ಮಸ್ಕಿ: ನ್ಯಾಯವಾದಿಗಳ ಸಂಘದಿಂದ ಗಣರಾಜ್ಯೋತ್ಸವ

ಮಸ್ಕಿ, ಜ 26: ಪಟ್ಟಣದ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್ಸಿ. ನ್ಯಾಯಾಲಯದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನ್ಯಾಯಾದೀಶೆ ಸರಸ್ವತಿ ಎಚ್. ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕಿದೆ. ಶಿಕ್ಷಣ, ಸಮಾನತೆ, ವಾಕ್ ಸ್ವಾತಂತ್ರ್ಯ ಹಕ್ಕುಗಳು, ಇಚ್ಛೆಯ ಧರ್ಮವನ್ನು ಸ್ವೀಕರಿಸುವ ಹಕ್ಕುಗಳು, ಎಲ್ಲಿ ಬೇಕಾದರೂ ಜೀವಿಸುವ ಹಕ್ಕುಗಳು, ಹೀಗೆ ಇಷ್ಟೆಲ್ಲ ಸ್ವತಂತ್ರ ಹಕ್ಕುಗಳು ಎಲ್ಲರಿಗೂ ಇರುವುದು ಸಂವಿಧಾನದ ಮೂಲಕ. 1950ರ ಜನವರಿ 26ರಂದು ಜಾರಿಗೆ ಬಂದಿದ್ದು ಪ್ರತಿಯೊಬ್ಬರೂ ಈ ದಿನದ ಮಹತ್ವ ಅರಿಯಬೇಕು ಎಂದರು.
ಸಂವಿಧಾನ ರಚನಾಸಮಿತಿಯ ಸದಸ್ಯರು ಡಾ.ಬಿ,ಆರ್,ಅಂಬೇಡ್ಕರರ ಮುಂದಾಳತ್ವದಲ್ಲಿ ಸಕಲರಿಗೂ ಸಮಾನತೆ ನೀಡುವ ಸಂವಿಧಾನ ರಚನೆಯಾಗಿ ಈ ದಿನದಂದು ಜಾರಿಗೆ ತರಲಾಗಿದೆ. ಪ್ರಪಂಚದಲ್ಲಿಯೇ ವಿಶೇಷವಾದ ಸಂವಿಧಾನವಾಗಿದೆ. ಅದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಈ ಸಂದರ್ಭದಲ್ಲಿ ಮಸ್ಕಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ವೀರಭದ್ರಪ್ಪ, ಹಿರಿಯ ವಕೀಲರಾದ ಈಶಪ್ಪ ದೇಸಾಯಿ, ರಾಮಣ್ಣ ನಾಯಕ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ನಾಗರಬೆಂಚಿ, ಉಪಾಧ್ಯಕ್ಷರಾದ ಅಮರೇಗೌಡ, ನಿರುಪಾದೆಪ್ಪ ಗುಡಿಹಾಳ, ಮೆಹಬೂಬ್ ಭಗವಾನ್, ಗವಿಸಿದ್ದಪ್ಪ ಸೌಕಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







