ಯರಗೇರಾ ತಾಲ್ಲೂಕು ರಚನೆಗೆ ಒತ್ತಾಯಿಸಿ ಸಂಸದರಿಗೆ ಮನವಿ

ರಾಯಚೂರು: ಯರಗೇರಾ ಗ್ರಾಮವನ್ನು ಪ್ರತ್ಯೇಕ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿ ಯರಗೇರಾ ತಾಲ್ಲೂಕು ರಚನೆ ಹೋರಾಟ ಸಮಿತಿಯ ಪದಾಧಿಕಾರಿಗಳು ಸಂಸದ ಜಿ.ಕುಮಾರನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಜುಲೈ 21ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮಿತಿಯ ವತಿಯಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಸಂಸದರ ಬೆಂಬಲ ಅವಶ್ಯಕತೆ ಇದೆ. ತಾವು ಕೂಡ ಸಹ ಭಾಗವಹಿಸಿ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಮನವಿ ಮಾಡಿದರು.
ಯರಗೇರಾ ಗ್ರಾಮ ಭೌಗೋಳಿಕ, ಜನಸಂಖ್ಯೆ ಹಾಗೂ ವಸತಿ ಮೂಲಸೌಕರ್ಯಗಳ ದೃಷ್ಟಿಯಿಂದಲೇ ಪ್ರತ್ಯೇಕ ತಾಲ್ಲೂಕು ಆಗಲು ಅರ್ಹತೆ ಹೊಂದಿದೆ. ಹಾಗಾಗಿ ಹೋರಾಟಕ್ಕೆ ಮುಂದಾಗುತ್ತಿದ್ದೇವೆ ಎಂದು ಹೇಳಿದರು.
ಮುಹಮ್ಮದ್ ನಿಜಾಮುದ್ದೀನ್, ಬಸವರಾಜ ಹೂಗಾರ, ವಿದ್ಯಾನಂದ ರೆಡ್ಡಿ, ಮಹ್ಮದ್ ರಫಿ, ಮೂತಿ೯ಶೆಟ್ಟಿ, ಮಹಾದೇವ ನಾಯಕ, ಬಡೇಸಾಬ್, ಫಾರುಕ್, ಫಹೀಮ್ ಖತೀಬ್, ರಮೇಶ್ ಮಿಲ್ ಉಪಸ್ಥಿತರಿದ್ದರು.
Next Story





