ಸಿಂಧನೂರು ತಾಲೂಕು ವೀರಶೈವ ಲಿಂಗಾಯತ ಸಮಾಜಕ್ಕೆ ನೂತನ ಪದಾಧಿಕಾರಿಗಳ ನೇಮಕ
ಅಧ್ಯಕ್ಷರಾಗಿ ರಾಜಶೇಖರ ಪಾಟೀಲ್ ಅವಿರೋಧ ಆಯ್ಕೆ

ಸಿಂಧನೂರು: ಸಿಂಧನೂರು ತಾಲೂಕು ವೀರಶೈವ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಎಪಿಎಂಸಿ ರಾಜ್ಯ ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ. ರವಿಯಪ್ಪ ತಿಳಿಸಿದ್ದಾರೆ.
ಸಮಾಜದ ಉಪಾಧ್ಯಕ್ಷರಾಗಿ ಬಿ. ಗೀತಾ ಬಳಿಗಾರ, ಮಲ್ಲಯ್ಯ ನವಲಿ ಹಾಗೂ ಶಿವಕುಮಾರ ಜವಳಿ ಆಯ್ಕೆಯಾಗಿದ್ದು, ಒಟ್ಟು 27 ಮಂದಿ ಕಾರ್ಯಕಾರಿ ಮಂಡಳಿ ಸದಸ್ಯರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪೋಷಕ ವರ್ಗದಿಂದ ರವಿಕುಮಾರ ಪನ್ನೂರು, ಮಲ್ಲನಗೌಡ ಮಾಲಿಪಾಟೀಲ್, ಬಸವರಾಜ ಸಾಹುಕಾರ, ಎನ್. ವಿಜಯಕುಮಾರ, ಬಸವರಾಜ ಹಿರೇಗೌಡರ್ ಆಯ್ಕೆಯಾಗಿದ್ದಾರೆ.
ದಾನಿಗಳ ವರ್ಗದಿಂದ ಚಂದ್ರಶೇಖರಗೌಡ, ರಂಗರೆಡ್ಡಿ ಸಾಸಲಮರಿ, ಶರಣಪ್ಪ ಹೂಗಾರ, ಕೆ. ಹಂಚಿನಾಳ, ದೇವೇಂದ್ರಪ್ಪ ಹಾಗೂ ಗುರುಸಿದ್ದಯ್ಯ ವಸ್ತ್ರದ್ ಆಯ್ಕೆಯಾಗಿದ್ದಾರೆ.
ಅಜೀವ ಸದಸ್ಯರ ವರ್ಗದಿಂದ ಅಮರೇಶ ಕುಂಬಾರ, ಉಮೇಶಗೌಡ ಪಾಟೀಲ್, ಅಶೋಕಗೌಡ ಗದ್ರಟಗಿ, ಹಂಪಯ್ಯಸ್ವಾಮಿ, ಎಸ್. ಶರಣೇಗೌಡ, ಎನ್. ವಿರೂಪಯ್ಯಸ್ವಾಮಿ, ಪೃಥ್ವಿರಾಜ ಸಿದ್ದಾಂತಿಮಠ, ಎಂ. ರಾಚಪ್ಪ, ಪಾರ್ವತಿ ಮಲ್ಲನಗೌಡ ಹಾಗೂ ರಾಜೇಶ್ವರಿ ಗಂಗಾನಗರ ಆಯ್ಕೆಯಾಗಿದ್ದಾರೆ.
ವಾರ್ಷಿಕ ಸದಸ್ಯರ ವರ್ಗದಿಂದ ಆರ್. ಪಾಲಾಕ್ಷಗೌಡ ಗೊರೇಬಾಳ, ನಾಗರಾಜ ಕೆ., ಆದಿ ಬಸವರಾಜ, ವೇದಾವತಿ, ಬಸವರಾಜೇಶ್ವರಿ ಹಾಗೂ ಪಾರ್ವತಿ ಬಾದರ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ. ರವಿಯಪ್ಪ ತಿಳಿಸಿದ್ದಾರೆ.






