ಎಲ್‌ಐಸಿಯು ಬಡ ಮಧ್ಯಮವರ್ಗಕ್ಕೆ ಆಸರೆ : ಸಚಿವ ಬೋಸರಾಜು

ರಾಯಚೂರು: ಎಲ್ ಐಸಿ (ಭಾರತೀಯ ಜೀವ ವಿಮಾ) ಪಾಲಿಸಿಯು ದೇಶದಲ್ಲಿನ ಬಡ ಮತ್ತು ಮಧ್ಯಮ ವರ್ಗದರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ಎಲ್ಐಸಿ ಪ್ರತಿನಿಧಿಗಳು ಸಂಸ್ಥೆ ಹಾಗೂ ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಮಾ ಆಶಾಪೂರ ಫಂಕ್ಷನ್ ಸಭಾಂಗಣದಲ್ಲಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘ ರಾಯಚೂರು ವಿಭಾಗೀಯ 7ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಜೀವ ವಿಮಾ ಪ್ರತಿನಿಧಿಗಳ ವಿಭಾಗೀಯ ಸಮ್ಮೇಳನವು ಪ್ರತಿ ಮೂರು ವರ್ಷಕ್ಕೊಮ್ಮೆ ಮಾಡುತ್ತಾ ಬಂದಿದ್ದಾರೆ. ಇಂದು ರಾಯಚೂರಿನಲ್ಲಿ ನಡೆಸಲಾಗುತ್ತಿದ್ದು ಶ್ಲಾಘನೀಯ. ದೇಶದಲ್ಲಿ ಸುಮಾರು 38 ಕೋಟಿಗೂ ಅಧಿಕ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಪಾಲಸಿ ಮಾಡಿಸಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಎಲ್‍ಐಸಿ ಪಾಲಿಸಿ ಕಚೇರಿಗಳಲ್ಲಿ ಕೆಲಸ ಮಾಡುವ ಪ್ರತಿನಿಧಿಗಳಿಗೆ ಸೌಲಭ್ಯಗಳು ಸೇರಿ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಬರುವವರಿಗೆ ಸೌಲಭ್ಯ ಒದಗಿಸಿಕೊಡಲು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಆಲ್ ಇಂಡಿಯಾ ಕಾರ್ಯದರ್ಶಿ ಎಲ್ ಮಂಜುನಾಥ, ರಾಜ್ಯಾಧ್ಯಕ್ಷ ಲೋಕೇಶ, ಜಿ. ಶ್ರೀನಿವಾಸ, ಶರಣಗೌಡ, ರವಿ, ಬಸವರಾಜ, ಸಿದ್ದಣ್ಣ, ಡಿಎಸ್ ಶರಣ ಬಸವ ಸೇರಿದಂತೆ ಅನೇಕರು ಇದ್ದರು.





