Raichur | ಖಾಸಗಿ ಶಾಲೆ ನವೀಕಾರಣಕ್ಕಾಗಿ ಲಂಚ ಬೇಡಿಕೆ: ಶಿಕ್ಷಣ ಇಲಾಖೆ ಪ್ರಥಮ ದರ್ಜೆ ಸಹಾಯಕ ಲೋಕಾ ಬಲೆಗೆ

ಮಹಾಬಲೇಶ್ವರ ಎಸ್.
ರಾಯಚೂರು: ಖಾಸಗಿ ಶಾಲೆ ನವೀಕರಣ ಮಾಡಿ ಕೊಡಲು 25 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ ಶಿಕ್ಷಣ ಇಲಾಖೆ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ನಗರದ ಡಿಡಿಪಿಐ ಕಚೇರಿ ಎಫ್ ಡಿಎ ಮಹಾಬಲೇಶ್ವರ ಎಸ್. ಲೋಕ ಬಲೆಗೆ ಬಿದ್ದ ಆರೋಪಿ.
ಶಾಲೆ ಅನುಮತಿ ನವೀಕರಣ ಮಾಡಿ ಕೊಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಸಿದ್ದಣ್ಣ ರಾಂಪುರ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಇಂದು 15 ಸಾವಿರ ಹಣ ಪಡೆಯುವಾಗ ಲೋಕಾಯುಕ್ತರಿಗೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ.
ಆರೋಪಿಯನ್ನು ಲೋಕಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ ಪಿ ಸಿದ್ದರಾಜು, ಡಿವೈ ಎಸ್ ಪಿ ಪವನ ಶೆಟ್ಟಿ, ಇನ್ಸಪೆಕ್ಟರ್ ಗಳಾದ ರವಿ ಪುರುಷೋತ್ತಮ್, ಕಾಳಪ್ಪ ಬಡಿಗೇರ್, ಮುಖ್ಯ ಪೇದೆಗಳಾದ ಗೋಪಾಲ್ ರಾವ್, ಏಕಾಂಬರನಾಥ, ವಿಜಯ್ ಕುಮಾರ್, ಗೋಪಾಲ್, ಷರೀಫ್, ಪೇದೆಗಳಾದ ಅಜಿತ್, ರವಿ, ಅಶೋಕ್, ಬಸವರಾಜ್ ಕುರ್ಡಿ, ಶರಣಬಸವ ದಾಳಿ ತಂಡದಲ್ಲಿದ್ದರು.
Next Story




