ಡೊಂಗರಾಂಪುರ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ನಾಯಿ ಮೇಲೆ ದಾಳಿ

ರಾಯಚೂರು: ರಾಯಚೂರು ತಾಲೂಕಿನ ಡೊಂಗರಾಂಪುರ, ಮಾಮಡದೊಡ್ಡಿ ಮಧ್ಯೆ ಇರುವ ಹೊಲದಲ್ಲಿ ರವಿವಾರ ನಾಯಿ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ನಡೆದಿದೆ.
ಡೊಂಗರಾಂಪುರ ಗ್ರಾಮದಲ್ಲಿ ಕೆಲ ದಿನಗಳ ಹಿಂದಷ್ಟೇ ಪರಮೇಶ್ವರ ಬೆಟ್ಟದ ಮೇಲೆ ಚಿರತೆ ನವಿಲು, ನಾಯಿಗಳನ್ನು ತಿಂದು ಹಾಕಿತ್ತು. ಬಳಿಕ ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬೋನಿಗೆ ಬೀಳಿಸಿದ್ದರು. ಇದೀಗ ಮತ್ತೆ ಚಿರತೆ ದಾಳಿ ನಡೆಸಿ ನಾಯಿಯನ್ನು ಕೊಂದು ಹಾಕಿ ಆತಂಕ ಮೂಡಿಸಿದೆ.
Next Story





