ರಾಯಚೂರು: ಜೂನ್ 14 ರಂದು ರಾಯಚೂರಿನಲ್ಲಿ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ

ರಾಯಚೂರು: ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಜೂನ್ 14 ರಂದು ರಾತ್ರಿ 8.30 ಕ್ಕೆ ನಗರದ ಬಸವೇಶ್ವರ ವೃತ್ತದ ಸಮೀಪ ವಾಲ್ಕಟ್ ಮೈದಾನದಲ್ಲಿ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಸೈಯದ್ ಶಾ ಅಲಿ ಅಲ್-ಹುಸೇನಿ ಸಾಹೇಬ್ ಅವರಿಗೆ ಸನ್ಮಾನ ಹಾಗೂ ಭಾರತದ ಪ್ರಸ್ತುತ ಪರಿಸ್ಥಿತಿ ಮತ್ತು ನಮ್ಮ ಜವಾಬ್ದಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಹ್ಮದ ಶಾಲಂ ತಿಳಿಸಿದರು.
ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಸಂಸದ ಜಿ. ಕುಮಾರ ನಾಯಕ ಸೇರಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಸ್ಲಿಂ ಧರ್ಮಗುರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಹೈದರಾಬಾದ್, ತೆಲಂಗಾಣ ಸೇರಿ ರಾಜ್ಯದ ಧರ್ಮದಗುರುಗಳು ಆಗಮಿಸುವರು ಎಂದರು.
ವಕೀಲ ಜಾವೀದ್ ಉಲ್ ಹಕ್, ಸೈಯದ್ ಶಾ ಹುಸೇನಿ ಮುತಾವಲಿ, ಸೈಯದ್ ಹೈದರುದ್ದೀನ್, ಅಮೀರುದ್ದೀನ್ ಖಾದ್ರಿ, ಖಾಲಿದ್ ಸಾಹೇಬ್, ಅಬ್ದುಲ್ ಮತೀನ್, ಇಮಾಮುದ್ದೀನ್, ಜಮೀರ್ ಸಿರಾಜ್, ಫೈಜಾಜುದ್ದೀನ್ ಉಪಸ್ಥಿತರಿದ್ದರು.





