ಆಳಂದ| ಮೋಘಾ (ಕೆ) ಪತ್ತಿನ ಸಂಘದ ಚುನಾವಣೆ : ಆರ್.ಗುತ್ತೇದಾರ ಬೆಂಬಲಿಗರು ಮೇಲುಗೈ

ಕಲಬುರಗಿ: ಆಳಂದ ತಾಲೂಕಿನ ಮೋಘಾ (ಕೆ) ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಚೋಳಪ್ಪ ಇಬ್ರಾಹಿಂಪುರೆ, ಕಲ್ಯಾಣಿ ಶೇಳಕೆ, ಹಣಮಂತ ಕಾಳಜೆ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸಂಗಮ್ಮ ಕಣ್ಣಿ, ಸಾಲಗಾರರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಶಂಕರ ಹಂಗರಗಿ, ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಬರಗಾಲಿ ರಾಯಪ್ಪ ಪೂಜಾರಿ ಚುನಾವಣೆಯಲ್ಲಿ ಬಹುಮತ ಪಡೆದು ಹಾಗೂ ಸಾಲಗಾರರ ಹಿಂದುಳಿದ ವರ್ಗ ಬ ದಲ್ಲಿ ಕಲ್ಯಾಣಿ ಚಲಗೇರಿ ಅವಿರೋಧವಾಗಿ ಮಾಜಿ ಶಾಸಕ ಗುತ್ತೇದಾರ ಬೆಂಬಲಿಗರು ಆಯ್ಕೆಯಾಗಿದ್ದಾರೆ.
ರವಿವಾರ ನಡೆದ 12 ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ 8 ಜನ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಬೆಂಬಲಿಗರು ಗೆಲುವಿನ ನಗೆ ಬೀರಿದರು. ಗೆಲುವಿನ ನಂತರ ಅಭ್ಯರ್ಥಿಗಳು, ಬೆಂಬಲಿಗರು ಮತ್ತು ಮುಖಂಡರು ವಿಜಯೋತ್ಸವ ಆಚರಿಸಿದರು.
ಗೆಲುವಿಗೆ ಕಾರಣರಾದ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲ ಸದಸ್ಯರಿಗೆ, ಕಾರ್ಯರ್ತರಿಗೆ, ಮುಖಂಡರಿಗೆ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ, ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಎಸ್.ಗುತ್ತೇದಾರ ಧನ್ಯವಾದ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ನೂತನ ನಿರ್ದೇಶಕರು ರೈತರ ಏಳಿಗೆಯ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಿ ಸಂಘವನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಣಮಂತ ಕಾಬಡೆ, ಸುಭಾಷ ಪಾಟೀಲ, ಶ್ರೀಮಂತ ಝುಲ್ಪೆ, ಬಾಬುಗೌಡ ಪಾಟೀಲ, ಸಂಜು ಮೂಲಗೆ, ಯಲ್ಲಪ್ಪ ಪೂಜಾರಿ, ಮಾಣಿಕ ಮೂಲಗೆ, ಸಾಗರ ಪಾಟೀಲ, ಖಂಡುರಾವ ಬಿರಾದಾರ, ಸಾತಣ್ಣಾ ಕಾಳಜೆ, ಪರಮೇಶ್ವರ ಬಿರಾದಾರ, ಧರೇಪ್ಪ ಜಕಾಪೂರೆ ಸೇರಿದಂತೆ ಇತರರು ಇದ್ದರು.







