ಗುಣಮಟ್ಟದ ಕಾಮಗಾರಿಗಳು ಮಾಡಿ ಬೇಗನೆ ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು: ಶಾಸಕಿ ಕರೆಮ್ಮ ಗೋಪಾಲಕೃಷ್ಣ
ವಿವಿಧ ಗ್ರಾಮಗಳಲ್ಲಿ ಕೋಟ್ಯಾಂತರ ರೂ. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ

ದೇವದುರ್ಗ: ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ತ್ವರಿತಗತಿಯಲ್ಲಿ ಕಾಮಗಾರಿಗಳು ಪೂರ್ಣಗೊಳಸಬೇಕು. ಯಾವುದೇ ಕಾರಣಕ್ಕೆ ಸಾರ್ವಜನಿಕರಿಂದ ಕಳಪೆ ಗುಣಮಟ್ಟ ದೂರುಗಳು ಬರದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಶಂಕರಬಂಡಿ, ಸೋಮಕಾರ ದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೋಟ್ಯಂತರ ರೂ. ವೆಚ್ಚದ ಸಿಸಿರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ಮೂರು ವರ್ಷದ ಅವಧಿಯಲ್ಲಿ ಜನರ ಬೇಡಿಕೆಯಂತೆ ಹಂತ ಹಂತವಾಗಿ ಅಭಿವೃದ್ಧಿ ಕೈಗೊಳ್ಳಲಾಗಿದ್ದು, ಉಳಿದಿರುವ ಎರಡು ವರ್ಷದಲ್ಲಿ ಬದಲಾವಣೆ ಬೆಳಕು ಚೆಲ್ಲುವ ಕೆಲಸ ಪ್ರಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯ ಸರಕಾರ ಅಭಿವೃದ್ಧಿಗೆ ಅನುದಾನ ನೀಡದೆ ಮಲತಾಯಿ ದೋರಣೆ ಅನುಸರಿಸುತ್ತಿದ್ದು, ಕೆಕೆಆರ್‌ಡಿಬಿ ಯೋಜನೆಯ ಅನುದಾನವೇ ಸದ್ಬಳಿಕೆ ಮಾಡಿಕೊಂಡು ತಾಲೂಕು ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ವಿರೋಧ ಪಕ್ಷದಲ್ಲಿದ್ದರೂ, ಮೂರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಸರಕಾರಿ ಶಾಲಾ ಕಟ್ಟಡ, ಸಮುದಾಯ ಆರೋಗ್ಯ ಕೇಂದ್ರಗಳು, ರಸ್ತೆ, ಹೈಮಾಸ್ ಬೀದಿದೀಪ ಸೇರಿದಂತೆ ಇತರೆ ಅಭಿವೃದ್ಧಿಗೆ ಪ್ರಮಾಣಿಕ ಸೇವೆ ನೀಡಲಾಗಿದೆ ಎಂದು ಹೇಳಿದರು.
ಸಾರ್ವತ್ರಿಕ ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡು, ಅವರ ವಿಶ್ವಾಸಕ್ಕೆ ಮಾದರಿಯಾಗಿದ್ದೇನೆ ಎಂದರು. ಕೊಪ್ಪೂರು ಕ್ರಾಸ್‌ನಿಂದ ಅಂಚೆಸೂಗೂರು ಕ್ರಾಸ್‌ವರೆಗೆ ಹೈಮಾಸ್ ಬೀದಿದೀಪಗಳ ಕಾಮಗಾರಿ ಪಗ್ರತಿಯಲ್ಲಿದ್ದು, ಅಭಿವೃದ್ಧಿ ವಿಚಾರದಲ್ಲಿ ಬದಲಾವಣೆ ತರಬೇಕು ಎನ್ನುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.
ಒಳ ಚಂರಡಿ ಕಾಮಗಾರಿ ನಿರ್ಮಿಸಲು 37 ಕೋಟಿ ರೂ. ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದ್ದು, ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಬಸನಗೌಡ ದೇಸಾಯಿ, ಅಮರೇಶ ಪಾಟೀಲ್ ವಕೀಲರು ಪರತಪುರ, ಶಾಲಂ ಉದ್ದಾರ, ಸಿದ್ದಣ್ಣ ಗಣೇಕಲ್, ರಮೇಶ ರಾಮನಾಳ, ರಂಗಮ್ಮ ಇರಬಗೇರಾ, ಹನುಮಂತ್ರಾಯ ವಕೀಲ, ನಾಗರಾಜ ಪಾಟೀಲ್,ಗೋವಿಂದ ನಾಯಕ,ಮೈನುದ್ದೀನ್ ಡಿ.ಜೆ,ಖಾಜಾ ಹುಸೇನ್,ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಗೋವಿಂದರಾಜ್ ನಾಯಕ, ಮಹಿಬೂಬು ಗೌರಂಪೇಟೆ, ನಾಗರಾಜ ಪಾಟೀಲ್ ಸೇರಿದಂತೆ ಇತರರು ಇದ್ದರು.






