ಅತ್ತನೂರು | ವಿಎಸ್ಎಸ್ಎನ್ ಅಧ್ಯಕ್ಷರಾಗಿ ಡಾ.ಬಸವರಾಜ, ಉಪಾಧ್ಯಕ್ಷರಾಗಿ ಚಾಂದ್ ಪಾಷ ಅವಿರೋಧ ಆಯ್ಕೆ

ಸಿರವಾರ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಾ.ಬಸವರಾಜ, ಉಪಾಧ್ಯಕ್ಷರಾಗಿ ಚಾಂದ್ ಪಾಷ ಅತ್ತನೂರು ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕಿನ ಅತ್ತನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಸೋಮವಾರ ಸೊಸೈಟಿ ಆವರಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಡಾ.ಬಸವರಾಜ ಶಾಖಾಪುರ ಉಪಾಧ್ಯಕ್ಷ ಸ್ಥಾನಕ್ಕೆ ಚಾಂದ್ ಪಾಷ ಅತ್ತನೂರು ಮಾತ್ರ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾದರು.
ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಕೆ.ಪಿ.ವಿನೋದಕುಮಾರ ಚುನಾವಣಾಧಿಕಾರಿಯಾಗಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಬಸವರಾಜ ಅವರು ಮಾತನಾಡಿ, ಸಹಕಾರಿ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರ ಸಹಕಾರ ಬಹುಮುಖ್ಯವಾಗಿದೆ. ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತೇನೆ ಎಂದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ನಾಗನಗೌಡ ಅತ್ತನೂರು, ಮಲ್ಲಪ್ಪ ಜಕ್ಕಲದಿನ್ನಿ, ಜಯಮ್ಮ ಪ್ರಭಣ್ಣ, ಯಲ್ಲಪ್ಪ ಜಗ್ಲಿ, ಯಲ್ಲನಗೌಡ ಗಣದಿನ್ನಿ, ಸಣ್ಣ ಈರಣ್ಣ ಅತ್ತನೂರು, ವೀರನಗೌಡ ಗಣದಿನ್ನಿ, ಶರೀಫ್ ಬೀ ಅಹ್ಮದ್ ಸಾಬ್, ರಾಜೇಶ್ವರಿ ಮಹಾಂತೇಶ ಪಾಟೀಲ್, ಪದ್ಮಾವತಿ ಮಲ್ಲಿಕಾರ್ಜುನ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಅಭಿಮಾನಿಗಳು ರಸ್ತೆ ಮೇಲೆ ಪಟಾಕಿ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿದರು.







