ರಾಯಚೂರು: ಹರ್ವಾಪುರದಲ್ಲಿ ಸಿಡಿಲು ಬಡಿದು ರೈತ ಸಾವು

ರಾಯಚೂರು: ಸಿಡಿಲು ಬಡಿದು ಒಂದು ಎತ್ತು ಹಾಗೂ ಓರ್ವ ರೈತ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯ ಹರ್ವಾಪುರ ಗ್ರಾಮದಲ್ಲಿ ನಡೆದಿದೆ.
ನಿಂಗಪ್ಪ ರಾಮಣ್ಣ ಕುರುಬರ (38)ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ದೈನಂದಿನಂತೆ ಕೃಷಿ ಕೆಲಸಕ್ಕೆ ಹೊಲಕ್ಕೆ ತೆರಳಿದಾಗ ಇಂದು ಸಂಜೆ ಧಾರಾಕಾರ ಮಳೆ ಸುರಿದಿದೆ.ಗಿಡದ ಆಸರೆಗೆ ನಿಂತಾಗ ಸಿಡಿಲು ಬಡಿದಿದೆ ಎನ್ನಲಾಗಿದೆ.
ಮೃತ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಲಿಂಗಸುಗೂರು ಆಸ್ಪತ್ರೆಗೆ ಮಸ್ಕಿ ಕ್ಷೇತ್ರದ ಶಾಸಕ ಆರ್ ಬಸನಗೌಡ ತುರವಿಹಾಳ ಮತ್ತು ಕವಿತಾಳ ಪಿಎಸ್ಐ ಭೇಟಿ ನೀಡಿದ್ದಾರೆ.
Next Story





