ಅಂತಾರಾಷ್ಟ್ರೀಯ ಯೋಗ ದಿನ : ರಾಯಚೂರಿನಲ್ಲಿ ಜಾಗೃತಿ ಜಾಥಾ

ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆಯುಷ್ ಇಲಾಖೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹಾಗೂ ಯೋಗ ಸಂಘ ಸಂಸ್ಥೆಗಳ ಅಶ್ರಯದಲ್ಲಿ ಯೋಗ ಜಾಗೃತಿ ಜಾಥಾ ನಡೆಯಿತು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಆರಂಭವಾದ ಯೋಗ ಜಾಗೃತಿ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಚಾಲನೆ ನೀಡಿದರು. ಜಾಥಾ ನಗರದ ಪ್ರಮುಖ ರಸ್ತೆಯ ಮೂಲಕ ಸರಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಎಕ್ ಮೀನಾರ್ ರೋಡ್‌ವರೆಗೆ ಸಾಗಿತು. ಜಾಥಾದಲ್ಲಿ ಭಾಗಿಯಾಗಿದ್ದ ಶಾಲಾ ಮಕ್ಕಳು ನಾನಾ ಸಂದೇಶದ ಫಲಕಗಳನ್ನು ಪ್ರದರ್ಶಿಸಿ ಗಮನಸೆಳೆದರು.
ಜಾಥಾದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕೊಟ್ರಬಸಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಈರೇಶ್ ನಾಯಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕರಾದ ಡಾ.ದಂಡಪ್ಪ ಬಿರಾದಾರ್, ಯೋಗ ತರಬೇತಿದಾರ ಡಾ.ತಿಮಪ್ಪ ವಡ್ಡೆಪಳ್ಳಿ, ಆಯುಷ್ ಇಲಾಖೆಯ ಡಾ.ನವೀನ್, ಡಾ.ಪ್ರತಿಭಾ ಪಾಟೀಲ್, ಡಾ.ರಾಜೇಂದ್ರ, ಡಾ.ದುರುಗಪ್ಪ, ಡಾ.ಕನಕಲಕ್ಷ್ಮಿ, ಡಾ.ಅರುಣಾ, ಡಾ.ನಾಝಿಯಾ, ಡಾ.ಶಾದಿಯಾ, ಆಯುಷ್ ಇಲಾಖೆಯ ಸಿಬ್ಬಂದಿ ವರ್ಗ, ಭಾರತ ಸೇವಾದಳದ ವಿದ್ಯಾಸಾಗರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಪರಶುರಾಮ್, ದೈಹಿಕ ಶಿಕ್ಷಣ ಶಿಕ್ಷಕರಾದ ರಂಗನಾಥ್, ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿಗಳು ಜಾಥಾದಲ್ಲಿ ಭಾಗಿಯಾಗಿದ್ದರು.







