10 ವರ್ಷದ ಬಳಿಕ ಆರ್ ಟಿ ಐ ಅರ್ಜಿಯ ಮೇಲ್ಮನವಿ ವಿಚಾರಣೆ; ದೂರುದಾರನ ಅಸಮಾಧಾನ

ರಾಯಚೂರು: ಕಳೆದ ಹತ್ತು ವರ್ಷಗಳ ಹಿಂದೆ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಆಯೋಗದ ಮೇಲ್ಮನವಿಯನ್ನು ಈಗ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಅಳ್ಳಪ್ಪ ಅಮರಾಪುರು ದೂರಿದ್ದಾರೆ.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, 2015 ಜನವರಿ 23 ರಂದು ದೇವದುರ್ಗ ಪುರಸಭೆ ವ್ಯಾಪ್ತಿಯಲ್ಲಿ ಬರು ಸರ್ಕಾರಿ ಜಮೀನಿಗಳ ಮಾಹಿತಿ ಕೇಳಿ ಅರ್ಜಿ ಸಲ್ಲಿಸಲಾಗಿತ್ತು. ಮಾಹಿತಿ ನೀಡದೇ ಇರುವುದರಿಂದ ರಾಯಚೂರು ಸಹಾಯಕ ಆಯುಕ್ತರಿಗೆ ಮೊದಲ ಮೇಲ್ಮನವಿ ಸಲ್ಲಿಸಿದ್ದರೂ ಉತ್ತರ ಬಾರದೇ ಇರುವುದರಿಂದ ಬೆಂಗಳೂರು ಮಾಹಿತಿ ಹಕ್ಕು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೆ. ಆರ್ ಟಿಐ ಅಡಿ ಅರ್ಜಿ ಸಲ್ಲಿಸಿದವರಿಗೆ 30 ದಿನಗಳಲ್ಲಿ ಉತ್ತರಿಸಬೇಕೆನ್ನುವ ನಿಯಮವಿದ್ದರೂ ಯಾವೊಬ್ಬ ಅಧಿಕಾರಿಗಳು ಇದನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
10 ವರ್ಷಗಳಿಂದ ಬಾಕಿಯಿದ್ದ ಮೇಲ್ಮನವಿಯ ವಿಚಾರಣೆಯನ್ನು ಕಲ್ಬುರ್ಗಿ ಮಾಹಿತಿ ಹಕ್ಕು ಆಯೋಗ ಡಿ.11 ರಂದು ನಿಗದಿಪಡಿಸಿದೆ. ಆಯೋಗ ಕಾರ್ಯವೈಖರಿಗೆ ಇದೊಂದು ನಿದರ್ಶನವಾಗಿದೆ. ಆಯೋಗವೇ ಸಕಾಲದಲ್ಲಿ ವಿಚಾರಣೆ ನಡೆಸದೇ ಇರುವದರಿಂದ ಆರ್ ಟಿಐ ಅರ್ಥಕಳೆದುಕೊಂಡಂತಾಗಿದೆ ಎಂದರು.





