ರಾಯಚೂರು |ಎಂಎಲ್ ಸಿ ಶರಣಗೌಡ ಮತ್ತು ಮಾಜಿ ಶಾಸಕ ಹುಲಿಗೇರಿ ಬೆಂಬಲಿಗರ ಮಧ್ಯೆ ಜಗಳ : ದೂರು-ಪ್ರತಿದೂರು ದಾಖಲು

ರಾಯಚೂರು: ಕಾಂಗ್ರೆಸ್ ಪಕ್ಷದವರೇ ಆದ ಎಂಎಲ್ ಸಿ ಶರಣಗೌಡ ಬಯ್ಯಾಪುರ ಹಾಗೂ ಮಾಜಿ ಶಾಸಕ ಡಿಎಸ್ ಹುಲಿಗೇರಿ ಬಣದ ನಡುವೆ ನಡೆದ ಗಲಾಟೆಗೆ ಸಂಬಂಧಿಸಿ ದೂರು-ಪ್ರತಿ ದೂರು ದಾಖಲಾಗಿದೆ.
ಆಗಸ್ಟ್ 5ರಂದು ಲಿಂಗಸುಗೂರು ತಾಲೂಕಿನ ಗೊರೇಬಾಳ ಗ್ರಾಮಕ್ಕೆ ಎಂ.ಎಲ್ ಸಿ ಶರಣೇಗೌಡ ಬಯ್ಯಾಪೂರು ಭೇಟಿ ನೀಡಿದಾಗ ಡಿ.ಎಸ್ ಹುಲೀಗೇರಿ ಬಣದ ಮುಖಂಡರು ಕಾರ್ ಗೆ ಘೇರಾವ್ ಹಾಕಿ ವಾಗ್ವಾದಕ್ಕೆ ಇಳಿದಿದ್ದರು. ಇದನ್ನು ಖಂಡಿಸಿ ಎಂಎಲ್ ಸಿ ಶರಣಗೌಡ ಬಯ್ಯಾಪೂರು ಬಣದವರು ಹುಲಿಗೇರಿ ಬಣದವರ ಮೇಲೆ ಬುಧವಾರ ಪ್ರಕರಣ ದಾಖಲಿಸಿದ್ದರು.
ಈಗ ಇದಕ್ಕೆ ಪ್ರತಿಯಾಗಿ ಡಿಎಸ್ ಹುಲಿಗೇರಿ ಬಣದ ಪ್ರೇಮ್ ಕುಮಾರ ಹಾಲಭಾವಿ, ಬಯ್ಯಾಪೂರು ಬಣದ ಭೂಪನಗೌಡ ಕರಡಕಲ್, ಚೆನ್ನಾರೆಡ್ಡಿ ಬಿರಾದಾರ್ ತಮ್ಮ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ.
ಆಗಸ್ಟ್ 5ರಂದು ಗೊರೇಬಾಳ ಗ್ರಾಮದಲ್ಲಿ ಎಂಎಲ್‌ಸಿ ಬಯ್ಯಾಪುರ ಹಾಗೂ ಹೂಲಗೇರಿ ಬಣದ ಮುಖಂಡರಲ್ಲಿ ಪರಸ್ಪರ ಜಗಳ ನಡೆದಿತ್ತು. ಆ ಘಟನೆ ಕುರಿತಂತೆ ಬಯ್ಯಾಪುರ ಬಣದ ಜಗದೀಶಗೌಡ ಹೂಲಗೇರಿ ಬಣದ 7 ಮಂದಿ ವಿರುದ್ಧ ಬುಧವಾರ ಬೆಳಿಗ್ಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದರು, ಇದಕ್ಕೆ ಪ್ರತಿದೂರಾಗಿ ಶರಣಗೌಡ ಬಯ್ಯಾಪುರ ಬಣದ ವಿರುದ್ಧ ಲಿಂಗಸುಗೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.







