ಮದ್ಯ ನಿಷೇಧಕ್ಕೆ ಆಗ್ರಹಿಸಿ ನ.25 ರಿಂದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಗ್ರಹ: ವಿರುಪಮ್ಮ

ರಾಯಚೂರು: ರಾಜ್ಯದಲ್ಲಿ ಮಧ್ಯಪಾನ ನಿಷೇಧಕ್ಕೆ ಗ್ರಾಮ ಪಂಚಾಯ್ತಿಗಳಿಗೆ ಪರಮಾಧಿಕಾರ ನೀಡುವ ಕಾಯ್ದೆ ಜಾರಿಗೊಳಿಸಬೇಕು, ಅಕ್ರಮ ಮದ್ಯ ಸಾಗಾಣೆ ತಡೆಯಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಮದ್ಯ ನಿಷೇಧ
ಆಂದೋಲನ ಕರ್ನಾಟಕದಿಂದ ನ.25 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಮಹಿಳೆಯರ ಸತ್ಯಾಗ್ರಹ ಪ್ರಾರಂಭಿಸಲಾಗುತ್ತದೆ ಎಂದು ಸಂಘಟನೆ ವಿರುಪಮ್ಮ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ದೇಶದ ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಲ್ಲಿಯ ಗ್ರಾಮಸಭೆಗಳ ನಿರ್ಣಯವೇ ಅಂತಿಮವಾಗಿದೆ. ಗ್ರಾಮಸಭೆಯಲ್ಲಿ ಶೇ.20 ಮಹಿಳೆಯರು ಸಹಿ ನೀಡಿ ಒಪ್ಪಿಗೆ ನೀಡಿದರೆ ಮದ್ಯದಂಗಡಿ ತೆಗೆಯಲು ಪರವಾನಿಗೆ ರದ್ದುಗೊಳಿಸಲಾಗುತ್ತದೆ. ಅದೇ ಮಾದಿರಯಲ್ಲಿ ರಾಜ್ಯದಲ್ಲಿಯೂ
ಜಾರಿಗೊಳಿಸಬೇಉ. 2016 ವರೆಗೆ ಗ್ರಾಮಸಭೆಗಳಿಗೆ ಇರುವ ಅಧಿಕಾರವನ್ನು ರಾಜ್ಯದಲ್ಲಿ ತೆಗೆದುಹಾಕಿದ್ದು ಮರು ಸ್ಥಾಪಿಸಬೇಕು. ರಾಜ್ಯದ ಮನೆ ಗಳಲ್ಲಿ,ಪಾನಶಾಪ, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸಲಾಗುತ್ತಿದೆ. ಅಬಕಾರಿ ಇಲಾಖೆ ಸೇರಿದಂತೆ ಸಂಬಂಧಿಸಿ ಇಲಾಖೆಗಳಿಗೆ ಲಿಖಿತ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ. ಕೂಡಲೇ ಮಹಿಳೆಯರ ಜಾಗೃತ ಸಮಿತಿಗಳಿಗೆ ಅರೆ ನ್ಯಾಯಿಕ ಅಧಿಕಾರ ನೀಡಬೇಕೆಂದು ಆಗ್ರಹಿಸಿ ಸತ್ಯಾಗ್ರಹ ನಡೆಯಲಿದೆ ಎಂದರು.
ಡಾ.ಶಾರದಾ ಹುಲಿನಾಯಕ ನಾಯಕ ಮಾತನಾಡಿ, ಮದ್ಯಸೇವನೆಯಿಂದ ಕುಟುಂಬ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಸರ್ಕಾರ ಕೂಡಲೇ ಮದ್ಯಪಾನ ನಿಷೇಧಕ್ಕೆ ಸರ್ಕಾರ ಮುಂದಾಗಬೇಕಿದೆ. ಅಬಕಾರಿ ಆದಾಯದ ಮೇಲೆ ಸರ್ಕಾರ ಅವಲಂಬಿತವಾಗಿರುವದನ್ನು ತಪ್ಪಿಸಿ ನೂರಾರು ಮಹಿಳೆಯರನ್ನು ಸರ್ಕಾರ ರಕ್ಷಣೆ ಮಾಡಬೇಕಿದೆ ಎಂದರು.
ಈ ಸಂದರ್ಬದಲ್ಲಿ ಹುಚ್ಚಮ್ಮ, ಮಾರೆಮ್ಮ,ಗುರುರಾಜ ಇದ್ದರು.







