ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

ರಾಯಚೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಕುಟುಂಬ ಸಮೇತರಾಗಿ ರಾಯಚೂರಿನ ಗಡಿ ಭಾಗದ ಆಂದ್ರಪ್ರದೇಶದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.
ವೇಳೆ ಮಾತನಾಡಿದ ಅವರು, ನಾನು ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಜೊತೆ ಬಂದಿದ್ದೆ, ಬಳಿಕ ಅನೇಕ ಬಾರಿ ಆಹ್ವಾನ ಇದ್ದರೂ ಬರಲು ಸಾಧ್ಯವಾಗಿಲ್ಲ. ಎಲ್ಲಿ ಹೋಗಬೇಕಾದರೂ ದೇವರ ಅನುಗ್ರಹ ಇರಬೇಕು. ಹೀಗಾಗಿ ನಾನು ಬರಲು ಅನುಗ್ರಹ ಬಂದಿದೆ ಎಂದು ಹೇಳಿದರು.
ರಾಯಚೂರು ತಾಲೂಕು ವ್ಯಾಪ್ತಿಯ ಶ್ರೀ ಪಂಚಮುಖಿ ಗಾಣಧಾಳ ಆಂಜನೇಯನ ಸನ್ನಿಧಿಗೆ ತೆರಳಿ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದರು. ಈ ವೇಳೆ ಅವರ ಅಭಿಮಾನಿಗಳು ಕ್ರೇನ್ ಮೂಲಕ ಬೃಹತ್ ಗಾತ್ರದ ಫಲದ ಹಾರ ಹಾಕಿ ಸ್ವಾಗತಿಸಿದರು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮತ್ತಿ ಇದ್ದರು.
Next Story





