ರಾಯಚೂರು | ನರಿ ದಾಳಿ : ನಾಲ್ವರಿಗೆ ಗಾಯ

ರಾಯಚೂರು: ಶ್ರೀರಾಮನಗರ ಬಡಾವಣೆಯಲ್ಲಿ ಬಾಲಕಿ ಸೇರಿದಂತೆ ನಾಲ್ವರ ಮೇಲೆ ನರಿಯೊಂದು ದಾಳಿ ನಡೆಸಿದೆ.
ದಾಳಿಯಲ್ಲಿ ಗಾಯಗೊಂಡವರನ್ನು ಅಕ್ಕನಾಗಮ್ಮ, ಪೂಜಾ, ರಂಗಣ್ಣ, ಮಂಜುನಾಥ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಪ್ರದೇಶದಿಂದ ಆಹಾರ ಹುಡುಕುತ್ತಾ ನಗರಕ್ಕೆ ಬಂದಿದ್ದ ನರಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಘಟನೆಯ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ನರಿಯನ್ನು ಸೆರೆ ಹಿಡಿದಿದ್ದಾರೆ.
"ನರಿಗೆ ಹುಚ್ಚು ಹಿಡಿದಿರಬಹುದು ಎಂದು ನಾಗರಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎರಡು ದಿನ ಪಶು ವೈದ್ಯರ ನಿಗಾದಲ್ಲಿ ಇರಿಸಿ ಚಿಕಿತ್ಸೆ ನೀಡಿದ ನಂತರವೇ ಸುರಕ್ಷಿತ ಸ್ಥಳದಲ್ಲಿ ಬಿಡಲಾಗುವುದು" ಎಂದು ಆರ್.ಎಫ್.ಒ. ರಾಜೇಶ ನಾಯಕ ತಿಳಿಸಿದ್ದಾರೆ.
Next Story





