ಸಿಂಧನೂರು | ʼರೈತರ ತರಬೇತಿ, ಸಾಮಾನ್ಯ ಸೌಲಭ್ಯ ಕೇಂದ್ರʼ ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ರಾಯಚೂರು : ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಲೋಕಾರ್ಪಣೆ ಸಮಾರಂಭ ಇಂದು (ಅ.16) ನಡೆಯಿತು.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಅಂದಾಜು 2.54 ಕೋಟಿ ರೂ ವೆಚ್ಚದಲ್ಲಿ, ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆಯಡಿ ನಬಾರ್ಡ್ ಸಂಯುಕ್ತವಾಗಿ ರೂಪಿಸಿರುವ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವಾದ ಕಲ್ಯಾಣ ಸಂಪದ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು.
ಇದೆ ವೇಳೆ ಸಚಿವರು, ಕಲ್ಯಾಣ ಸಂಪದ ಕಟ್ಟಡದಲ್ಲಿನ ಕಂಪನ ಜರಡಿ ಯಂತ್ರ, ಜಿಲ್ಲಾ ಮಿಶ್ರಣ ಸಂಗ್ರಹಗಾರ, ಮಿಶ್ರಣ ಯಂತ್ರ, ಶುದ್ಧೀಕರಣ ಮತ್ತು ಗ್ರೈಂಡಿಂಗ್ ಯಂತ್ರ, ಬಣ್ಣ ಆಧಾರಿತ ಬೇರ್ಪಡಿಸುವ ಯಂತ್ರ, ಬೇಳೆ ಪ್ಯಾಂಕಿಂಗ್ ಯಂತ್ರ, ತಯಾರಾದ ವಸ್ತುಗಳ ಸಂಗ್ರಹಗಾರ ವೀಕ್ಷಣೆ ಮಾಡಿದರು. ಬಳಿಕ ವೇದಿಕೆಯ ಕಾರ್ಯಕ್ರಮ ನಡೆಯಿತು.
ಈ ವೇಳೆ ಭಾರತ ಸರಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ.ನಾಗರಾಜ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷರಾದ ಶಾಜಿ ಕೆ.ವಿ., ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಸಿಇಓ ಈಶ್ವರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಮುಖಂಡರಾದ ವೆಂಕಟರಾವ್ ನಾಡಗೌಡ, ಕೆ.ವಿರೂಪಾಕ್ಷಪ್ಪ, ಜವಳಗೇರಾ ಗ್ರಾಪಂ ಅಧ್ಯಕ್ಷರಾದ ನಾಗಲಿಂಗ ಯಮನೂರಪ್ಪ ಹಾಗೂ ಇತರರು ಇದ್ದರು.





