾರಿತ್ರಿಕ ದಾಖಲೆಗಳೊಂದಿಗೆ ಪ್ರಸ್ತುತಪಡಿಸಲಾಗಿದೆ. ಪ್ರಾಚೀನ, ಪುರಾತನ, ಮಧ್ಯಕಾಲೀನ, ಆಧುನಿಕ ಹಾಗೂ ಸಮಕಾಲೀನ ಇತಿಹಾಸದ ಅಧ್ಯಯನ ಮಾಡಿರುವ ಏಕೈಕ ಪ್ರಧಾನಿಯಾಗಿ ನೆಹರು ಕಾಣುವುದನ್ನು ಈ ಅಧ್ಯಾಯ ದೃಢೀಕರಿಸುತ್ತದೆ.

‘ಭಾರತದ ಕಲ್ಪನೆ’ ಅಧ್ಯಾಯದಲ್ಲಿ ಸ್ವಾತಂತ್ರ್ಯಪೂರ್ವ ಸಂವಾದಗಳನ್ನು ಉಲ್ಲೇಖಿಸಲಾಗಿದ್ದು, ಮಹಾತ್ಮಾ ಗಾಂಧಿ ಏಕೆ ನೆಹರೂ ಅವರನ್ನೇ ಆಯ್ಕೆ ಮಾಡಿದ್ದರು ಎನ್ನುವುದನ್ನು ಅವರದೇ ನುಡಿಗಳ ಮೂಲಕ ದಾಖಲಿಸಲಾಗಿದೆ (ಪುಟ 41-42). ತನ್ನ 80ನೆಯ ಹೆಜ್ಜೆಯಲ್ಲಿ ನವ ಭಾರತ ಕಳೆದುಕೊಳ್ಳುತ್ತಿರುವ ಸಾರ್ವಭೌಮತ್ವ, ಜನತಂತ್ರ, ಧರ್ಮನಿರಪೇಕ್ಷತೆ, ಬಡಜನರ ಪರ ದೃಷ್ಟಿಕೋನ, ಇವುಗಳನ್ನು ನೆಹರೂ ಅವರ ರಾಜಕೀಯ ಸಿದ್ಧಾಂತದ ಆಧಾರ ಸ್ತಂಭಗಳು ಎನ್ನುವುದನ್ನು ಈ ಅಧ್ಯಾಯ ಸ್ಪಷ್ಟೀಕರಿಸುತ್ತದೆ. ವರ್ತಮಾನದ ಭಾರತವನ್ನು ವಸ್ತುಶಃ ಆಳುತ್ತಿರುವ ಕೋಮುವಾದ-ಮತೀಯವಾದದ ಬಗ್ಗೆ ನೆಹರೂ ಅವರಲ್ಲಿದ್ದ ವಿರೋಧ ಮತ್ತು ಅದನ್ನು ಕೊನೆಗಾಣಿಸಲು ಅವರು ಪಟ್ಟ ಶ್ರಮ ‘ಕೋಮುವಾದದ ಸವಾಲಿನ...’ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಸ್ವಾತಂತ್ರ್ಯದ ಹೊಸ್ತಿಲಲ್ಲೇ 60 ಲಕ್ಷ ನಿರಾಶ್ರಿತರನ್ನು ನಿಭಾಯಿಸಿದ ನೆಹರೂ ಆಳ್ವಿಕೆ ಎದುರಿಸಿದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಪ್ರಾದೇಶಿಕ ಸವಾಲುಗಳು ಹಿಮಾಲಯದಷ್ಟೇ ಎತ್ತರದ್ದು. ಸಾವು ನೋವುಗಳು ಸಾವಿರ ಸಂಖ್ಯೆಗಳಲ್ಲಿ ಸಂಭವಿಸಿದರೂ ಸಂಸತ್ತಿನಲ್ಲಿ ಧ್ವನಿಸುವುದನ್ನು ಕಾಣಲಾಗದ ನವ ಭಾರತದ ಎಳೆಯ ಪೀಳಿಗೆಗೆ, 1946ರ ನವೆಂಬರ್‌ನಲ್ಲಿ ಬಿಹಾರದಲ್ಲಿ ನಡೆದ ಕೋಮು ಗಲಭೆಗಳ ಪರಿಚಯವನ್ನು ಈ ಕೃತಿ ಮಾಡುತ್ತದೆ. ‘ಒಬ್ಬರ ಮೇಲೊಬ್ಬರು ದಾಳಿ ಮಾಡುವ ಮುನ್ನ ನನ್ನ ಹೆಣದ ಮೇಲೆ ನಡೆದು ಹೋಗಬೇಕಾಗುತ್ತದೆ’(ಪುಟ 49) ಎಂಬ ನೆಹರೂ ಅವರ ದಿಟ್ಟ ನಿಲುವು ಇಂದಿನ ಪೀಳಿಗೆಗೆ ಚಂದಮಾಮ ಕತೆಯ ಹಾಗೆ ತೋರಬಹುದೇನೋ. ಕೋಮುವಾದ-ಮತೀಯವಾದವನ್ನು ಪಾರದರ್ಶಕತೆಯಿಂದ ನಿಷ್ಪಕ್ಷವಾಗಿ ನಿಯಂತ್ರಿಸಿದ ನೆಹರೂ ಅವರ ನೈತಿಕ ಸ್ಥೈರ್ಯವನ್ನು, ಆಳ್ವಿಕೆಯ ಕ್ಷಮತೆಯನ್ನು ಈ ಅಧ್ಯಾಯದಲ್ಲಿ ಸವಿವವರವಾಗಿ ತೆರೆದಿಡಲಾಗಿದೆ.

ಇಂದು ಅಪಾಯಕ್ಕೀಡಾಗಿರುವ ಜನತಂತ್ರವನ್ನು ಕಟ್ಟುವ ಬಗೆ ಹೇಗೆ? ಇದಕ್ಕೆ ಉತ್ತರವನ್ನು ನೆಹರೂ ಅವರಲ್ಲೇ ಕಾಣಬಹುದು ಎಂದು ದೃಢೀಕರಿಸುತ್ತದೆ ‘ಜನತಂತ್ರವನ್ನು ಕಟ್ಟುವುದು’ ಅಧ್ಯಾಯ (ಪುಟ 73-80). ‘ನಾಗರಿಕ ಹಕ್ಕು ಮತ್ತು ಪತ್ರಿಕಾ ಸ್ವಾತಂತ್ರ್ಯವೆಂದರೆ ನಮಗೆ ಯಾವುದು ಇಷ್ಟವಿಲ್ಲವೋ ಅದಕ್ಕೆ ಅನುಮತಿ ನೀಡುವುದು ಹಾಗೂ ನಮ್ಮ ಕುರಿತಾದ ಟೀಕೆಯನ್ನು ಸಹಿಸಿಕೊಳ್ಳುವುದು’(ಪುಟ 75) ನೆಹರೂ ಅವರ ಈ ಹೇಳಿಕೆಯೇ ಜನ ತಂತ್ರದ ಅಂತಃಸತ್ವವನ್ನು ಸೂಚಿಸುತ್ತದೆ. ಈ ಜನತಂತ್ರದ ಬುನಾದಿಯ ಮೇಲೆ ನೆಹರೂ ಅನುಸರಿಸಿದ ಆರ್ಥಿಕ ನೀತಿ (ಮಿಶ್ರ ಆರ್ಥಿಕತೆ) ಅರ್ಥಶಾಸ್ತ್ರೀಯ ಪರಿ ಭಾಷೆಯಲ್ಲಿ ಎಷ್ಟೇ ಮರುವಿಮರ್ಶೆಗೆ, ಟೀಕೆಗೆ ಒಳಗಾದರೂ, ಈ ನೀತಿಗಳ ಫಲವೇ ಭಾರತ ಇಂದಿಗೂ ಸದೃಢ ದೇಶವಾಗಿ ನಿಂತಿದೆ ಎನ್ನುವುದು ಅಲ್ಲಗಳೆಯಲಾಗದ ಸತ್ಯ. ಈ ವಿಭಿನ್ನ ಆಯಾಮಗಳನ್ನು ‘ಜನತಂತ್ರ ಮತ್ತು ಸಾರ್ವಭೌಮತ್ವದೊಂದಿಗೆ...’’ ಅಧ್ಯಾಯದಲ್ಲಿ ವಿವರಿಸಲಾಗಿದೆ.

ನೆಹರೂ ಅವರ ಬಡಜನರ ಪರ ಕಾಳಜಿ, ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಅರಿವಿನ ಬಗ್ಗೆ ಅವರಲ್ಲಿದ್ದ ಬದ್ಧತೆಯನ್ನು ಮುಂದಿನ ಎರಡು ಅಧ್ಯಾಯಗಳು ತೆರೆದಿಡುತ್ತವೆ. ಪ್ರಾಚೀನ ಸಮಾಜದ ಮೌಢ್ಯ ಮತ್ತು ಅಂಧಾಚರಣೆಗಳನ್ನು ಮರುಸ್ಥಾಪಿಸುತ್ತಿರುವ ಹೊತ್ತಿನಲ್ಲಿ, ನೆಹರೂ ಅವರ ಈ ಪುರೋಗಾಮಿ ಚಿಂತನೆಗಳು ಉಪಯುಕ್ತವಾಗುತ್ತವೆ. ಈ ವಿಭಿನ್ನ/ವಿಶಿಷ್ಟ ಆಯಾಮ ಗಳೊಂದಿಗೆ ಹೊರಬಂದಿರುವ ಈ ಕೃತಿ ವರ್ತಮಾನದ ಜೆನ್ ಝಿ-ಜೆನ್ ಅಲ್ಫಾಗಳಿಗೆ ಉಪಯುಕ್ತ ಪಠ್ಯವಾಗಿದೆ. ಮೂಲ ಲೇಖಕ ಆದಿತ್ಯ ಮುಖರ್ಜಿ ಮತ್ತು ಎಲ್ಲರ ಮನಮುಟ್ಟುವ ಹಾಗೆ ಅನುವಾದಿಸಿರುವ ಮಂಜುನಾಥ್ ಮತ್ತು ಜಯಲಕ್ಷ್ಮಿ ನಿಜಕ್ಕೂ ಅಭಿನಂದನಾರ್ಹರು. ಕೊನೆಯ 30 ಪುಟಗಳ ಟಿಪ್ಪಣಿಗಳಲ್ಲಿರುವ ಕೃತಿಗಳನ್ನು ತಿರುವಿಹಾಕಿದರೂ ಭವಿಷ್ಯ ಭಾರತಕ್ಕೆ ಸತ್ಯದರ್ಶನವಾಗುತ್ತದೆ. ಒಂದು ಅಮೂಲ್ಯ ಕೃತಿ ‘ನೆಹರೂ ಕಲ್ಪನೆಯ ಭಾರತ’.

ಕೃತಿಯ ಮುಖಬೆಲೆ: 190 ರೂ.

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ. ಲಿ.

ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001

ಫೋನ್: 080-22161900/ 22161901/ 22161902

Tags

modernIndianSculptorJawaharlal Nehru
share
-ನಾ. ದಿವಾಕರ
-ನಾ. ದಿವಾಕರ
Next Story
X