ದೇವದುರ್ಗ | ಅಕಾಲಿಕ ಮಳೆಯಿಂದ 12 ಎಕರೆ ಪಪ್ಪಾಯಿ ಬೆಳೆ ನಾಶ: ರೈತನಿಗೆ ಲಕ್ಷಾಂತರ ರೂ. ನಷ್ಟ

ದೇವದುರ್ಗ: ತಾಲೂಕಿನ ಅರಕೇರ ವ್ಯಾಪ್ತಿಯ ಜೇರದಬಂಡಿ ಗ್ರಾಮದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದ ರೈತನೊಬ್ಬ ಬೆಳೆದಿದ್ದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ.
ಗ್ರಾಮದ ದೇವೇಂದ್ರಪ್ಪ ಅವರಿಗೆ ಸೇರಿದ 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಪಪ್ಪಾಯಿ ತೋಟ ಅಕಾಲಿಕ ಮಳೆಯಿಂದ ಸಂಪೂರ್ಣ ನಾಶವಾಗಿದೆ. ಕೈಗೆ ಬರಬೇಕಿದ್ದ ಬೆಳೆ ಮಳೆಯಿಂದ ಹಾನಿಗೊಳಗಾಗಿರುವುದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಕುರಿತು ಮಾತನಾಡಿದ ದೇವೇಂದ್ರಪ್ಪ, ಬೆಳೆಗಾಗಿ ಮಾಡಿದ ಹೂಡಿಕೆ ವ್ಯರ್ಥವಾಗಿದ್ದು, ಸುಮಾರು 20 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಬೆಳೆ ಹಾನಿಯಿಂದ ರೈತ ಕಂಗಾಲಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
Next Story




