ರಾಯಚೂರು | ಸಾರಿಗೆ ನೌಕರರ ಮುಷ್ಕರ: ಪ್ರಯಾಣಿಕರ ಪರದಾಟ

ರಾಯಚೂರು: ಸಂಬಳ ಹಿಂಬಾಕಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಾರಿಗೆ ನೌಕರರು ಆರಂಭಿಸಿರುವ ಮುಷ್ಕರಕ್ಕೆ ರಾಯಚೂರಿನಲ್ಲೂ ಬೆಂಬಲ ವ್ಯಕ್ತವಾಗಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ರಾಯಚೂರು ನಗರದ ಕೇಂದ್ರ ಬಸ್ ನಿಲ್ದಾಣ ತಲುಪಿರುವ ಪ್ರಯಾಣಿಕರು ಸಂಕಷ್ಟಕ್ಕೀಡಾದರು. ಬಸ್ ಸಂಚಾರ ಇಲ್ಲದ ಬಗ್ಗೆ ಮಾಹಿತಿಯಿಲ್ಲದೆ ದೂರದ ಪ್ರಯಾಣಕ್ಕೆಂದು ಬಸ್ ನಿಲ್ದಾಣ ತಲುಪಿದ್ದ ಮಹಿಳೆಯರು, ವಯಸ್ಕರು ಸಾರಿಗೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಮನೆಗೆ ವಾಪಸ್ ಹಿಂದಿರುಗುತ್ತಿರುವ ದೃಶ್ಯಗಳು ಕಂಡುಬರುತ್ತಿದೆ.
ಬಸ್ ನಿಲ್ದಾಣದಲ್ಲಿ ಬಸ್ ಗಳಿಲ್ಲದೇ ಪ್ರಾಂಗಣ ಬಿಕೋ ಎನ್ನುತ್ತಿದೆ. ತುರ್ತು ಕಾರ್ಯಗಳಿಗೆ ಹೋಗುವ ಅನೇಕರು ಖಾಸಗಿ ವಾಹನಗಳಲ್ಲಿ ಹೆಚ್ಚಿನ ದರ ತೆತ್ತು ಪ್ರಯಾಣ ಬೆಳೆಸಿದರು.
ಬಸ್ಸಿಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾದರು. ಗ್ರಾಮೀಣ ಭಾಗದ ಶಾಲಾ ಮಕ್ಕಳು ಟಾಟಾ ಏಸ್ ವಾಹವನ್ನೇರಿ ಶಾಲೆಗೆ ಹೋಗುತ್ತಿರುವುದು ಕಂಡು ಬಂತು
Next Story







