ರಾಯಚೂರು| ಬೀದಿ ನಾಯಿ ದಾಳಿ; ನಾಲ್ಕು ವರ್ಷದ ಮಗುವಿಗೆ ಗಂಭೀರ ಗಾಯ

ರಾಯಚೂರು: ನಗರದ ವಾರ್ಡ್ ನಂಬರ್ 8ರ ಅಂದ್ರೂನ್ ಕಿಲ್ಲಾ ಬಡಾವಣೆಯಲ್ಲಿ ಮನೆಯ ಸಮೀಪ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದ ಘಟನೆ ರವಿವಾರ ನಡೆದಿದೆ.
ಗಾಯಗೊಂಡ ಮಗುವನ್ನು ಮಹಮ್ಮದ್ ನುಮಾನ್ ಹಸ್ನೈನ್ ಎಂದು ಗುರುತಿಸಲಾಗಿದೆ. ಮನೆಯ ಹೊರಗೆ ಆಟ ಆಡುವಾಗ ಏಕಾಏಕಿ ಬೀದಿ ನಾಯಿ ದಾಳಿ ಮಾಡಿ ಮಗುವಿನ ಕುತ್ತಿಗೆ ಹಿಂಭಾಗ, ತಲೆ, ದವಡೆಗೆ ಕಚ್ಚಿದ್ದು, ಮಗುವಿನ ತಲೆ, ಕೆನ್ನೆ ಮೇಲೆ ಗಂಭೀರ ಗಾಯಗಳಾಗಿವೆ. ಮಗುವಿನ ಚೀರಾಟ ಕೇಳಿದ ತಕ್ಷಣ ಅಕ್ಕಪಕ್ಕದವರು ಬಂದು ನಾಯಿಯನ್ನು ಹೊಡೆದೋಡಿಸಿದ್ದಾರೆ.
ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಸ್ಥಳಿಯ ರೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಕನ ತಂದೆ ಮೊಹಮ್ಮದ್ ಫಾರೂಕ್ ಮಹಾನಗರ ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳ ಕಾರ್ಯಾಚರಣೆ ನಡೆಸಿ ಬೇರೆಡೆ ಸಾಗಿಸಬೇಕು ಎಂದು ಒತ್ತಾಯಿಸಿದರು.
Next Story