ಸಿಂಧನೂರು ಎಪಿಎಂಸಿಯಲ್ಲಿ ಎರಡು ಗುಂಪಿನ ಮಧ್ಯೆ ಹೊಡೆದಾಟ; ಹಲವರಿಗೆ ಗಾಯ

ಸಿಂಧನೂರು ಅ.23 ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಿದ ಬೆನ್ನಲ್ಲೇ ಗುರುವಾರದಂದು ಹಾಡುಹಗಲೇ ಸಿನಿಮಾ ರೀತಿಯಲ್ಲಿ ಬಿದಿರಿನ ಕಟ್ಟಿಗೆ, ಕಬ್ಬಿಣದ ರಾಡು, ಹಿಡಿದು ಹೊಡೆದಾಟ ನಡೆದಿದ್ದು,
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಟ್ಟಿಗೆ ಹಿಡಿದುಕೊಂಡು ಹಲ್ಲೆ ನಡೆಸಿದ ಘಟನೆ ಅ.23 ರ ಗುರುವಾರ ಬೆಳಗ್ಗೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ. ಗಲಾಟೆ ಯಾವ ಕಾರಣಕ್ಕೆ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ.
ಎರಡು ಗುಂಪಿನ ಮಧ್ಯೆ ಹೊಡೆದಾಟವಾಗಿದ್ದು, ಕೆಲವರನ್ನು ನೆಲಕ್ಕೆ ಹಾಕಿ ಕಟ್ಟಿಗೆಯಿಂದ ಹೊಡೆಯಲಾಗಿದೆ ಎಂದು ತಿಳಿದು ಬಂದಿದೆ. ಎಪಿಎಂಸಿಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬಿಗಿ ಬಂದೋಬಸ್ತ್ ಹೆಚ್ಚಿಸಿದ್ದಾರೆ.
Next Story





