ಸೆಲ್ಕೊ ಸಂಸ್ಥೆಯಿಂದ ವಿಕಲಚೇತನರಿಗೆ ಸೌರಶಕ್ತಿ ಯಂತ್ರೋಪಕರಣಗಳ ವಿತರಣೆ: ಶಾಸಕಿ ಕರಿಯಮ್ಮ ಚಾಲನೆ
ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಇಂದು ಗಲಗ ಮತ್ತು ಗಾಣದಾಳ ಗ್ರಾಮ ಪಂಚಾಯಿತಿಯ ಶೇ 5% ಅನುದಾನ ಮತ್ತು ಸೆಲ್ಕೋ ಸಂಸ್ಥೆಯ ಆರ್ಥಿಕ ಸಹಾಯಧನದ ಅಡಿಯಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಸೌರ ಶಕ್ತಿ ಚಾಲಿತ ವಿವಿಧ ಯಂತ್ರೋಪಕರಣಗಳ ವಿತರಣೆ ಮಾಡಲಾಯಿತು.
ದೇವದುರ್ಗ ಶಾಸಕಿ ಕರಿಯಮ್ಮ ಜಿ ನಾಯಕ ಅವರು ವಿಕಲಚೇತನರಿಗೆ ಸಲಕರಣೆ ವಿತರಣೆ ಮಾಡಿದರು, ನಂತರ ಅವರು ಮಾತನಾಡಿ, ಅಂಗವಿಕಲರು ಸ್ವಾವಲಂಬನೆಗಳಾಗಿ ಜೀವನ ಸಾಗಿಸಬೇಕು. ಅಂಗವಿಕಲತೆ ಶಾಪವಲ್ಲ ಅದನ್ನು ಸರಿಪಡಿಸಿ ಜೀವನವನ್ನು ಸುಗಮಗೊಳಿಸಿಕೊಳ್ಳುವುದು ಅವರವರ ಕೈಯಲ್ಲಿರುತ್ತದೆ. ಅದಕ್ಕಾಗಿ ತಾವೆಲ್ಲರೂ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಬರುವ ನೆರವನ್ನು ಪಡೆದು ಆರ್ಥಿಕವಾಗಿ ಸದೃಢವಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಅವರು ಮಾತನಾಡಿ, ವಿಕಲಚೇತನರಿಗೆ ಮೀಸಲಿರುವ ಅನುದಾನವನ್ನು ಬಳಸಿಕೊಂಡು ತಾವೆಲ್ಲರೂ ಸ್ವಯಂ ಉದ್ಯೋಗ ಕೈಗೊಂಡು ಸದೃಢವಾಗಿ ಜೀವನ ನಡೆಸಬೇಕು ಎಂದರು.
ಸೆಲ್ಕೋ ಸಂಸ್ಥೆಯ ಯಲ್ಲಾಲಿಂಗ ಮಾತನಾಡಿ ಸೆಲ್ಕೋ ಸಂಸ್ಥೆ ವಿಕಲಚೇತನರ ಜೀವನೋಪಾಯಕ್ಕಾಗಿ ಸೌರಶಕ್ತಿ ಆಧಾರಿತ ಪರಿಸರಸ್ನೇಹಿ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಿದ್ದು ಅವುಗಳನ್ನು ತಾವೆಲ್ಲರೂ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕಿ ಮಹೇಶ್ವರಿ, ಸೆಲ್ಕೋ ಫೌಂಡೇಷನ್ ನ ಪ್ರಾಜೆಕ್ಟ್ ಮ್ಯಾನೇಜರ್ ಪ್ರತಾಪ್ ಜೆ, ಬ್ರಾಂಚ್ ಮ್ಯಾನೇಜರ್ ಹನುಮಂತಪ್ಪ , ಗಾಣಧಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪದ್ಮಾವತಿ, PDO ರಂಗಣ್ಣ, ಗಲಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನಗೌಡ, ಪಿ ಡಿ ಓ ಶಿವಪುತ್ರಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ನಾಗಪ್ಪ ಪಾಮರೆಡ್ಡಿ, ಅತಿಥಿಗಳಾದ ಶ್ರೀ ಶರಣಪ್ಪ ಬಳೆ, ಚೆನ್ನಪ್ಪ , ಇಸಾಕ್ ಮೇಸ್ತ್ರಿ, ಸಿದ್ದಲಿಂಗಪ್ಪ ಗೌಡ ನಾಗಡದಿನ್ನಿ , ರಂಗನಾಥ್ ಜಾಲಹಳ್ಳಿ, ಶಾಲಂ ಉದ್ದಾರ್, ಎಂ ಆರ್ ಡಬ್ಲ್ಯೂ ಲೋಕಪ್ಪ ವಿ ಆರ್ ಡಬ್ಲ್ಯೂ ಗಳಾದ ಮುದುಕಪ್ಪ, ಮಲ್ಲಪ್ಪ, ಸೆಲ್ಕೋ ಫೌಂಡೇಶನ್ ಪ್ರಾಜೆಕ್ಟ್ ಕೋಆರ್ಡಿನೇಟರ್ ವಿನೋದ್ ಮಿ ರ್ಜಾಪುರ್, ಮೈನುದ್ದಿನ್, ಮತ್ತು ಸ್ಪೂರ್ತಿ ಇತರರು ಇದ್ದರು.









