ಸಿಂಧನೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ದಾಳಿಂಬೆ ಬೆಳೆ ನಾಶ : ರೈತರಿಗೆ ನಷ್ಟ

ರಾಯಚೂರು(ಸಿಂಧನೂರು): ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ದಾಳಿಂಬೆ ಬೆಳೆ ಸಂಪೂರ್ಣವಾಗಿ ನಾಶವಾದ ಘಟನೆ ಸಿಂಧನೂರು ತಾಲೂಕಿನ ಹುಡಾ ಹೋಬಳಿಯ ಗೊಬ್ಬರಕಲ್ ಗ್ರಾಮದಲ್ಲಿ ನಡೆದಿದೆ.
ಸರ್ವಮಂಗಳಾ ಗಂಡ ಮಲ್ಲಯ್ಯಸ್ವಾಮಿ, ಹಾಗೂ ಪೂರ್ಣಿಮಾ ಗಂಡ ಶಿವಲಿಂಗಯ್ಯ ಅವರ ಹೊಲದಲ್ಲಿ ಬೆಳೆದ ದಾಳಿಂಬೆ ಬೆಳೆ ನಾಶವಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ದಿನಗಳ ಬಳಿಕ ದಾಳಿಂಬೆ ಬೆಳೆಯೂ ರೈತನ ಕೈ ಸೇರಬಹುದಾಗಿತ್ತು ಆದರೆ ಭಾರಿ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮಳೆಯಿಂದ ಮೇಲಹೊದಿಕೆ (ಪದರು) ಕಿತ್ತು ಹೋಗಿದ್ದು, ಕನಿಷ್ಠ 4 ಎಕರೆಗಿಂತಲೂ ಹೆಚ್ಚು ದಾಳಿಂಬೆ ಬೆಳೆ ಹಾಳಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ತಹಶೀಲ್ದಾರ್, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸರ್ಕಾರದಿಂದ ಪರಿಹಾರ ಕೊಡಿಸಬೇಕೆಂದು ಮಲ್ಲಯ್ಯಸ್ವಾಮಿ ಮತ್ತು ಶಿವಲಿಂಗಯ್ಯಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
Next Story