ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಾಬುಗೌಡ ನೇಮಕ

ರಾಯಚೂರು: ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರ (ಸುಡಾ) ಅಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಸೇರಿ ಐವರನ್ನು ನಾಮನಿರ್ದೇಶನ ಮಾಡಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ಅವರು ಆದೇಶ ಹೊರಡಿಸಿದ್ದಾರೆ.
ಆ ಮೂಲಕ ಸುಡಾದ ಮೊದಲ ಅಧ್ಯಕ್ಷರಾಗಿ ಶಾಸಕ ಹಂಪನಗೌಡ ಬಾದರ್ಲಿಯ ಸಹೋದರನ ಮಗ ವಿರುಪನಗೌಡ (ಬಾಬುಗೌಡ), ಸದಸ್ಯರಾಗಿ ವೈ.ನರೇಂದ್ರನಾಥ, ಚಂದ್ರಶೇಖರ ರೆಡ್ಡಿ, ಖಾಜಿಮಲಿಕ್ ಅಹ್ಮದ್ ಹಾಗೂ ಮಮತಾ ಗಂಡ ಮೌಲಪ್ಪ ಅವರನ್ನು ನೇಮಕವಾಗಿದ್ದಾರೆ.
ಸುಡಾ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ನಡುವೆ ತೀವ್ರ ಮುಸುಕಿನ ಗುದ್ದಾಟ ನಡೆದು ಪರಸ್ಪರ ತಮ್ಮ ಬೆಂಬಲಿಗರನ್ನು ಕೂರಿಸಲು ಪೈಪೋಟಿ ನಡೆಸಿದ್ದರು.
ಸುಡಾ ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಕ್ಕೆ ಇಬ್ಬರು ನಾಯಕರು ಪ್ರತ್ಯೇಕವಾಗಿ ಹೆಸರುಗಳನ್ನು ಶಿಫಾರಸ್ಸು ಮಾಡಿದ್ದರು. ಆದರೆ ಈಗ ಶಾಸಕ ಹಂಪನಗೌಡ ಬಾದರ್ಲಿ ಬಣದವರಿಗೆ ಅಧಿಕಾರ ಸಿಕ್ಕಿದ್ದು, ಅವರ ಬಣ ಮೇಲುಗೈ ಸಾಧಿಸಿದೆ.
Next Story





