‘ಎಡೆದೊರೆನಾಡು ರಾಯಚೂರು ಜಿಲ್ಲಾ ಉತ್ಸವ’ ಫೆ.6ಕ್ಕೆ ಮುಂದೂಡಿಕೆ : ಹೆಚ್ಚುವರಿ ಜಿಲ್ಲಾಧಿಕಾರಿ ಆದೇಶ

ರಾಯಚೂರು: ಜಿಲ್ಲೆಯಲ್ಲಿ ಜ. 29ರಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ‘ಎಡೆದೊರೆನಾಡು ರಾಯಚೂರು ಜಿಲ್ಲಾ ಉತ್ಸವ’ವನ್ನು ಇದೀಗ ಫೆಬ್ರವರಿ 6, 7 ಮತ್ತು 8ಕ್ಕೆ ಮುಂದೂಡಲಾಗಿದೆ. ಜಿಲ್ಲಾಧಿಕಾರಿ ನಿತಿಶ್ ಕೆ. ಅವರ ನಿರ್ದೇಶನದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ. ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಸುಮಾರು 24 ವರ್ಷಗಳ ಸುದೀರ್ಘ ವಿರಾಮದ ನಂತರ ರಾಯಚೂರು ಜಿಲ್ಲಾ ಉತ್ಸವವನ್ನು ಜ. 29, 30 ಮತ್ತು 31ರಂದು ಆಚರಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಉತ್ಸವದ ಯಶಸ್ವಿಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ 22 ಉಪ ಸಮಿತಿಗಳನ್ನು ರಚಿಸಲಾಗಿದ್ದು, ಪೂರ್ವ ಸಿದ್ಧತಾ ಸಭೆಗಳೂ ಪೂರ್ಣಗೊಂಡಿವೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ವೇದಿಕೆ ನಿರ್ಮಾಣ ಸೇರಿದಂತೆ ಬಹುತೇಕ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದವು.
ಆದರೆ, ಈಗ ಅನಿವಾರ್ಯ ಕಾರಣಗಳಿಂದಾಗಿ ಉತ್ಸವದ ದಿನಾಂಕವನ್ನು ಫೆಬ್ರವರಿಗೆ ಮುಂದೂಡಲಾಗಿದ್ದು, ಜಿಲ್ಲಾಡಳಿತದ ಈ ಹಠಾತ್ ನಿರ್ಧಾರಕ್ಕೆ ನಿಖರ ಕಾರಣಗಳು ಇನ್ನು ತಿಳಿದುಬಂದಿಲ್ಲ.
Next Story





