ಅತ್ತನೂರು | ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ವಿಫಲ, ಅಧ್ಯಕ್ಷರಾಗಿ ಪಾರ್ವತಮ್ಮ ಮುಂದುವರಿಕೆ

ಸಿರವಾರ : ತಾಲ್ಲೂಕಿನ ಅತ್ತನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಮ್ಮ ಅವರ ವಿರುದ್ಧ 17 ಜನ ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯ ವಿಫಲವಾಗಿದೆ.
11 ಜನ ಸದಸ್ಯರು ಗೈರು ಹಾಜರಾದ ಕಾರಣ ಅಧ್ಯಕ್ಷೆ, ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ರದ್ದುಗೊಂಡಿದೆ. ಒಟ್ಟು 20 ಸದಸ್ಯರ ಪೈಕಿ 17 ಮಂದಿ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿ, ಉಪ ವಿಭಾಗ ಅಧಿಕಾರಿ ಗಜನಾನ ಬಾಳೆ ಅವರಿಗೆ ಮನವಿ ಸಲ್ಲಿಸಿದ್ದರು.
ಅವಿಶ್ವಾಸ ನಿರ್ಣಯ ಮಂಡಿಸಲು ಸೋಮವಾರ 12 ಗಂಟೆಗೆ ನಿಗದಿಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಗ್ರಾಮ ಪಂಚಾಯತ್ ನಲ್ಲಿ ಸಭೆ ಕರೆದಿದ್ದರು. 11 ಸದಸ್ಯರು ಗೈರು ಹಾಜರಾದ ಕಾರಣ ಅವಿಶ್ವಾಸ ಸೂಚನೆ ಸಭೆ ವಿಸರ್ಜನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾ.ಪಂ.ಸದಸ್ಯರಾದ ಶರಣಗೌಡ ಜಕ್ಕಲದಿನ್ನಿ, ನರಸಿಂಗ, ಬ್ರಹ್ಮಜಿ, ವಿರೂಪಾಕ್ಷಿ ಜಗ್ಲಿ, ಮೃತ್ಯುಂಜಯ, ರಂಗಮ್ಮ, ನರಸಮ್ಮ, ಶಾರದಮ್ಮ, ಯಂಕಮ್ಮ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಿಡಿಒ ರಮೇಶ ಸೇರಿದಂತೆ ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.





