ರಾಯಚೂರು : ನ.18ರಂದು ಸಂವಿಧಾನ ಸಂರಕ್ಷಣಾ ಪಡೆಯಿಂದ ಜಾಗೃತಿ ಜಾಥಾ

ರಾಯಚೂರು: ಸಂವಿಧಾನ ಸಮರ್ಪಣಾ ದಿನದಂಗವಾಗಿ ನ.18ರಂದು ಸಂವಿಧಾನ ಸಂರಕ್ಷಣಾ ಪಡೆಯಿಂದ ಜಾಗೃತಿ ಜಾಥಾ ಆಯೋಜಿಸಲಾಗಿದೆ ಎಂದು ಪಡೆ ಸಂಚಾಲಕ ಎಂ.ಆರ್.ಭೇರಿ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.
ನ.26 ರಂದು ಸಂವಿಧಾನ ಕರಡು ಸಮಿತಿ ರಾಷ್ಟ್ರಪತಿಗೆ ಸಮರ್ಪಿಸಿ ಅಂಗೀಕಾರಗೊಂಡ ದಿನವನ್ನು ಸಂವಿಧಾನ ಸಮಪರ್ಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ ಸಂವಿಧಾನ ಜಾರಿಗೊಂಡು ದಶಕಗಳು ಕಳೆದರು ಸಂವಿಧಾನ ಕುರಿತು ಮಾಹಿತಿ ಇಲ್ಲದೇ ಇರುವದರಿಂದ ಜಾಗೃತಿ ಮೂಡಿಸುವ
ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಸಂವಿಧಾನವನ್ನು ಒಪ್ಪದೇ ಇರುವ ಜನರು ಅಡೆತಡೆಗಳನ್ನು ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನ ಸಂರಕ್ಷಣಾ ಜಾಗೃತಿ ಜಾಥಾ ನ.18ರಂದು ನಗರದ ಕರ್ನಾಟಕ ಸಂಘದಿಂದ ಪ್ರಾರಂಭವಾಗಿ ನಗರದ ವಿವಿಧ ರಸ್ತೆಗಳ ಮೂಲಕ ಡಾ.ಬಿ.ಆರ್.ಅಂಬೇಡ್ಕರ್
ವೃತ್ತಕ್ಕೆ ಆಗಮಿಸಲಿದೆ. ನಂತರ ಏಮ್ಸ್ ಹೋರಾಟ ಸಮಿತಿಯ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಲಾಗುತ್ತದೆ. ಸ್ಥಳೀಯ ಅನೇಕರು ಭಾಗವಹಿಸಿ ಸಂವಿಧಾನ ಕುರಿತು ಮಾಹಿತಿ ನೀಡಲಿದ್ದಾರೆ. ಜಾಥಾದಲ್ಲಿ ಭಾಗವಹಿಸಲಿಚ್ಛಿಸುವವರು ಕಡ್ಡಾಯವಾಗಿ ನೀಲಿ ಪ್ಯಾಂಟ್, ಬಿಳಿ ಅಂಗಿ, ಟೋಪಿ ಧರಿಸಬೇಕು. ಮಹಿಳೆಯರು, ನೀಲಿ ಬಾರ್ಡರ್ ಇರುವ ಬಿಳಿ ಸೀರೆ ಧರಿಸಬೇಕೆಂದರು. ಎಲ್ಲಾ ಸಮಾಜ ಜನರು, ಮಹಿಳೆಯರು ,ಯುವಕ ಯುವತಿಯರು ಭಾಗವಹಿಸುವಂತೆ ಮನವಿ
ಮಾಡಿದರು.
ಮೂಲ ಸಂವಿಧಾನದಲ್ಲಿ ಪೀಠಿಕೆಯೇ ಇರಲಿಲ್ಲ ಎಂದು ಹೇಳುವವರು ಮನುವಾದಿಗಳಾಗಿದ್ದಾರೆ. ಆಳುವ ಸರಕಾರಗಳು ಸಂವಿಧಾನ ಸಮರ್ಪಕ ಜಾರಿಗೊಳಿಸದೇ ಇರುವದರಿಂದ ಸಂವಿಧಾನ ಆಶಯ ಇಡೇರಲು ಸಾಧ್ಯವಾಗಿಲ್ಲ ಎಂದರು
ಸುದ್ದಿಗೋಷ್ಠಿಯಲ್ಲಿ ಪ್ರಮುಖರುಗಳಾದ ಜಾನವೆಸ್ಲಿ, ಎಸ್ಡಿಪಿಐನ ಅಕ್ಬರ್ ಹುಸೇನ ನಾಗುಂಡಿ, ತಮ್ಮಣ್ಣ, ಈರಣ್ಣ, ತೌಫೀಕ್ ಅಹ್ಮದ್ ಉಪಸ್ಥಿತರಿದ್ದರು.







