ಸಿಂಧನೂರಿನಲ್ಲಿ ಭಾರಿ ಮಳೆ | ತಾತ್ಕಾಲಿಕ ಸೇತುವೆ ಕುಸಿತದಿಂದ ಸಂಚಾರ ಸ್ಥಗಿತ : ವಾಹನ ಸವಾರರ ಪರದಾಟ

ಸಿಂಧನೂರು: ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಸಿಂಧನೂರು–ಕಲಬುರಗಿ ರಾಜ್ಯ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಅಪಾಯದ ನಡುವೆಯೇ ಸಾರ್ವಜನಿಕರು ಮಕ್ಕಳು ಕೈ ಹಿಡಿದು ಸೇತುವೆ ದಾಟುವ ಸ್ಥಿತಿ ನಿರ್ಮಾಣವಾಗಿ ಆತಂಕದ ವಾತಾವರಣ ಉಂಟಾಯಿತು. ಸೇತುವೆಯ ಎರಡೂ ಬದಿಯಲ್ಲಿ ಹಲವು ಕಿಲೋಮೀಟರ್ ವರೆಗೆ ವಾಹನಗಳು ಸಾಲಾಗಿ ನಿಂತಿದ್ದು, ವಾಹನ ಸವಾರರು ಪರದಾಡುವಂತಾಯಿತು.
ಈ ಸೇತುವೆ ಎರಡನೇ ಬಾರಿಗೆ ಕುಸಿದಿದ್ದು, ಗುತ್ತಿಗೆದಾರರ ಮಂದಗತಿಯ ಕಾಮಗಾರಿಯೇ ಇಂತಹ ಹೈರಾಣಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಹಲವರು ಗುತ್ತಿಗೆದಾರ ಹಾಗೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
Next Story







