ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬನ್ನಿ: ಮಾಜಿ ಸಚಿವ ಅಮರೇಗೌಡ ಪಾಟೀಲ್

ಲಿಂಗಸಗೂರು.ನ.17- ಕೇವಲ ಹಣ ಮಾಡುವುದಕ್ಕಾಗಿ ರಾಜಕೀಯಕ್ಕೆ ಬರಬೇಡಿ ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬನ್ನಿ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ಲಿಂಗಸುಗೂರು ಪಟ್ಟಣದ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಆಯೋಜಿಸಿದ 72ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಉದ್ದೇಶಿಸಿ ಮಾತನಾಡಿದ ಅಮರೇಗೌಡ ಪಾಟೀಲ್ ಬಯ್ಯಾಪುರ, ನಾನು ನಾಗರಾಳ ಮಂಡಲ ಪಂಚಾಯತಿ ಪ್ರಧಾನರಾಗಿದ್ದಾಗ ನಮ್ಮ ಪಂಚಾಯತಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿತ್ತು. ನನ್ನ ಹಿರಿಯ ಸಹೋದರ ಅನ್ನಾದಾನಿಗೌಡ ಬಯ್ಯಾಪುರ ಬೆಂಬಲ ಹಾಗೂ ಆಶೀರ್ವಾದ ನನನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾನು ಜನತಾ ಪಕ್ಷದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು, ಲಿಂಗಸುಗೂರ ಕ್ಷೇತ್ರದಿಂದ ಮೂರು ಭಾರಿ ಶಾಸಕನಾಗಿದ್ದ ನಾನು ಶೈಕ್ಷಣಿಕ, ನೀರಾವರಿ ಮೂಲಸೌಕರ್ಯಗಳಿಗಾಗಿ ಶ್ರಮಿಸಿದೇನೆ. ಅಲ್ಲದೇ ಕುಷ್ಟಗಿ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿದ್ದು ಕಾರಣ ಕ್ಷೇತ್ರದ ಜನರು ನನ್ನ ಮೇಲೆಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದು ಹೇಳಿದರು.
ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ನಗರಾ ಯೋಜನಾ ಪ್ರಾಧಿಕಾರ ಅಧ್ಯಕ್ಷ ಭೂಪನಗೌಡ ಕರಡಕಲ್, ಡಿ.ಜಿ.ಗುರಿಕಾರ, ಡಾ.ನಾಗನಗೌಡ ಪಾಟೀಲ್ ಬಯ್ಯಾಪೂರ, ಡಾ.ದಿವಟರ್, ಬಸವರಾಜಗೌಡ ಗಣೇಕಲ್, ಗುಂಡಪ್ಪ ನಾಯಕ, ಹನುಮಂತಪ್ಪ ಕಂದಗಲ್, ಸಿದ್ರಾಮಪ್ಪ ಸಾಹುಕಾರ, ಪ್ರಮೋದ ಕುಲಕರ್ಣಿ, ಅನಿಷಾ ಪಾಷಾ, ಶಶಿಧರ ಪಾಟೀಲ್, ಡಾ.ಡಿ.ಹೆಚ್.ಕಡದಳ್ಳಿ, ವಕೀಲರ ಸಂಘದ ಅಧ್ಯಕ್ಷ ಭೂಪನ ಗೌಡ ಪಾಟೀಲ್, ಸೋಮಶೇಖರ ಐದನಾಳ, ಬಸವರಾಜ ಅಂಗಡಿ, ಜಗದೀಶಗೌಡ, ಚೆನ್ನರೆಡ್ಡಿ ಬಿರಾದರ ಸೇರಿ ಹಲವರು ಉಪಸ್ಥಿತರಿದ್ದರು.







