ಲಿಂಗಸುಗೂರು | ಮಳೆಯಿಂದ ಹಳ್ಳ ತುಂಬಿ ಸಂಚಾರ ಸ್ಥಗಿತ : ವಿದ್ಯಾರ್ಥಿಗಳ ಪರದಾಟ

ಲಿಂಗಸುಗೂರು : ತಾಲೂಕಿನ ಆನೆಹೊಸುರು–ಜಾಗೀರ ನಂದಿಹಾಳ ಸೇತುವೆ ಹಳ್ಳದ ನೀರಿನಿಂದ ತುಂಬಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಇದರ ಪರಿಣಾಮವಾಗಿ ಶಾಲೆ ಮತ್ತು ಪರೀಕ್ಷೆಗೆ ತೆರಳಬೇಕಾದ ವಿದ್ಯಾರ್ಥಿಗಳು ಸುಮಾರು 20 ಕಿ.ಮೀ. ಸುತ್ತುವರಿದು ಹೋಗುವ ಅನಿವಾರ್ಯತೆ ಎದುರಿಸಿದ್ದಾರೆ.
ಅದೇ ರೀತಿ ಈಚನಾಳ ಗ್ರಾಮದ ಕುಂಬಾರ ಓಣಿಗೆ ಸಂಪರ್ಕ ಕಲ್ಪಿಸುವ ಹಳ್ಳ ಕೂಡ ಭರ್ತಿಯಾಗಿ, ಅಲ್ಲಿನ ನಿವಾಸಿಗಳು ಸುಮಾರು 10 ಕಿ.ಮೀ. ಸುತ್ತುವರೆಯಬೇಕಾದ ಸ್ಥಿತಿ ಉಂಟಾಗಿದೆ.
ನಿರಂತರ ಮಳೆಯಿಂದಾಗಿ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಸಂಚಾರ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
Next Story







