ದೇವದುರ್ಗ | ಬಂಜಾರ ಸೇವಾ ಸಂಘಕ್ಕೆ ಪದಾಧಿಕಾರಿಗಳ ನೇಮಕ

ದೇವದುರ್ಗ : ಆಲ್ ಇಂಡಿಯಾ ಬಂಜಾರ್ ಸೇವಾಸಂಘ(ಎ.ಐ.ಬಿ.ಎಸ್.ಎಸ್.)ತಾಲೂಕು ಅಧ್ಯಕ್ಷರಾದ ದೇವಿಂದ್ರಪ್ಪ ರಾಠೋಡ ಸಾಸ್ವಿಗೇರಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಜಿಲ್ಲಾ ಅಧ್ಯಕ್ಷ ಅಮರೇಶ ಎನ್.ರಾಠೋಡ ತಿಳಿಸಿದ್ದಾರೆ.
ದೇವದುರ್ಗ ಪಟ್ಟಣದ ಸೇವಾಲಾಲ್ ಭವನದಲ್ಲಿ ದೇವದುರ್ಗ ತಾಲೂಕು ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆಯ ರಾಜ್ಯ ಉಪಾಧ್ಯಕ್ಷರಾದ ಗೋವಿಂದರಾಜ್ ಬಿ. ನಾಯಕ ವಕೀಲರ ಇವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದು, ಕಾರ್ಯಾಧ್ಯಕ್ಷರಾಗಿ ಕಮಲಪ್ಪ ರಾಠೋಡ, ಗೌರವ ಅಧ್ಯಕ್ಷ ನೀಲಪ್ಪ ಚಿನ್ನಾ ರಾಠೋಡ, ಉಪಾಧ್ಯಕ್ಷರಾಗಿ ರೂಪೇಶ ಚವ್ಹಾಣ, ಹಾಗು ಮಾನಪ್ಪ ನಾರಾಯಣನಾಯ್ಕ ತಾಂಡ, ತಿಪ್ಪಣ್ಣ ಪವಾರ ಯಲ್ಲದೊಡ್ಡಿ, ಕಿಷನ್ ಜಾದವ, ಮೇಘರಾಜ, ಪ್ರಧಾನ ಕಾರ್ಯದರ್ಶಿ ಶಿವಪ್ಪ ವಕೀಲರಿ ಯಲ್ಲದೊಡ್ಡಿ, ರವಿಚಂದ್ರ ವಕೀಲರು, ಹನುಮಂತ ರಾಠೋಡ, ಮಂತಪ್ಪ, ಪೂನಪ್ಪ, ರೆಡ್ಡಿ ಜಾದವ್, ವೆಂಕಟೇಶ್ ಜಾದವ್ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆಂದು ಅಮರೇಶ ಎನ್. ರಾಠೋಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎ.ಐ.ಬಿ.ಎಸ್.ಎಸ್. ಜಿಲ್ಲಾ ಕಾರ್ಯಾಧ್ಯಕ್ಷ ಸೀತಾರಾಮ ನಾಯಕ ಚವ್ಹಾಣ ಸೇರಿದಂತೆ ಸಮಾಜದ ಹಿರಿಯ ಮುಖಂಡರು ಭಾಗವಹಿಸಿದ್ದರು.





