ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗುರುನಾಥ ಪುನರಾಯ್ಕೆ

ಆರ್.ಗುರುನಾಥ | ಸಿದ್ದಯ್ಯಸ್ವಾಮಿ
ರಾಯಚೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಯಚೂರು ಜಿಲ್ಲಾ ಘಟಕಕ್ಕೆ ನ.9ರಂದು ನಡೆದ ಚುನಾವಣೆಯಲ್ಲಿ ಆರ್.ಗುರುನಾಥ ಸತತ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಕೆ.ಸತ್ಯನಾರಾಯಣ 17 ಮತಗಳ ಅಂತರದಿಂದ ಪರಾಭವಗೊಂಡರು.
ಪ್ರಧಾನ ಕಾರ್ಯದರ್ಶಿಗಳಾಗಿ ಸಿದ್ದಯ್ಯಸ್ವಾಮಿ ಹಾಗೂ ಖಜಾಂಚಿಯಾಗಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ರಾಜ್ಯ ಸಮಿತಿಯ ಸದಸ್ಯರಾಗಿ ಬಸವರಾಜ ನಾಗಡದಿನ್ನಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಪಾಧ್ಯಕ್ಷರಾಗಿ ಮಹಾನಂದ ನಾಯಕ, ಸೂಗೂರೇಶ್ವರ ಎಸ್. ಗುಡಿ, ಅಶೋಕ ಬೆನ್ನೂರು ಕಾರ್ಯದರ್ಶಿಯಾಗಿ ಬಸವರಾಜ ಬೋಗಾವತಿ, ಶರಣಯ್ಯ ಒಡೆಯರ್ ಹಾಗೂ ರಾಘವೇಂದ್ರ ಗುಮಾಸ್ತೆ ಆಯ್ಕೆಯಾಗಿದ್ದಾರೆ
ನಗರದ ರಿಪೋಟರ್ಸ್ ಗಿಲ್ಡ್ ಕಾರ್ಯಾಲಯದಲ್ಲಿ ಬೆಳಗ್ಗೆ 9ರಿಂದ ಅಪರಾಹ್ನ 3ರವರೆಗೆ ಮತದಾನ ನಡೆಯಿತು. ಚುನಾವಣಾಧಿಕಾರಿಯಾಗಿ ಮಲ್ಲಣ್ಣ ಮತ್ತು ಸುರೇಶ ರೆಡ್ಡಿ ಕಾರ್ಯನಿರ್ವಹಿಸಿದರು
ಗುರುನಾಥ ಪೆನಾಲ್ ನಿಂದ ಲಕ್ಷ್ಮೀ ಪ್ರಸನ್ನ ಜೈನ್, ಪ್ರಕಾಶ ಮಸ್ಕಿ, ಲಕ್ಷ್ಮಣ ಕಪಗಲ್, ನೀಲಕಂಠ ಸ್ವಾಮಿ ದಿನ್ನಿ, ಮುತ್ತಣ್ಣ ಹೆಳವರ್, ಮುಸ್ತಫ ಎಂ.ಡಿ, ಹನುಮಂತ ನಾಯಕ, ಅಮರೇಶ ಭೋವಿ, ವಿಶ್ವನಾಥ ಹೂಗಾರ್, ಬಲಭೀಮ್ ರಾವ್ ಕುಲಕರ್ಣಿ,ಎಂ.ಗುಂಡಪ್ಪ ಸೇರಿ 12 ಮಂದಿ ಗೆಲುವು ಸಾಧಿಸಿದರೆ, ಕೆ.ಸತ್ಯನಾರಾಯಣ ಪೆನಾಲ್ ನಿಂದ ಚಂದ್ರಶೇಖರ ಯರದಿಹಾಳ, ಉದಯ ಅರೋಲಿ, ಸಿದ್ದನಗೌಡ, ತಾಯಪ್ಪ ಬಿ. ಹೊಸೂರು ಗೆಲುವು ಸಾಧಿಸಿದ್ದಾರೆ.







